Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಮನೆಯಲ್ಲಿ ಈ ರೀತಿ ಲಾಫಿಂಗ್ ಬುದ್ಧನ ಇಟ್ಟರೆ ಧನಲಾಭ..! ಆದರೆ ಅಶುಭವೂ ಇದೆ..!
ನೀವು ಲಾಫಿಂಗ್ ಬುದ್ಧನ ಕುರಿತು ಕೇಳಿರುತ್ತೀರಿ. ಅಷ್ಟೆ ಅಲ್ಲ ನಿಮ್ಮ ಮನೆ, ಕಚೇರಿ, ವಾಹನಗಳಲ್ಲೂ ಈ ಲಾಫಿಂಗ್ ಬುದ್ಧನ ಒಂದು ಕಲಾಕೃತಿ ಇಟ್ಟುಕೊಂಡಿರುತ್ತೀರಿ. ಅಚ್ಚರಿ ಅಂದರೆ ಈ ನಗುಮುಖದ ಬುದ್ಧನನ್ನು ಏಕೆ ಇಟ್ಟುಕೊಳ್ಳಬೇಕು? ಇದರಿಂದಾಗು ಲಾಭವೇನು ಎಂಬ ಕುರಿತು ಹಲವರಿಗೆ ತಿಳಿದಿರುವುದಿಲ್ಲ. ಇನ್ನು ಕೆಲವರು ನೋಡಲು ಚೆನ್ನಾಗಿದೆ ಎಂಬ ಕಾರಣಕ್ಕೆ ಲಾಫಿಂಗ್ ಬುದ್ಧನನ್ನು ಖರೀದಿಸಿ ಮನೆಯಲ್ಲಿ ಇರಿಸಿರುತ್ತಾರೆ.
ಆದರೆ ಸಂಪತ್ತನ್ನು ಹೆಚ್ಚಿಸಲು ಅನೇಕ ಜನರು ತಮ್ಮ ಮನೆ ಅಥವಾ ಕೆಲಸದ ಸ್ಥಳಗಳಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಈ ವಿಗ್ರಹವು ಸಮೃದ್ಧಿ, ಯಶಸ್ಸು ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಇಟ್ಟುಕೊಳ್ಳುವುದರಿಂದ ಕುಟುಂಬಕ್ಕೆ ಸಂತೋಷ ಮತ್ತು ಸಂಪತ್ತು ಬರುತ್ತದೆ. ಲಾಫಿಂಗ್ ಬುದ್ಧ ಎಲ್ಲಿ ನೆಲೆಸಿದ್ದಾನೋ ಅಲ್ಲಿ ಹಣ ಸಂಗ್ರಹವಿರುತ್ತೆ ಎಂದು ನಂಬಲಾಗಿದೆ.

ಆದರೆ ಈ ವಿಗ್ರಹವನ್ನು ಸರಿಯಾದ ಕ್ರಮದಲ್ಲಿ ಇಡದಿದ್ದರೆ, ಶುಭ ಫಲಗಳ ಬದಲಿಗೆ ಅಶುಭ ಫಲಗಳು ಸಿಗುವ ಸಾಧ್ಯತೆಯೇ ಹೆಚ್ಚು. ಮನೆ ಮತ್ತು ಕೆಲಸದ ಸ್ಥಳದಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಇರಿಸಲು ಕೆಲವು ನಿಯಮಗಳಿವೆ. ಹಾಗಾದರೆ ಆ ನಿಯಮಗಳೇನು? ಲಾಫಿಂಗ್ ಬುದ್ಧನನ್ನು ಹೇಗೆ ಇಡಬೇಕು? ಹೇಗೆ ಇಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಇರಿಸಲು ವಾಸ್ತು ನಿಯಮಗಳು
1) ವಾಸ್ತು ಶಾಸ್ತ್ರದ ಪ್ರಕಾರ, ಲಾಫಿಂಗ್ ಬುದ್ಧನನ್ನು ಮನೆಯ ಸ್ನಾನಗೃಹ ಮತ್ತು ಅಡುಗೆಮನೆಯಲ್ಲಿ ಇಡಬಾರದು. ಈ ಎಲ್ಲಾ ಸ್ಥಳಗಳಲ್ಲಿ ಲಾಫಿಂಗ್ ಬುದ್ಧನ ಚಿತ್ರವನ್ನು ಇರಿಸುವುದರಿಂದ ಅಶುಭಗಳೇ ಸಂಭವಿಸಲಿದೆ. ಇದು ನಕಾರಾತ್ಮಕ ಶಕ್ತಿ ಹೆಚ್ಚು ಕಾರಣವಾಗುತ್ತದೆ.
2) ಲಾಫಿಂಗ್ ಬುದ್ಧನನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಅದನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಯಾವಾಗಲೂ ಎತ್ತರದ ಸ್ಥಳದಲ್ಲಿ ಇರಿಸಿ. ನಗುವ ಬುದ್ಧನನ್ನು ನೆಲದ ಮೇಲೆ ಇಡುವುದು ಅತ್ಯಂತ ಅಶುಭ.
3) ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಯಾವುದೇ ವಿದ್ಯುತ್ ಉಪಕರಣಗಳ ಬಳಿ ಇಡಬೇಡಿ. ಈ ಸ್ಥಳಗಳನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.
4) ನಗುವ ಬುದ್ಧನ ಪ್ರತಿಮೆಯನ್ನು ಶೂ ರ್ಯಾಕ್‌ನ ಹತ್ತಿರ ಅಥವಾ ಮೇಲ್ಭಾಗದಲ್ಲಿ ಇರಿಸಬೇಡಿ. ಇದು ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಬಡತನಕ್ಕೆ ದಾರಿಯಾಗುತ್ತದಂತೆ.
5) ಮಲಗುವ ಕೋಣೆ ಮತ್ತು ಊಟದ ಕೋಣೆಯಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಇಡಬೇಡಿ. ಇದು ಅಶುಭವಂತೆ
ಬುದ್ಧನ ಪ್ರತಿಮೆಯನ್ನು ಎಲ್ಲಿ ಇಡಬೇಕು?
ಮನೆಯ ಮುಖ್ಯ ಬಾಗಿಲಿನ ಮುಂದೆ 30 ಇಂಚು ಎತ್ತರದಲ್ಲಿ ಇಡಬೇಕು. ಆಗ ಮಾತ್ರ ಶುಭ ಫಲ ದೊರೆಯುತ್ತದೆ. ಕಾರಣಾಂತರಗಳಿಂದ ಆ ಸ್ಥಳದಲ್ಲಿ ವಿಗ್ರಹವನ್ನು ಇಡಲು ಸಾಧ್ಯವಾಗದಿದ್ದರೆ ಪಕ್ಕದ ಮೇಜಿನ ಮೇಲೆ ಅಥವಾ ಮೂಲೆಯಲ್ಲಿ ಇಡಬಹುದು. ಆದರೆ ಲಾಫಿಂಗ್ ಬುದ್ಧನ ಮುಖವು ಮುಂಭಾಗದ ಬಾಗಿಲಿನ ಕಡೆಗೆ ಇರಬೇಕು ಎಂದು ಶಾಸ್ತ್ರ ಹೇಳುತ್ತದೆ.
ಈ ಪ್ರತಿಮೆಯನ್ನು ಕಚೇರಿಯಲ್ಲಿ ಇರಿಸಿದರೆ, ಅದು ಯಾವಾಗಲೂ ಕಣ್ಣಿನ ನೇರದಲ್ಲೇ ಇರಬೇಕು. ಹೆಚ್ಚು ಎತ್ತರದ ಸ್ಥಳದಲ್ಲಿ ಈ ಲಾಫಿಂಗ್ ಬುದ್ಧನನ್ನು ಇಡಬಾರದು.
ಲಾಫಿಂಗ್ ಬುದ್ಧನ ಪ್ರತಿಮೆ ಇಡಲು ಇರುವ ನಿಯಮಗಳೇನು?
1) ನಗುವ ಬುದ್ಧನ ಪ್ರತಿಮೆಯನ್ನು ಮಣ್ಣು ಅಥವಾ ಹಿತ್ತಾಳೆಯಿಂದ ಮಾಡಬೇಕು.
2) ನಗುವ ಬುದ್ಧ ತನ್ನ ಮಕ್ಕಳೊಂದಿಗೆ ಕುಳಿತಿರುವ ಈ ರೀತಿಯ ವಿಗ್ರಹವು ಮನೆಯಲ್ಲಿರುವುದು ತುಂಬಾ ಮಂಗಳಕರವಾಗಿದೆ.
3) ಈ ವಿಗ್ರಹವನ್ನು ನೀವೇ ಅಂಗಡಿಯಿಂದ ಖರೀದಿಸುವುದಕ್ಕಿಂತ ಉಡುಗೊರೆಯಾಗಿ ಪಡೆಯುವುದು ಹೆಚ್ಚು ಮಂಗಳಕರ.
4) ಯಾವಾಗಲೂ ಶುಭ್ರವಾದ ಬಟ್ಟೆಗಳನ್ನು ಧರಿಸಿ ನಂತರ ಈ ವಿಗ್ರಹವನ್ನು ಸ್ಪರ್ಶಿಸಬೇಕಂತೆ.
5) ಬುದ್ಧನ ಮೂರ್ತಿ ವಿಕಾರಗೊಂಡರೆ, ಬಿದ್ದು ಛಿದ್ರಗೊಂಡರೆ ಅದನ್ನು ಎಸೆಯಬಾರದಂತೆ. ಸ್ವಚ್ಛವಾದ ಬಟ್ಟೆಯಲ್ಲಿ ಅದನ್ನು ಕಟ್ಟಿ ನದಿ, ಹೊಳೆ ಅಥವಾ ನೀರಿನ ಮೂಲಕ್ಕೆ ಬಿಡಬೇಕಂತೆ.



Click it and Unblock the Notifications