Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಜವಾದ ಪ್ರೀತಿ ಅಂದ್ರೆ ಹೀಗಿರುತ್ತೆ..! ಕುಂಭಮೇಳದಲ್ಲಿ 80ರ ದಂಪತಿಯ ಭರ್ಜರಿ ಡ್ಯಾನ್ಸ್..!
ಪ್ರೀತಿಗೆ ಜಾತಿ, ಧರ್ಮ ಎಂಬ ಮೇಲು ಕೀಲಿಲ್ಲ ಎಂದು ಹೇಳಲಾಗುತ್ತೆ. ಹಾಗೆ ಪ್ರೀತಿಗೆ ವಯಸ್ಸಿನ ಮಿತಿಯೂ ಇಲ್ಲ, ಮತ್ತೆ ಪ್ರೀತಿ ಕುರುಡು ಅಂತಲೂ ಹೇಳುತ್ತಾರೆ. ಹಾಗೆ ಪ್ರೀತಿ ಅನ್ನೋದು ಮದುವೆಗೂ ಮುನ್ನವೇ ಆಗಬೇಕು ಅನ್ನೋದು ಕೂಡ ಸುಳ್ಳು, ಮದುವೆಯ ಬಳಿಕವು ನಿಮ್ಮ ಪತಿ-ಪತ್ನಿಯನ್ನು ಪ್ರೀತಿಸಬಹುದು. ಹಾಗೆ ಈ ಬಂಧನ ಎಷ್ಟು ವರ್ಷಗಳ ಕಾಲ, ಎಷ್ಟು ಪ್ರಾಮಾಣಿಕವಾಗಿ, ಎಷ್ಟು ನಂಬಿಕೆ ಇಡುತ್ತೀರಿ ಎಂಬುದು ಮಾತ್ರವೇ ಇಲ್ಲಿ ಮುಖ್ಯವಾಗುತ್ತೆ.
ಆದ್ರೆ ಇತ್ತೀಚಿನ ವರ್ಷದಲ್ಲಿ ಮದುವೆ ಹಾಗೂ ಸಂಬಂಧಗಳ ಪ್ರಾಮುಖ್ಯತೆ ಅದರ ಬೆಲೆಯನ್ನು ಉಳಿಸಿಕೊಳ್ಳಲು ಪರದಾಡುತ್ತಾರೆ. ಯುವ ಪ್ರೇಮಿಗಳು, ಈಗಷ್ಟೇ ಮದುವೆಯಾದ ಮಂದಿ ಸಂಬಂಧಗಳಲ್ಲಿ ಅವರ ಭಾಂದ್ಯದಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎಂದು ಬೇರೆ ಬೇರೆ ಆಗುವುದು ನೋಡಬಹುದು. ಹಾಗೆ ಸಣ್ಣ ಪುಟ್ಟ ವಿಚಾರಗಳಿಗೂ ವಿಚ್ಛೇದನದಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಕೂಡ ಸಾಮಾನ್ಯ ಎನ್ನುವಂತಾಗಿದೆ.

ಆದ್ರೆ ಇದೆಲ್ಲಾ ಸಂಬಂಧಗಳ ನಡುವೆ, ತೊಡಕುಗಳನ್ನೇ ನೋಡುತ್ತಿರುವ ನಡುವೆಯೂ ಇಲ್ಲೊಂದು ಜೋಡಿ ಇಳಿ ವಯಸ್ಸಿನಲ್ಲೂ ಯುವ ಸಮುದಾಯ ನಾಚುವಂತಹ ಬಾಂಧವ್ಯ ಹೊಂದಿದೆ. ಮಹಾ ಕುಂಭ ಮೇಳದಲ್ಲಿ ಕಾಣಿಸಿಕೊಂಡ ಸುಂಆರು 80 ವರ್ಷ ಆಸುಪಾಸಿನ ಜೋಡಿಯೊಂದು ಎಲ್ಲರ ಗಮನ ಸೆಳೆದಿದೆ. 144 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ಆಗಮಿಸಿದ್ದ ಜೋಡಿ ಸಂತೋಷದಿಂದ ಕೈ ಕೈ ಹಿಡಿದು ಡ್ಯಾನ್ಸ್ ಮಾಡುತ್ತಿರುವುದು ನೋಡಬಹುದು.
