Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪ್ಯಾನ್ ಕಾರ್ಡ್ ಕಳೆದರೆ 50 ರೂ ನಲ್ಲಿ ನಕಲು ಪಡೆಯಿರಿ: ಎಫ್‌ಐಆರ್ ಕೂಡ ಮಾಡಬೇಕು!
ಇತ್ತೀಚಿಗೆ ಎಲ್ಲರಿಗೂ ಪ್ಯಾನ್ ಕಾರ್ಡ್ ಅಗತ್ಯವಾಗಿ ಬೇಕಾಗಿದೆ. ಬ್ಯಾಂಕಿಂಗ್ ವಿಚಾರಗಳು, ವ್ಯವಹಾರಗಳಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬಳಕೆಯಾಗುವುದು ನೋಡಬಹುದು. ನಿಮ್ಮ ಯಾವುದೇ ಹಣಕಾಸಿನ ವ್ಯವಹಾರ ಮಾಡುವಾಗಲೂ ಪ್ಯಾನ್ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಹಾಗೆ ಈ ಕಾರ್ಡ್‌ನಿಂದ ನಿಮಗೆ ಒಂದು ಬಾರಿ ಮಾತ್ರವೇ ಪರ್ಮನೆಂಟ್ ನಂಬರ್ ನೀಡಲಾಗುತ್ತದೆ.
ಇನ್ನು ನಿಮ್ಮ ಪ್ಯಾನ್ ಕಾರ್ಡ್ ಒಂದು ವೇಳೆ ಕಳೆದು ಹೋದರೆ ಏನು ಮಾಡಬೇಕು ಎಂಬುದು ನಿಮಗೆ ಗೊತ್ತಾ? ಪ್ಯಾನ್ ಕಾರ್ಡ್ ಕಳೆದರೆ ಅದೇ ಸಂಖ್ಯೆಯ ಇನ್ನೊಂದು ಕಾರ್ಡ್ ನೀಡುತ್ತಾರೆ. ಆದ್ರೆ ಇದರ ದುರುಪಯೋಗ ತಡೆಗಟ್ಟಲು ನೀವು ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ಎಫ್‌ಐಆರ್ ದಾಖಲಿಸಿದ ಬಳಿಕ ಪ್ರತಿಯನ್ನು ಇಟ್ಟುಕೊಳ್ಳಬೇಕಿದೆ.

ಪ್ಯಾನ್ ಕಾರ್ಡ್ ಕಳೆದರೆ 50 ರೂಪಾಯಿ ಪಾವತಿಸಿ ನಕಲು ಪ್ಯಾನ್ ಕಾರ್ಡ್ ಪಡೆಯಬಹುದು. ಎನ್‌ಎಸ್‌ಡಿಎಲ್ ವೆಬ್‌ಸೈಟ್‌ಗೆ ಭೇಟಿ ನೀಡಿ ಬಳಿಕ 50 ರೂ. ಪಾವತಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನಿಮ್ಮ ಪ್ಯಾನ್, ಆಧಾರ್ ಮತ್ತು ಇತರ ವಿವರಗಳನ್ನು ನಮೂದಿಸಿ, ನಿಮ್ಮ ವಿಳಾಸವನ್ನು ದೃಢೀಕರಿಸಿ ಮತ್ತು ಶುಲ್ಕವನ್ನು ಪಾವತಿಸಿ.
ಭಾರತದಲ್ಲಿ ಬ್ಯಾಂಕಿಂಗ್, ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಮತ್ತು ಹಲವಾರು ಹಣಕಾಸು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪ್ಯಾನ್ ಕಾರ್ಡ್ ಅತ್ಯಗತ್ಯ. ಹಾಗೆ ಸರ್ಕಾರಿ ಯೋಜನೆಗಳು, ತ್ವರಿತ ಯೋಜನೆಗಳು, ಬ್ಯಾಂಕಿಂಗ್ ಸೇವೆ ಪಡೆಯಬೇಖಾದರೆ ಪ್ಯಾನ್ ಇರಲೇಬೇಕಿದೆ. ಹೀಗಾಗಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಬಹುತೇಕರ ಬಳಿ ಈಗ ಪ್ಯಾನ್ ಕಾರ್ಡ್ ಇದ್ದೇ ಇದೆ.
