Latest Updates
-
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ! -
ನವರಾತ್ರಿ ಗರ್ಬಾ ಸಂಭ್ರಮ: ಬೆಂಗಳೂರಿನ ಕಪಲ್ಸ್ ಎಂಜಾಯ್ ಮಾಡಲು ಇಲ್ಲಿದೆ ಬೆಸ್ಟ್ ಸೇಫ್ಟಿ ಟಿಪ್ಸ್ -
ದೆಹಲಿ ವಾಯು ಮಾಲಿನ್ಯ: ಮನೆಯೊಳಗೆ ಶುದ್ಧ ಗಾಳಿ ಪಡೆಯಲು 20 ನಿಮಿಷದ ಈ ಸರಳ ಟ್ರಿಕ್ಸ್ ಫಾಲೋ ಮಾಡಿ -
ಹಣದುಬ್ಬರದ ಬಿಸಿ: ₹120ರ ಬಜೆಟ್ನಲ್ಲಿ ಪೌಷ್ಟಿಕ ಹೈ-ಪ್ರೋಟೀನ್ ಊಟ ತಯಾರಿಸುವುದು ಹೇಗೆ? -
ನವರಾತ್ರಿ 3ನೇ ದಿನ: ಕೆಂಪು ಬಣ್ಣದ ಲುಕ್ನಲ್ಲಿ ಆಫೀಸ್ನಿಂದ ನೇರ ಗರ್ಬಾಗೆ ಮಿಂಚುವ ಸ್ಮಾರ್ಟ್ ಟಿಪ್ಸ್! -
ಮುಂಬೈನಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ, ಇಲ್ಲದಿದ್ದರೆ ಅಪಾಯ! -
ಬಿಗ್ ಬಾಸ್ 20 ನೋಡುವಾಗ ಮನೆಯಲ್ಲಿ ಜಗಳವಾ? ಶಾಂತಿಯುತವಾಗಿ ವೀಕ್ಷಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್! -
ದೆಹಲಿಯಲ್ಲಿ ಭಾರಿ ಮಳೆ: ನಿಮ್ಮ ಮನೆಯಲ್ಲಿ ನೀರು ಸೋರುವುದನ್ನು ತಡೆಯಲು 30 ನಿಮಿಷದ ತಕ್ಷಣದ ಸುರಕ್ಷತಾ ಕ್ರಮಗಳು -
ವಾರಾಣಸಿಯಲ್ಲಿ ನವರಾತ್ರಿ ವೇಳೆ ಮಾಂಸ ಮಾರಾಟ ಬಂದ್: ಪ್ರೋಟೀನ್ ಪರ್ಯಾಯಗಳು ಮತ್ತು ಸುರಕ್ಷಿತ ಆಹಾರದ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಇಲ್ಲಿವೆ ಸೀಕ್ರೆಟ್ ಟಿಪ್ಸ್!
ಈ ವಿಡಿಯೋ ನೋಡಿದ್ರೆ ನೂಡಲ್ಸ್ ತಿನ್ನೋದನ್ನೇ ಬಿಡುತ್ತೀರಿ..!!
ಇತ್ತೀಚಿನ ದಿನಗಳಲ್ಲಿ ಇನ್ಸ್‌ಸ್ಟಂಟ್ ಫುಡ್‌ಗಳ ಹಾವಳಿ ಹೆಚ್ಚಾಗಿದೆ. ಅಂದ್ರ ಪ್ಯಾಕ್ ಮಾಡಲಾದ ಫುಡ್‌ಗಳು. ಅದನ್ನು ನೀವು ಮನೆಗೆ ತಂದು ಬಿಸಿ ನೀರಿಗೆ ಹಾಕಿದರೆ ತಿಂಡಿ ರೆಡಿಯಾಗುತ್ತದೆ. ಈ ರೀತಿಯ ಹತ್ತು ಹಲವು ಫುಡ್‌ಗಳು ಇಂದು ಸೂಪರ್ ಮಾರ್ಕೆಟ್‌ಗಳಲ್ಲಿ, ಅಂಗಡಿಗಳಲ್ಲಿ ಸಿಗುತ್ತವೆ.
