Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಲಿಂಪಿಕ್‌ನಲ್ಲಿ ಪದಕವಿಲ್ಲದೆ ಬರಿಗೈಲಿ ಬಂದ ಉ.ಕೊರಿಯಾ ಕ್ರೀಡಾಪಟುಗಳಿಗೆ ಏನು ಶಿಕ್ಷೆ ಗೊತ್ತಾ?
ಈ ಬಾರಿ ಪ್ಯಾರಿಸ್‌ನಲ್ಲಿ ನಡೆದಿರುವ ಒಲಿಂಪಿಕ್ ಹಲವು ವಿಚಾರಗಳಿಂದ ಸುದ್ದಿಯಾಗುತ್ತಲೇ ಇದೆ. ಈಗಾಗಲೇ ಕ್ರೀಡಾಕೂಟದ ಸಮಾರೋಪ ಸಮಾರಂಭ ಸಹ ಮುಕ್ತಾಯಗೊಂಡಿದೆ, ಭಾರತ 6 ಪದಕ ಗೆದ್ದ ಸಾಧನೆ ಮಾಡಿದ್ದರೆ ವಿನೇಶ್ ಫೋಗಟ್ ವಿವಾಗ ಇನ್ನೂ ಜೀವಂತವಾಗಿಯೇ ಇದೆ. ಇನ್ನು ಈ ಬಾರಿ ಅಮೆರಿಕ 40 ಚಿನ್ನದ ಪದಕದ ಜೊತೆಗೆ ಬರೋಬ್ಬರಿ 126 ಪದಕ ಪಡೆದು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.
ಇನ್ನೊಂದೆಡೆ ಹಲವು ಪುಟ್ಟ ದೇಶಗಳು ಇದೇ ಮೊದಲ ಬಾರಿಗೆ ಒಲಿಂಪಿಕ್ ಪದಕವನ್ನೂ ಗೆದ್ದ ಉದಾಹರಣೆ ಇದೆ. ಚೀನಾ 40 ಚಿನ್ನ, 27 ಬೆಳ್ಳಿ ಮತ್ತು 24 ಕಂಚಿನ ಪದಕ ಸೇರಿದಂತೆ 91 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನದ ಜಾವ್‌ಲಿನ್ ಎಸೆತಗಾರ ಚಿನ್ನದ ಪದಕ ಗೆದ್ದು ದಶಕಗಳ ಬಳಿಕ ಪಾಕಿಸ್ತಾನಕ್ಕೆ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ.

ಇನ್ನು ಈ ಬಾರಿ ಉತ್ತರ ಕೊರಿಯಾ ದೇಶ ಸಹ ಒಲಿಂಪಿಕ್‌ನಲ್ಲಿ ಭಾಗಿಯಾಗಿತ್ತು. ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಗೆದ್ದು 68ನೇ ಸ್ಥಾನ ಪಡೆದುಕೊಂಡಿತ್ತು. ಉತ್ತರ ಕೊರಿಯಾದ 16 ಕ್ರೀಡಾಪಟುಗಳು ಒಲಿಂಪಿಕ್‌ನಲ್ಲಿ ಭಾಗಿಯಾಗಿದ್ದರು. ಇನ್ನು ಉತ್ತರ ಕೊರಿಯಾ ಇಡೀ ಜಗತ್ತಿನ ಎಲ್ಲಾ ದೇಶಗಳಿಗಿಂತ ಸ್ವಲ್ಪ ವಿಭಿನ್ನವಾಗಿ ಕಾಣುತ್ತದೆ.
ಏಕೆಂದರೆ ಉತ್ತರ ಕೊರಿಯಾದಲ್ಲಿ ಕಿಮ್ ಆಡಳಿತ ಅಂದರೆ ಅಲ್ಲಿ ಸರ್ವಾಧಿಕಾರಿ ಆಡಳಿತ ಇರೋದ್ರಿಂದ ಆ ದೇಶ ವಿಚಿತ್ರವಾಗಿ ಕಾಣುತ್ತದೆ. ಪ್ರತಿಯೊಂದಕ್ಕೂ ನಿಯಮಗಳು ಎಲ್ಲ ಕಡೆ ಕಾನೂನುಗಳು ಇರುವುದು ಈ ದೇಶದ ವಿಚಿತ್ರ. ಆದ್ರೆ ಈ ಬಾರಿ ಒಲಿಂಪಿಕ್‌ನಲ್ಲಿ ಭಾಗಿಯಾಗಿ ಪದಕ ಗೆಲ್ಲದೆ ಬರಿಗೈಯಲ್ಲಿ ಬಂದವರಿಗೆ ಆ ದೇಶದಲ್ಲಿ ಏನು ಶಿಕ್ಷೆ ಇದೆ ಎಂಬುದು ಈಗ ಚರ್ಚಾ ವಿಷಯವಾಗಿದೆ.
