Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಎಐ ಮೂಲಕ ವಿಡಿಯೋ ಮಾಡಿ 38 ಕೋಟಿ ರೂ.ಗಳಿಸಿದ ಭಾರತದ ಯೂಟ್ಯೂಬ್ ಚಾನಲ್!
2025ರಲ್ಲಿ ತಂತ್ರಜ್ಞಾನದ ದೊಡ್ಡ ಯಶಸ್ಸಿನ ಗತಿಯನ್ನು ನೋಡಿದ್ದೇವೆ. ಅದೇ ರೀತಿ ಈ ವರ್ಷ ಎಐ ಬಳಕೆಯಲ್ಲಿನ ವೇಗ ಎಲ್ಲಾ ರಂಗದಲ್ಲೂ ಕ್ರಾಂತಿ ಉಂಟು ಮಾಡಿತ್ತು. ಅದ್ರಲ್ಲೂ ಹಲವು ಬದಲಾವಣೆಗಳ ನಡುವೆ ಯೂಟ್ಯೂಬ್ ಕೂಡ ಎಐ ಸಂಬಂಧಿಸಿದಂತೆ ಒಂದಿಷ್ಟು ಬದಲಾವಣೆಗಳ ತಂದಿತ್ತು. ಎಐ ಮೂಲಕ ರಚಿಸಲಾದ ವಿಡಿಯೋಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಜೊತೆಗೆ ಹಲವು ನಿಯಮಗಳ ಜಾರಿ ಮಾಡಿತ್ತು.
ಇನ್ನು ಈ ವರ್ಷ ಯೂಟ್ಯೂಬ್‌ನಿಂದ ಹತ್ತಾರು ಚಾನಲ್‌ಗಳು ಕೋಟಿ ಕೋಟಿ ಆದಾಯ ಗಳಿಸಿವೆ. ಅದ್ರಲ್ಲೂ ಎಐ ಮೂಲಕ ರಚಿಸಲಾದ ವಿಡಿಯೋ ಫಾರ್ಮ್ಯಾಟ್‌ಗಳು ಕೂಡ ಗಳಿಕೆಯಲ್ಲಿ ಮುಂದಿವೆ. ಭಾರತದಲ್ಲಿ ಅತೀ ಹೆಚ್ಚು ಆದಾಯ ಗಳಿಸಿದ ಚಾನಲ್ ಯಾವುದು ಅನ್ನೋದನ್ನು ಕೇಳಿದ್ರೆ ನಿಮಗೂ ಕೂಡ ಅಚ್ಚರಿಯಾಗೋದು ಖಚಿತ.

ಭಾರತದಲ್ಲಿ ಎಐ ವಿಡಿಯೋಗಳ ಮೂಲಕ ಫೇಮಸ್ ಆಗಿರುವ 'ಬಂದರ್ ಅಪ್ನಾ ದೋಸ್ತ್' ಎಂಬ ಹಿಂದಿ ಯೂಟ್ಯೂಬ್ ಚಾನಲ್ ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡಿರುವ ಯೂಟ್ಯೂಬ್ ಚಾನಲ್ ಆಗಿದೆ. ಈ ಚಾನಲ್ ವಾರ್ಷಿಕವಾಗಿ 4.5 ಮಿಲಿಯನ್ ಡಾಲರ್ ಹಣ ಗಳಿಸಿದೆ ಎಂದು ವರದಿಯಾಗಿದೆ. ಇದು ಭಾರತದ ಹತ್ತು ಹಲವು ಚಾನಲ್‌ಗಳಿಗೆ ಸರಿ ಸಮನಾದ ಆದಾಯವಾಗಿದೆ.
ಯೂಟ್ಯೂಬ್‌ನಲ್ಲಿ "AI ಸ್ಲಾಪ್" ಮತ್ತು ಬ್ರೈನ್‌ರೋಟ್ ವಿಷಯದ ಏರಿಕೆಯನ್ನು ಪರಿಶೀಲಿಸುವ ಇತ್ತೀಚಿನ ವಿಶ್ಲೇಷಣೆಯು, ಈ ವರ್ಷ ಎಐ ಮೂಲಕ ಅತೀ ಹೆಚ್ಚು ಆದಾಯ ಗಳಿಸಿದ ಚಾನಲ್ ಅನ್ನು ಹೆಸರಿಸಲಿದೆ. ಈ ಚಾನಲ್‌ಗೆ 2 ಮಿಲಿಯನ್‌ಗೂ ಅಧಿಕ ಚಂದಾದಾರರಿದ್ದಾರೆ. ಹಾಗೆ ವಾರ್ಷಿಕವಾಗಿ 4.5 ಮಿಲಿಯನ್ ಡಾಲರ್ ಗಳಿಸುತ್ತಿದೆ ಎಂದು ಹೇಳಿದೆ.
