Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಭಾರತದ ಶ್ರೀಮಂತ ಮಹಿಳಾ ಯೂಟ್ಯೂಬರ್ ನಿಶಾ..! ಬದುಕು ನೀಡಿದ ಕುಕ್ಕಿಂಗ್ ಚಾನೆಲ್..!
ಸಾಮಾಜಿಕ ಮಾಧ್ಯಮಗಳನ್ನೇ ವೃತ್ತಿಯಾಗಿಸಿಕೊಂಡು ಆದಾಯ ಗಳಿಸೋದು ಅಷ್ಟೊಂದು ಸುಲಭದ ಮಾತಲ್ಲ. ಅಲ್ಲಿ ನಿತ್ಯ ಸಮಯ ನೀಡಬೇಕು, ಕಷ್ಟ ಪಡಬೇಕು. ಹೀಗಾದಾಗ ಮಾತ್ರ ಯಶಸ್ಸು ಸಿಗಬಹುದು. ಈಗಂತು ಪ್ರತಿಯೊಬ್ಬರು ಒಂದೊಂದು ಯೂಟ್ಯೂಬ್ ಚಾನೆಲ್ ಹೊಂದಿರುವುದು ನಾವು ನೋಡಬಹುದು. ಇತ್ತ ಮಹಿಳೆಯರು ಕೂಡ ಯೂಟ್ಯೂಬ್ ಚಾನೆಲ್ ತೆರೆದು ಕಂಟೆಂಟ್ ಹಾಕುವುದು ನೋಡುತ್ತೇವೆ.
ಅದ್ರಲ್ಲೂ ಮಹಿಳೆಯರು ಹೆಚ್ಚಾಗಿ ಕುಕ್ಕಿಂಚ್ ಚಾನೆಲ್‌ಗಳ ನಡೆಸುವುದು ಈಗ ಕಾಮನ್ ಆಗಿದೆ. ಸುಲಭವಾಗಿ ಮನೆಯಲ್ಲಿ ಅಡುಗೆ ಮಾಡುವುದನ್ನೇ ರೆಕಾರ್ಡ್ ಮಾಡಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಬಹುತೇಕ ಎಲ್ಲಾ ಕುಕ್ಕಿಂಗ್ ಚಾನೆಲ್‌ಗಳಿಗೂ ತಮ್ಮದೇ ಆಗಿರುವ ವೀಕ್ಷಕರು ಸಹ ಇದ್ದಾರೆ. ಇದರಲ್ಲೇ ಕೆಲವರು ಯಶಸ್ಸು ಗಳಿಸಿರುವವರು ಕೂಡ ನಮ್ಮ ನಡುವೆ ಇದ್ದಾರೆ.

ಹಾಗೆ ಇಲ್ಲೊಬ್ಬಾಕೆ ಕೂಡ ಕುಕ್ಕಿಂಗ್ ಚಾನೆಲ್‌ನಿಂದಲೇ ಫೇಮಸ್ ಆಗಿ ಈ ಭಾರತದ ಅತ್ಯಂತ ಶ್ರೀಮಂತ ಮಹಿಳಾ ಯೂಟ್ಯೂಬರ್ ಆಗಿದ್ದಾರೆ. ನಿಶಾ ಮಧುಲಿಕಾ ಎಂಬಾಕೆ ತಮ್ಮ ಕುಕ್ಕಿಂಗ್ ಚಾನಲ್ ಮೂಲಕ ಗಮನ ಸೆಳೆದಿದ್ದು, ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸುವ ಮಹಿಳಾ ಯೂಟ್ಯೂಬರ್‌ಗಳ ಪೈಕಿ ಅವರಿಗೆ ಮೊದಲ ಸ್ಥಾನ.
ನಿಶಾ ಮಧುಲಿಕಾ ಎಂಬ ಹೆಸರಿನಲ್ಲಿಯೇ ಅವರು ಯೂಟ್ಯೂಬ್ ಚಾನೆಲ್ ಹೊಂದಿದ್ದು, ಒಂದೊಂದು ವಿಡಿಯೋಗಳು ಲಕ್ಷ ಲಕ್ಷ ವೀಕ್ಷಣೆ ಕಂಡಿವೆ. ಅಲ್ಲದೆ ಅವರ ಚಾನೆಲ್‌ಗೆ ಬರೋಬ್ಬರಿ 14.5 ಮಿಲಿಯನ್ ಚಂದಾದಾರರಿದ್ದಾರೆ. ಇದು ಮಹಿಳಾ ಯುಟ್ಯೂಬರ್ ಒಬ್ಬರಿಗೆ ಇರುವ ಅತ್ಯಧಿಕ ಫಾಲೋವರ್ಸ್ ಎನ್ನಬಹುದು.
ಯಾರು ಈ ಮಧುಲಿಕಾ?
