Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆಂಗ್ಲರ ನೆಲದಲ್ಲಿ ಭಾರತೀಯರೇ ಶ್ರೀಮಂತರು..! ಅರ್ಧದಷ್ಟು ಆಸ್ತಿ ಭಾರತೀಯರ ಪಾಲು!!
ನೀವು ಕೋಹಿನೂರ್ ವಜ್ರದ ಹೆಸರು ಕೇಳಿಯೇ ಕೇಳಿರುತ್ತೀರಿ. ಬ್ರಿಟಿಷರು ಭಾರತವನ್ನು ಆಳುವಾಗ ಇಲ್ಲಿಂದ ಕೊಳ್ಳೆ ಹೊಡೆದಿರುವ ಅತ್ಯಮೂಲ್ಯ ವಸ್ತು. ಆದ್ರೆ ಹಲವು ವರ್ಷದಿಂದ ಈ ವಜ್ರವನ್ನು ಭಾರತಕ್ಕೆ ಮರಳಿ ತರಬೇಕು ಎಂಬ ಕೂಗು ಕೇಳುತ್ತಲೇ ಇದೆ. ಆಗಾಗ ಈ ಸುದ್ದಿ ಇನ್ನೇನು ಕೊಹಿನೂರ್ ದೇಶಕ್ಕೆ ವಾಪಾಸಾಗಲಿದೆ ಎಂಬಂತೆ ಹರಡುತ್ತದೆ. ಈಗ ಕೂಡ ಮತ್ತೆ ಅದೇ ರೀತಿಯ ಚರ್ಚೆ ಆರಂಭಗೊಂಡಿದೆ.
ಆದ್ರೆ ಈ ಬಾರಿ ಕಾರಣ ಮಾತ್ರ ಬಹಳ ವಿಶೇಷವಾಗಿದೆ ಹಾಗೆ ಬಹಳ ಅಚ್ಚರಿಗೂ ಕಾರಣವಾಗುತ್ತಿದೆ. ಇಂಗ್ಲೆಂಡ್ ವಿಶ್ವದ ಶ್ರೀಮಂತ ರಾಷ್ಟ್ರ ಅನ್ನೋದ್ರಲ್ಲಿ ಯಾವ ಅನುಮಾನವು ಇಲ್ಲ. ಭಾರತ ಒಂದೇ ಅಲ್ಲ ವಿಶ್ವದ ಹಲವು ದೇಶಗಳಲ್ಲಿ ಆಡಳಿತ ನಡೆಸಿದ್ದ ಕೀರ್ತಿ ಬ್ರಿಟಿಷರದ್ದು, ಹೀಗಾಗಿ ಆ ದೇಶ ಇಂದಿಗೂ ಶ್ರೀಮಂತವಾಗಿದೆ. ಹಾಗೆ ಸಾವಿರಾರು ಮಂದಿ ಕೋಟ್ಯಧಿಪತಿಗಳು ನೆಲೆಸಿರುವ ದೇಶ ಇಂಗ್ಲೆಂಡ್ ಆಗಿದೆ.

ಆದ್ರೆ ಈಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಇಂಗ್ಲೆಂಡ್‌ನಲ್ಲಿ ಬ್ರಿಟಿಷರಿಗಿಂತ ಭಾರತೀಯರೇ ಹೆಚ್ಚಿನ ಆಸ್ತಿ ಹೊಂದಿದ್ದಾರಂತೆ. ಈ ಮೂಲಕ ಮೂಲ ನಿವಾಸಿಗಳಿಗಿಂತ ಭಾರತೀಯರ ಆಸ್ತಿಯೇ ಹೆಚ್ಚಾಗಿದೆಯಂತೆ. ಈ ವರದಿ ಹೊರಬಿದ್ದ ಬೆನ್ನಲ್ಲೆ ಹಾಗಾದ್ರೆ ಭಾರತೀಯರ ಮುಂದಿನ ಟಾರ್ಗೆಟ್ ಕೊಹಿನೂರ್ ವಜ್ರ ಎಂಬುದಾಗಿ ಹೇಳಲಾಗುತ್ತಿದೆ.
ಬ್ಯಾರೆಟ್ ಲಂಡನ್ ವರದಿಯ ಪ್ರಕಾರ ಭಾರತೀಯರು ಲಂಡನ್‌ನಲ್ಲಿ 'ಅತಿದೊಡ್ಡ ಆಸ್ತಿ ಮಾಲೀಕರ ಗುಂಪು' ಆಗಿದ್ದಾರೆ. ಈ ವರದಿಯ ಪ್ರಕಾರ ಶತಮಾನಗಳಿಂದ ಇಂಗ್ಲೆಂಡ್‌ನಲ್ಲಿ ನೆಲೆಸಿರುವವರು, ವಿದ್ಯಾಭ್ಯಾಸಕ್ಕೆ ಬಂದವರು, ಕೆಲಸಕ್ಕಾಗಿ ಬಂದವರು ಸೇರಿದ ದೊಡ್ಡ ಸಮುದಾಯ ಸೃಷ್ಟಿಯಾಗಿದೆಯಂತೆ. ಹಾಗೆ ಬಹುಸಂಖ್ಯಾತರಾಗಿ ಗುರುತಿಸಿಕೊಳ್ಳುವ ಕಾಲವೂ ದೂರವಿಲ್ಲ ಎಂದು ಹೇಳಲಾಗಿದೆ.
