Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಂಡ ಕಂಡಲ್ಲಿ ಎಸೆಯುತ್ತಾನೆ ಕಂತೆ ಕಂತೆ ಹಣ..! ಸಿಕ್ಕ ಸಿಕ್ಕವರಿಗೂ ದಾನ..! ವಿಡಿಯೋ ವೈರಲ್
ಹಣ ಮಾಡಬೇಕು ಅಂದ್ರೆ ಕಷ್ಟ ಪಟ್ಟು ದುಡಿಯಬೇಕು. ಅದೆಷ್ಟೇ ದೊಡ್ಡ ಕಂಪನಿ ಕಟ್ಟಿದ್ದರು ದಿನದಲ್ಲಿ ಒಂದಿಷ್ಟು ಗಂಟೆಯಾದರೂ ದುಡಿಮೆ ಮಾಡಲೇಬೇಕು. ಆದ್ರೆ ಹಣ ಸಂಪಾದನೆ ಮಾಡೋದು ಅಷ್ಟೊಂದು ಸುಲಭವಲ್ಲ. ಹಣ ಎಲ್ಲರ ಕೈ ಹಿಡಿಯುವುದಿಲ್ಲ. ಅದ್ರಲ್ಲೂ ದುಡಿಮೆ ಮಾಡಿದ ಹಣವನ್ನ ನಾವು ಬ್ಯಾಂಕ್‌ನಲ್ಲೋ, ಲಾಕರ್‌ನಲ್ಲೋ ಇಡುತ್ತೇವೆ.
ಒಂದೊಂದು ಪೈಸೆಯನ್ನು ಒಟ್ಟು ಮಾಡಿ ಅದನ್ನು ಒಟ್ಟು ಮಾಡಿ ಇಡುವುದು ಎಲ್ಲರ ಅಭ್ಯಾಸ. ಹನಿ ಹನಿ ಕೂಡಿದರೆ ಹಳ್ಳ ಎಂಬ ಮಾತಿನಂತೆ ಮಧ್ಯಮ ವರ್ಗದ ಜನರಂತು ಒಂದೊಂದು ರೂಪಾಯಿಯನ್ನೂ ಜೋಡಿಸಿಟ್ಟು ಮನೆ, ಜಾಗ, ವಸ್ತುಗಳ ಖರೀದಿಸುತ್ತಾರೆ.

ಆದ್ರೆ ಇಲ್ಲೊಬ್ಬ ಯುವಕ ಹಣವನ್ನ ಮನೆಯ ಹೊರಗೆ ಕಸದಂತೆ ಎಸೆದಿದ್ದಾನೆ. ಅಲ್ಲದೆ ಕಂಡ ಕಂಡವರಿಗೆ ಹಣದ ಕಂತೆ ಹಂಚುತ್ತಿದ್ದಾನೆ. ಹೌದು ಇನ್ಸ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳ ಹಂಚಿಕೊಳ್ಳುವ ಫೆಡರ್ ಬಲ್ವನೋವಿಚ್ ಎಂಬಾತನ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾ ಇನ್ಸ್ಪೂಯನ್ಸರ್ ಆಗಿರುವ ಆತ ಮಿಸ್ಟರ್ ಗುಡ್ ಲಕ್ ಎಂಬ ಖಾತೆಯಲ್ಲಿ ವಿಡಿಯೋಗಳ ಹಂಚಿಕೊಳ್ಳುತ್ತಾನೆ. ಸುಮಾರು 128 ಮಿಲಿಯನ್ ಫಾಲೋವರ್ಸ್ ಹೊಂದಿರುವ ಆತ ಇಂತಹ ವಿಡಿಯೋಗಳ ಮೂಲಕವೇ ಫೇಮಸ್ ಆಗಿದ್ದಾನೆ.
ಕೆಲವರು ಹಣ ಸಂಪಾದಿಸಲು ಹಗಲು ರಾತ್ರಿ ಎನ್ನದೆ ಕಷ್ಟ ಪಡುತ್ತಾರೆ. ಮತ್ತೆ ಕೆಲವರು ಈ ರೀತಿ ಹಣವನ್ನ ಅಸಡ್ಡೆ ತೋರುತ್ತಾರೆ. ಇಂತಹ ವಿಡಿಯೋ ನೋಡಿದ ಮಂದಿ ನಿಜಕ್ಕೂ ಶಾಕ್‌ಗೆ ಒಳಗಾಗಿದ್ದಾರೆ. ಆತ ಇಷ್ಟೊಂದು ಹಣ ಸಂಪಾದಿಸಲು ಸಾಧ್ಯವಾಗಿದ್ದು ಹೇಗೆ ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಿದ್ದಾರೆ.
