Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಪುರುಷರು ಮಹಿಳೆಯರ ಡ್ರೆಸ್ ಸ್ಟಿಚ್ ಮಾಡುವಂತಿಲ್ಲ, ಹೇರ್ ಕಟ್ ಮಾಡುವಂತಿಲ್ಲ: ಮಹಿಳಾ ಆಯೋಗದಿಂದ ಆದೇಶ
ನಿಮ್ಮ ಏರಿಯಾದಲ್ಲಿ ಹೆಣ್ಮಕ್ಕಳ ಡ್ರೆಸ್ ಸ್ಟಿಚ್ ಮಾಡುವ ಬೆಸ್ಟ್ ಟೈಲರ್ ಯಾರು? ಎಂದು ಹುಡುಕಿದರೆ ಹೆಚ್ಚಾಗಿ ಸಿಗುವುದು ಪುರುಷ ಟೈಲರ್‌ಗಳು, ಇನ್ನ ಸಲೂನ್‌ಗಳಲ್ಲಿ ಹೇರ್ ಕಟ್ ಕೂಡ ಪುರುಷರೇ ಮಾಡುತ್ತಾರೆ.
ದೊಡ್ಡ-ದೊಡ್ಡಬ್ಯೂಟಿ ಸಲೂನ್‌ಗಳಿಗೆ ಹೋದರೆ ಪುರುಷರೇ ಹೇರ್ ವಾಶ್ ಮಾಡಿ ಹೇರ್ ಕಟ್ ಮಾಡುತ್ತಾರೆ, ಇನ್ನು ಎಷ್ಟೋ ಮದುವೆಗಳಲ್ಲಿ ಮೇಕಪ್ ಆರ್ಟಿಸ್ಟ್ ಕೂಡ ಪುರುಷರೇ ಆಗಿರುತ್ತಾರೆ. ಕಾಲ ಬದಲಾಗಿದೆ, ಹೇರ್ ಕಟ್ ಚೆನ್ನಾಗಿ ಬರಬೇಕು, ಸ್ಟಿಚ್ ಮಾಡಿಸಿದ ಡ್ರೆಸ್ ನಮಗೆ ಇಷ್ಟವಾಗಬೇಕು, ಅದು ಪುರುಷರೋ ಅಥವಾ ಮಹಿಳೆಯರೋ ಅಂತ ಈಗೀನ ಕಾಲದಲ್ಲಿ ಯಾರೂ ನೋಡುತ್ತಿಲ್ಲ, ಆದರೆ ಯುಪಿಯಲ್ಲಿ ಬಂದ ಕಾನೂನು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಉತ್ತರ ಪ್ರದೇಶದ ಮಹಿಳಾ ಆಯೋಗ ಪುರುಷರು ಮಹಿಳೆಯರ ಡ್ರೆಸ್ ಸ್ಟಿಚ್ ಮಾಡುವಂತಿಲ್ಲ, ಪುರುಷರು ಮಹಿಳೆಯರಿಗೆ ಕೂದಲು ಕಟ್ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಪುರುಷರು ಮಹಿಳೆಯರ ದೇಹದ ಅಳತೆ ತೆಗೆಯುವಂತಿಲ್ಲ, ಸಿಸಿಟಿವಿ ಅಳವಡಿಸಲಾಗುವುದು ಎಂದು ಅಕ್ಟೋಬರ್ 28ರಂದು ನಡೆದ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ ಎಂದು ವರದಿ ಬಂದಿದೆ.
ಮಹಿಳೆಯರ ದೇಹದ ಅಳತೆಯನ್ನು ಮಹಿಳಾ ಟೈಲರ್‌ಗಳೇ ತೆಗೆಯಬೇಕು ಎಂದು ಆ ಮೀಟಿಂಗ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಹಿಳಾ ಆಯೋಗದ ಮುಖ್ಯಸ್ಥೆ ಬಬಿತಾ ಚೌಹಾಣ್ ಪ್ರಸ್ತಾಪಿಸಿದಾಗ ಮೀಟಿಂಗ್‌ನಲ್ಲಿದ್ದವರು ಒಪ್ಪಿಗೆ ಕೂಡ ಸೂಚಿಸಿದ್ದಾರೆ.
ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಈ ಬಗೆಯ ನಿಯಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ
ಸಾರ್ವಜನಿಕ ಸ್ಥಳಗಳಲ್ಲಿ, ಕಮರ್ಷಿಯಲ್ ಸ್ಥಳಗಳಲ್ಲಿ ಮಹಿಳೆಯರಗೆ ಸುರಕ್ಷತೆಯನ್ನು ನೀಡುವ ದೃಷ್ಟಿಯಿಂದ ಈ ಬಗೆಯ ನಿಯಮ ತರಲು ಮುಂದಾಗಿದೆ.
ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವಾಗ ಲೈವ್ ಲೊಕೇಷನ್ ಷೇರು ಮಾಡಬಹುದು
ಹರಿಯಾಣದಲ್ಲಿ, ಗುರಂಗಾವ್‌ನಲ್ಲಿ ಮಹಿಳೆಯರು ರಾತ್ರಿ ಒಂಟಿಯಾಗಿ ಪ್ರಯಾಣ ಮಾಡುವಾಗ ಪೊಲೀಸ್ ಇಲಾಖೆಗೆ ಅವರ ಲೈವ್ ಲೊಕೇಷನ್ ಶೇರ್ ಮಾಡಿದರೆ ಅದನ್ನು ಟ್ರ್ಯಾಕ್ ಮಾಡಿ ಅವರಿಗೆ ಸುರಕ್ಷತೆಯನ್ನು ನೀಡುವ ಕಾರ್ಯ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಒಂಟಿಯಾಗಿ ಮಹಿಳೆಯರು ಪ್ರಯಾಣಿಸುವಾಗ ಲೈವ್ ಲೊಕೇಷನ್ ಶೇರ್ ಮಾಡಿದರೆ ಒಳ್ಳೆಯದು. ಆದರೆ ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆಯೇ ಸ್ಟಿಚ್ ಮಾಡಬಾರದು, ಸಲೂನ್‌ಗಳಲ್ಲಿ ಪುರುಷರು ಮಹಿಳೆಯರ ಹೇರ್ ಕಟ್ ಮಾಡಬಾರದು ಎಂದು ಹೇಳಲಾಗಿದೆ. ಇಂಥ ಕಾನೂನು ತಂದರೆ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ನಿಲ್ಲುತ್ತೆ ಎಂಬ ಗ್ಯಾರಂಟಿ ನೀಡಲು ನೀಡಲು ಸಾಧ್ಯವೇ? ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಜನರ ಪ್ರಾಣ ಉಳಿಸುವ ವೈದ್ಯೆಗೆ ಆದಂಥ ದುಃಸ್ಥಿತಿ ಯಾವ ಹೆಣ್ಣಿಗೂ ಬರಬಾರದು. ಆದರೆ ಆಕೆಯನ್ನು ಕೊ..ಪಾಪಿಗಳನ್ನು ಪತ್ತೆ ಹಚ್ಚಿ ಇನ್ಯಾರು ಇಂಥ ಕೆಟ್ಟ ಆಲೋಚನೆ ಮಾಡಲೇಬಾರದು ಆ ರೀತಿಯ ಶಿಕ್ಷೆ ಆಯ್ತೇ?
ಮಹಿಳೆಯ ಡ್ರೆಸ್ ಪುರುಷರು ಸ್ಟಿಚ್ ಮಾಡುವಂತಿಲ್ಲ ಎಂದಾದರೆ ಸ್ತ್ರೀ ರೋಗ ತಜ್ಞರಾದ ಪುರುಷ ವೈದ್ಯರು ಚಿಕಿತ್ಸೆ ನೀಡಬಹುದೇ? ಎಷ್ಟೋ ಹೆಸರುವಾಸಿಯಾದ ಸ್ತ್ರೀ ರೋಗ ತಜ್ಞರು ಪುರುಷರು, ಹೆಸರಾಂತ ಡಿಸೈನರ್‌ಗಳು ಪುರುಷರು, ಹೆಸರಾಂತ ಮೇಕಪ್ ಆರ್ಟಿಸ್ಟ್‌ಗಳು ಪುರುಷರು, ಅವರು ತಮ್ಮಲ್ಲಿನ ಕೌಶಲ್ಯದಿಂದ ತಮ್ಮ ವೃತ್ತಿಯಲ್ಲಿ ಗುರುತಿಸಿಕೊಂಡಿರುತ್ತಾರೆ, ಈ ಬಗೆಯ ಕಾನೂನು ಅನೇಕರ ಹೊಟ್ಟೆಪಾಡಿಗೆ ಹೊಡೆತ ನೀಡಲಿದೆ.
ಹೆಣ್ಣು ಮಕ್ಕಳಿಗೆ ಹೇಗೆ ಸಂಪೂರ್ಣ ಸುರಕ್ಷತೆ ನೀಡುವುದು, ಕೆಲಸದ ಸ್ಥಳದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಸುರಕ್ಷತೆ ನೀಡುವುದು ಹೇಗೆ ಎಂಬುವುದರ ಬಗ್ಗೆ ಆಲೋಚಿಸಬೇಕು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುವವರಿಗೆ ಇನ್ಯಾರು ಈ ಬಗ್ಗೆ ಯೋಚಿಸಲು ಭಯ ಪಡಬೇಕು ಅಂಥ ಶಿಕ್ಷೆ ಜಾರಿಯಾಗಬೇಕು, ಚಿಕ್ಕ ಹೆಣ್ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನ ಹೆಣ್ಮಕ್ಕಳು ನಮ್ಮ ದೇಶದಲ್ಲಿ ಸುರಕ್ಷತೆಯಿಂದ ಇರಬೇಕು, ಆ ನಿಟ್ಟಿನಲ್ಲಿ ಆಲೋಚಿಸಿ ಕಾನೂನುಗಳನ್ನು ತರಬೇಕು, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಮೆಂಟಿಸಿ....



Click it and Unblock the Notifications