65 ವರ್ಷದ ಮಧುಲಿಕಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಆದ್ರೆ ಕುಕ್ಕಿಂಗ್ ಮೇಲಿನ ಅವರ ಆಸಕ್ತಿ ಇಂದು ಅವರನ್ನು ಸ್ಟಾರ್ ಮಾಡಿದೆ. ಉತ್ತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಅವರು ಅಧ್ಯಯನ ಪೂರ್ಣಗೊಂಡ ಬಳಿಕ ಟೆಕ್ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದರು. ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದು, ಪತಿಯ ವ್ಯವಹಾರ ನೋಡಿಕೊಳ್ಳುವುದು, ಕುಟುಂಬ ನಿರ್ವಹಣೆಯತ್ತ ಅವರ ಗಮನ ಸಾಗಿತ್ತು. ಆದ್ರೆ ಒಮ್ಮೆ ತಮ್ಮ ಕುಕ್ಕಿಂಗ್ ಮಾಡುವ ವಿಡಿಯೋ ಮಾಡಿ ಯುಟ್ಯೂಬ್‌ಗೆ ಹಾಕಿದರೆ ಹೇಗೆ ಎಂಬ ಯೋಚನೆ ಅವರಿಗೆ ಬಂದಿತ್ತು.
ಆರಂಭದಲ್ಲಿ ಪತಿಗೆ ಈ ವಿಚಾರ ಹೇಳಿದಾಗ ಆತ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಮೊಟ್ಟ ಮೊದಲ ವಿಡಿಯೋವನ್ನು ಅವರು ಅಪ್‌ಲೋಡ್ ಮಾಡಿದರು. ಆರಂಭದಲ್ಲಿ ಹೆಚ್ಚು ಜನರಿಗೆ ತಲುಪದಿದ್ದರೂ ನಿರಂತರವಾಗಿ ಅವು ಯುಟ್ಯೂಬ್‌ಗೆ ವಿಡಿಯೋ ಹಾಕುತ್ತಿದ್ದರು.
ಮಧುಲಿಕಾ ಯುಟ್ಯೂಬ್ ಆದಾಯ ಎಷ್ಟು?
ಯುಟ್ಯೂಬ್ ಚಾನಲ್ ಆರಂಭಿಸಿ ಬಹಳ ಕಾಲದವರೆಗೂ ನಿಧಾನವಾಗಿ ವೀಕ್ಷಕರ ಸಂಖ್ಯೆ ಏರುತ್ತಿತ್ತು. ಹಾಗೆ ಕೆಲವೊಮ್ಮೆ ಕಡಿಮೆ ವೀಕ್ಷಣೆ ಬರುವುದು ನೋಡಿ ಬೇಸರವು ಆಗಿತ್ತಂತೆ. ಆದ್ರೆ ನಿರಂತರವಾಗಿ ಅವರು ಕುಕ್ಕಿಂಗ್ ವಿಡಿಯೋಗಳ ಅಪ್‌ಲೋಡ್ ಮಾಡಲು ಮುಂದಾದಾಗ ಒಂದಿಷ್ಟು ವೀಕ್ಷಕರು ಹೆಚ್ಚಾಗುತ್ತಾ ಸಾಗಿ ಮುಂದೆ ದೊಡ್ಡ ಚಾನೆಲ್ ಆಗಿ ಬದಲಾಗಿತ್ತು. ಟೈಮ್ಸ್ ಆಫ್ ಇಂಡಿಯಾ ಪ್ರಕಾರ ಅವರು 43 ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದಾರೆ. ಹಾಗೆ ನಿತ್ಯ ಅವರ ಯುಟ್ಯೂಬ್ ವೀಕ್ಷಕರ ಸಂಖ್ಯೆ ಕೂಡ ಏರಿಕೆಯಾಗುತ್ತಲೇ ಇದೆ.
2007ರಲ್ಲಿ ಮೊದಲ ಬಾರಿಗೆ ಅವರು ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ಸಸ್ಯಹಾರಿ ಅಡುಗೆಗೆ ಫೇಮಸ್ ಆಗಿದ್ದ ಅವರು ನಿತ್ಯ ಒಂದೊಂದು ಹೊಸ ಬಗೆಯ ಖಾದ್ಯ ಹಂಚಿಕೊಳ್ಳುತ್ತಿದ್ದರು. 2011ರ ಹೊತ್ತಿಗೆ 100ಕ್ಕೂ ಹೆಚ್ಚು ವಿಡಿಯೋಗಳು ಅವರ ಚಾನಲ್‌ನಲ್ಲಿದ್ದವು ಹಾಗೆ ಲಕ್ಷ ಲಕ್ಷ ಚಂದಾದಾರರು ಕೂಡ ಇದ್ದರು. 2017ರಲ್ಲಿ ಅವರಿಗೆ ಟಾಪ್ ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್ ಎಂಬ ಪ್ರಶಸ್ತಿ ಕೂಡ ಒಲಿದು ಬಂದಿದೆ. ಇನ್ನು ದಿ ಎಕನಾಮಿಕ್ಸ್ ಟೈಮ್ಸ್ ನಿಶಾ ಮಧುಲಿಕಾ ಅವರನ್ನು ಭಾರತದ ಟಾಪ್ 10 ಯೂಟ್ಯೂಬ್ ಸೂಪರ್ ಸ್ಟಾರ್‌ಗಳ ಪಟ್ಟಿಯಲ್ಲಿ ಹೆಸರಿಸಿದೆ. ಈಗ ಅವರ ಯೂಟ್ಯೂಬ್‌ನಲ್ಲಿ ಬರೋಬ್ಬರಿ 2,300 ವಿಡಿಯೋಗಳಿವೆ.



Click it and Unblock the Notifications