Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಭಾರತದ ಮೊಟ್ಟ ಮೊದಲ ಎಐ ತಾಯಿ ಎಂಟ್ರಿ.! ಮಕ್ಕಳಿಗಿನ್ನು ನಿಮ್ಮ ಅಗತ್ಯವಿಲ್ಲ..!!
ಕೃತಕ ಬುದ್ದಿಮತ್ತೆ ಈಗ ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿರುವುದು ನಿಮಗೆಲ್ಲಾ ತಿಳಿದೇ ಇದೆ. ಇದರಿಂದ ನಮ್ಮ ಕೆಲಸಗಳು ಸುಲಭವಾಗಿದ್ದರೂ ಮತ್ತೊಂದು ಕಡೆ ಅಪಾಯದ ಮುನ್ಸೂಚನೆಗಳನ್ನು ಕೂಡ ನಾವು ತಳ್ಳಿ ಹಾಕುವಂತಿಲ್ಲ. ಹಾಗೆ ಫಿಸಿಕಲ್ ಯಂತ್ರಗಳು ಎಐ ತಂತ್ರಜ್ಞಾನ ಹೊಂದಿ ನಮ್ಮೆದುರು ಈಗ ನಿಂತುಬಿಟ್ಟಿವೆ. ಅದರಲ್ಲೂ ಸೇವಾ ವಲಯದಲ್ಲಿ ಈಗ ಎಐಗಳದ್ದೇ ಕಾರುಬಾರು ಎನ್ನುವಂತಾಗಿದೆ.
ನೀವು ಏರ್ಪೋರ್ಟ್ ಹೋಟೆಲ್, ಶಾಲಾ ಕಾಲೇಜು, ಬ್ಯಾಂಕಿಂಗ್ ಹೀಗೆ ಎಲ್ಲಾ ಕಡೆಗಳಲ್ಲೂ ನಾವು ಎಐ ತಂತ್ರಜ್ಞಾನದ ಮೂಲಕ ಪರಿಚಯಿಸಲಾದ ಒಂದು ಯುವತಿ ಬಂದಿರುವುದು ನೋಡಬಹುದು. ವಾರ್ತಾ ವಾಚಕಿಯಾಗಿಯೂ ಈ ಹಿಂದೆ ಟಿವಿ ಪರದೆ ಮೇಲೆ ಎಲ್ಲರ ಗಮನ ಸೆಳೆದಿರುವುದು ನೀವು ನೋಡಿದ್ದೀರಿ. ಹಾಗೆ ಎಐ ಸುಂದರಿಗಳೇ ಸೇರಿ ಸೌಂದರ್ಯ ಸ್ಪರ್ಧೆ ಏರ್ಪಡಿಸಿದ್ದು ಕೂಡ ಇದೆ.

ಈಗ ಭಾರತದ ಮೊಟ್ಟ ಮೊದಲ ಎಐ ತಾಯಿ ಮನೆ ಎಂಟ್ರಿ ಕೊಟ್ಟಿದೆ. ಹೌದು ಕಾವ್ಯಾ ಮೆಹ್ರಾ ಎಂದು ಕರೆಯ್ಪಡುವ ಸುಂದರ ಯುವತಿ ಈಗ ಭಾರತದ ಮೊಟ್ಟ ಮೊದಲ ಎಐ ತಂತ್ರಜ್ಞಾನ ಆಧಾರಿತ ತಾಯಿಯಾಗಿದ್ದಾಳೆ. ಇದೇನು ಬರೀ ಯಂತ್ರವಲ್ಲ ತಾನಾಗಿಯೇ ಯೋಚಿಸಿ ನಿರ್ಧಾರಗಳ ತೆಗೆದುಕೊಳ್ಳುವ ಒಂದು ಸುಸಜ್ಜಿತ ಯಂತ್ರ.
