36 ವರ್ಷದ ಬಳಿಕ ನಿಷೇಧ ತೆರವು ಮಾಡಿದ ಭಾರತ..! ಈ ಪುಸ್ತಕದಲ್ಲಿ ಏನಿದೆ ಗೊತ್ತಾ?

ಕೆಲವೊಂದು ಪುಸ್ತಕಗಳು, ಸಿನಿಮಾಗಳು, ನಾಟಕಗಳು, ವಸ್ತುಗಳ ಬಳಕೆಯನ್ನು ಕೆಲವೊಂದು ದೇಶಗಳು ನಿಷೇಧಿಸುವುದನ್ನು ನಾವೆಲ್ಲ ನೋಡಿರುತ್ತೇವೆ. ಹಾಗೆ ಭಾರತವೂ ಕೂಡ ಇಂತಹ ಹಲವು ರೀತಿಯ ನಿರ್ಧಾರಗಳ ತೆಗದುಕೊಳ್ಳುತ್ತಲೇ ಇರುತ್ತದೆ. ಕೆಲವೊಂದು ಪುಸ್ತಕಗಳು, ಸಿನಿಮಾಗಳಿಗೆ ನಿಷೇಧ ಹೇರುವುದು ನಾವು ಗಮನಿಸಿರಬಹುದು. ದೇಶದ ಭದ್ರತೆಗೆ ಆಂತರಿಕ ವಿಚಾರಗಳ ಕುರಿತ ಪುಸ್ತಕ, ಸಿನಿಮಾಗಳ ಈ ಹಿಂದೆಯೂ ನಿಷೇಧಿಸಿದ್ದ ಉದಾಹರಣೆಗಳಿವೆ.

ಈಗ ಈ ಹಿಂದೆ ಬ್ಯಾನ್ ಮಾಡಲಾಗಿದ್ದ ಪುಸ್ತಕವೊಂದರ ನಿಷೇಧವನ್ನ ತೆರೆವು ಮಾಡಿದೆ. ಹಾಗಾದ್ರೆ ಯಾವ ಪುಸ್ತಕ, ಅದನ್ನು ಬರೆದವರು ಯಾರು? ನಿಷೇಧ ಮಾಡಿದ್ದು ಏಕೆ? ಆ ಪುಸ್ತಕದಲ್ಲಿ ಅಂತಹದ್ದೇನಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

India Lifts Ban After 36 Years For The Satanic Verses Book

ಸಲ್ಮಾನ್ ರಶ್ಮಿ ಅವರು ಬರೆದಿರುವ 'ದಿ ಸೈಟಾನಿಕ್ ವರ್ಸಸ್' ಎಂಬ ಕೃತಿಯನ್ನು ಹಿಂದೆ ಭಾರತದಲ್ಲಿ ನಿಷೇಧ ಮಾಡಲಾಗಿತ್ತು. ಆದ್ರೆ ದೆಹಲಿ ಹೈಕೋರ್ಟ್‌ ಈ ನಿಷೇಧ ತೆರವು ಮಾಡಿದೆ. ಈ ಮೂಲಕ 36 ವರ್ಷದ ಬ್ಯಾನ್ ತೆರವುಗೊಂಡಿದೆ. 1988 ರಲ್ಲಿ ಪ್ರಕಟವಾದ 'ದಿ ಸೈಟಾನಿಕ್ ವರ್ಸಸ್' ಪ್ರಪಂಚದಾದ್ಯಂತದ ವಿವಿಧ ಮುಸ್ಲಿಂ ಸಮುದಾಯಗಳಿಂದ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಪುಸ್ತಕದಲ್ಲಿದ್ದ ಕೆಲವೊಂದು ವಿಚಾರಗಳು ಮುಸ್ಲಿಂ ಸಮುದಾಯದ ಹಾಗೂ ಧರ್ಮದ ವಿರುದ್ಧ ಬರೆಯಲಾಗಿದೆ. ಇದು ಧರ್ಮನಿಂದನೆ ಎಂದು ಸಮುದಾಯ ಕಟುವಾಗಿ ಈ ಪುಸ್ತಕವ ವಿರುದ್ಧ ಸಮರ ಸಾರಿತ್ತು. ವ್ಯಾಪಾಕ ಪ್ರತಿಭಟನೆಗಳು, ಹೋರಾಟ ನಡೆದಿತ್ತು. ಹೀಗಾಗಿ ಭಾರತದಲ್ಲಿ ಈ ಪುಸ್ತಕದಿಂದ ಉಂಟಾಗುತ್ತಿದ್ದ ಅಶಾಂತತೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಹಲವು ಕ್ರಮಕ್ಕೆ ಮುಂದಾಯಿತು.

ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಅದೇ ವರ್ಷದಲ್ಲಿ ಪುಸ್ತಕದ ಆಮದನ್ನು ನಿಷೇಧಿಸಿತು. ಹಾಗೆ ಈ ಪುಸ್ತಕ ನಿಷೇಧಿಸಿದ ಮೊದಲ ದೇಶ ಭಾರತವಾಗಿತ್ತು. ಇದೇ ಮಾರ್ಗವನ್ನು ಹಲವು ದೇಶಗಳು ಅನುಸರಿಸಿದವು. ಆದರೆ 2019 ರಲ್ಲಿ, ಗ್ರಂಥಪಾಲಕ ಸಂದೀಪನ್ ಖಾನ್ ಅವರು ಆಮದು ನಿಷೇಧವನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿದರು, ಹಾಗೆ ಈ ಪುಸ್ತಕ ನಿಷೇಧಕ್ಕೆ ಸರಿಯಾದ ದಾಖಲೆ ನೀಡುವಂತೆ ಸರ್ಕಾರಕ್ಕೆ ತಿಳಿಸಿದ್ದರು.

ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) 1988 ರ ಮೂಲ ಅಧಿಸೂಚನೆಯನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿತು. ಪರಿಣಾಮವಾಗಿ ನವೆಂಬರ್ 5, 2024 ರಂದು ನಿಷೇಧವನ್ನು ಕಾನೂನುಬದ್ಧವಾಗಿ ಎತ್ತಿಹಿಡಿಯಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಮಾನಿಸಿತು ಪರಿಣಾಮಕಾರಿಯಾಗಿ ಆಮದು ನಿರ್ಬಂಧ ತೆಗೆದುಹಾಕಿತು.

'ದಿ ಸೈಟಾನಿಕ್ ವರ್ಸಸ್' ಒಂದು 20 ನೇ ಶತಮಾನದ ಅಂತ್ಯದ ಅತ್ಯಂತ ವಿವಾದಾತ್ಮಕ ಪುಸ್ತಕಗಳಲ್ಲಿ ಒಂದಾಗಿದೆ. ಇಸ್ಲಾಂ ಧರ್ಮದ ಅದರ ಕಾಲ್ಪನಿಕ ಮತ್ತು ವಿಡಂಬನಾತ್ಮಕ ಬಳಕೆಯು ಕೆಲವು ಮುಸ್ಲಿಮರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಪ್ರವಾದಿ ಮುಹಮ್ಮದ್ ಹಾಗೂ ಇಸ್ಲಾಮಿಕ ಇತಿಹಾಸದ ಚಿತ್ರಣವೂ ಈ ಪುಸ್ತಕದಲ್ಲಿ ವಿವಾದಾತ್ಮಕವಾಗಿ ಚಿತ್ರಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.

ಈಗ ಪುಸ್ತಕದ ಆಮದಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮತ್ತೊಮ್ಮೆ ಭಾರತಕ್ಕೆ ಈ ಪುಸ್ತಕ ಆಗಮಿಸಲಿದೆ. ಹಾಗೆ ಈವರೆಗೆ ಯಾರು ಓದಿರದ ಪುಸ್ತಕವನ್ನು ಮತ್ತೊಂದಿಷ್ಟು ಮಂದಿ ಓದಲಿದ್ದಾರೆ. ಇದರಿಂದ ಯಾವ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಕುತೂಹಲ ಕೂಡ ಮೂಡಿದೆ. ಸುಮಾರು 36 ವರ್ಷಗಳ ಬಳಿಕವೂ ಅದೇ ರೀತಿಯ ಪರಿಣಾಮವನ್ನು ಈ ಪುಸ್ತಕ ಉಂಟು ಮಾಡಲಿದ್ಯಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಕೆಲವರು ದೆಹಲಿ ಹೈಕೋರ್ಟ್‌ನ ಈ ತೀರ್ಪನ್ನು ಸ್ವಾಗತಿಸಿದ್ದಾರೆ.

English summary

India Lifts Ban After 36 Years For 'The Satanic Verses' Book

Salman Rashmi's book 'The Satanic Verses' was previously banned in India. However, the Delhi High Court has lifted the ban, lifting a 36-year-old ban.
Story first published: Wednesday, November 20, 2024, 13:35 [IST]
X
Desktop Bottom Promotion