Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಒಂದು ದಿನ ಭಿಕ್ಷೆ ಬೇಡಿ ದುಡಿಯುವ ಚಾಲೆಂಜ್..! ಆತ ದುಡಿದ ಹಣವೆಷ್ಟು ಗೊತ್ತಾ?
ರೀಲ್ಸ್‌ಗಾಗಿ ಈಗ ಜನರು ಯಾವೆಲ್ಲಾ ಕೆಲಸಗಳ ಮಾಡುತ್ತಾರೆ ಅನ್ನೋದನ್ನ ನೋಡಿದ್ದೇವೆ. ಜೀವದ ಹಂಗು ತೊರೆದು ಅವರೀಗ ವಿಡಿಯೋಗಳ ಮಾಡಿ ಶೇರ್ ಮಾಡುತ್ತಾರೆ. ಇದರಿಂದ ಹೆಚ್ಚು ಜನರನ್ನು ತಲುಪಬಹುದು ಎಂಬುದು ಅವರ ಆಲೋಚನೆಯಾಗಿರುತ್ತೆ. ಈಗಂತು ಯುವ ಸಮುದಾಯ ಇದನ್ನೇ ವೃತ್ತಿಯಾಗಿಸಿಕೊಂಡಿರುವುದು ಕೂಡ ನಮ್ಮ ನಡುವೆ ಉದಾಹಣೆಯಾಗಿದೆ.
ಹಾಗೆ ವಿಡಿಯೋ ಮಾಡುವುದು ಅದನ್ನು ಹಂಚಿಕೊಳ್ಳುವುದು ಮಾಡುವ ಒಂದಿಷ್ಟು ಮಂದಿ ಚಿತ್ರ ವಿಚಿತ್ರ ಕಾರಣಗಳಿಗೆ ಫೇಮಸ್ ಆಗಿಬಿಡುತ್ತಾರೆ. ಇಲ್ಲೊಬ್ಬ ಯುವಕ ಕೂಡ ಇಂತಹ ವಿಚಿತ್ರ ಕಾರಣಕ್ಕೆ ಈಗ ವೈರಲ್ ಆಗಿದ್ದಾನೆ. ಆತ ಒಂದು ದಿನದ ಮಟ್ಟಿಗೆ ಭಿಕ್ಷುಕನಂತೆ ಬದುಕಿ ಹಣ ಸಂಪಾದಿಸುವ ಚಾಲೆಂಜ್ ಸ್ವೀಕರಿಸಿದ್ದಾನೆ.

ಪಂಥಾ ದೇಬ್ ಎಂಬ ವ್ಯಕ್ತಿ ಕೋಲ್ಕತ್ತಾದ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಿದ್ದಾನೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಆತ ಒಂದು ದಿನದ ಮಟ್ಟಿಗೆ ಭಿಕ್ಷುಕನಾಗಿ ಹಣ ಸಂಪಾದನೆ ಮಾಡಿದ್ದಾನೆ. 24 ಗಂಟೆಗಳ ಕಾಲ ಆತ ಭಿಕ್ಷುಕನಾಗಿ ಹಣ ಸಂಪಾದಿಸುವುದಾಗಿ ಚಾಲೆಂಜ್ ಸ್ವೀಕರಿಸಿದ್ದ. ಆತ ಹರಿದ ಟೀ ಶರ್ಟ್, ಪ್ಯಾಂಟ್ ಧರಿಸಿ ಸೇತುವೆ ಒಂದರ ಕೆಳಗೆ ನಿಂತು ಭಿಕ್ಷೆ ಬೇಡುವುದು ನೋಡಬಹುದು.
ಆ ದಾರಿಯಲ್ಲಿ ಸಾಗುವವರು ಆತನಿಗೆ ಹಣ ನೀಡುವುದು ಕೂಡ ವಿಡಿಯೋದಲ್ಲಿ ನಾವು ನೋಡಬಹುದು. ಆದ್ರೆ ಆತ ಇಡೀ ದಿನ ಒಟ್ಟು ಮಾಡಿದ ಹಣವನ್ನು ಅಲ್ಲೇ ದಾರಿ ಬದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರಿಗೆ ಆತ ನೀಡುತ್ತಾನೆ.
