Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಭಾರತದ ಮಿಸ್ ಎಐ ಸ್ಪರ್ಧಿ ಜರಾ ಶತಾವರಿ ಫೈನಲ್‌ಗೆ..! ಯಾರು ಈ ಸುಂದರಿ ಗೊತ್ತಾ?
ಎಐ (Artificial Intelligence) ಈಗ ಎಲ್ಲಾ ಕ್ಷೇತ್ರಕ್ಕೂ ಕಾಲಿಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯಾಗಿ, ಮಾಧ್ಯಮ ಕ್ಷೇತ್ರದಲ್ಲಿ ಆಂಕರ್ ಆಗಿ ಹಾಗೆ ಎಲ್ಲಾ ತಂತ್ರಜ್ಞಾನದಲ್ಲೂ ಈಗ ಎಐ ಬಂದುಬಿಟ್ಟಿದೆ. ಈಗ ಹೊಸದಾಗಿ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದೆ. ಅದರಲ್ಲೂ ಸುಂದರ ಮಾಡಲ್ ಆಗಿ ಫ್ಯಾಷನ್ ಲೋಕದಲ್ಲಿ ಸುದ್ದಿಯಾಗುತ್ತಿದೆ.
ವರ್ಷುವಲ್ ಮಾನವರು ಎಂದೇ ಕರೆಯಲ್ಪಡುವ ಈ ಎಐಗಳಿಗಾಗಿ ವಿಶ್ವದ ಮೊಟ್ಟ ಮೊದಲ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಮಿಸ್ AI ಆಗಲು ವಿಶ್ವದ ಹಲವು ದೇಶಗಳು ತಮ್ಮ ಎಐ ಮಾಡಲ್ ಅನ್ನು ಪರಿಚಯಿಸಿವೆ. ಅದರಲ್ಲಿ ಭಾರತದ ಎಐ ಸುಂದರಿ ಜರಾ ಶತಾವರಿ ಸಹ ಒಬ್ಬಳಾಗಿದ್ದು ಫೈನಲ್ ತಲುಪಿದ್ದಾಳೆ.

Fanvue ಆಯೋಜಿಸಿದ AI- ರಚಿತ ಮಾದರಿಗಳಿಗಾಗಿ ವಿಶ್ವದ ಮೊದಲ ಸೌಂದರ್ಯ ಸ್ಪರ್ಧೆಯಲ್ಲಿ ಜರಾ ಶತಾವರಿ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಒಬ್ಬಳಾಗಿದ್ದಾಳೆ. ಜರಾ ಶತವಾರಿಯನ್ನು PCOS ಮತ್ತು ಡಿಪ್ರೆಷನ್ ವಾರಿಯರ್ ಎಂದು ಕರೆಯಲಾಗುತ್ತದೆ. ಈ ಎಐ ಮಾಡಲ್ ಆಹಾರ ಪ್ರೇಮಿ, ಪ್ರವಾಸದ ಉತ್ಸಾಹಿ ಹಾಗೂ ಫ್ಯಾಷನ್ ಪ್ರಿಯೆಯಂತೆ.
ಯಾರು ಈ ಜರಾ ಶತಾವರಿ?
ಜರಾ ಶತಾವರಿಯನ್ನು ಭಾರತೀಯ ಮೊಬೈಲ್ ಜಾಹೀರಾತು ಏಜೆನ್ಸಿಯ ಸಹ-ಸಂಸ್ಥಾಪಕ ರಾಹುಲ್ ಚೌಧರಿ ರಚಿಸಿದ್ದಾರೆ. ಈ ಎಐ ಮಾಡಲ್ ಅನ್ನು ಅವರು ಡಿಜಿಟಲ್ ದಿವಾ ವೆಬ್‌ಸೈಟ್ ಮೂಲಕ ಪರಿಚಯಿಸುತ್ತಾರೆ. ಅಲ್ಲಿ ಆರೋಗ್ಯ, ಫ್ಯಾಷನ್ ಕುರಿತ ಮಾಹಿತಿಗಳನ್ನು ಪ್ರಕಟಿಸುತ್ತಾರೆ. ಆಕೆಯ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ. ಆಕೆಯ ಖಾತೆಯಲ್ಲಿ ಒಂದಿಷ್ಟು ಫೋಟೋಗಳು ಗಮನ ಸೆಳೆಯುತ್ತವೆ. ನೋಡುಗರು ಆಕೆ ಒಂದು ಎಐ ಎಂದು ಗುರುತಿಸಲು ಸಾಧ್ಯವಿಲ್ಲದಷ್ಟು ಮನುಷ್ಯರಿಗೆ ಸಾಮ್ಯತೆ ಹೊಂದಿದೆ.