ವೃದ್ಧ ದಂಪತಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗೆ ಈ ವಿಡಿಯೋ 3 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ದಂಪತಿಯ ಈ ನೃತ್ಯ ನೋಡಿದ ಮಂದಿ ಅಚ್ಚರಿಯ ಜೊತೆಗೆ ಮೆಚ್ಚುಗೆ ಮಾತುಗಳಾಡಿದ್ದಾರೆ. ಇವರಿಬ್ಬರು ಯಾರು? ಎಂಬುದನ್ನು ಹುಡುಕಾಡಿದ್ದಾರೆ. ಈ ಇಬ್ಬರು ಮಹಾರಾಷ್ಟ್ರದಿಂದ ಬಂದಿದ್ದಾರೆ ಎಂದು ಹೇಳಲಾಗಿದೆ.
ಇಳಿ ವಯಸ್ಸಿನಲ್ಲೂ ಅವರ ಕರಗದ ಹುಮ್ಮಸ್ಸು ಎಲ್ಲರ ಮೆಚ್ಚುಗೆ ಗಳಿಸಿದೆ. ನದಿ ತೀರದಲ್ಲಿ ಅವರ ನೃತ್ಯ ಎಲ್ಲರ ಗಮನ ಸೆಳೆಯುತ್ತಿದೆ. ಇಂತಹ ನಿಷ್ಕಲ್ಮಶ ಪ್ರೀತಿಗೆ ವಯಸ್ಸು ಅಡ್ಡಿಯಾಗದು ಎಂದು ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ದಂಪತಿಯ ನೃತ್ಯ ನೋಡಿದ ಬಳಕೆದಾರರು ಹರ್ಷ ವ್ಯಕ್ತಪಡಿಸುವ ಜೊತೆಗೆ ತಮ್ಮ ಕಮೆಂಟ್‌ಗಳ ಪೋಸ್ಟ್ ಮಾಡಿದ್ದಾರೆ.
ಕೆಲವರು ಇದನ್ನು ಅನ್ಯೋನ್ಯತೆಯ ಪ್ರೀತಿ, ಯುವ ಪೀಳಿಗೆ ಇವರಿಂದ ನೋಡಿ ಕಲಿಯುವುದು ಈ ನದಿಯಷ್ಟೇ ಇದೆ ಎಂದು ಬರೆದಿದ್ದಾರೆ. ಹಾಗೆ ಇದು ಅವರ ಕೊನೆಯ ಕುಂಭ ಮೇಳವು ಆಗಿರಬಹುದು. ಆದ್ರೆ ಅವರಲ್ಲಿನ ಹುರುಪು ಇನ್ನೂ ಕಡಿಮೆಯಾಗಿಲ್ಲ. ಆದ್ರೆ ಈಗ 20 ನೇ ವರ್ಷದಲ್ಲಿ ಯುವಕ ಯುವತಿ ಬದುಕಿನ ಮೇಲಿನ ಎಲ್ಲಾ ಆಸೆಗಳನ್ನೇ ಕಳೆದುಕೊಳ್ಳುವುದು ನೋಡಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ.
ಒಬ್ಬ ಬಳಕೆದಾರರು ಮಹಾರಾಷ್ಟ್ರದ ದಾದಾ ದಾದಿ ಎಂದು ಕಾಮೆಂಟ್ ಮಾಡಿದರೆ. ನಿಜವಾದ ಪ್ರೀತಿಗೆ ಒಂದು ಮುಖವಿದ್ದರೆ ಅದು ಹೀಗಿರಲಿದೆ ಎಂದಿದ್ದಾರೆ. ಹಾಗೆ ಕೊನೆಯಲ್ಲಿ ಆಕೆ ಪತಿಯ ಕಾಲಿಗೆ ಬಿದ್ದು ನಮಸ್ಕರಿಸುವುದು ಸಂಸ್ಕೃತಿಯ ಸೂಚಕ ಇದೇ ಸಂಸ್ಕೃತಿ ಈ ದಂಪತಿಯನ್ನು ಇಷ್ಟು ದೂರದ ವರೆಗೂ ಕರೆದುಕೊಂಡು ಬಂದಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಆಧುನಿಕ ಪ್ರೀತಿಯಲ್ಲಿ ನಾವು ಕಳೆದುಕೊಂಡಿದ್ದ ನಿಜವಾದ ಪ್ರೀತಿ ಇದು ಎಂದು ಹಲವು ಮಂದಿ ಬಳಕೆದಾರರು ಈ ವೃದ್ಧ ದಂಪತಿಯ ವಿಡಿಯೋಗೆ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.



Click it and Unblock the Notifications
