Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕ್ಯಾಡ್ಬರಿ ಜೆಮ್ಸ್‌ನಂತೆ ಡೋಲೋ ಮಾತ್ರೆ ಸೇವಿಸುವ ಭಾರತೀಯರು: ವೈದ್ಯರ ಶಾಕಿಂಗ್ ಹೇಳಿಕೆ!
ಡೋಲೋ 650 ಈ ಹೆಸರು ಹಲವರು ಇತ್ತೀಚಿಗೆ ಕೇಳಿರುತ್ತೀರಿ. ಅದರಲ್ಲೂ ಕೋವಿಡ್ ಸಮಯದಲ್ಲೇ ಮೊದಲ ಬಾರಿಗೆ ಹಲವರು ಕೇಳಿರುತ್ತಾರೆ. ಕೊರೊನಾಗೆ ಆರಂಭಿಕ ಚಿಕಿತ್ಸೆಯಾಗಿ ಇದೇ ಮಾತ್ರೆ ನೀಡಲಾಗಿತ್ತು. ಇದೊಂದು ಪ್ಯಾರಸಿಟಮಾಲ್ ಮಾತ್ರೆ. ಸಾಮಾನ್ಯ ಜ್ವರ, ಶೀತ, ನೆಗಡಿಯಂತಹ ಸಮಸ್ಯೆಗಳ ನಿವಾರಣೆಗೆ ಈ ಮಾತ್ರೆ ಬಳಸಲಾಗುತ್ತದೆ. ಹಾಗೆ ದೇಹದ ನೋವು, ತಲೆನೋವು, ಸೈನಸ್‌ಗೂ ಈ ಮಾತ್ರೆಯೇ ಮದ್ದು. ಹೀಗಾಗಿ ಕೋವಿಡ್ ಸಮಯದಲ್ಲಿ ಈ ಮಾತ್ರೆಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು.
ಆದ್ರೆ ಈ ಮಾತ್ರೆ ಸೇವನೆಯೇ ಈಗ ವ್ಯಸನವಾಗಿ ಬದಲಾಗಿದೆ ಎಂದು ವೈದ್ಯರೊಬ್ಬರು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತೀಯರು ಡೋಲೋ ಮಾತ್ರೆಯನ್ನು ಕ್ಯಾಡ್ಬೆರಿ ಜೆಮ್ಸ್ ಚಾಕೊಲೆಟ್ ರೀತಿ ಸೇವಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಹೊರಹಾಕಿದ್ದಾರೆ. ಡಾ. ಪಾಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯುಎಸ್ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಳನಿಯಪ್ಪನ್ ಮಾಣಿಕ್ಕಮ್ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತೀಯರು ಡೋಲೋ 650 ಅನ್ನು ಕ್ಯಾಡ್ಬರಿ ಜೆಮ್ಸ್ ನಂತೆ ತೆಗೆದುಕೊಳ್ಳುತ್ತಾರೆ ಎಂದು ಎಕ್ಸ್ ಅಥವಾ ಟ್ವೀಟ್ ಮಾಡಿದ್ದಾರೆ. ಡೋಲೋ 650 ಎಂಬುದು ಪ್ಯಾರಸಿಟಮಾಲ್‌ನ ಬ್ರಾಂಡ್ ಹೆಸರು. ಬಹುತೇಕ ವಿಟಮಿನ್ ಮತ್ತು ಖನಿಜ ಪೂರಕವನ್ನು ತೆಗೆದುಕೊಳ್ಳುವಂತೆಯೇ. ಇದು ಕೌಂಟರ್‌ನಲ್ಲಿ ಸುಲಭವಾಗಿ ಲಭ್ಯವಿರುವುದರಿಂದ ಡೋಸೇಜ್ ಬಗ್ಗೆ ವೈದ್ಯರನ್ನು ಕೇಳುವ ಅಗತ್ಯವೂ ನಮಗಿಲ್ಲ. ಅಂದರೆ ಇವು ಮೆಡಿಕಲ್‌ನಲ್ಲಿ ಮಾತ್ರವಲ್ಲ ಸಾಮಾನ್ಯ ಅಂಗಡಿಯಲ್ಲೂ ಸಿಗುವಂತಹ ಮಾತ್ರೆಯಾಗಿದೆ.
ಆದ್ರೆ ಈ ಮಾತ್ರೆಯ ಅತಿಯಾದ ಸೇವನೆಯು ಯಕೃತ್ತು ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಿಗೆ ವಿಷಕಾರಿಯಾಗಬಹುದು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕೂಡ ಹೇಳಲಾಗಿದೆ.
ಪ್ಯಾರಾಸಿಟಮಾಲ್ ಯಾವಾಗ ತೆಗೆದುಕೊಳ್ಳಬೇಕು?