ಸಮಯ ಇಲ್ಲದವರು ಅಥವಾ ಸಂಜೆಯ ಸ್ನ್ಯಾಕ್ಸ್ ಸವಿಯುವ ಅಭ್ಯಾಸ ಇರುವವರು ಇವುಗಳ ಪಾಲಿಗೆ ನಿತ್ಯದ ಗ್ರಾಹಕರು ಅವರು ದಿನವು ತಿನ್ನದಿದ್ದರೂ ವಾರದಲ್ಲಿ ಆಗಾಗ ಸೇವಿಸುತ್ತಲೇ ಇರುತ್ತಾರೆ. ಅದರಲ್ಲೂ ಈ ಚೈನೀಸ್ ನೂಡಲ್ಸ್‌ಗಳಂತೂ ಎಲ್ಲರಿಗೂ ಅಚ್ಚುಮೆಚ್ಚು.

ಹೌದು ನೀವು ಸಹ ಚೈನೀಸ್ ಮೂಲಕ ಈ ನೂಡಲ್ಸ್ ರುಚಿ ನೋಡಿರುತ್ತೀರಿ. ರಸ್ತೆ ಬದಿಯಲ್ಲಿ ಆಗಿರಬಹುದು, ಅಥವಾ ಮನೆಗೆ ತಂದು ಅದರ ರುಚಿ ಸವಿದಿರುತ್ತೀರಿ. ಅದರ ಮಸಾಲೆಯಿಂದಾಗಿ ನೂಡಲ್ಸ್ ಮತ್ತಷ್ಟು ರುಚಿ ಹಾಗೂ ಘಮ ಘಮ ಎನ್ನುವ ಸುವಾಸನೆ ಬರುತ್ತದೆ. ಆದರೆ ಈ ನೂಡಲ್ಸ್‌ಗಳು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಯಾವಾಗಲು ಚರ್ಚೆಯಾಗುತ್ತಲೇ ಇರುತ್ತದೆ.
ಈಗೊಂದು ವೈರಲ್ ಆಗಿರುವ ವಿಡಿಯೋ ನೀವು ನೋಡಿದರೆ ಇನ್ನೆಂದು ಈ ನೂಡಲ್ಸ್ ಸಹವಾಸಕ್ಕೆ ನೀವು ಹೋಗುವುದಿಲ್ಲ. ಪ್ಯಾಕ್ ಮಾಡಲಾದ ನೂಡಲ್ಸ್‌ನಲ್ಲಿ ಸೂಕ್ಷ್ಮಾಣುಗಳು ಕಂಡು ಬಂದಿವೆ.
@cooltechtipz ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬ ನೂಡಲ್ಸ್ ಅನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಇಟ್ಟು ನೋಡಿದಾಗ ಬಿಳಿ ಬಣ್ಣದ ಸೂಕ್ಷ್ಮಾಣುಗಳಿರುವುದು ನೋಡಬಹುದು. ಇವು ಬರಿಗಣ್ಣಿಗೆ ಕಾಣಿಸುವುದಿಲ್ಲ. ಆದರೆ ಸೂಕ್ಷ್ಮ ದರ್ಶಕದಲ್ಲಿ ನಿಖರವಾಗಿ ಕಾಣಿಸುತ್ತಿವೆ.
ಈ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇನ್ಸ್‌ಸ್ಟಂಟ್ ಆಹಾರ ಪ್ರಿಯರು ಶಾಕ್‌ಗೆ ಒಳಗಾಗಿದ್ದಾರೆ. ಯಾವಾಗಲು ನೂಡಲ್ಸ್ ಮಾಡಿಕೊಂಡು ಸವಿಯುತ್ತಿದ್ದವರು ಈ ವಿಡಿಯೋ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಜೊತೆಗೆ ಇನ್ನೆಂದು ಸೇವಿಸದಿರಲು ನಿರ್ಧಾರ ಮಾಡಿರುವುದಾಗಿಯೂ ಹೇಳುತ್ತಿದ್ದಾರೆ.
