Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
700 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಇನ್ಫೋಸಿಸ್, ಸೆಕ್ಯೂರಿಟಿ ಗಾರ್ಡ್, ಬೌನ್ಸರ್ ಬಳಸಿ ಕೆಲಸದಿಂದ ತೆಗೆದ್ರಾ?
ಇನ್ಪೋಸಿಸ್‌ನಂಥ ಧೈತ್ಯ ಐಟಿ ಕಂಪನಿ ಸುಮಾರು 700 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ, ಅವರಲ್ಲಿ 350 ಉದ್ಯೋಗಿಗಳನ್ನು ಇಂಟರ್ನಲ್ ಅಸೆಸ್‌ಮೆಂಟ್‌ನಲ್ಲಿ ಫೇಲ್ ಆಗಿದ್ದೀರಿ ಎಂಬ ಕಾರಣ ನೀಡಿ ಹೊರ ಹಾಕಿದೆ, ಇದರ ಬಗ್ಗೆ ಪ್ರತಿಕ್ರಿಯಿಸಿರುವ ಐಟಿ ಯೂನಿಯನ್ NITES ಕೆಲ ಕುತಂತ್ರ ಮಾಡಿ, ಬೌನ್ಸರ್‌ಗಳನ್ನು ಬಳಸಿ ಉದ್ಯೋಗಿಗಳನ್ನು ಕಂಪನಿಯಿಂದ ಹೊರಗಡೆ ಕಳುಹಿಸಿದ್ದಾರೆ ಎಂದು ಹೇಳಿದೆ.

ವಜಾ ಆದ ಉದ್ಯೋಗಿಗಳು 2024 ಅಕ್ಟೋಬರ್‌ನಲ್ಲಿ ಕೆಲಸಕ್ಕೆ ಸೇರಿದ್ದರು
ವಜಾಗೊಳಿಸಿರುವ 700 ಉದ್ಯೋಗಿಗಳನ್ನು ಕಂಪನಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆಲಸಕ್ಕೆ ತೆಗೆದುಕೊಂಡಿತ್ತು, ವಾರಲ್ಲಿ 350 ಉದ್ಯೋಗಿಗಳು ಕಂಪನಿಯ ಇಂಟರ್ನಲ್ ಅಸೆಸ್‌ಮೆಂಟ್ ಟೆಸ್ಟ್ ಪಾಸ್ ಆಗಲಿಲ್ಲ ಹಾಗಾಗಿ ಅಂಥವರನ್ನು ಕೆಲಸದಿಂದ ತೆಗಿಯಲಾಗಿದೆ ಎಂದು ಹೇಳಿದೆ.
ಇನ್ಫೋಸಿಸ್‌ನ ಈ ನಿರ್ಧರ ಅನೀತಿಯಾಗಿದೆ, ತುಂಬಾ ಒತ್ತಾಯ ಪೂರ್ವವಾಗಿ ಈಗಷ್ಟೇ ಕೆಲಸಕ್ಕೆ ಸೇರಿದ ಉದ್ಯೋಗಿಗಳನ್ನು ವಜಾಗೊಳಿಸಿದೆ, ಇದರ ಬಗ್ಗೆ ಭಾರತದ ಕಾರ್ಮಿಕ ಮಂತ್ರಿ ಬಳಿ ದೂರು ನೀಡಲು ನಿರ್ಧರಿಸಿರುವುದಾಗಿ NITES ಅಧ್ಯಕ್ಷ ಹರ್ಪೀತ್ ಸಿಂಗ್ ಸಲೂಜಾ ಹೇಳಿದ್ದಾರೆ.
ಕಂಪನಿಯ ಕ್ವಾಲಿಫೈಯಿಂಗ್ ಪರೀಕ್ಷೆಯಲ್ಲಿ ಇವರುಗಳು ಅನುತ್ತೀರ್ಣಾಗಿದ್ದಾರೆ ಎಂಬ ಕಾರಣವನ್ನು ಇನ್ಫೋಸಿಸ್ ನೀಡಿದೆ, ಆದರೆ ಸಿಲಬಸ್ ಬೇರೆ ನೀಡಲಾಗಿದೆ, ಬೇಕೆಂದೇ ಕಷ್ಟದ ಪರೀಕ್ಷೆ ನೀಡಿ ಕೆಲಸದಿಂದ ತೆಗೆಯಲಾಗಿದೆ ಂದು ಕೆಲಸ ಕಳೆದುಕೊಂಡ ಉದ್ಯೋಗಿಗಳು ಆರೋಪಿಸುತ್ತಿದ್ದಾರೆ.
ಇನ್ಫೋಸಿಸ್ ಪ್ರತಿಕ್ರಿಯೆ ಏನು?
