Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಫೇಲ್ ಯುದ್ಧ ವಿಮಾನಕ್ಕೆ ಇವರೇ ಸಾರಥಿ: ಭಾರತದ ಏಕೈಕ ಮಹಿಳಾ ಪೈಲಟ್ ಇವರು!
ಭಾರತ ಪಾಕ್ ನಡುವಿನ ಯುದ್ಧ ಭೀತಿ ಈಗ ಮತ್ತಷ್ಟು ಹೆಚ್ಚಾಗುತ್ತಿದೆ. ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪಹಲ್ಗಾಮ್‌ನಲ್ಲಿ ನಡೆದಿದ್ದ ಕೃತ್ಯಕ್ಕೆ ತಕ್ಕ ಉತ್ತರ ನೀಡಲು ಭಾರತ 9 ಕಡೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಹಲವು ಉಗ್ರರು ಹತರಾಗಿರುವ ಕುರಿತು ವರದಿಯಾಗಿವೆ. ಭಾರತ ಕೂಡ ಅಧಿಕೃತವಾಗಿ ಹೇಳಿಕೆ ನೀಡಿದೆ.
ಈಗ ಪಾಕಿಸ್ತಾನದ ಕಡೆಯಿಂದಲೂ ಮರುದಾಳಿಯ ಆತಂಕ ಇದ್ದೇ ಇದೆ. ಹೀಗಾಗಿ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲಾ ಕಡೆಯಿಂದಲೂ ಸನ್ನದ್ದವಾಗಿರಲು ಸೂಚಿಸಲಾಗಿದೆ. ಈಗ ವಾಯು ಸೇನೆಯು ಪಾಕ್ ಮೇಲೆ ತೀವ್ರ ನಿಗಾ ಇಟ್ಟಿವೆ. ಇನ್ನು ಭಾರತದ ಬತ್ತಳಿಕೆಯಲ್ಲಿರುವ ರಫೆಲ್ ಯುದ್ಧ ವಿಮಾನಗಳು ಸೇರಿ ಅತ್ಯಾಧುನಿಕ ಯುದ್ಧ ವಿಮಾನಗಳಿವೆ.

ಇನ್ನು ಈ ರಫೇಲ್ ಯುದ್ಧ ವಿಮಾನ ಅತ್ಯಾಧುನಿಕ ಹಾಗೆ ಶಕ್ತಿಶಾಲಿ ವಿಮಾನಗಳಲ್ಲಿ ಒಂದಾಗಿದೆ. ಈಗ ಈ ವಿಮಾನವನ್ನು ಮೊದಲ ಮಹಿಳಾ ಪೈಲಟ್ ನಿಯಂತ್ರಿಸಲಿದ್ದಾರೆ. ಎರಡು ದಶಕದ ಹಿಂದೆ ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನ ಏರಿದ್ದ ಕೀರ್ತಿ ಅವರದ್ದು, ಹೌದು ಅವರು ಭಾರತದ ಮೊದಲ ಹಾಗೂ ರಫೇಲ್ ಫೈಟರ್ ಜೆಟ್ ಏಕೈಕ ಮಹಿಳಾ ಫೈಲಟ್ ಆಗಿದ್ದಾರೆ.
29 ವರ್ಷದ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ಈಗ ಎಲ್ಲರ ಕೇಂದ್ರಬಿಂದು. ಆಕೆ ಮೊಟ್ಟ ಮೊದಲ ರಫೇಲ್ ಯುದ್ಧ ವಿಮಾನದ ಮಹಿಳಾ ಪೈಲಟ್ ಆಗಿದ್ದಾರೆ. ಶತ್ರು ದೇಶದ ಮೇಲೆ ಕಣ್ಣಿಡಲು ಆಗಸದಲ್ಲಿ ಫೈಟರ್ ಜೆಟ್ ಹಾರಿಸುವ ಜವಾಬ್ದಾರಿ ಹೊಂದಿದ್ದಾರೆ. ಫೈಟರ್ ಜೆಟ್ ಪೈಲಟ್ ಆಗಬೇಕೆಂಬ ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿರುವ ಸಿಂಗ್, ಇಂದು ರಫೇಲ್ ಯುದ್ಧ ವಿಮಾನವನ್ನು ಹಾರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವರ್ಷಗಳ ಹಿಂದೆ ಅವರು ನವದೆಹಲಿಯಲ್ಲರುವ ವಾಯುಪಡೆಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾಗ ಮೊದಲ ಭಾರಿಗೆ ಅಲ್ಲಿ ಯುದ್ದ ವಿಮಾನ ನೋಡಿದ್ದರು. ಆ ಸಮಯದಿಂದ ಅವರಲ್ಲಿ ಜೆಟ್ ವಿಮಾನಗಳ ಹಾರಿಸಬೇಕು ಎಂಬ ಬಯಕೆ ಮೂಡಿತ್ತು. ಇದಾದ ಬಳಿಕ ಅವರು ಪೈಲಟ್ ಆಗಲು ನಿರ್ಧರಿಸಿದರಂತೆ. ತಾಯಿಯಿಂದ ಸ್ಫೂರ್ತಿ ಪಡೆದ ಅವರು ವಾಯುಪಡೆಗೆ ಸೇರಲು ತಯಾರಿ ನಡೆಸಿದ್ದರು. ಭಾರತೀಯ ವಾಯುಪಡೆ 1995ರಿಂದ ಮಹಿಳೆಯರನ್ನು ಕೂಡ ನೇಮಿಸಿಕೊಳ್ಳಲು ಆರಂಭಿಸಿತ್ತು. ಆದ್ರೆ 2015ರಲ್ಲಿ ಶಿವಾಂಗಿಗೆ ಯುದ್ದ ವಿಮಾನ ಹಾರಾಟ ತರಬೇತಿಗೆ ಅವಕಾಶ ಒಲಿದುಬಂದಿತ್ತು.