ಪದಕಗಳನ್ನು ಗೆಲ್ಲದಿದ್ದಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಿರುವ ಕ್ರೀಡಾಪಟುಗಳ ಬಗ್ಗೆ ಯಾವುದೇ ಅಧಿಕೃತ ಸುದ್ದಿಗಳಿಲ್ಲ, ಆದಾಗ್ಯೂ, 'ಕೊರಿಯನ್ ಟೈಮ್ಸ್' ಮತ್ತು 'ದಿ ಸನ್' ನಂತಹ ಪ್ರಕಟಣೆಗಳಲ್ಲಿನ ಒಂದೆರಡು ವರದಿಗಳು ಕ್ರೀಡಾಪಟುಗಳು ಯಾರ ರೀತಿಯ ಶಿಕ್ಷೆ ವಿಧಿಸುತ್ತದೆ ಎಂಬುದನ್ನು ವಿವರಿಸಲಾಗಿದೆ.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯಾ ಅದ್ಭುತ ಪ್ರದರ್ಶನ ನೀಡಿ 4 ಚಿನ್ನದ ಪದಕಗಳನ್ನು ಗೆದ್ದುಕೊಂಡಿತ್ತು. ಕ್ರೀಡಾ ಕೂಟಕ್ಕೆ ಆಗಮಿಸಿದ್ದ ಕ್ರೀಡಾಪಟುಗಳನ್ನ ಮೆರವಣಿಗೆ ಮೂಲಕ ಕರೆತರಲಾಗಿತ್ತು. ರಿಯೊ ಒಲಿಂಪಿಕ್ಸ್‌ನಲ್ಲಿ ಐದು ಚಿನ್ನ ಮತ್ತು ಒಟ್ಟು 17 ಪದಕಗಳನ್ನು ಗೆಲ್ಲುವ ಗುರಿಯನ್ನು ಅವರಿಗೆ ನೀಡಲಾಯಿತು ಆದರೆ ಈ ಗುರಿ ತಲುಪಲು ಸಾಧ್ಯವಾಗಿರಲಿಲ್ಲ.
2012ರ ಲಂಡನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅಥ್ಲೀಟ್‌ಗಳಿಗೆ ಭವ್ಯ ಸ್ವಾಗತ ಸಿಕ್ಕಿದ್ದು, ಕಿಮ್ ಜಾಂಗ್ ಉನ್ ಅಥ್ಲೀಟ್‌ಗಳಿಗೆ ನದಿ ದಡದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಜೊತೆಗೆ ಮನೆ, ಕಾರು ಇತ್ಯಾದಿ ಉಡುಗೊರೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಸೋತವರಿಗೆ ಗಣಿ ಕೆಲಸ
ಇತ್ತ ಒಲಿಂಪಿಕ್‌ನಲ್ಲಿ ಸ್ಪರ್ಧಿಸಿ ಪದಕವಿಲ್ಲದೆ ವಾಪಾಸಾದ ಕ್ರೀಡಾ ಪಟುಗಳಿಗೆ ಕಳಪೆ ಮಟ್ಟದ ಮನೆಯಲ್ಲಿ ವಾಸಿಸುವ ಹಾಗೂ ಕೆಲವು ದಿನಗಳ ವರೆಗೆ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಲು ಕಳುಹಿಸಲಾಗಿತ್ತು ಎಂದು ವರದಿಯಾಗಿದೆ. ಜೊತೆಗೆ ಅವರು ಕ್ರೀಡಾ ವಲಯದಲ್ಲಿ ಕಟ್ಟಡ ಸ್ವಚ್ಛ ಮಾಡುವುದು ಸೇರಿ ಕೆಲವು ಸರಳ ಕೆಲಸ ನೀಡಲಾಗುತ್ತದೆ ಎಂದು ಅಲ್ಲಿನ ಮಾಧ್ಯಮಗಳು ವರದಿಯಾಗಿದೆ. ಆದರೆ ಈ ಕುರಿತಂತೆ ಎಲ್ಲಿಯೂ ಅಧಿಕೃತ ಮಾಹಿತಿಗಳು ಇಲ್ಲ. ಕ್ರೀಡಾಪಟುಗಳು ಸಹ ಎಲ್ಲಿಯೂ ಈ ಕುರಿತು ಹೇಳಿಕೆಗಳ ನೀಡಿಲ್ಲ.



Click it and Unblock the Notifications