Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಭಾರತದ ಅತ್ಯಂತ ಶ್ರೀಮಂತ ನಟಿ ಜೂಹಿ ಚಾವ್ಲಾ..! ಪ್ರೇಮಲೋಕದ ನಟಿ ಆಸ್ತಿ ಎಷ್ಟು ಗೊತ್ತಾ?
ಜೂಹಿ ಚಾವ್ಲಾ ಈ ಹೆಸರು ಯಾರು ತಾನೆ ಕೇಳಿಲ್ಲ ಹೇಳಿ. ಬಾಲಿವುಡ್ ಮಂದಿಯಿಂದ ಹಿಡಿದು ದಕ್ಷಿಣದಲ್ಲಿಯೂ ಈ ಹೆಸರು ಚಿರಪರಿಚಿತ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ನಟಿಸಿರುವ ಅವರು 90ರ ದಶಕದಲ್ಲಿ ಬಹುಬೇಡಿಕೆಯ ನಟಿ. ಕನ್ನಡದಲ್ಲಿ ವಿ ರವಿಚಂದದ್ರನ್ ಜೊತೆ ಪ್ರೇಮಲೋಕ ಸೃಷ್ಟಿಸಿದ್ದ ಅವರು ಎಲ್ಲರ ಮನ ಗೆದ್ದಿದ್ದರು.
ಪ್ರೇಮಲೋಕದಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದ ಆಕೆಗೆ ಕನ್ನಡಿಗರು ಫುಲ್ ಮಾರ್ಕ್ಸ್ ನೀಡಿದ್ದರು. ಇದಾದ ಬಳಿಕ ಆಕೆ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾದರು, ಈಗ ಭಾರತದ ಅತ್ಯಂತ ಶ್ರೀಮಂತ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸದಿದ್ದರೂ ಒಂದಿಷ್ಟು ಬ್ಯುಸಿನೆಸ್ ಕಡೆಗೆ ಹೆಚ್ಚು ಗಮನ ನೀಡಿದ್ದಾರೆ.

ಈ ನಡುವೆ 2024ರ ಶ್ರೀಮಂತ ನಟಿಯರ ಪಟ್ಟಿ ರಿಲೀಸ್ ಮಾಡಲಾಗಿದ್ದು, ಇದರಲ್ಲಿ ನಟಿ ಜೂಹಿ ಚಾವ್ಲಾ ಮೊದಲ ಸ್ಥಾನ ಪಡೆದಿದ್ದಾರೆ. 2009ರಿಂದ ಒಂದೇ ಒಂದು ಹಿಟ್ ಸಿನಿಮಾದಲ್ಲಿ ಅವರು ನಟಿಸಿಲ್ಲ. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಡಿಮೆ ಬಜೆಟ್ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹೀಗಿದ್ದರೂ ಅವರ ಸಂಪತ್ತು ಇಷ್ಟೊಂದು ಏರಲು ಕಾರಣವೇನು?
ಜೂಹಿ ಚಾವ್ಲಾರ ಒಟ್ಟು ಆಸ್ತಿ ಎಷ್ಟು?
2024ಕ್ಕೆ ಬಿಡುಗಡೆಯಾಗಿರುವ ಇತ್ತೀಚಿನ ವರದಿಗಳ ಪ್ರಕಾರ ನಟಿ ಬರೋಬ್ಬರಿ 4600 ಕೋಟಿ ರೂಪಾಯಿ ನಿವ್ವಳ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದು ಶಾರುಖ್ ಖಾನ್ ಅವರ ಬಳಿಕ ಎರಡನೇ ಸ್ಥಾನದಲ್ಲಿರುವಂತೆ ಮಾಡಿದೆ. ಹಾಗೆ ವಿಶ್ವದ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಅಗ್ರ 10ರ ಸ್ಥಾನ ಗಳಿಸುವಂತೆಯೂ ಮಾಡಿದೆ.
