Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ತನ್ನನ್ನು ತಾನೇ ಮದುವೆಯಾಗಿದ್ದ ಯುವತಿ ಆತ್ಮಹತ್ಯೆ..! ಡೆತ್‌ನೋಟ್‌ನಲ್ಲಿತ್ತು ಸತ್ಯ.!
ಈಗ ಚಿತ್ರ ವಿಚಿತ್ರ ಮದುವೆಗಳು ನಡೆಯುವುದನ್ನು ನಾವು ನೋಡಿದ್ದೇವೆ. ತಮ್ಮನ್ನು ತಾವೇ ಮದುವೆಯಾಗುವ ವಿಚಿತ್ರ ಆಚರಣೆಯೂ ನಾವು ನೋಡಿದ್ದೇವೆ. ಹಾಗೆ ಇಲ್ಲೊಬ್ಬಾಕೆ ತನ್ನನ್ನು ತಾನೆ ಮದುವೆಯಾಗಿದ್ದ ಆನ್‌ಲೈನ್ ಇನ್‌ಫ್ಲೂಯೆನ್ಸರ್ ಎಲ್ಲರ ಗಮನ ಸೆಳೆದಿದ್ದಳು, ಆದ್ರೆ ಈಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಇಸ್ತಾನ್‌ಬುಲ್‌ನ ಸುಲ್ತಾನ್‌ಬೇಲಿ ಜಿಲ್ಲೆಯ ಖ್ಯಾತ ಟರ್ಕಿಶ್ ಇನ್‌ಫ್ಲೂಯೆನ್ಸರ್ ಆಗಿರುವ ಕುಬ್ರಾ ಅಕ್ಯುತುಮ್ ಎಂಬಾಕೆ ತನ್ನನ್ನು ತಾನೆ ಮದುವೆಯಾಗಿದ್ದಳು, ಆದ್ರೆ ಈಗ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 23 ರಂದು ಕುಬ್ರಾ ಅಕ್ಯುತುಮ್ ತನ್ನ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಹಾರಿದ್ದಾಳೆ ಎಂದು ವರಿಯಾಗಿದೆ. ಆಕೆ ಸಾವಿಗೂ ಕೆಲವೆ ಗಂಟೆಗಳ ಮೊದಲು ಆನ್‌ಲೈನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಳು, ಆದ್ರೆ ಆಕೆಯ ಎಲ್ಲಾ ಪೋಸ್ಟ್‌ಗಳ ಹಿಂದೆ ತೂಕ ಹೆಚ್ಚಿಸಿಕೊಳ್ಳುವ ಕುರಿತಂತೆ ಹಂಚಿಕೊಂಡಿದ್ದಳು.
ಆಕೆ ಕೊನೆಯ ಪೋಸ್ಟ್‌ನಲ್ಲಿ ನನ್ನ ಶಕ್ತಿಯನ್ನು ಸಂಗ್ರಹಿಸಿದ್ದೇನೆ, ಆದರೆ ನಾನು ತೂಕವನ್ನು ಪಡೆಯಲು ಸಾಧ್ಯವಿಲ್ಲ. ನಾನು ಪ್ರತಿದಿನ ಒಂದು ಕೆ.ಜಿ ಕಳೆದುಕೊಳ್ಳುತ್ತಿದ್ದೇನೆ. ನನಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ. ನಾನು ಬೇಗ ತೂಕ ಪಡೆದುಕೊಳ್ಳಬೇಕಾಗಿದೆ ಎಂಬ ಪೋಸ್ಟ್ ಹಂಚಿಕೊಂಡಿದ್ದಾಳೆ.
ಆಕೆ ಟಿಕ್‌ಟಾಕ್‌ನಲ್ಲಿ ಒಂದು ಮಿಲಿಯನ್ ಹಾಗೂ ಹಲವು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಲಕ್ಷ ಲಕ್ಷ ಮಂದಿ ಫಾಲೋವರ್ಸ್ ಹೊಂದಿದ್ದಾಳೆ. ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಗಿನ ಜಾವ ಸಿಬ್ಬಂದಿ ಆಗಮಿಸಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಗಿಗೆ ಬಂದಿದೆ.
ಡೆತ್ ನೋಟ್ ಸಹ ಪತ್ತೆ
ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯ ಪರಿಶೀಲನೆಯ ವೇಳೆ ಆಕೆ ಬರೆದಿದ್ದಾಳೆ ಎನ್ನಲಾದ ಒಂದು ಡೆತ್ ನೊಟ್ ಸಹ ಲಭ್ಯವಾಗಿದೆ. ಅದರಲ್ಲಿ ಆಕೆ, "ನಾನು ನನ್ನ ಸ್ವಂತ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ ನಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ. ಫಿಸ್ಟಿಕ್ ಅನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನ ಜೀವನದಲ್ಲಿ ನಾನು ಎಲ್ಲರಿಗೂ ಒಳ್ಳೆಯವನಾಗಿದ್ದೆ, ಆದರೆ ನನಗೆ ಒಳ್ಳೆಯವನಾಗಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾಳೆ.
