Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಭಾರತೀಯ ವಿಜ್ಞಾನಿಗಳಿಂದ ಹೊಸ ಗ್ರಹ ಅನ್ವೇಷಣೆ..! ಅಲ್ಲಿ ಏನಿದೆ ಗೊತ್ತಾ?
ನಮ್ಮ ಸೌರಮಂಡಲದ ಆಚೆ ಅದೇನು ಅಡಗಿದೆ ಎಂಬುದನ್ನು ಪತ್ತೆ ಮಾಡಲು ವಿಜ್ಞಾನಿಗಳ ತಂಡ ನಿತ್ಯವು ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಆಕಾಶಕಾಯಗಳು, ಗ್ರಹಗಳ ಚಲನೆ, ಕ್ಷುದ್ರಗ್ರಹಗಳು, ಹೊಸ ಗ್ರಹಗಳ ಚಲನೆ, ಸೂರ್ಯ ಚಂದ್ರ ಸೇರಿ ಎಲ್ಲಾ ಗ್ರಹಗಳ ಚಲನೆಯ ಮೇಲೂ ಅವರು ಕಣ್ಣಿಟ್ಟಿರುತ್ತಾರೆ. ಹಾಗೆ ಹೊಸ ಹೊಸ ಗ್ರಹಗಳ ಪತ್ತೆಗೂ ಅವರು ಮುಂದಾಗುವುದು ನೋಡಬಹುದು.
ಈಗ ಭಾರತೀಯ ವಿಜ್ಞಾನಿಗಳು ಹೊಸದಂದು ಇತಿಹಾಸಕ್ಕೆ ಕಾರಣರಾಗಿದ್ದಾರೆ. ನಮ್ಮ ಸೌರ ಮಂಡಲದ ಹೊರಭಾಗದಲ್ಲಿ ಹೊಸದಾದ ಒಂದು ಗ್ರಹವನ್ನು ಪತ್ತೆ ಮಾಡಿದ್ದಾರೆ ಇದು ಭಾತೀಯ ವಿಜ್ಞಾನಿಗಳಿಗೆ ಕೀರ್ತಿ ಹೆಚ್ಚಿಸಿದೆ. ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದ (PRL) ವಿಜ್ಞಾನಿಗಳು ಇಂತಹದೊಂದು ಅಪರೂಪದ ಸಾಧನೆ ಮಾಡಿದ್ದಾರೆ.

ನಮ್ಮ ಸೌರ ವ್ಯೂಹದ ಹೊರಭಾಗದಲ್ಲಿ ದೈತ್ಯ ಗ್ರಹವೊಂದನ್ನು ಅವರು ಪತ್ತೆ ಮಾಡಿದ್ದಾರೆ. ಈ ವಿವರಗಳನ್ನು ಖಗೋಳ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೇಳಿಕೆಯಲ್ಲಿ ಬಹಿರಂಗಪಡಿಸಿದೆ. TOI-6038A b ಎಂದು ಕರೆಯಲಾಗಿರುವ ಈ ಗ್ರಹವು ಭೂಮಿಗಿಂತ ಬಹಳ ದೊಡ್ಡದಾಗಿದೆ ಎಂದು ತಿಳಿಸಿದೆ.
ಈ ಗ್ರಹವು ಭೂಮಿಗಿಂತ ದೊಡ್ಡದಾಗಿದ್ದು, ಶನಿ ಗ್ರಹಕ್ಕಿಂತ ಸ್ವಲ್ಪವೇ ಚಿಕ್ಕದಾಗಿದೆ ಎಂದು ತಿಳಿಸಲಾಗಿದೆ. ಅಚ್ಚರಿ ಎಂದರೆ ಇದು ಸೂರ್ಯನಿಗಿಂತ ಸುಮಾರು 1.5ರಿಂದ 5 ಪಟ್ಟು ಪ್ರಕಾಶಮಾನವಾಗಿದೆ. ಅಂದರೆ ಸೂರ್ಯನಿಗಿಂತಲೂ ಹೆಚ್ಚು ತಾಪವನ್ನೂ ಇದು ಹೊಂದಿದೆ. ಹಾಗೆ ತನ್ನ ಕಕ್ಷೆಯಲ್ಲಿ ಒಂದು ಸುತ್ತು ಬರಲು ಇದು ಭೂಮಿಗೆ ಸಮಯದಲ್ಲಿ 5 ದಿನಗಳ ತೆಗೆದುಕೊಳ್ಳಲಿದೆ.
