Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದೇ ನೋಡಿ ಭಾರತದ ಮೊಟ್ಟ ಮೊದಲು ರೈಲು..! ಇಂದಿಗೆ ಈ ರೈಲು ಹೊರಟು 171 ವರ್ಷ..!
ಭಾರತೀಯ ರೈಲ್ವೆ ವಿಶ್ವದ ಅತ್ಯಂತ ದೊಡ್ಡ ರೈಲ್ವೆ ಸಂಪರ್ಕದಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಬರೋಬ್ಬರಿ 68 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ ನಮ್ಮ ರೈಲ್ವೆ ವಿಸ್ತರಿಸಿಕೊಂಡಿದೆ. ಬ್ರಿಟಿಷರು ಆರಂಭಿಸಿದ್ದ ರೈಲ್ವೆ ಹಲವು ಏಳು ಬೀಳಿನ ನಡುವೆ ಇಂದಿಗೂ ಜನಮನದ ಸಾರಿಗೆ ಸಂಪರ್ಕವಾಗಿ ಬೆಳೆಯುತ್ತಿದೆ.
ಇತ್ತೀಚಿಗೆ ರೈಲ್ವೆ ವಲಯದಲ್ಲಿ ಮಹತ್ವದ ಬೆಳವಣಿಗೆಗಳು, ಆಧುನಿಕರಣ ಸೇರಿದಂತೆ ವಿಶ್ವದರ್ಜೆಯ ಗುಣಮಟ್ಟಕ್ಕೂ ಹೆಸರಾಗುತ್ತಿದೆ. ಹೊಸ ಹೊಸ ರೈಲುಗಳನ್ನು ಪರಿಚಯಿಸುವ ಮೂಲಕ ರೈಲ್ವೆ ಪ್ರಯಾಣಿಕರಿಗೆ ಆರಾಮದಾಯಕ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆಯ ಹಿಂದಿನ ಆರ್ಥಿಕ ವರ್ಷದಲ್ಲಿ ಅತ್ಯಧಿಕ ಆದಾಯ ಗಳಿಸಿದೆ.

ಭಾರತೀಯ ರೈಲ್ವೆಯು ತನ್ನ ಸಾರಿಗೆ ಸಂಪರ್ಕ ಜಾಲದಲ್ಲಿ ಸುಸ್ಥಿರ, ತ್ವರಿತ ಮತ್ತು ಶಕ್ತಿ-ಸಮರ್ಥ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಬ್ರಾಡ್ ಗೇಜ್ ಟ್ರ್ಯಾಕ್‌ಗಳು ಬಹುತೇಕ ವಿದ್ಯುದೀಕರಣಗೊಂಡು ಬದಲಾಗುತ್ತಿವೆ. ಎಲ್ಲಾ ಮಾರ್ಗಗಳನ್ನು ವಿದ್ಯುತ್ ಮೂಲಕ ವ್ಯವಹರಿಸುವಂತೆ ಮಾಡಲು ಮುಂದಾಗಲಾಗುತ್ತಿದೆ.
2023ರ ಒಂದು ವರ್ಷದಲ್ಲಿ ದೇಶದಲ್ಲಿ 6,577 ಕಿಲೋಮೀಟರ್ ರೈಲ್ವೆ ಮಾರ್ಗವು ಯಶಸ್ವಿಯಾಗಿ ವಿದ್ಯುದೀಕರಣಗೊಂಡಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಆದರೆ ನಮ್ಮ ಈ ರೈಲ್ವೆ ಆರಂಭಗೊಂಡು ಇಂದಿಗೆ ಬರೋಬ್ಬರಿ 171 ವರ್ಷ ಕಳೆದಿದೆ. ಇದೇ ದಿನ 1853ರಲ್ಲಿ ಮೊಟ್ಟ ಮೊದಲ ರೈಲು ಕಾರ್ಯಾಚರಣೆ ನಡೆಸಿತ್ತು.
ಭಾರತೀಯ ರೈಲವ್ಎಯು ಏಪ್ರಿಲ್ 16, 1853 ರಂದು ಬೋರಿ ಬಂದರ್‌ನಿಂದ ಥಾಣೆಗೆ 34 ಕಿ.ಮೀ ದೂರವನ್ನು ಒಳಗೊಂಡ ಮೊದಲ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಿತು. ಇದನ್ನು ಸಾಹಿಬ್, ಸುಲ್ತಾನ್ ಮತ್ತು ಸಿಂಧ್ ಎಂಬ ಮೂರು ಇಂಜಿನ್‌ಗಳು ನಿರ್ವಹಿಸುತ್ತಿದ್ದವು ಮತ್ತು ಹದಿಮೂರು ಬೋಗಿಗಳನ್ನು ಹೊಂದಿದ್ದವು. ಅಂದಿನಿಂದ, ಈ ದಿನವನ್ನು ಭಾರತೀಯ ರೈಲು ಸಾರಿಗೆ ದಿನವೆಂದು ಗುರುತಿಸಲಾಗಿದೆ.