ನನ್ನಂತಹ ಅನೇಕ ಮಹಿಳೆಯರು ಯುದ್ಧ ವಿಮಾನದ ಪೈಲಟ್‌ಗಳಾಗಿದ್ದಾರೆ. ಇದು ಆಧುನೀಕರಣವನ್ನು ಮಾತ್ರವಲ್ಲದೆ ನಾವು ಈಗ ನಮ್ಮ ಕನಸುಗಳನ್ ನನಸಾಗಿಸಬಹುದು ಎಂಬುದನ್ನು ತೋರಿಸುತ್ತದೆ ಎಂದು ಶಿವಾಂಗಿ ಸಿಂಗ್ ಹೇಳಿಕೊಂಡಿದ್ದಾರೆ.
ಬನಾರಸ್‌ನಲ್ಲಿ ಜನಿಸಿದ್ದ ಶಿವಾಂಗಿ ಬಳಿಕ ಓದಿನಲ್ಲೂ ಉತ್ತಮ ಸಾಧನೆ ಮಾಡಿದ್ದರು. ಇದರ ಜೊತೆಗೆ ಕ್ರೀಡೆಯಲ್ಲೂ ಕೂಡ ದೊಡ್ಡ ಸಾಧನೆ ಮಾಡಿದ್ದರು. ಬಳಿಕ ಆಕೆ ವಿವಾಹವಾಗಿದ್ದು ಕೂಡ ಭಾರತೀಯ ಸೇನೆಯಲ್ಲಿ ಯುದ್ಧ ವಿಮಾನದ ಪೈಲಟ್ ಆಗಿ ಸೇವೆ ಸಲ್ಲಿಸಿದವರನ್ನು. ಹೀಗಾಗಿ ಅವರ ಯುದ್ಧ ವಿಮಾಣದ ಪೈಲಟ್ ಆಗುವ ಕನಸು ಮತ್ತದಷ್ಟು ಸುಲಭವೇ ಆಗಿತ್ತು. ಈಗ ಮೊದಲ ಬಾರಿಗೆ ರಫೇಲ್ ಹಾರಿಸಿದ ಮಹಿಳಾ ಸಿಬ್ಬಂದಿ ಇವರೇ ಆಗಿದ್ದಾರೆ.
ಇನ್ನು ಭಾರತೀಯ ವಾಯುಪಡೆಯಲ್ಲಿ 1,600ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳು ಇದ್ದಾರೆ. ಅವರಲ್ಲಿ ಹಲವರು ಯುದ್ದ ವಿಮಾಣ ಹಾರಿಸುವ ತರಬೇತಿ ಪಡೆದಿದ್ದಾರೆ. ಹಾಗೆ ಉನ್ನತ ಹುದ್ದೆಗಳಲ್ಲೂ ಅವರು ಕರ್ತವ್ಯ ಸಲ್ಲಿಸುತ್ತಿದ್ದಾರೆ. ಈಗ ಶಿವಾಂಗಿ ಸಿಂಗ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಯುದ್ಧ ಆತಂಕ ಸಮಯದಲ್ಲಿ ಫೈಟರ್ ಜೆಟ್‌ಗಳ ಶಬ್ದ ಕೇಳಿಬರುತ್ತಿದೆ. ಹಾಗೆ ಶತ್ರು ರಾಷ್ಟ್ರದ ಮೇಲೆ ಈ ಯುದ್ಧ ವಿಮಾನಗಳು ಕಣ್ಣಿಡಲಿವೆ.



Click it and Unblock the Notifications
