Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಈ ದೇಶಗಳಲ್ಲಿ ವಾಹನ ಓಡಿಸಬಹುದು..! ಯಾವೆಲ್ಲಾ ದೇಶ ಗೊತ್ತಾ?
ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಅಂದ್ರೆ ತರಬೇತಿ ಪಡೆದು ಆರ್‌ಟಿಓ ಮೂಲಕ ಟೆಸ್ಟ್ ಡ್ರೈವ್ ಪೂರೈಸಿ ಪರವಾನಗಿ ಪಡೆಯಬೇಕು. ಆದ್ರೆ ದೇಶದಲ್ಲಿ ಪರವಾನಗಿ ಪಡೆಯಲು ಹಲವು ನಿಯಮಗಳಿವೆ. ವಯಸ್ಸಿನ ಮಿತಿ ಸೇರಿ ಟೆಸ್ಟ್ ಡ್ರೈವ್‌ನಲ್ಲಿ ಇರುವ ನಿಯಮಗಳ ಪಾಸ್ ಮಾಡಿದರೆ ಮಾತ್ರವೇ ಪರವಾನಗಿ ಸಿಗಲಿದೆ.
ಆದರೆ ನಮ್ಮ ದೇಶದಲ್ಲಿ ಪಡೆದಿರುವ ಪರವಾನಗಿ ಇದ್ದರೆ ಬೇರೆ ಯಾವ ದೇಶದಲ್ಲಿ ವಾಹನ ಚಲಾಯಿಸಬಹುದು ಎಂಬುದು ನಿಮಗೆ ಗೊತ್ತಾ? ಭಾರತದ ಡ್ರೈವಿಂಗ್ ಲೈಸೆನ್ಸ್ ಹಲವು ಕಡೆಗಳಲ್ಲಿ ದಾಖಲಾತಿಯಾಗಿಯೂ ಕೆಲಸಕ್ಕೆ ಬರುತ್ತೆ. ಹಾಎ ಬೇರೆ ದೇಶಕ್ಕೆ ನೀವು ಹೋದಾಗ ಅಲ್ಲಿ ವಾಹನ ಚಲಾಯಿಸಬೇಕಾದರೆ ನಮ್ಮ ದೇಶದ ಡ್ರೈವಿಂಗ್ ಲೈಸೆನ್ಸ್ ಸಹ ಕೆಲಸಕ್ಕೆ ಬರುತ್ತದೆ.

ಹಾಗಾದ್ರೆ ಯಾವ ದೇಶದಲ್ಲಿ ಭಾರತದ ವಾಹನ ಚಾಲನ ಪರವಾನಗಿ ಕೆಲಸಕ್ಕೆ ಬರುತ್ತದೆ? ಯಾವೆಲ್ಲಾ ಕಡೆ ಇದು ಮಾನ್ಯತೆ ಪಡೆದಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಭಾರತೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ಹಲವಾರು ದೇಶಗಳು ಒಪ್ಪಿಕೊಂಡಿವೆ. ಏಕೆಂದರೆ ಆ ದೇಶದಲ್ಲೂ ಸಾಮಾನ್ಯವಾಗಿ ಭಾರತದ ನಿಯಮಗಳೇ ಬಹುಪಾಲು ಅನ್ವಯವಾಗುತ್ತವೆ.
ಭಾರತೀಯ ನಾಗರಿಕರಿಗೆ ಇಂಟರ್ನ್ಯಾಷನಲ್ ಡ್ರೈವಿಂಗ್ ಪರ್ಮಿಟ್ (ಐಡಿಪಿ) ಅಗತ್ಯವಿಲ್ಲದೇ ವಿದೇಶದಲ್ಲಿ ಓಡಿಸಲು ಅನುವು ಮಾಡಿಕೊಡುತ್ತದೆ, ಆದರೂ ಭಾರತೀಯ ಚಾಲನಾ ಪರವಾನಗಿಯ ಮಾನ್ಯತೆ ಮತ್ತು ನಿರ್ದಿಷ್ಟ ಅವಶ್ಯಕತೆಗಳು ದೇಶದಿಂದ ದೇಶಕ್ಕೆ ಬದಲಾಗಬಹುದು.