ವಿಡಿಯೋದಲ್ಲಿ ಆತನ ಮನೆ ಮುಂದೆ ಹಣದ ರಾಶಿಯೇ ಬಿದ್ದಿರುವುದು ನೋಡಬಹುದು. ಅಲ್ಲಿ ಕಂತೆ ಕಂತೆಯ ಹಣದ ಬಂಡಲ್‌ಗಳಿವೆ. ಜೊತೆಗೆ ಅವರು ಹಣವನ್ನು ಒಂದು ಬಾಕ್ಸ್‌ಗೆ ತುಂಬುತ್ತಿರುವುದು ಸಹ ನೋಡಬಹುದು. ಆದರೆ ಈ ಹಣದ ಹೇಗೆ ಬಂದಿದೆ ಮತ್ತು ಈ ಹಣ ಅಸಲಿಯೇ ಅಥವಾ ನಕಲಿಯೇ ಎಂಬ ಕುರಿತು ಯಾವ ಪುರಾವೆಗಳು ಇಲ್ಲ.
ಮತ್ತೊಂದು ವಿಡಿಯೋದಲ್ಲಿ ಆತ ತನ್ನ ಐಷಾರಾಮಿ ಕಾರಿನಲ್ಲಿ ರಾಶಿ ರಾಶಿ ಹಣವನ್ನು ತುಂಬಿಕೊಂಡು ರಸ್ತೆಯಲ್ಲಿ ಸಿಕ್ಕ ವ್ಯಕ್ತಿಯೊಬ್ಬನಿಗೆ ಒಂದು ಕಂತೆ ಹಣ ನೀಡುತ್ತಿದ್ದಾನೆ. ಆತ ಇದು ಏಕೆ ಎಂದು ಪ್ರಶ್ನೆ ಮಾಡಿದಾಗ ನಾನು ನಿಮಗೆ ಕೊಡುತ್ತಿರುವುದು, ಈ ಹಣ ನಿಮಗೆ ಎನ್ನುತ್ತಿದ್ದಾನೆ. ಈ ವೇಳೆ ಆತನ ಕಾರಿನಲ್ಲಿ ಕಂತೆ ಕಂತೆ ಹಣ ಇಟ್ಟುಕೊಂಡಿರುವುದು ನೋಡಬಹುದು.
ಈ ವಿಡಿಯೋ ಬರೋಬ್ಬರಿ 8.5 ಮಿಲಿಯನ್ ವೀಕ್ಷಣೆ ಕಂಡಿದೆ. ಜೊತೆಗೆ ಆತನ ಖಾತೆಯಲ್ಲಿ ಹಣ ಹಂಚುವ ಹತ್ತಾರು ವಿಡಿಯೋಗಳು ಸಹ ಕಾಣಸಿಗುತ್ತವೆ. ಒಂದು ವಿಡಿಯೋದಲ್ಲಿ ಆತ ಹೆಲಿಕಾಪ್ಟರ್ ಮೂಲಕವೂ ಹಣ ಹಂಚುತ್ತಿದ್ದಾನೆ.
ಕೆಲವರು ಈ ಹಣವನ್ನು ನಕಲಿ ಎಂದು ಅನುಮಾನಿಸಿದ್ದಾರೆ, ಇತರರು ಫೆಡರ್ ಅವರ ಅದ್ದೂರಿ ಜೀವನಶೈಲಿ ಕುರಿತು ಮಾತನಾಡುತ್ತಾರೆ. ಆತ ಹುಟ್ಟಿನಿಂದಲೇ ಶ್ರೀಮಂತ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಯಾವುದಕ್ಕೂ ಇಲ್ಲಿ ಉತ್ತರವಿಲ್ಲ. ಆದರೆ ವಿಡಿಯೋ ನೋಡಿದ ಮಂದಿಗೆ ಶಾಕ್ ಆಗಿದೆ.
ಆತ ಅಷ್ಟೊಂದು ಹಣ ಗಳಿಸಲು ಸಾಧ್ಯವೇ ಇಲ್ಲ ಎಂಬುದು ಹಲವರ ವಾದವಾಗಿದೆ. ವಿಶ್ವದ ಶ್ರೀಮಂತ ಯೂಟ್ಯೂಬರ್ ಸಹ ಇಷ್ಟು ಹಣ ಗಳಿಸುವುದಿಲ್ಲ. ಎಲಾನ್ ಮಸ್ಕ್ ಬಳಿಯೂ ಇಷ್ಟೊಂದು ಲಿಕ್ವಿಡ್ ಕ್ಯಾಶ್ ಇರಲು ಸಾಧ್ಯವೇ ಇಲ್ಲ. ಹೀಗಿದ್ದಾಗ ಆತ ಪ್ರದರ್ಶಿಸುತ್ತಿರುವ ಹಣ ಅಸಲಿಯಾಗಿರಲು ಸಾಧ್ಯವೇ ಇಲ್ಲ ಎಂಬುದು ಹಲವರ ವಾದವಾಗಿದೆ.



Click it and Unblock the Notifications