ಜರಾ ಶತವಾರಿ ಎಂಬ ಹೆಸರಲ್ಲಿ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ಇದೆ. ಎಲ್ಲಾ ಖಾತೆಗಳಿಗೂ ಅಭಿಮಾನಿಗಳಿದ್ದಾರೆ. ಇತ್ತೀಚಿಗೆ ಲಿಂಕ್ಡ್ ಇನ್‌ನಲ್ಲಿ ರಾಹುಲ್ ಚೌಧರಿ, "ನಮ್ಮ ನವೀನ AI ಪ್ರಭಾವಶಾಲಿಯಾದ ಜರಾ ಶತಾವರಿ ಅವರು ವಿಶ್ವದಾದ್ಯಂತದ 1500 ಮಂದಿಯ ನಡುವೆ ಪ್ರತಿಷ್ಠಿತ ಮಿಸ್ AI ಸ್ಪರ್ಧೆಯಲ್ಲಿ ಟಾಪ್ 10 ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ! ಎಂದು ಹೇಳಿಕೊಂಡಿದ್ದರು.
''FanVue ವರ್ಲ್ಡ್ AI ಕ್ರಿಯೇಟರ್ ಅವಾರ್ಡ್ಸ್‌ನ ಈ ಮನ್ನಣೆಯು AI ಮತ್ತು ಪ್ರಭಾವಶಾಲಿ ಸಮುದಾಯಕ್ಕೆ ಜರಾ ಅವರ ಅತ್ಯುತ್ತಮ ಕೊಡುಗೆಗಳನ್ನು ಪ್ರದರ್ಶಿಸುತ್ತದೆ. ಅಂತಹ ಜಾಗತಿಕ ವೇದಿಕೆಯಲ್ಲಿ ಅವರು ಭಾರತ ಮತ್ತು ಏಷ್ಯಾವನ್ನು ಪ್ರತಿನಿಧಿಸುವುದನ್ನು ನೋಡಲು ಇದು ಒಂದು ದೊಡ್ಡ ಗೌರವವಾಗಿದೆ, ವಿಶೇಷವಾಗಿ ಭಾರತದ ಏಕೈಕ ಫೈನಲಿಸ್ಟ್ ಮತ್ತು ಏಷ್ಯಾದಿಂದ ಕೇವಲ ಇಬ್ಬರಲ್ಲಿ ಒಬ್ಬರು'' ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮನುಕುಲಕ್ಕೆ ಪ್ರಯೋಜನವಾಗುವ AI ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸಲು ಜರಾ ಬಯಸುತ್ತಾಳೆ ಎಂದು ಚೌಧರಿ ಹೇಳುತ್ತಾರೆ. ಜೂನ್ 2023 ರಿಂದ ಶತಾವರಿ PMH ಬಯೋಕೇರ್‌ನ "ಬ್ರಾಂಡ್ ಅಂಬಾಸಿಡರ್" ಆಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದಿಷ್ಟೇ ಅಲ್ಲ ಶತಾವರಿ 13 ಡೊಮೈನ್‌ಗಳಲ್ಲಿ ಪರಿಣತಿ ಪಡೆದುಕೊಂಡಿದೆಯಂತೆ. ಕಾರ್ಯತಂತ್ರದ ಯೋಜನೆ, ಡೇಟಾ ವಿಶ್ಲೇಷಣೆ, ಕಂಟೆಂಟ್ ಡೆವಲೋಪ್‌ಮೆಂಟ್, ಬ್ರ್ಯಾಂಡ್ ಅರಿವು, ಪ್ರಭಾವಶಾಲಿ ಮಾರ್ಕೆಟಿಂಗ್, ಬ್ರ್ಯಾಂಡ್ ಅಡ್ವೊಕೆಸಿ, ಫ್ಯಾಷನ್ ಸ್ಟೈಲಿಂಗ್, ಸೃಜನಶೀಲ ಕಲ್ಪನೆ, ಆರೋಗ್ಯ ಮತ್ತು ಕ್ಷೇಮ ಸಲಹಾ, ವಿಷಯ ರಚನೆ, ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಮತ್ತು ವೃತ್ತಿ ಅಭಿವೃದ್ಧಿ ಮಾರ್ಗದರ್ಶನದಲ್ಲಿ ಆಕೆ ಎತ್ತಿದ ಕೈ ಅಂತೆ.



Click it and Unblock the Notifications