ಎಲ್ಲಾ ಫ್ರೆಷರ್‌ಗಳಿಗೆ 3 ಅಟೆಪ್ಟ್ ನೀಡಲಾಗುವುದು, ಅದರೊಳಗಡೆ ಕ್ಲಿಯರ್ ಮಾಡಬೇಕು, ಯಾರಿ ಇದರಲ್ಲಿ ಫೇಲ್ ಆಗುತ್ತಾರೋ ಅವರು ನಮ್ಮ ಸಂಸ್ಥಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು , ಇದನ್ನು ಅವರನ್ನು ಕಾಂಟ್ರ್ಯಾಕ್ಟ್ ಬೇಸ್ ಮೇಲೆ ತೆಗೆದುಕೋಳ್ಳಲಾಗುವಾಗಲೇ ತಿಳಿಸಲಾಗುವುದು, ಈ ನಿಯಮ ಕಳೆದ ಎರಡು ದಶಕಗಳಿಂದ ಇದೆ ಎಂದು ಇನ್ಫೋಸಿಸ್ ಹೇಳಿದೆ.
ಇವರೆಲ್ಲಾ 2022 ಹಾಗ 2023ನೇ ಸಾಲಿನಲ್ಲಿ ಇಂಜಿನಿಯರ್ ಪಾಸ್ ಆದವರು., ಇವರನ್ನು ಸಿಸ್ಟರ್ ಇಂಜಿನಿಯರ್ ಹುದ್ದೆಗೆ ವರ್ಷಕ್ಕೆ 3.2-3.7 ಪ್ಯಾಕೇಜ್ ನೀಡಿ ಕೆಲಸ ನೀಡಆಗಿತ್ತು, ಎರಡು ವರ್ಷ ಕಾದು ಈ ಹುದ್ದೆ ಪಡೆದವರು ಖುಷಿಯಾಗಿದ್ದರು, ಆದರೆ ಕಂಪನಿ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ದರಿಂದ ಸಾಕಷ್ಟು ಉದ್ಯೋಗಿಗಳ ಬದುಕು ಅತಂತ್ರವಾಗಿದೆ.
ಐಟಿ ಉದ್ಯೋಗಿಗಳ ಯೂನಿಯನ್ NITES ಇನ್ಫೋಸಿಸ್ ವಿರುದ್ಧ ತಿರುಗಿಬಿದ್ದಿದೆ, ಅವರು ಕಂಪನಿಯಲ್ಲಿ ಬೌನ್ಸರ್ಗಳು ಹಾಗೂ ಕೆಲ ಉದ್ಯೋಗಿಗಳನ್ನು ಬಳಸಿ ಯಾರು ಮೊಬೈಲ್ ತೆಗೆದುಕೊಂಡು ಹೋಗದಂತೆ ನೋಡಿಕೊಂಡು ನಂತರ ಕೆಲಸದಿಂದ ತೆಗೆದು ಹಾಕಿರುವುದಾಗಿದೆ. ಇದರ ಬಗ್ಗೆ ಯಾರಿಗೂ ಯಾವುದೇ ಸುಳಿವು ಇರಲಿಲ್ಲ.
NITES ಇನ್ಫೋಸಿಸ್ ಇಂಡಸ್ಟ್ರಿಯಲ್ ಡಿಸ್ಪಿಯೂಟ್ ಕಾಯ್ದೆ 1947ರ ವಿರುದ್ಧವಾಗಿ ನಡೆದುಕೊಂಡಿದೆ, ಐಟಿ ಉದ್ಯೋಗಿಗಳ ರಕ್ಷಣೆಗೆ ಕೂಡಲೇ ಹೊಸ ಕಾಯ್ದೆ ಬರಬೇಕಾಗಿದೆ ಎಂದು ಉದ್ಯೋಗಿಗಳು ಗೊಣಗುತ್ತಿದ್ದಾರೆ.
ಕೆಲಸ ಸಿಕ್ಕಿದ ಖುಷಿ ವರ್ಷದಲ್ಲಿ ದೂರಾಗಿದೆ:
ಎಲ್ಲರೂ ಕ್ಯಾಂಪಸ್ ಸೆಲೆಕ್ಷನ್ ಆಗಿ ಕೆಲಸ ಸಿಕ್ಕಿದ ಖುಷಿಯಲ್ಲಿದ್ದರು, ಆದರೆ ಆ ಖುಷಿ ದೂರಾಗಿದೆ, ವೃತ್ತಿ ಬದುಕಿನ ಬಗ್ಗೆ ದೊಡ್ಡ ಭಯ ಕೆಲಸ ಶುರು ಮಾಡಿದ ವರ್ಷದಲ್ಲಿಯೇ ಕಾಡಿದೆ.



Click it and Unblock the Notifications