ಈಗ ಲಂಡನ್‌ನಲ್ಲಿ ದೊಡ್ಡ ಎನ್‌ಆರ್‌ಐ ಸಮುದಾಯವಿದೆ. ಅವರಲ್ಲಿ ಭಾರತೀಯರ ಸಂಖ್ಯೆ ಅತೀ ಹೆಚ್ಚಾಗಿದೆ. ಬಹುತೇಕ ಎಲ್ಲಾ ಭಾಗದಲ್ಲು ಅವರು ಆಸ್ತಿ ಹೊಂದಿದ್ದಾರೆ. ಹಾಗೆ ಎಲ್ಲಾ ವಲಯದಲ್ಲೂ ತಮ್ಮ ಉದ್ಯಮ ಕಟ್ಟಿಕೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್‌ನಲ್ಲಿ ಭಾರತೀಯರು ಈಗ ಅಲ್ಲಿನ ಮೂಲ ನಿವಾಸಿಗಳಿಗಿಂತಲೂ ಹೆಚ್ಚು ಆಸ್ತಿ ಪ್ರಮಾಣ ಹೊಂದಿದ್ದಾರೆ.
ಈ ಕುರಿತ ಪೋಸ್ಟ್ ವೊಂದನ್ನು ಎಕ್ಸ್ (ಟ್ವಿಟರ್)ನಲ್ಲಿ 'BRICSinfo' ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. ವರದಿಯನ್ನು ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, 13 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಾಗೆ ಕಮೆಂಟ್ ಬಾಕ್ಸ್‌ಗಳಲ್ಲಿ ತಮ್ಮ ಅಭಿಪ್ರಾಯಗಳ ಹಂಚಿಕೊಂಡಿದ್ದಾರೆ.
ಬ್ರಿಟೀಷರು ಹಿಂದೊಮ್ಮೆ ವಿಶ್ವದ ಅರ್ಧದಷ್ಟು ಭೂ ಭಾಗವನ್ನು ಆಕ್ರಮಿಸಿದ್ದರು, ಅವರದ್ದೇ ಆಸ್ತಿ, ಅವರದ್ದೆ ಹೆಸರು, ಕಂಪನಿ ಎಲ್ಲವೂ ಇತ್ತು. ಆದ್ರೆ ಸ್ವಂತ ನೆಲದಲ್ಲೇ ಈಗ ಅರ್ಧದಷ್ಟು ಮಾಲಿಕತ್ವ ಅವರ ಬಳಿ ಇಲ್ಲ. ಇದಲ್ಲವೇ ವಿಪರ್ಯಾಸ ಎಂದು ಬಳಕೆದಾರರೊಬ್ಬರು ಬರೆದಕೊಂಡಿದ್ದಾರೆ. ಹಾಗೆ ಮತ್ತೊಬ್ಬರು ಲಂಡನ್ ಅನ್ನು ನ್ಯೂ ಇಂಡಿಯಾ ಎಂಬುದಾಗಿ ಹೊಸದಾಗಿ ನಾಮಕಾರಣ ಮಾಡಬೇಕು ಎಂದು ಬರೆದಿದ್ದಾರೆ.
ಇಂಗ್ಲಿಷರು ಭಾರತದಿಂದ ಕದ್ದ 45 ಲಕ್ಷ ಕೋಟಿ ಮೌಲ್ಯದ ಸಂಪತ್ತನ್ನು ಹಿಂದಿರುಗಿಸಬೇಕು. ಅವರ ರಾಜನ ಕಿರೀಟದಲ್ಲಿರುವ ಕೊಹಿನೂರ್ ವಜ್ರವು ಭಾರತಕ್ಕೆ ಸೇರಿದ್ದು ಎಂದು ಮತ್ತೊಬ್ಬರು ಇಲ್ಲಿ ಕೊಹಿನೂರ್ ವಜ್ರದ ಕುರಿತು ಹೇಳಿದ್ದಾರೆ. ಈ ಟ್ವಿಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆ ಅದನ್ನು ವಾಪಾಸು ತರುವ ಚರ್ಚೆಗೆ ಕಾರಣವಾಗಿದೆ. ಬಹುತೇಕ ಮಂದಿ ಕೊಹಿನೂರ್ ವಾಪಾಸು ತರಲು ಇದು ಸರಿಯಾದ ಸಮಯ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.



Click it and Unblock the Notifications