ಕೆಲವು ದೇಶಗಳಿಗೆ ಇಂಟರ್ನ್ಯಾಷನಲ್ ಡ್ರೈವಿಂಗ್ ಪರ್ಮಿಟ್ (IDP) ಅಗತ್ಯವಿರುತ್ತದೆ, ಮತ್ತೆ ಕೆಲ ದೇಶಕ್ಕೆ ಸಾಮಾನ್ಯ ಚಾಲನ ಪರವಾನಗಿ ಇದ್ದರೆ ಸಾಕಾಗುತ್ತದೆ.
ಅಮೆರಿಕ
ಭಾರತೀಯರು ಹೆಚ್ಚಾಗಿ ನೆಲೆಸಿರುವ ದೇಶಗಳಲ್ಲಿ ಒಂದಾಗಿರುವ ಅಮೆರಿಕದಲ್ಲಿ ನೀವು ಬಾಡಿಗೆ ಕಾರು ಓಡಿಸಬೇಕಾದರೆ ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು. ಸುಮಾರು 1 ವರ್ಷದ ವರೆಗೆ ಈ ಪರವಾನಗಿ ಮಾನ್ಯವಾಗಿರುತ್ತದೆ. ಆದರೆ ಇದಾದ ಬಳಿಕ ನೀವು ಅಲ್ಲಿನ ಸರ್ಕಾರಿ ನಿಯಮದಂತೆ ಪರವಾನಗಿ ಪಡೆಯಬೇಕಾಗುತ್ತದೆ.
ಮಲೇಷ್ಯಾ
ಮಲೇಷಿಯಾದ ರಸ್ತೆಗಳಲ್ಲಿ ನೀವು ವಾಹನ ಚಾಲನೆ ಮಾಡಬೇಕಾದರೆ ನಿಮ್ಮ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಇಂಗ್ಲಿಷ್ ಅಥವಾ ಮಲಯ್ ಭಾಷೆಯಲ್ಲಿರಬೇಕು ಮತ್ತು ವಿತರಣಾ ಪ್ರಾಧಿಕಾರ ಅಥವಾ ಮಲೇಷ್ಯಾದ ಭಾರತೀಯ ರಾಯಭಾರ ಕಚೇರಿಯಿಂದ ಪರಿಶೀಲನೆಗೊಳ್ಳೊಟ್ಟಿರಬೇಕು.
ಜರ್ಮನಿ
ಭಾರತೀಯ ಚಾಲಕರು ತಮ್ಮ ಭಾರತೀಯ ಚಾಲನಾ ಪರವಾನಗಿಯೊಂದಿಗೆ ಜರ್ಮನಿಯಲ್ಲಿ 6 ತಿಂಗಳವರೆಗೆ ವಾಹನಗಳನ್ನು ಚಲಾಯಿಸಬಹುದು. ಆದರೆ ಈ ಪರವಾನಗಿಯು ಜರ್ಮನ್ ಭಾಷೆಯಲ್ಲಿರಬೇಕು. ಜೊತೆಗೆ 6 ತಿಂಗಳ ಬಳಿಕ ಕಡ್ಡಾಯವಾಗಿ ಅಲ್ಲಿನ ಪರವಾನಗಿ ಪಡೆಯಬೇಕು.
ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿ ಕಠಿಣ ಟ್ರಾಫಿಕ್ ನಿಯಮಗಳಿವೆ, ಹೀಗಾಗಿ ಅಲ್ಲಿ ಭಾರತೀಯ ಚಾಲನ ಪರವಾನಗಿಯು 3 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಜೊತೆಗೆ ಇಂಗ್ಲಿಷ್ ಹಾಗೂ ಭಾರತದ ಯಾವುದಾದರು ಒಂದು ಸ್ಥಳೀಯ ಭಾಷೆಯಲ್ಲಿರಬೇಕು. 3 ತಿಂಗಳ ಒಳಗೆ ನೀವು ಅಲ್ಲಿನ ಪರವಾನಗಿ ಪಡೆಯಬೇಕು.