ಭಕ್ಷೆ ಬೇಡಿ ಆತ ಗಳಿಸಿದ ಹಣ ಎಷ್ಟು?
ಭಿಕ್ಷೆ ಬೇಡುತ್ತಾ ಒಂದು ದಿನ ದುಡಿಮೆ ಮಾಡುವ ಆತನ ಕೆಲಸದಿಂದ ಎಷ್ಟು ದುಡಿದಿರಬಹುದು ಎಂಬುದನ್ನು ಕೆಲವರು ಅಚ್ಚರಿಯಾಗಿ ಪ್ರಶ್ನೆ ಕೇಳಿದ್ದಾರೆ. ಆದ್ರೆ ಆತ ಭಿಕ್ಷೆ ಬೇಡಿ ಎಷ್ಟು ಹಣ ದುಡಿದಿದ್ದಾನೆ ಎಂಬುದನ್ನು ಎಲ್ಲಿಯೂ ತಿಳಿಸಿಲ್ಲ. ಆದ್ರೆ ಹಲವರ ಪ್ರಕಾರ ಹಾಗೂ ವಿಡಿಯೋದಲ್ಲಿ ನೋಡಿದಂತೆ ಆತನಿಗೆ ಕೆಲವರು ಮಾತ್ರ ದುಡ್ಡು ಕೊಟ್ಟಿದ್ದಾರೆ. ಆತ ಸುಮಾರು 100ರಿಂದ 120 ರೂಪಾಯಿ ದುಡಿಮೆ ಮಾಡಿದ್ದಾನೆ ಎಂದಿದ್ದಾರೆ.
ಕೆಲವರು ಇದೊಂದು ಒಳ್ಳೆಯ ಸ್ಟಾರ್ಟ್ ಅಪ್ ಐಡಿಯಾ ಎಂದು ಹೇಳಿದ್ದಾರೆ. ಯಾವುದೇ ಹೂಡಿಕೆ ಮಾಡದೆಯೇ ಸುಲಭವಾಗಿ ಹಣ ಗಳಿಸಲು ಈ ಐಡಿಯಾ ಚೆನ್ನಾಗಿದೆ. ಆದ್ರೆ ನಾವು ಯಾವ ಜಾಗದಲ್ಲಿ ಈ ರೀತಿ ಬೇಡುತ್ತೇವೆ ಎಂಬುದನ್ನು ನಿರ್ಧರಿಸಬೇಕು ಎಂದು ಒಬ್ಬರು ಬರೆದುಕೊಂಡಿದ್ದಾರೆ. ದೇವಾಲಯ, ಮದ್ಯದ ಅಂಗಡಿ ಮುಂದೆ ಒಳ್ಳೆಯ ಕಲೆಕ್ಷನ್ ಮಾಡಬಹುದು ಎಂದು ಆತ ಬರೆದುಕೊಂಡಿದ್ದಾರೆ.
ಹಾಗೆ ಆತ ಭಿಕ್ಷೆ ಬೇಡಿದ ಹಣವನ್ನು ಮಹಾತಾಯಿಗೆ ನೀಡಿದ್ದಾನೆ ಇದೊಂದು ಈ ವಿಡಿಯೋದಲ್ಲಿ ಮೆಚ್ಚುವಂತಹ ಅಂಶ ಎಂದು ಮತ್ತೊಬ್ಬರು ಬರೆದಿದ್ದಾರೆ. ಇದರಲ್ಲಿ ಜನರು ಕಲಿಯುವುದು ಏನು ಇಲ್ಲ. ಭಾರತದಲ್ಲಿ ಎಷ್ಟೊಂದು ನಿರುದ್ಯೋಗವಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ ಎಂದು ಇನ್ನೊಬ್ಬರು ಅಪಸ್ವರ ಎತ್ತಿರುವುದು ನೋಡಬಹುದು.
ಅವರ Instagram ಬಯೋ ಪ್ರಕಾರ, ಪಂಥಾ ದೇಬ್ 2,500 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. 180 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಆತ ಹೆಚ್ಚಾಗಿ ಇಂತಹ ಹಲವು ವಿಡಿಯೋಗಳ ಮಾಡಿರುವುದು ಕೂಡ ನೋಡಬಹುದು.



Click it and Unblock the Notifications
