Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ದಿನವಿಡಿ ಮಲಗಿ ನಿದ್ರಿಸುತ್ತಲೇ ದಿನಕ್ಕೆ ₹35 ಲಕ್ಷ ಗಳಿಸುವ 25ರ ಯುವತಿ! ಇದು ಹೇಗೆ ?
ಪ್ರತಿಯೊಬ್ಬರು ಒಂದೊಳ್ಳೆ ಕೆಲಸ ಮಾಡಿ ಹಣ ಗಳಿಸುವ ಆಸೆ ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಕಡಿಮೆ ಕೆಲಸ ಮಾಡಿ ಹೆಚ್ಚು ವೇತನ ಬರುವಂತಹ ಕೆಲಸ ಯಾವುದು ಅನ್ನೋದನ್ನು ಎಲ್ಲರು ಹುಡುಕುತ್ತಾರೆ. ಹಾಗೆ ಸುಲಭದ ಕೆಲಸ ಮಾಡೋಕೆ ಎಲ್ಲರಿಗೂ ಇಷ್ಟವೇ. ಇತ್ತೀಚಿಗೆ ಇನ್‌ಫ್ಲುಯೆನ್ಸರ್ ಹಾಗೆ ಯೂಟ್ಯೂಬರ್, ವಿಡಿಯೋ ಕ್ರಿಯೇಟರ್, ಕಂಟೆಂಟ್ ಕ್ರಿಯೇಟರ್ ಹೀಗೆ ಹೊಸ ಹೊಸ ವೃತ್ತಿಯೂ ಹುಟ್ಟಿಕೊಂಡಿದೆ.
ಈಗ ಸೋಶಿಯಲ್ ಮೀಡಿಯಾ ಜೀವನ ರೂಪಿಸುವ ಹೊಸ ಔದ್ಯೋಗಿಕ ವಲಯವಾಗಿ ರೂಪುಗೊಂಡಿದೆ. ಪ್ರಪಂಚದಾದ್ಯಂತ ಕೋಟಿ ಕೋಟಿ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾ ಮೂಲಕ ಜೀವನ ಕಟ್ಟಿಕೊಳ್ಳುವುದು ಅದನ್ನೇ ವೃತ್ತಿಯಾಗಿ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕೂ ಬಹಳ ಕಠಿಣ ಶ್ರಮದ ಅಗತ್ಯವಿದೆ.

ಆದ್ರೆ ಇಲ್ಲೊಬ್ಬಾಕೆ ಏನು ಮಾಡದೆಯೇ ಆನ್‌ಲೈನ್ ಮೂಲಕ ದಿನವೊಂದಕ್ಕೆ 35 ಲಕ್ಷ ರೂಪಾಯಿ ದುಡಿಯುತ್ತಿದ್ದಾಳಂತೆ. ಹೌದು ನಿಮಗಿದು ಅಚ್ಚರಿ ಎನಿಸಬಹುದು ನಿತ್ಯ 35 ಲಕ್ಷ ರೂಪಾಯಿ ಅಂದರೆ ತಿಂಗಳಿಗೆ ಆಕೆ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾಳೆ. ಆದ್ರೆ ಆಕೆ ಏನನ್ನೂ ಮಾಡದೆ ಕೇವಲ ನಿದ್ರೆ ಮಾಡುತ್ರತಲೇ ಇಷ್ಟೊಂದು ಹಣ ಸಂಪಾದಿಸುವುದಾಗಿ ಆಕೆ ಹೇಳಿಕೊಂಡಿದ್ದಾಳೆ.
ಸುಮಾರು 5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಚೀನಾದ ಪ್ರಭಾವಿ ಇನ್‌ಫ್ಲುಯೆನ್ಸರ್ ಒಬ್ಬಳು ಈ ರೀತಿ ಹೇಳಿಕೊಂಡಿದ್ದಾಳೆ. ಗು ಕ್ಸಿಕ್ಸಿ ಎಂಬ ಯುವತಿ. ಫೆಬ್ರವರಿ 8 ಮತ್ತು 16 ನಡುವೆ ಗಳಿಸಿರುವ ಹಣದ ಕುರಿತು ಆಕೆ ಹೇಳಿಕೊಂಡಿದ್ದಾಳೆ. ಆಕೆ ಈ ಸಮಯದಲ್ಲಿ ನಾನು ಕಷ್ಟಪಟ್ಟು ಸಂಪಾದಿಸಿದ ಹಣ ಎಂಬುದಾಗಿ ಹೇಳಿಕೊಂಡಿದ್ದಾಳೆ.