ಸಾಮಾನ್ಯವಾಗಿ ಜ್ವರಕ್ಕೆ ಹಲವರು ಇದನ್ನು ಸೇವಿಸುತ್ತಾರೆ, ತಲೆನೋವಿಗೆ ಹಾಗೂ ದೇಹದ ನೋವಿಗೆ ಬೇರೆಯ ಮಾತ್ರೆಗಳ ಸೇವಿಸುವವರಿದ್ದಾರೆ. ಆದ್ರೆ ಜ್ವರ, ಶೀ, ನೆಗಡಿ, ತಲೆನೋವು ಒಟ್ಟಿಗೆ ಇದ್ದಾಗ ಈ ಡೋಲೋ ಸೇವಿಸುತ್ತಾರೆ. ಸಾಮಾನ್ಯವಾಗಿ ಈ ಮಾತ್ರೆ 500 ಮಿಗ್ರಾಂ, 650 ಮಿಗ್ರಾಂ ಮತ್ತು 1000 ಮಿಗ್ರಾಂ ಪ್ರಮಾಣದಲ್ಲಿ ಬರುತ್ತದೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ 4 ಗ್ರಾಮ್ ಅಥವಾ 4000 ಮಿಗ್ರಾಂ ಪ್ರಮಾಣದ ಡೋಸೇಜ್ ತೆಗೆದುಕೊಳ್ಳಬಹುದು. ನೀವು 500 ಮಿಗ್ರಾಂ ಮಾತ್ರೆಯನ್ನು ತೆಗೆದುಕೊಂಡರೂ ಕೂಡ ಒಂದು ಮಾತ್ರೆ ಹಾಗೂ ಮತ್ತೊಂದರ ನಡುವೆ 1 ಗಂಟೆಗೂ ಹೆಚ್ಚು ಸಮಯದ ಅಂತರ ಇರಬೇಕಾಗುತ್ತದೆ. ಹೀಗಾದರೆ ನೀವು 24 ಗಂಟೆಯಲ್ಲಿ ಸುಮಾರು 8 ಮಾತ್ರೆ ಸೇವಿಸಬಹುದು. ಆದ್ರೆ ನಿಮ್ಮ ರೋಗ ನಿರ್ಣಯ ಯಾವ ಪ್ರಮಾಣದಲ್ಲಿದೆ ಎಂಬುದರ ಮೇಲೆ ಡೋಸೆಜ್ ಸಹ ನಿರ್ಧರಿತವಾಗಲಿದೆ.
ಪ್ಯಾರಸಿಟಮಾಲ್‌ನ ಮಾತ್ರೆ ಹೆಚ್ಚಾಗಿ ಸೇವಿಸಿದರೆ ಏನಾಗಲಿದೆ?
ಪ್ಯಾರೆಸಿಟಮಾಲ್‌ನ ಮಿತಿಮೀರಿದ ಸೇವನೆಯು ಯಕೃತ್ತು ತೀವ್ರವಾಗಿ ಹಾನಿಗೊಳಿಸುತ್ತದೆ, ಇದು ತೀವ್ರವಾದ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗೆ ಯಾವುದೇ ಮಾತ್ರೆಯು ಮೂತ್ರಪಿಂಡದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡುತ್ತವೆ. ಅದರ ಕೆಲಸ ಹೆಚ್ಚು ಮಾಡುತ್ತವೆ, ಹೀಗಾಗಿ ಅಗತ್ಯಕ್ಕಿಂತ ಹೆಚ್ಚು ಮಾತ್ರೆಗಳ ಸೇವನೆ ಒಳಿತಲ್ಲ.
ಅಚ್ಚರಿಯ ವಿಚಾರವೆಂದರೆ 2011ರಲ್ಲಿ ಇಂಗ್ಲೆಂಡ್‌ನಲ್ಲಿ ಪ್ಯಾರಸಿಟಮಾಲ್ ಅಧಿಕ ಸೇವನೆಯ ಕಾರಣಕ್ಕೆ ಸುಮಾರು 227 ಸಾವುಗಳು ಹಾಗೆ 2022ರಲ್ಲಿ 261 ಸಾವು ಉಂಟಾಗಿರುವುದು ಇಲ್ಲಿ ಗಮನಿಸಬಹುದು.
ಡೋಲೋ ಮಾತ್ರೆಗಳ ಹೊರತರುವ ಲ್ಯಾಬ್ ಸಂಸ್ಥಾಪಕ ದಿಲಿಪ್ ಸುರನ ಆಸ್ತಿ ಕೋವಿಡ್ ಬಳಿಕ ಅತ್ಯಧಿಕ ಮಟ್ಟದಲ್ಲಿ ಏರಿಕೆಯಾಗಿತ್ತಲ್ಲದೆ ಅವರ ಮನೆ ಕಚೇರಿ ಮೇಲೆ ಐಟಿ ದಾಳಿ ಕೂಡ ನಡೆದಿತ್ತು. ಹಾಗೆ ಬೆಂಗಳೂರಿನಲ್ಲಿ ಅವರು ಬರೋಬ್ಬರಿ 66 ಕೋಟಿ ಮೌಲ್ಯದ ದೊಡ್ಡ ಬಂಗಲೆ ಖರೀದಿಸಿದ್ದರು.



Click it and Unblock the Notifications