ಇದು ನಮ್ಮ ಸೌರವ್ಯೂಹದಲ್ಲಿ ಅಸ್ತಿತ್ವದಲ್ಲಿಲ್ಲದ ಅಪರೂಪದ ರೀತಿಯ ಎಕ್ಸೋಪ್ಲಾನೆಟ್ ಆಗಿದೆ. ಇದು ನೆಪ್ಚೂನ್ ಗ್ರಹದಂತೆ ಹಾಗೂ ಭಾರೀ ಪ್ರಮಾಣದ ಅನಿಲಗಳ ತನ್ನಲ್ಲಿಟ್ಟುಕೊಂಡಿರುವ ದೈತ್ಯ ಗ್ರಹವಾಗಿದೆ. ಭೌತಿಕ ಸಂಶೋಧನಾ ಪ್ರಯೋಗಾಲಯದ ಮೌಂಟ್ ಅಬು ವೀಕ್ಷಣಾಲಯದಲ್ಲಿರುವ ಅತ್ಯಾಧುನಿಕ 2.5 ಮೀಟರ್ ದೊಡ್ಡದಾದ ದೂರದರ್ಶಕಕ್ಕೆ ಲಗತ್ತಿಸಲಾದ ಅತ್ಯಾಧುನಿಕ PARAS-2 ಸ್ಪೆಕ್ಟ್ರೋಗ್ರಾಫ್ ಅನ್ನು ಬಳಸಿಕೊಂಡು ಈ ಆವಿಷ್ಕಾರ ಮಾಡಲಾಗಿದೆ. ಈ ಗ್ರಹವು ಸೂರ್ಯಗಿಂತ ಹೆಚ್ಚು ಪ್ರಕಾಶಮಾನವಾಗಿದ್ದು, ದೊಡ್ಡ ನಕ್ಷತ್ರದಂತೆ ಕಾಣಿಸಲಿದೆಯಂತೆ.
ನಾನಾ ಪತ್ತೆ ಮಾಡಿದೆ ಹೊಸ ಗ್ರಹ
ಇಸ್ರೋ ಹೊಸ ಗ್ರಹ ಪತ್ತೆ ಮಾಡಿರುವುದಾಗಿ ಹೇಳಿಕೊಳ್ಳುವ ಮೊದಲು ನಾಸಾ ಕೂಡ ಹೊಸದೊಂದು ಗ್ರಹ ಪತ್ತೆ ಮಾಡಿರುವುದಾಗಿಯೂ ಹೇಳಿಕೊಂಡಿದೆ. WASP-193b ಎಂದು ಕರೆಯಲ್ಪಡುವ ಈ ಹೊಸದಾಗಿ ಕಂಡುಹಿಡಿದ ಗ್ರಹವು ಗುರುವಿನಂತೆ ಕಾಣಿಸುತ್ತಿದೆ, ಗಾಲಿ ತುಂಬಿರುವ ಅನಿಲದಂತೆ ವಿಚಿತ್ರ ಗ್ರಹವು ಗೋಚರವಾಗಿದೆ ಎಂದು ತಿಳಿಸಿದೆ.
ಇಲ್ಲಿಯವರೆಗೆ ಗುರುತಿಸಲಾದ 5,400ಕ್ಕೂ ಹೆಚ್ಚು ಗ್ರಹಗಳಲ್ಲಿ ಈಗ ಪತ್ತೆಯಾಗಿರುವ WASP-193b ಗ್ರಹವು ಅತ್ಯಂತ ಹಗುರವಾದ ಗ್ರಹವಾಗಿದೆ. ಇದು ಹತ್ತಿಯಂತೆ ತೇಲುತ್ತಿರುವ ಹಾಗೆ ಅತ್ಯಂತ ಕಡಿಮೆ ಸಾಂದ್ರತೆ ಹೊಂದಿರುವ ಗ್ರಹವಾಗಿದೆ. ಆದ್ರೆ ಕಡಿಮೆ ಸಾಂದ್ರತೆ ಹೊಂದಿರುವ ಇಷ್ಟೊಂದು ದೈತ್ಯ ಗಾತ್ರದ ಗ್ರಹ ಇದೆ ಮೊದಲಿಗೆ ಪತ್ತೆಯಾಗಿದೆ. WASP-193b ಹೆಚ್ಚಾಗಿ ಹೈಡ್ರೋಜನ್ ಮತ್ತು ಹೀಲಿಯಂನಿಂದ ಮಾಡಲ್ಪಟ್ಟಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಭೂಮಿಯ ಸಾಂದ್ರತೆಗೆ ಹೋಲಿಸಿದರೆ ಇದು ಬಹಳ ಕಡಿಮೆಯಾಗಿದೆ. ಗುರುವಿನ ಕೇವಲ ಶೇ.15ರಷ್ಟು ಸಾಂದ್ರತೆ ಇದು ಹೊಂದಿದೆ. ಅಂದರೆ ಕಾಟನ್ ಕ್ಯಾಂಡಿಯಂತೆ ಎಂದು ಹೋಲಿಸಬಹುದು. ಆದ್ರೆ ಗಾತ್ರದಲ್ಲಿ ಬಹಳ ದೊಡ್ಡದಿದೆ.



Click it and Unblock the Notifications