ಕಾವ್ಯಾ ಮೆಹ್ರಾ ಸಾಮಾನ್ಯರಲ್ಲ, ಮಿಲ್-ಆಫ್-ಮಿಲ್ ರೀತಿಯ ಪ್ರಭಾವಿ. AI-ವಿನ್ಯಾಸಗೊಳಿಸಿದ ಮಾಡೆಲ್ ಆಗಿದ್ದು, ಅವರು ತಾಯ್ತನದ ಎಲ್ಲಾ ಅಂಶಗಳ ಕಲಿತ್ತಿದ್ದಾಳೆ. ತಾಯಿ ಯಾವೆಲ್ಲಾ ಗುಣಗಳ ಹೊಂದಿರಬೇಕು. ಯಾವೆಲ್ಲಾ ಜವಾಬ್ದಾರಿ ಹೊರಬೇಕು ಎಂಬುದನ್ನು ಮಾನವರಿಗಿಂತ ಹೆಚ್ಚಾಗಿ ತಿಳಿದಿದ್ದಾಳೆ. ಆಕೆಯ ಚರಿತ್ರೆಯನ್ನು ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
'ಭಾರತದ ಮೊದಲ AI ತಾಯಿ, ನಿಜವಾದ ಅಮ್ಮಂದಿರಿಂದ ನಡೆಸಲ್ಪಡುತ್ತಿದೆ,' ಭಾರತದಲ್ಲಿನ ವಿವಿಧ ಹಂತಗಳ ತಾಯಂದಿರು ಅನುಭವಿಸುವ ಎಲ್ಲಾ ನೈಜ-ಜೀವನದ ಅನುಭವಗಳು ಮತ್ತು ಭಾವನೆಗಳೊಂದಿಗೆ ಡಿಜಿಟಲ್ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಕಾವ್ಯಾ ಅವರ ವಿಷಯವು ಅಡುಗೆ, ಕೌಟುಂಬಿಕ ಜೀವನ ಮತ್ತು ವೈಯಕ್ತಿಕ ಯೋಗಕ್ಷೇಮವನ್ನು ಒಳಗೊಂಡಂತೆ ತಾಯ್ತನದ ಹಲವು ಅಂಶಗಳನ್ನು ಕತ್ತರಿಸುತ್ತದೆ. ನಿಮ್ಮ ಮಕ್ಕಳಿಗೆ ನೀವು ನೀಡುವ ತಾಯ್ತನದ ಎಲ್ಲಾ ವಿಚಾರಗಳಲ್ಲೂ ಒಂದು ಹೆಜ್ಜೆ ಮುಂದಿರಲಿದೆಯಂತೆ.
ಮಕ್ಕಳಲ್ಲಿ ಪಾಲನೆ ಪೋಷಣೆಯೊಂದಿಗೆ ಮಕ್ಕಳ ಬುದ್ಧಿ ಮಟ್ಟ ಹೆಚ್ಚಳಕ್ಕೂ ಈ ಎಐ ಕೊಡುಗೆ ನೀಡಲಿದೆಯಂತೆ, ಮಗು ಯಾವ ವಯಸ್ಸಿನಲ್ಲಿದೆ ಆ ಮಗುವಿಗೆ ಯಾವ ರೀತಿಯ ಕಲಿಕೆ ಅಗತ್ಯವಿದೆ, ಮಗುವಿನ ದೈಹಿಕ ಮತ್ತು ಮಾನಸಿಕ ವಯಸ್ಸು ಎಷ್ಟು? ಅದಕ್ಕೆ ಅನುಗುಣವಾಗಿ ಯಾವ ರೀತಿ ಮಾಹಿತಿಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಬೇಕು ಹೀಗೆ ಹತ್ತಾರು ರೀತಿಯ ಪ್ರೋಗ್ರಾಮಿಂಗ್ ಮೂಲಕ ಈ ಎಐ ಗಮನ ಸೆಳೆಯುತ್ತಿದೆ.
ಭಾರತೀಯ ಎಐ ಪವರ್ಡ್ ಇನ್ಫ್ಲೂಯೆನ್ಸರ್ನಿಂದ ಈ ಎಐ ತಾಯಿ ನಿರ್ಮಾಣಗೊಂಡಿದೆ. ಕಾವ್ಯಾ ಮೆಹ್ರಾ ತನ್ನ ಇನ್ಸ್ಟಾಗ್ರಾಮ್ನಲ್ಲಿ 300ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಇಲ್ಲಿ ಈ ಎಐ ಆಧುನಿಕ ತಾಯ್ತನದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತದೆ. ಈ ಖಾತೆಯಲ್ಲಿ ಮಕ್ಕಳು, ತಾಯಿ ಹಾಗೂ ಪೋಷಕರಿಗೆ ಅಗತ್ಯವಾಗಿ ಇರಬೇಕಾದ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ.



Click it and Unblock the Notifications