Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮನೆಗೆ ಬೀಗವಿಲ್ಲ..ಅಂಗಡಿಯಿದ್ದರೂ ಮಾಲಿಕರು ಇಲ್ಲ..! ಭಾರತದ ಏಕೈಕ ಪ್ರಾಮಾಣಿಕ ಗ್ರಾಮವಿದು..!!
ಅಂಗಡಿಗಳೆಂದರೆ ಅಲ್ಲಿ ವ್ಯಾಪಾರಿಗಳು ಇದ್ದೇ ಇರುತ್ತಾರೆ. ಹಾಗೆ ಅಂಗಡಿಗಳ ಮುಂದೆ ಸಿಸಿಟಿವಿಗಳು, ಹಾಗೆ ದೊಡ್ಡ ಅಂಗಡಿಗಳ ಮುಂದೆ ವಾಚ್‌ಮನ್‌ಗಳ ನೇಮಿಸುವುದು ಕೂಡ ನೋಡಬಹುದು. ಹಾಗೆ ಸಿಸಿಟಿವಿ, ಸೆಕ್ಯೂರಿಟಿ ಇದ್ದರೂ ಕೂಡ ಕಳ್ಳತನ, ಅಹಿತಕರ ಘಟನೆ, ದರೋಡೆ ನಡೆಯುವುದು ನಾವು ನೋಡಿರುತ್ತೇವೆ. ಹಾಗೆ ಕೆಲವರು ಬೇಕಂತಲೇ ಹಣ ನೀಡದೆ ತೆರಳುವುದು ಸಹ ನೋಡಬಹುದು.
ಆದ್ರೆ ಇಲ್ಲೊಂದು ಕಡೆ ಇಡೀ ಹಳ್ಳಿಯಲ್ಲಿ ಪ್ರಮಾಣಿಕತೆ ನೋಡಬಹುದು. ಅಂದ್ರೆ ಇಲ್ಲಿ ಯಾವುದೇ ಅಂಗಡಿಯಲ್ಲಿ ವ್ಯಾಪಾರಿಗಳು ಇರುವುದಿಲ್ಲ. ನಿಮಗೆ ಏನು ಬೇಕು ಅನ್ನೋದನ್ನು ನೀವೆ ಆರಿಸಿಕೊಂಡು ನೀವಾಗಿಯೆ ಅಲ್ಲಿ ಹೇಳಿರುವಷ್ಟು ಹಣ ನೀಡಿ ತೆರಳಬೇಕು. ಇಲ್ಲಿ ಅಂಗಡಿಗಳಿಗೆ ಬೀಗಗಳಿರುವುದಿಲ್ಲ ಇನ್ನು ಸಿಸಿಟಿವಿಯಂತು ದೂರದ ಮಾತು.

ಹೌದು ಈ ರೀತಿಯ ವಿಶೇಷ ಸಂಪ್ರದಾಯ ಹೊಂದಿರುವ ಹಳ್ಳಿ ಇರೋದು ನಾಗಾಲ್ಯಾಂಡ್‌ನಲ್ಲಿ. ನಾಗಾಲ್ಯಾಂಡ್ ತನ್ನ ಪ್ರಾಕೃತಿಕ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆಯುವ ಪ್ರದೇಶ. ಹಾಗೆ ಇಲ್ಲಿನ ಖೊನೊಮಾ ಎಂಬ ಗ್ರಾಮ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದಲ್ಲಿ ಪ್ರವಾಸಿಗರು ಈ ರಾಜ್ಯಗಳ ಕಡೆ ವಾರಗಳ ಕಾಲ ಪ್ರವಾಸ ತೆರಳುತ್ತಾರೆ. ಹಾಗೆ ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಆನಂದಿಸುತ್ತಾರೆ. ಇನ್ನು ಇಲ್ಲಿ ಖೊನೊಮಾ ಗ್ರಾಮದಲ್ಲಿ ಇಂತಹ ವಿಶೇಷ ಸಂಪ್ರದಾಯವಿದೆ.
ಖೊನೊಮಾ ಗ್ರಾಮವು ಬೆಟ್ಟ ಗುಡ್ಡಗಳಿಂದ ಸುತ್ತುವರೆದ ಸರೋವರಗಳಿರುವ ನಾಡು. ಇಲ್ಲಿನ ಹಲವು ಅಂಗಡಿಗಳಲ್ಲ ವ್ಯಾಪಾರಿಗಳಿಲ್ಲ ಅನ್ನೋ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಟ್ರಾವೆಲ್ ವ್ಲಾಗರ್ ಹೆಮಾನಿ ಚಾವ್ಡಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಅಂಗಡಿಯೊಂದರಲ್ಲಿ ಯಾರು ಇಲ್ಲದೆಯೂ ಹೇಗೆ ವ್ಯಾಪಾರ ಮಾಡಲಾಗುತ್ತೆ ಅನ್ನೋದನ್ನು ವಿವರಿಸಿದ್ದಾರೆ.