ಭಾರತೀಯ ರೈಲ್ವೆಯ ಪ್ರಕಾರ, ಔಪಚಾರಿಕ ಉದ್ಘಾಟನಾ ಸಮಾರಂಭವನ್ನು ಏಪ್ರಿಲ್ 16, 1853 ರಂದು ನಡೆಸಲಾಯಿತು, ಸುಮಾರು 400 ಅತಿಥಿಗಳನ್ನು ಹೊತ್ತ 14 ರೈಲ್ವೆ ಬೋಗಿಗಳು ಬೋರಿ ಬಂದರ್‌ನಿಂದ ಮಧ್ಯಾಹ್ನ 3.30ಕ್ಕೆ ಹೊರಟಿತ್ತು. ಇದು ಇತಿಹಾಸವಾಯಿತು.
ಈ ವಿಶೇಷ ಸಂದರ್ಭವನ್ನು ನೆನೆಯಲು ಸೆಂಟ್ರಲ್ ರೈಲ್ವೆ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ''1853 ರಲ್ಲಿ, ಇಂದಿಗೆ ಸರಿಯಾಗಿ 171 ವರ್ಷಗಳ ಹಿಂದೆ, ಬೋರಿ ಬಂದರ್‌ನಿಂದ ಥಾಣೆಗೆ ಮೊದಲ ರೈಲಿನ ಉದ್ಘಾಟನಾ ಪ್ರಯಾಣದೊಂದಿಗೆ ಭಾರತವು ಸಾರಿಗೆ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ. ಈ ಪ್ರಮುಖ ಕ್ಷಣವು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಸಂಪರ್ಕದ ಹೊಸ ಯುಗಕ್ಕೆ ನಾಂದಿ ಹಾಡಿತು ಎಂದಿದೆ.
ಈ ಚಿತ್ರದಲ್ಲಿ ಎಂಜಿನ್ ಮೂಲಕ ಎಳೆದುಕೊಂಡುವ ಹೋಗುವ ರೈಲನ್ನು ಕಾಣಬಹುದು. ಅಂದಿನ ಕಾಲಕ್ಕೆ ಇದು ಮಹತ್ತರ ಸಾಧನೆಯಾಗಿತ್ತು. ಆದರೆ ಯುರೋಪ್‌ನ ಹಲವು ದೇಶಗಳಲ್ಲಿ ಆ ಕಾಲಕ್ಕೆ ರೈಲು ಪ್ರಮುಖ ಸಾರಿಗೆ ಸಂಪರ್ಕ ಸಾಧನವಾಗಿ ಮಾರ್ಪಟ್ಟಿತ್ತು.
ವೇಗದ ರೈಲಿಗೆ ಆದ್ಯತೆ
ಇತ್ತೀಚಿನ ದಿನಗಳಲ್ಲಿ ವೇಗದ ರೈಲುಗಳು ಹಳಿಗಳ ಮೇಲೆ ಓಡುತ್ತಿವೆ. ಒಂದೇ ಭಾರತ್, ಅಮೃತ್ ಭಾರತ್ ಸೇರಿ ಜನ ಶತಾಬ್ದಿ ರೈಲುಗಳ ಸಂಖ್ಯೆ ಹೆಚ್ಚಳವಾಗಿವೆ. ಜೊತೆಗೆ ಸರಾಸರಿ ವೇಗದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ.
ಕಳೆದ ವರ್ಷದ ಕೊನೆಯ ತಿಂಗಳು ಡಿಸೆಂಬರ್ ವೇಳೆಗೆ ಒಟ್ಟು ವಿದ್ಯುದೀಕರಣವು ಈವರೆಗೆ ಒಟ್ಟು 61,508 ಕಿಲೋ ಮೀಟರ್ ತಲುಪಿದೆ. ಅಂದರೆ ಈ ಮೂಲಕ ಭಾರತೀಯ ರೈಲ್ವೇ ಒಟ್ಟು ಬ್ರಾಡ್ ಗೇಜ್ ಮಾರ್ಗ ಜಾಲದ (65,556 ರೈಲ್ವೆ ಕಿಲೋ ಮೀಟರ್) ಪೈಕಿ ಶೇಕಡಾ 93.83ರಷ್ಟು ವಿದ್ಯುದೀಕರಣಗೊಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ 2014 ರ ವರೆಗೆ ಬ್ರಾಡ್ ಗೇಜ್ ನೆಟ್‌ವರ್ಕ್‌ನ 21,801 ಕಿಮೀ ಮಾತ್ರ ವಿದ್ಯುದ್ದೀಕರಿಸಲ್ಪಟ್ಟಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.



Click it and Unblock the Notifications