Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಅಮೆರಿಕದ ಎರಡನೇ ಮಹಿಳೆಯಾದ ಭಾರತ ಮೂಲದ ಉಷಾ..! ಯಾರು ಗೊತ್ತಾ ಈಕೆ?
ಅಮೆರಿಕ ರಾಜಕೀಯದಲ್ಲಿ ಭಾರತೀಯ ನೆಲದ ಒಂದಿಬ್ಬರು ಕಾಣಿಸಿಕೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ. ಹಿಂದಿನ ಅಧ್ಯಕ್ಷ ಜೋ ಬೈಡನ್ ಅಧಿಕಾರ ನಡೆಸುತ್ತಿದ್ದಾಗ ಕಮಲಾ ಹ್ಯಾರಿಸ್ ಭಾರತವನ್ನೇ ಪ್ರತಿನಿಧಿಸುವಂತೆ ಗುರುತಿಸಿಕೊಂಡಿದ್ದರು. ಈಗ ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರಕ್ಕೆ ಏರುತ್ತಿದ್ದು ಈ ವೇಳೆ ಕೂಡ ಭಾರತ ಮೂಲದ ಮಹಿಳೆಯೊಬ್ಬರು ಮತ್ತೆ ಸುದ್ದಿಯಲ್ಲಿದ್ದಾರೆ.
ಆಂಧ್ರ ಪ್ರದೇಶದ ಮೂಲದ ಉಷಾ ಚಿಲುಕುರಿ ವಾನ್ಸ್ ಅವರು ಈ ಬಾರಿಯ ಚುನಾವಣೆಯಲ್ಲಿ ಭಾಗಿಯಾಗದೆ ಇದ್ದರೂ ಕೂಡ ಅವರ ಪತಿ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಸಿದ್ಧ ಗೋದಾವರಿ ಪಟ್ಟಣದ ವಡ್ಲೂರು ಗ್ರಾಮದಲ್ಲಿ ಉಷಾ ಚಿಲುಕುರಿ ಅವರ ಪೂರ್ವಜರು ಇಂದಿಗೂ ನೆಲೆಸಿದ್ದಾರೆ. ಆದ್ರೆ ಉಷಾ ಅವರು ಹುಟ್ಟಿದ್ದು ಬೆಳೆದಿದ್ದ ಅಮೆರಿಕದಲ್ಲಿ.

ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆ ಜೆಡಿ ವ್ಯಾನ್ಸ್ ಆಯ್ಕೆಯಾಗಲಿದ್ದು ಇದೀಗ ಅಮೆರಿಕದ ಎರಡನೇ ಮಹಿಳೆ ಆಗಿ ಉಷಾ ಕೀರ್ತಿ ಪಡೆಯಲಿದ್ದಾರೆ. ಜೆಡಿ ವ್ಯಾನ್ಸ್ ಅವರನ್ನು ಉಷಾ ಚಿಲುಕುರಿ ವಿವಾಹವಾಗಿದ್ದು ಓಹಿಯೋ ಸೆನೆಟರ್ ಆಗಿ ಜೆಡಿ ವ್ಯಾನ್ಸ್ ಆಯ್ಕೆಯಾಗಿದ್ದರು, ಇನ್ನು ಚುನಾವಣೆಗೂ ಮುನ್ನವೇ ಡೊನಾಲ್ಡ್ ಟ್ರಂಟ್ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಲಿದ್ದಾರೆ ಎಂದು ಘೋಷಿಸಿದ್ದರು.
ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆಡಿ ವ್ಯಾನ್ಸ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ. ಅವರ ಗೆಲುವು ಐತಿಹಾಸಿಕ ಕ್ಷಣವಾಗಿದೆ, ಆಂಧ್ರಪ್ರದೇಶದಲ್ಲಿ ಬೇರುಗಳನ್ನು ಹೊಂದಿರುವ ಉಷಾ ವಾನ್ಸ್ ಅವರು ತೆಲುಗು ಪರಂಪರೆಯ ಮೊದಲ ಮಹಿಳೆಯಾಗಲಿದ್ದಾರೆ. ಯುಎಸ್ ನ ಎರಡನೇ ಮಹಿಳೆಯಾಗಿ ಸೇವೆ ಸಲ್ಲಿಸಿ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನೊಂದು ಕಡೆ ಉಷಾ ಅವರ ಪತಿ ಚುನಾವಣೆಯಲ್ಲಿ ಗೆಲುವು ಪಡೆಯುತ್ತಿದ್ದಂತೆ ಅವರ ಪೂರ್ವಜರು ನೆಲೆಸಿರುವ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು, ಸಿಹಿ ಹಂಚಿದ ಮಂದಿ ಸಂಭ್ರಮದಿಂದ ಕುಣಿದಾಡಿದ್ದಾರೆ. ವಿಶಾಖಪಟ್ಟಣಂನಲ್ಲಿ ನೆಲೆಸಿರುವ ಉಷಾ ಅವರ ದೊಡ್ಡಮ್ಮ ಡಾ ಚಿಲಿಕುರಿ ಶಾಂತಮ್ಮ ಅವರು ಈ ಕುರಿತಂತೆ ಸಂತಸ ಹಂಚಿಕೊಂಡಿದ್ದಾರೆ.
ನನ್ನ ಮೊಮ್ಮಗಳ ಪತಿ ಯುಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನನಗೆ ಸಂತೋಷವಾಗಿದೆ. ನಾನು ಅವರಿಗೆ ಯಶಸ್ಸನ್ನು ಬಯಸುತ್ತೇನೆ ಎಂದಿದ್ದಾರೆ. ಉಷಾ ಅಮೆರಿಕದಲ್ಲಿ ಬೆಳೆದಿದ್ದರಿಂದ ಆಕೆಯನ್ನು ಭೇಟಿಯಾಗಿಲ್ಲ ಎಂದು ಶಾಂತಮ್ಮ ಹೇಳಿದ್ದಾರೆ. "ನಾನು ಎಂದಾದರೂ ಉಷಾ ಅವರೊಂದಿಗೆ ಮಾತನಾಡಿದರೆ, ವಿಶಾಖಪಟ್ಟಣಕ್ಕೆ ಭೇಟಿ ನೀಡಲು ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವೆ ಉತ್ತಮ ಸಂಬಂಧವನ್ನು ಬೆಳೆಸಲು ನಾನು ಅವಳನ್ನು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ.
ಉಷಾ ಅವರ ಪೋಷಕರು 80ನೇ ದಶಕದಲ್ಲಿಯೇ ಅಮೆರಿಕಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು. ಉಷಾ ಚಿಲುಕುರಿ ಸಹ ಅಮೆರಿಕದಲ್ಲಿಯೇ ಹುಟ್ಟಿದ್ದು ಅಲ್ಲಿಯೇ ಬೆಳೆದಿದ್ದಾರೆ. ಪತಿ ಜೆಡಿ ವ್ಯಾನ್ಸ್ ಅವರನ್ನು ಕಾಲೇಜಿನಲ್ಲಿ ಉಷಾ ಭೇಟಿಯಾಗಿದ್ದರು, ಬಳಿಕ ಇಬ್ಬರು ಮದುವೆಯಾಗಿದ್ದು, ಸೆನೆಟ್ ಆಗಿದ್ದ ಜೆಡಿ ಅವರು ಈಗ ಉಪಾಧ್ಯಕ್ಷ ಹುದ್ದೆಗೇರುತ್ತಿದ್ದಾರೆ. ಹಾಗೆ ಪತ್ನಿ ಉಷಾ ಅಮೆರಿಕದ 2ನೇ ಮಹಿಳೆಯಾಗುತ್ತಿದ್ದಾರೆ.



Click it and Unblock the Notifications
