Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ 'ಗೆದ್ದ' ಭಾರತಕ್ಕೆ ಸಿಕ್ಕ ಒಟ್ಟು ಹಣ ಎಷ್ಟು? ಸೋತ 'ಆಫ್ರಿಕಾ'ಗೂ ಕೋಟಿ ಕೋಟಿ! ಇಲ್ಲಿದೆ ಲೆಕ್ಕ
Women World Cup 2025 Prize Money: ವಿಶ್ವ ಗೆದ್ದ ಭಾರತ ತಂಡಕ್ಕೆ ಎಷ್ಟು ಕೋಟಿ ಬಹುಮಾನ? ರನ್ನರ್ ಅಪ್‌ಗೂ ಸಿಕ್ಕಿತು ಕೋಟಿ ಕೋಟಿ ರೂಪಾಯಿ. ಆಟಗಾರರ ಜೇಬಿಗೆ ಎಷ್ಟು ಹಣ? ಹೌದು, ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಅಂತಿಮವಾಗಿ ತನ್ನ ಮೊದಲ ಏಕದಿನ ವಿಶ್ವಕಪ್ (Women World Cup 2025) ಕಿರೀಟವನ್ನು ಗೆದ್ದುಕೊಂಡಿದೆ. ಭಾನುವಾರ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಭಾರತದ ವನಿತೆಯರು ಇತಿಹಾಸ ನಿರ್ಮಿಸಿದ್ದಾರೆ.
ತವರು ನೆಲದಲ್ಲೇ ವಿಶ್ವಕಪ್ ಗೆದ್ದು ಭಾರತೀಯ ಮಹಿಳಾ ತಂಡ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ನವಿ ಮುಂಬೈನಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಭಾರತೀಯ ಮಹಿಳಾ ತಂಡ, ಕೇವಲ ವಿಶ್ವಕಪ್ ಮಾತ್ರವಲ್ಲದೆ ದೊಡ್ಡ ಮೊತ್ತದ ಬಹುಮಾನವನ್ನೂ ಗೆದ್ದಿದೆ. ಭಾರತೀಯ ವನಿತೆಯರು (Women In Blue) ಈ ಗೆಲುವಿನೊಂದಿಗೆ ಕೋಟಿಗಟ್ಟಲೆ ಬಹುಮಾನದ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.

4.48 ಮಿಲಿಯನ್ ಬಹುಮಾನ
ಚೊಚ್ಚಲ ಏಕದಿನ ವಿಶ್ವಕಪ್ (CWC 25) ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು USD 4.48 ಮಿಲಿಯನ್ (ಸುಮಾರು 39.55 ಕೋಟಿ ರೂ.) ದಾಖಲೆಯ ಬಹುಮಾನದ ಮೊತ್ತವನ್ನು (Prize Money For Womens World Cup Winner) ಪಡೆದುಕೊಂಡಿದೆ. ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಬಹುಮಾನವಾಗಿ ನೀಡಿರುವುದು ಇದೇ ಮೊದಲು. ಈ ಐತಿಹಾಸಿಕ ಮೊತ್ತವನ್ನು ಗೆದ್ದ ಭಾರತೀಯ ವನಿತೆಯರು ಗಮನ ಸೆಳೆದಿದ್ದಾರೆ.
ಒಟ್ಟು ಬಹುಮಾನ 122.5 ಕೋಟಿ
ಐಸಿಸಿ ಒಟ್ಟು USD 13.88 ಮಿಲಿಯನ್ (ಸುಮಾರು 122.5 ಕೋಟಿ ರೂ.) ಬಹುಮಾನ ಮೊತ್ತವನ್ನು ಘೋಷಿಸಿದೆ. ಈ ಒಟ್ಟು ಮೊತ್ತವನ್ನು ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೆ ಹಂಚಲಾಗುತ್ತದೆ. ಇದು ಕ್ರಿಕೆಟ್‌ಗೆ ಮತ್ತಷ್ಟು ಉತ್ತೇಜನ ನೀಡುವ ಗುರಿ ಹೊಂದಿದೆ.
ಭಾರತಕ್ಕೆ ಹೊಸ ಮೈಲಿಗಲ್ಲು
ಐಸಿಸಿಯ ಈ ಕ್ರಮವು ಮಹಿಳಾ ಕ್ರೀಡಾಭಿಮಾನಿಗಳಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಹೆಚ್ಚಿಸುವುದಲ್ಲದೆ, ಅನೇಕ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಐಸಿಸಿ ಈ ಬಾರಿ ನೀಡಿದ ಬಹುಮಾನದ ಮೊತ್ತವು ಭಾರತಕ್ಕೆ ಹೊಸ ಮೈಲಿಗಲ್ಲು ಸೃಷ್ಟಿಸಲು ಸಹಾಯ ಮಾಡಿದೆ ಎನ್ನಬಹುದು.