ಇದನ್ನು ಕಂಡ ನೆಟ್ಟಿಗರು ಇದು ನಿಜವಾದ ವಿಡಿಯೋ ಅಲ್ಲವೇ ಅಲ್ಲ ಎನ್ನುತ್ತಿದ್ದಾರೆ. ಆತ ನೂಡಲ್ಸ್ ಅನ್ನು ಬಹಳ ದಿನಗಳ ಇಟ್ಟು ಬಳಿಕ ಪರೀಕ್ಷಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಇನ್ನು ಕೆಲವರು ನೂಡಲ್ಸ್‌ನಲ್ಲಿ ಈ ರೀತಿ ಹುಳುಗಳು ಕಾಣಿಸಿದರೆ ಅದರ ಕಂಪನಿ ಯಾವುದು ಎಂಬುದನ್ನು ಬಹಿರಂಗಪಡಿಸುವಂತೆ ಕೇಳಿದ್ದಾರೆ.
ಮತ್ತೆ ಕೆಲವರು ಇನ್ನೆಂದು ಈ ಫಾಸ್ಟ್ ಫುಡ್ ತಿನ್ನದೆ ಇರಲು ಮುಂದಾಗುವುದು ಉತ್ತಮ, ಬರಿಗಣ್ಣಿಗೆ ಕಾಣುವಂತೆ ಎಷ್ಟು ಅಪಾಯವಿದೆಯೇ ಅದಕ್ಕಿಂತಲೂ ಹೆಚ್ಚಿನ ಅಪಾಯ ನಮಗೆ ಕಾಣಿಸುತ್ತಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಕೆಂಪು ಬಣ್ಣದ ಸ್ಟ್ರಾಬೆರಿ ಹಣ್ಣಿನ ವಿಡಿಯೋ ಸಹ ವೈರಲ್ ಆಗಿತ್ತು. ಈ ಹಣ್ಣಿನಲ್ಲಿಯೂ ಇದೇ ರೀತಿಯ ಬಿಳಿ ಬಣ್ಣದ ಸೂಕ್ಷ್ಮಾಣುಗಳು ಹರಿದಾಡುತ್ತಿದ್ದ ವಿಡಿಯೋ ಒಂದು ವೈರಲ್ ಆಗಿತ್ತು, ಅದರಲ್ಲೂ ವ್ಯಕ್ಯಿಯೊಬ್ಬ ಸೂಕ್ಷ್ಮ ದರ್ಶಕದ ಅಡಿಯಲ್ಲಿ ಹಣ್ಣನ್ನು ಇಟ್ಟು ನೋಡಿದಾಗ ಮೇಲೆ ಸಣ್ಣ ಸಣ್ಣ ಸೂಕ್ಷ್ಮ ಹುಳು ಕಂಡುಬಂದಿತ್ತು. ಬಳಿಕ ಹಣ್ಣನ್ನು ಕತ್ತರಿಸಿ ಇಟ್ಟು ನೋಡಿದಾಗ ಬಿಳಿ ಬಣ್ಣದ ಉದ್ದವಾದ ಹುಳುಗಳು ಅದರಲ್ಲಿರುವುದು ಕಂಡುಬಂದಿತ್ತು.
ಆದರೆ ಈಗ ಈ ನೂಡಲ್ಸ್ ಅನ್ನು ಸೂಕ್ಷ್ಮ ದರ್ಶಕದ ಅಡಿಯಲ್ಲಿ ನೋಡಿದಾಗ ಹುಳುಗಳಿರುವುದು ಕಂಡುಬಂದಿದೆ. ಆದರೆ ಈ ವಿಡಿಯೋದ ಅಸಲಿಯತ್ತು ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕು. ಆದರೆ ನೂಡಲ್ಸ್‌ಗಳು ಆರೋಗ್ಯಕ್ಕೆ ಅಪಾಯಕಾರಿಯಾಗಿವೆ ಎಂಬುದಂತು ಸತ್ಯ. ಇವು ಮೂಳೆಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬಂದಿದೆ.



Click it and Unblock the Notifications