ಚಾನಲ್‌ನಲ್ಲಿ ಇಲ್ಲ ಮಾನವರು!
ಈ ಯೂಟ್ಯೂಬ್ ಚಾನಲ್‌ನಲ್ಲಿ ಯಾರೊಬ್ಬ ವ್ಯಕ್ತಿಯೂ ಕಾಣಿಸೋದಿಲ್ಲ. ಒಂದು ಕೋತಿ ಹಾಗೆ ಉಳಿದಂತೆ ಹಲವು ಪ್ರಾಣಿಗಳನ್ನು ಎಐ ಮೂಲಕ ರಚಿಸಲಾಗುತ್ತದೆ. ಹಿನ್ನಲೆಯಲ್ಲಿ ಮಾತ್ರ ಮಾನವರ ಧ್ವನಿ ಕೇಳಿಬರುತ್ತದೆ. ಹಾಗೆ ನೋಡಿದರೆ ಈ ಚಾನಲ್ ಓರ್ವ ವ್ಯಕ್ತಿ ನಡೆಸುತ್ತಿರುವಂತೆ ತೋರುತ್ತದೆ. ಹಾಗೆ ಇದಕ್ಕೆ ಹೆಚ್ಚಿನ ಶ್ರಮ ಹಾಕಿದಂತೆಯೂ ಕಾಣಿಸುವುದಿಲ್ಲ. ಹಾಗೆ ಇದು ಪ್ರಸ್ತುತತೆಯಿಂದ ಬಹಳಷ್ಟು ದೂರವಿರುವ ದೃಶ್ಯಗಳ ನಿರ್ಮಿಸುವುದು ನೋಡಬಹುದು.
ಈ ಚಾನಲ್ ಮಕ್ಕಳು ವೀಕ್ಷಿಸುವಂತಿದೆ. ಹಾಗೆ ಇದರಿಂದ ಯಾವುದೇ ಮಾಹಿತಿಯಾಗಲಿ, ಮನೋರಂಜನೆಯಾಗಲಿ, ಸಂತೃಪ್ತಿ ಕೂಡ ಸಿಗುವಂತಿಲ್ಲ. ಅದರ ಒಂದೊಂದು ವಿಡಿಯೋಗಳು ಬೇಸರ ತರಿಸುವಂತಿವೆ. ಹಾಗೆ ಅಸಹ್ಯ ಹುಟ್ಟಿಸುವಂತಿವೆ. ಇಷ್ಟಾದರೂ ಸಹ ಚಾನಲ್‌ನ ಹಲವು ವಿಡಿಯೋಗಳು ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿವೆ.
ಆರಂಭಿಕ ದಿನದಲ್ಲಿ ಕೋತಿಯೊಂದು ಕೈಯಲ್ಲಿ ಮೊಬೈಲ್ ಹಿಡಿದು ಊರಿನಲ್ಲಿ, ಬಸ್‌ನಲ್ಲಿ, ರೈಲಿನಲ್ಲಿ, ವಿಮಾನದಲ್ಲಿ ಓಡಾಟ ನಡೆಸುವ ವಿಡಿಯೋವನ್ನು ಎಐ ಮೂಲಕ ರಚಿಸಿ ಪೋಸ್ಟ್ ಮಾಡಲಾಗುತ್ತಿತ್ತು. ಅದಕ್ಕೆ ಹಿನ್ನಲೆ ಧ್ವನಿ ಸಹ ನೀಡಲಾಗುತ್ತಿತ್ತು. ಇದು ಬಹಳ ಫೇಮಸ್ ಆದ ಬಳಿಕ ಚಂದಾದಾರರ ಸಂಖ್ಯೆ ಕೂಡ ಏರಿಕೆಯಾಗುತ್ತಾ ಬಂದಿತ್ತು.
ಈಗ ಚಾನೆಲ್ 2.77 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ ಹಾಗೆ 619 ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇದರಿಂದ ವಾರ್ಷಿಕವಾಗಿ 38 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗಿದೆ. ಸದ್ಯ ಈ ಎಐ ಚಾನಲ್‌ಗಳ ಪಟ್ಟಿಯಲ್ಲಿ ಇದು ಅಗ್ರಸ್ಥಾನ ಪಡೆದುಕೊಂಡಿದೆ.



Click it and Unblock the Notifications