ನಟಿ ಜೂಹಿ ಚಾವ್ಲಾ ಅವರ ನಂತರದ ಸ್ಥಾನದಲ್ಲಿ ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಅವರ ಹೆಸರು ಕೇಳಿಬಂದಿದೆ. ಇಲ್ಲಿ ಐಶ್ವರ್ಯಾ ರೈ ಬಚ್ಚನ್ ಸುಮಾರು 850 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೆ ದೀಪಿಕಾ ಪಡುಕೋಣೆ 500 ಕೋಟಿ ರೂಪಾಯಿ ಮೌಲ್ಯದ ಒಟ್ಟಾರೆ ಆಸ್ತಿ ಹೊಂದಿದ್ದಾರೆ.
ಜೂಹಿ ಚಾವ್ಲಾ 90ರ ದಶಕದಲ್ಲಿ ನಟನೆ ಆರಂಭಿಸಿದ್ದರು. ಅಮಿರ್ ಖಾನ್ ಜೊತೆ ಖಯಾಮತ್ ಸೆ ಖಯಾಮತ್ ಸಿನಿಮಾದಲ್ಲಿ ನಟಿಸಿದ ಬಳಿಕ ಅವರ ಹೆಸರು ಬಾಲಿವುಡ್‌ನಲ್ಲಿ ಅಚ್ಚಾಯಿತು. ಇದಾದ ಬಳಿಕ ಶಾರುಖ್ ಖಾನ್, ಅನಿಲ್ ಕಪೂರ್, ರಿಷಿ ಕಪೂರ್ ಸೇರಿ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. 90ರ ದಶಕದಲ್ಲೇ ಜೂಹಿ ಒಂದು ಸಿನಿಮಾಗೆ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ.
ಜೂಹಿ ಹೂಡಿಕೆ ಮಾಡಿರುವ ಉದ್ಯಮವೆಷ್ಟು ಗೊತ್ತಾ?
ನಟ ಶಾರುಖ್ ಖಾನ್ ಜೊತೆಗೆ ಅವರು ಹಲವು ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ, ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೂಡರ್ಸ್ ಸಹ ಮಾಲಿಕತ್ವವನ್ನು ಅವರು ಹೊಂದಿದ್ದಾರೆ. ಹಾಗೆ ಕೆಲವು ಹೋಟೆಲ್, ಸಿನಿಮಾ ನಿರ್ಮಾಣ ಸಂಸ್ಥೆಯೊಂದಿಗೂ ಪಾಲುದಾರಿಕೆ ಹೊಂದಿದ್ದಾರೆ.
ಜೂಹಿ ಹೊಂದಿರುವ ಐಷಾರಾಮಿ ವಸ್ತುಗಳು
ಜೂಹಿ ಅವರು ಮುಂಬೈನ ಮಲಬಾರ್ ಹಿಲ್‌ನಲ್ಲಿ ಅದ್ದೂರಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಅವರ ಮುಂಬೈ ನಿವಾಸದ ಜೊತೆಗೆ, ಜಯ್ ಮೆಹ್ತಾ ಅವರ ಕುಟುಂಬದ ಬಂಗಲೆ ಅವರು ಪಾಲನ್ನು ಹೊಂದಿರುವ ಮತ್ತೊಂದು ಅದ್ದೂರಿ ಆಸ್ತಿಯಾಗಿದೆ. ಹಾಗೆ ದಂಪತಿ ಐಷಾರಾಮಿ ಕಾರುಗಳ ಸಂಗ್ರಹ ತಮ್ಮದಾಗಿಸಿಕೊಂಡಿದ್ದಾರೆ. 3.3 ಕೋಟಿ ರೂಪಾಯಿ ಬೆಲೆಯ ಆಸ್ಟನ್ ಮಾರ್ಟಿನ್ ರಾಪಿಡ್, 1.8 ಕೋಟಿ ಮೌಲ್ಯದ BMW 7, 1.7 ಕೋಟಿ ಬೆಲೆಯ Mercedes-Benz S ಕ್ಲಾಸ್, ಪೋರ್ಷೆ, ಜಾಗ್ವಾರ್ ಕಾರುಗಳ ಹೊಂದಿದ್ದಾರೆ.



Click it and Unblock the Notifications