ಪೊಲೀಸ್ ವರದಿಯನ್ನು ಸಲ್ಲಿಸುವುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತಹ ಸಮಯೋಚಿತ ಕ್ರಮಗಳು ಪ್ರಕ್ರಿಯೆಯನ್ನು ಸುಗಮ ಮತ್ತು ಸುರಕ್ಷಿತವಾಗಿಸಬಹುದು. ಕಳೆದು ಹೋದ ಫ್ಯಾನ್ ಕಾರ್ಡ್ ಮರಳಿ ಸಿಕ್ಕರೆ ನಿಮ್ಮ ದಾಖಲೆಗಳು ಒಂದೇ ಆಗಿರಲಿವೆ. ನೀವು ಎಫ್‌ಐಆರ್ ದಾಖಲಿಸಿದ ಬಳಿಕವೇ ಹೊಸ ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು. ಹಾಗೆ ಎಫ್‌ಐಆರ್ ಕಾಪಿಯು ನಿಮ್ಮ ದಾಖಲೆ ಮತ್ತು ವಿಚಾರಣೆಗಳಿಗೆ ಸಹಕಾರಿಯಾಗಲಿದೆ.
ನಕಲು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಧಿಕೃತ ಎನ್‌ಎಸ್‌ಡಿಎಲ್ ವೆವ್‌ಸೈಟ್‌ಗೆ ಭೇಟಿ ನೀಡಿ. ಮರುಮುದ್ರಣ ಪ್ಯಾನ್ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಕಳದ ಹೋದ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ, ಸೂಚನೆಗಳನ್ನು ಟಿಕ್ ಮಾಡಿ, ಕ್ಯಾಪ್ಚಾವನ್ನು ಸಲ್ಲಿಸಿ ಮತ್ತು ಸರಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ನೀವು ನಿಮ್ಮ ವಿಳಾಸ ಮತ್ತು ಪಿನ್ ಕೋಡ್ ಅನ್ನು ದೃಢೀಕರಿಸಬೇಕು. ನಿಮ್ಮ ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರಲಿದೆ ಅದನ್ನು ನಮೂದಿಸಿ ಮುಂದುವರೆಯಿರಿ. ಇದಾದ ಬಳಿಕ 50 ರೂಪಾಯಿಯ ಪಾವತಿ ಮಾಡಬೇಕು. ನಂತರ ನಿಮ್ಮ ಕಾರ್ಡ್‌ನ ವಿತರಣಾ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಟ್ರ್ಯಾಕಿಂಗ್ ಸಂಖ್ಯೆಯನ್ನು ಹೊಂದಿರುವ ಸ್ಲಿಪ್ ಸ್ವೀಕರಿಸುತ್ತೀರಿ. ಅಲ್ಲಿ ನಮೂದಿಸಲಾದ ಪ್ಯಾನ್ ಕಾರ್ಡ್ ವಿಳಾಸಕ್ಕೆ ನಿಮ್ಮ ಕಾರ್ಡ್ ತಲುಪಲಿದೆ.
ಹಾಗೆ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡ ಬಳಿಕ ಮತ್ತೊಂದು ಪಡೆಯಬಹುದು. ಹಾಗೆ ನಂಬರ್ ಕೂಡ ಅದೇ ಸಿಗಲಿದೆ. ಅರ್ಜಿ ಸಲ್ಲಿಸುವ ವೇಳೆ ಫೋಟೋ ಹಾಗೂ ಸಹಿಯನ್ನು ನಮೂದಿಸಬೇಕಾಗುತ್ತದೆ. ಹಾಗೆ 15ರಿಂದ 20 ದಿನಗಳ ಒಳಗೆ ನೀವು ನಕಲು ಪ್ರತಿ ಪಡೆಯುತ್ತೀರಿ. ಹಾಗೆ ಟ್ರ್ಯಾಕಿಂಗ್ ಕೂಡ ಮಾಡಬಹುದು. ಪ್ಯಾನ್ ಕಾರ್ಡ್ ಕಳೆದುಹೋಗದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಕೆಲವು ಕಡೆಗಳಲ್ಲಿ 70 ರಿಂದ 100 ರೂಪಾಯಿ ಶುಲ್ಕ ಕೂಡ ಪಡೆಯುತ್ತಾರೆ.



Click it and Unblock the Notifications