ಇಂಗ್ಲೆಂಡ್
ಭಾರತೀಯ ಚಾಲನಾ ಪರವಾನಗಿಗಳು ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ಒಂದು ವರ್ಷದವರೆಗೆ ಮಾನ್ಯವಾಗಿರುತ್ತವೆ. UKಯು ಭಾರತೀಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಚಾಲಕರು ಕೆಲವು ವರ್ಗದ ವಾಹನಗಳನ್ನು ಮಾತ್ರ ಚಲಾಯಿಸಲು ಅನುಮತಿ ನೀಡುತ್ತದೆ.
ನ್ಯೂಜಿಲೆಂಡ್
ಭಾರತೀಯ ಡ್ರೈವಿಂಗ್ ಲೈಸೆನ್ಸ್‌ಗಳು ನ್ಯೂಜಿಲೆಂಡ್‌ನಲ್ಲಿ ಒಂದು ವರ್ಷದವರೆಗೆ ಮಾನ್ಯವಾಗಿರುತ್ತವೆ. ಜೊತೆಗೆ ಇಂಗ್ಲೀಷ್‌ನಲ್ಲಿರಬೇಕು. ನ್ಯೂಜಿಲೆಂಡ್ ಸಾರಿಗೆ ಸಂಸ್ಥೆಯಿಂದ ಅಧಿಕೃತಗೊಂಡ ಅನುವಾದಿತ ಪ್ರತಿಯನ್ನು ಹೊಂದಿರಬೇಕು.
ದಕ್ಷಿಣ ಆಫ್ರಿಕಾ
ಭಾರತೀಯ ಚಾಲನಾ ಪರವಾನಗಿಗಳು ಇಂಗ್ಲಿಷ್‌ನಲ್ಲಿದ್ದರೆ ಮತ್ತು ಭಾವಚಿತ್ರ ಮತ್ತು ಸಹಿಯನ್ನು ಹೊಂದಿದ್ದರೆ ದಕ್ಷಿಣ ಆಫ್ರಿಕಾದಲ್ಲಿ ಮಾನ್ಯವಾಗಿರುತ್ತವೆ. ನೀವು ಅಲ್ಲಿನ ಪರವಾನಗಿ ಪಡೆಯುವವರೆಗೂ ಇದು ಮಾನ್ಯವಾಗಿರುತ್ತದೆ. ಭಾರತದಂತೆ ಅಲ್ಲಿಯೂ ಡ್ರೈವಿಂಗ್ ಲೈಸೆನ್ಸ್ ಒಂದು ದಾಖಲಾತಿಯಾಗಿ ಕೆಲಸ ಮಾಡುತ್ತದೆ.
ಸ್ವೀಡನ್
ಭಾರತೀಯ ಡ್ರೈವಿಂಗ್ ಲೈಸೆನ್ಸ್‌ಗಳು ಸ್ವೀಡನ್‌ನಲ್ಲಿ ಒಂದು ವರ್ಷದವರೆಗೆ ಮಾನ್ಯವಾಗಿರುತ್ತವೆ, ಅವುಗಳು ಇಂಗ್ಲಿಷ್, ಸ್ವೀಡಿಷ್, ಜರ್ಮನ್, ಫ್ರೆಂಚ್ ಅಥವಾ ನಾರ್ವೇಜಿಯನ್ ಭಾಷೆಯಲ್ಲಿದ್ದರೆ ವಾಹನ ಚಾಲನೆಗೆ ಅನುಮತಿ ಸಿಕ್ಕಿದಂತೆ.



Click it and Unblock the Notifications