ಆದ್ರೆ ಇದು ಸಾಧ್ಯವಾಗೋದು ಹೇಗೆ ಎಂಬ ಗೊಂದಲ ಕುತೂಹಲ ಕೂಡ ಎಲ್ಲರಲ್ಲೂ ಮೂಡಿದೆ. ಇಂದು ನಾನು ಇಡೀ ದಿನ ಹಾಸಿಗೆಯಲ್ಲಿ ಮಲಗಿದ್ದೆ, ಏನನ್ನೂ ಮಾಡಲಿಲ್ಲ ಇನ್ನೂ 1.16 ಮಿಲಿಯನ್ ಯುವಾನ್ ಗಳಿಸಿ ಅದರಲ್ಲಿ ಅಂದಾಜು 303,200 ಯುವಾನ್ (US$42,000) ಕಮಿಷನ್ ಎಂದು ಆಕೆ ಹೇಳಿಕೊಂಡಿದ್ದಾಳೆ.
ನಾನು ಇಷ್ಟೊಂದು ಹಣ ಗಳಿಸುವುದನ್ನು ನೀವು ಸಹಿಸುವುದಿಲ್ಲ. ಹಾಗೆ ನನ್ನನ್ನು ಹೆಚ್ಚು ಟೀಕಿಸುತ್ತೀರಿ. ನಾನು ಲಕ್ಷ ಲಕ್ಷ ಯುವಾನ್ ಗಳಿಸುತ್ತೇನೆ. ತಿಂಗಳಿಗೆ ಅಲ್ಲ ಬದಲಿಗೆ ನಿತ್ಯವೂ ಲಕ್ಷ ಲಕ್ಷ ಯುವಾನ್ ಗಳಿಸುತ್ತೇನೆ ಎಂದು ಆಕೆ ಲೈವ್‌ನಲ್ಲಿ ಹೇಳಿಕೊಂಡಿದ್ದಾಳೆ.
ಚೀನಾದ ಕೇವಲ 25 ವರ್ಷದ ಕ್ಸಿಕ್ಸಿ ಇಷ್ಟೊಂದು ಹಣ ಗಳಿಸಲು ಹೇಗೆ ಸಾಧ್ಯ ಎಂಬುದು ಕೂಡ ದೊಡ್ಡ ಪ್ರಶ್ನೆ. ಆಕೆ ಎಲ್ಲರನ್ನು ದಾರಿ ತಪ್ಪಿಸುತ್ತಿದ್ದಾಳೆ ಎಂಬುದು ಹಲವರ ವಾದವಾಗಿದೆ. ಆಕೆಯ ವಿಡಿಯೋಗಳು ಕೂಡ ವಿಚಿತ್ರವಾಗಿರುತ್ತವೆ. ಮಕ್ಕಳು ಆಟವಾಡಲು ಬಳಸುವ ಪಿಂಗ್ ಪಾಂಗ್ ಬಾಲ್ ಅನ್ನು ಇಡಿಯಾಗಿ ನುಂಗಿ ಒಮ್ಮೆ ವಿವಾದ ಹುಟ್ಟಿಸಿದ್ದಳು, ಹಾಗೆ ಈ ವಿಡಿಯೋ ಮೂಲಕವೇ ಆಕೆ ಫೇಮಸ್ ಆಗಿದ್ದಳು.
ಆಕೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲೂ ತನ್ನ ಖಾತೆ ಹೊಂದಿದ್ದಾಳೆ. ಚೀನಾದಲ್ಲಿ ವಿಶ್ವದಲ್ಲೇ ಬೇರೆಲ್ಲೂ ಇಲ್ಲದಷ್ಟು ಸೋಶಿಯಲ್ ಮೀಡಿಯಾ ಸೈಟ್‌ಗಳಿವೆ. ಆಕೆ ಆರಂಭದಲ್ಲಿ ಸಣ್ಣ ಪುಟ್ಟ ವಿಡಿಯೋ ಹಂಚಿಕೊಳ್ಳುತ್ತಿದ್ದಳು. ಇದಾದ ಬಳಿಕ ಅಶ್ಲೀಲ ಪದಗಳು, ಫೇಮಸ್ ಆಗಲು ಆಶ್ಲೀಲತೆಯ ವಿಡಿಯೋಗಳನ್ನ ಆಕೆ ಹಂಚಿಕೊಳ್ಳಲು ಆರಂಭಿಸಿದ್ದಳು. ಆದ್ರೆ ಫೆಬ್ರವರಿಯಲ್ಲಿ ಯಾವುದೇ ವಿಡಿಯೋ ಮಾಡದೆ ಕೇವಲ ಮಲಗುವ ಮೂಲಕವೂ ಇಷ್ಟೊಂದು ಹಣ ಗಳಿಸಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.



Click it and Unblock the Notifications