ಮೂರು ಪಟ್ಟು ಹೆಚ್ಚು ಬಹುಮಾನ
ಈ ಬಾರಿಯ ಏಕದಿನ ವಿಶ್ವಕಪ್‌ಗೆ ಐಸಿಸಿ ಘೋಷಿಸಿದ ಒಟ್ಟು ಬಹುಮಾನ ಮೊತ್ತವು ಹಿಂದಿನ ಆವೃತ್ತಿಗಳಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಇಷ್ಟು ದೊಡ್ಡ ಮೊತ್ತವನ್ನು ಘೋಷಿಸಿರಲಿಲ್ಲ. ಭಾರತ ತಂಡ ತನ್ನ ಮೊದಲ ಮಹಿಳಾ ವಿಶ್ವಕಪ್ ಟ್ರೋಫಿಯ ಜೊತೆಗೆ USD 4.48 ಮಿಲಿಯನ್ (39.55 ಕೋಟಿ ರೂ.) ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಸೋತ 'ಆಫ್ರಿಕಾ'ಗೆ ಬಹುಮಾನ ಎಷ್ಟು?
ಫೈನಲ್‌ನಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಸೋತರೂ, ಅವರಿಗೆ ಭರ್ಜರಿ ಬಹುಮಾನದ ಮೊತ್ತ ಲಭಿಸಿದೆ. ಐಸಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ USD 2.24 ಮಿಲಿಯನ್ (ಸುಮಾರು 19.77 ಕೋಟಿ ರೂ.) ಬಹುಮಾನ ನೀಡಿದೆ. ಹಿಂದಿನ ವಿಶ್ವಕಪ್‌ನಲ್ಲಿ ರನ್ನರ್-ಅಪ್‌ಗೆ ಸಿಕ್ಕ ಮೊತ್ತಕ್ಕೆ ಹೋಲಿಸಿದರೆ, ಈ ಬಾರಿ ಶೇ. 273 ರಷ್ಟು ಏರಿಕೆ ಕಂಡುಬಂದಿದೆ.
ಆಸಿಸ್ ಮತ್ತು ಇಂಗ್ಲೆಂಡ್‌ಗೆ 1.12 ಮಿಲಿಯನ್
ಸೆಮಿಫೈನಲ್‌ನಲ್ಲಿ ಆಡಿದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ USD 1.12 ಮಿಲಿಯನ್ (ಸುಮಾರು 9.89 ಕೋಟಿ ರೂ.) ಗಳಿಸಿವೆ. ಪ್ರತಿ ತಂಡವು ಟೂರ್ನಿಯಲ್ಲಿ ಭಾಗವಹಿಸಿದ ಶುಲ್ಕವಾಗಿ ಕನಿಷ್ಠ USD 250,000 (ಸುಮಾರು 2.20 ಕೋಟಿ ರೂ.) ಗಳಿಸಿದೆ. ಇದು ಎಲ್ಲಾ ರಾಷ್ಟ್ರಗಳಿಗೆ ಆರ್ಥಿಕವಾಗಿ ಉತ್ತೇಜನ ನೀಡಿದೆ.
ಪಾಕಿಸ್ತಾನಕ್ಕೆ 4.67 ಕೋಟಿ ರೂ.!
ಪಾಕಿಸ್ತಾನ 8ನೇ ಸ್ಥಾನ ಮತ್ತು ಬಾಂಗ್ಲಾದೇಶ 7ನೇ ಸ್ಥಾನದಲ್ಲಿದ್ದರೂ, ಕ್ರಮವಾಗಿ 4.67 ಕೋಟಿ ರೂ. ಮತ್ತು 4.97 ಕೋಟಿ ರೂ. ಪಡೆದುಕೊಂಡಿವೆ. ಹೀಗೆ, ಐಸಿಸಿ ಒಟ್ಟು 122.5 ಕೋಟಿ ರೂ. ಬಹುಮಾನ ಮೊತ್ತವನ್ನು ಎಲ್ಲಾ ತಂಡಗಳಿಗೂ ಹಂಚಿದೆ.



Click it and Unblock the Notifications