ಮೂಲತಃ, ಇಲ್ಲಿ ಎಲ್ಲವೂ ನಂಬಿಕೆಯ ಮೇಲೆ ಆಧಾರಿತವಾಗಿದೆ. ಇದು ಭಾರತದ ಮೊದಲ ಹಸಿರು ಗ್ರಾಮ. ಇದು ನಾಗಾಲ್ಯಾಂಡ್‌ನ ಖೋನೋಮಾ ಗ್ರಾಮ. ಜನರು ತಮ್ಮ ಮನೆಗಳಿಗೆ ಬೀಗ ಹಾಕುವುದಿಲ್ಲ ಅಥವಾ ಇಲ್ಲಿ ಯಾವುದೇ ಕಳ್ಳತನ ನಡೆಯುವುದಿಲ್ಲ. ಇಲ್ಲಿನ ಪುಸ್ತಕದ ಅಂಗಡಿಯಲ್ಲಿ ಪುಸ್ತಕ ಬೇಕಾದರೆ ಖರೀದಿಸಿ, ನೀವೆ ಅದರ ನಿಖರ ಬೆಲೆಯನ್ನು ಪಾವತಿಸಿ. ಹಾಗೆ ದಿನಸಿ ಅಂಗಡಿ, ತರಕಾರಿ ಅಂಗಡಿಯಲ್ಲೂ ತರಕಾರಿ ಖರೀದಿಸಿ ಅಲ್ಲಿರುವ ಡ್ರಾಪ್ ಬಾಕ್ಸ್‌ನಲ್ಲಿ ನಿಮ್ಮ ಹಣವನ್ನು ಹಾಕಬೇಕು ಎಂದು ಆಕೆ ವಿಡಿಯೋದಲ್ಲಿ ವಿವರಿಸಿರುವುದು ನೋಡಬಹುದು.
ಅಂಗಡಿಯಲ್ಲಿ ಯಾರು ಇಲ್ಲದಿದ್ರೂ ಅಲ್ಲಿ ಈವರೆಗೂ ಕಳ್ಳತನದಂತಹ ಪ್ರಕರಣಗಳು ನಡೆದಿಲ್ಲ. ಅಲ್ಲಿನ ಜನರು ಪ್ರಾಮಾಣಿಕವಾಗಿದ್ದಾರೆ. ಇಲ್ಲಿನ ಬುಡಕಟ್ಟು ಜನಾಂಗವು ವಿಶಿಷ್ಟ ಸಂದ್ರದಾಯವನ್ನು ಅನುಸರಿಸುತ್ತಾರೆ. ಈ ಜನಾಂಗವು ಕೆನ್ಯೂ ಎಂಬ ಸಂಪ್ರದಾಯ ಅನುಸರಿಸುತ್ತಾರೆ. ಅದರ ಪ್ರಕಾರ ಕಳ್ಳತನನ ನಿಷಿದ್ಧವಾಗಿದೆ. ಅದರಲ್ಲೂ ಪ್ರಮಾಣಿಕ ಎಂದು ಕರೆಯಲು 154 ಕೆಟ್ಟ ಕೆಲಸಗಳು ಎಂದು ಪರಿಗಣಿಸಿ ಅದನ್ನು ನಿಷೇಧಿಸಲಾಗಿದೆ. ಅದರಲ್ಲೊಂದು ಅಲ್ಲಿ ಮರ ಗಿಡಗಳ ಕಡಿಯುವಂತಿಲ್ಲ. ಹೀಗಾಗಿಯೇ ಇದು ಭಾರತದ ಮೊದಲ ಹಸಿರು ಗ್ರಾಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹಾಗೆ ಸಾವಯವ ಕೃಷಿ, ಗಿಡನೆಡುವುದು, ಕಾಡು ಬೆಳೆಸುವುದು, ಪ್ರಾಣಿಗಳ ರಕ್ಷಣೆ ಮಾಡುವುದು ಅಲ್ಲಿನ ನಿತ್ಯದ ವಿಚಾರಗಳಲ್ಲಿ ಒಂದಾಗಿದೆ.
ಸದ್ಯ ಯುವತಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಭಾರತವನ್ನು ವೈವಿಧ್ಯತೆಗಳ ನಾಡು ಎಂದು ಏಕೆ ಕರೆಯುತ್ತಾರೆ ಅನ್ನೋದಕ್ಕೆ ಇದೊಂದು ಸಾಕ್ಷಿಯಾಗಿದೆ. ಆದ್ರೆ ಈ ಗ್ರಾಮದ ಕುರಿತು ಮತ್ತೊಂದಿಷ್ಟು ಮಂದಿಗೆ ತಿಳಿದರೆ ಅಲ್ಲಿನ ಆಚರಣೆಗಳು, ಸಂಪ್ರದಾಯಗಳ ಮೇಲೂ ಅದು ಪರಿಣಾಮ ಬೀರಬಹುದು ಎಂಬ ಆತಂಕ ಕೂಡ ಇದೆ.



Click it and Unblock the Notifications