ಫಿಸ್ಟಿಕ್ ಎಂದರೆ ಆಕೆ ಸಾಕಿದ್ದ ನಾಯಿ ಎಂದು ತಿಳಿದುಬಂದಿದೆ. "ಒಳ್ಳೆಯ ವ್ಯಕ್ತಿಯಾಗಿ ಬದುಕಿದ್ದಕ್ಕೆ ನನಗೆ ಏನನ್ನೂ ನೀಡಲಿಲ್ಲ, ಈ ಜೀವನದಲ್ಲಿ, ಸ್ವಾರ್ಥಿಯಾಗಿರಿ, ಆ ರೀತಿಯಲ್ಲಿ, ನೀವು ಸಂತೋಷವಾಗಿರುತ್ತೀರಿ, ನಾನು ದಿನಗಳಿಂದ ಕಷ್ಟಪಡುತ್ತಿದ್ದೇನೆ, ಆದರೆ ಯಾರೂ ಗಮನಿಸಲಿಲ್ಲ, ನಾನು ನನ್ನನ್ನು ಪ್ರೀತಿಸುತ್ತೇನೆ ಮತ್ತು ಯೋಚಿಸಲು ಬಯಸುತ್ತೇನೆ ನನ್ನ ಬಗ್ಗೆ ಒಮ್ಮೆ ಕ್ಷಮಿಸಿ ಕುಬ್ರಾ ಆಯ್ಕುತ್ ಎಂದು ಆಕೆ ಬರೆದಿದ್ದಾಳೆ.
ತನ್ನನ್ನು ತಾನೇ ಮದುವೆಯಾಗಿದ್ದಳು ಕುಬ್ರಾ
ಹಿಂದೊಮ್ಮೆ ಆಕೆ ಮದುವೆಯಾಗಲು ನನಗೆ ಯಾವುದೇ ವರ ಸಿಗುತ್ತಿಲ್ಲ ಹೀಗಾಗಿ ನನ್ನನ್ನು ನಾನೇ ಮದುವೆಯಾಗುತ್ತೇನೆ ಎಂದು ಘೋಷಿಸಿ ಸುದ್ದಿಯಾಗಿದ್ದಳು, ಕೇವಲ 26 ವರ್ಷದ ಆಕೆ ಇನ್ಸ್‌ಸ್ಟಾಗ್ರಾಮ್, ಟಿಕ್‌ಟಾಕ್‌ನಲ್ಲಿ ಹಾಕುತ್ತಿದ್ದ ವಿಡಿಯೋಗಳು ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಳ್ಳುತ್ತಿತ್ತು.
ಆಕೆ ಬಿಳಿಯ ಸುಂದರ ಬಟ್ಟೆ ಧರಿಸಿ ಮದುಮಗಳಂತೆ ಸಿದ್ಧಗೊಂಡು ಕಿರೀಟ ಧರಿಸಿ ತನ್ನ ಕೈಗೆ ರಿಂಗ್ ಹಾಕಿಕೊಂಡು ಮದುವೆಯಾಗಿರುವುದಾಗಿ ಘೋಷಿಸಿದ್ದಳು, ನನಗೆ ಮದುವೆಯಾಗಲು ಹುಡುಗ ಸಿಗುತ್ತಿಲ್ಲ ಎಂದು ಆಕೆ ಈ ರೀತಿ ಮಾಡುತ್ತಿರುವುದಾಗಿ ಹೇಳಿದ್ದಳು.
ಈ ರೀತಿ ಸೋಲೊಗಮಿ ಮದುವೆಯನ್ನು ಗುಜರಾತ್‌ನಲ್ಲೂ ಯುವತಿಯೊಬ್ಬಳು ನೆರವೇರಿಸಿ ಅಚ್ಚರಿ ಮೂಡಿಸಿದ್ದಳು. ಇದು ಭಾರತದಲ್ಲಿ ಜರುಗಿದ್ದ ಮೊಟ್ಟ ಮೊದಲ ಸೋಲೊಗಮಿ ಮದುವೆಯಾಗಿತ್ತು. ಗುಜರಾತಿನ ಕ್ಷಮಾ ಬಿಂದು ಎಂಬ 24 ವರ್ಷದ ಯುವತಿಗೆ ವಿಪರೀತ ಸೆಲ್ಫ್ ಲವ್. ಅವಳು ಅವಳನ್ನು ಎಷ್ಟು ಪ್ರೀತಿಸುತ್ತಿದ್ದಾಳೆ ಎಂದರೆ ಅವಳಿಗೆ ಅವಳನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ ಎನ್ನುವ ಮಟ್ಟಿಗಿದೆ. ಈ ಕಾರಣಕ್ಕೆ ಜೂನ್ 11ಕ್ಕೆ ಅವಳು ಅವಳನ್ನೇ ಮದುವೆಯಾಗಲಿದ್ದಳು.



Click it and Unblock the Notifications