Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ABCD ಕಲಿಯೋಕೆ 2.5 ಲಕ್ಷ ರೂ ನೀಡಬೇಕು.! ನರ್ಸರಿ ಫೀಸ್‌ಗೆ ಫೋಷಕರಿಗೆ ಆಘಾತ!
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಮಾರಾಟವಾಗುತ್ತಿದೆ, ಶೈಕ್ಷಣಿಕ ಸಂಸ್ಥಗಳಲ್ಲಿ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುವುದು, ಮಾತುಗಳನ್ನು ನೀವು ಸಹ ಕೇಳಿರುತ್ತೀರಿ. ಹಾಗೆ ಈ ಚಿಕ್ಕಮಕ್ಕಳಿಗೂ ಕೂಡ ಲಕ್ಷ ಲಕ್ಷ ರೂಪಾಯಿ ನೀಡಿ ಎಲ್‌ಕೆಜಿಗೆ ಸೇರಿಸಬೇಕಾದ ಅನಿವಾರ್ಯತೆ ಇದೆ. ನಗರಗಳಲ್ಲಿ ಮಾತ್ರವಲ್ಲ ಪಟ್ಟಣಗಳಿಗೂ ಈ ಡೊನೇಷನ್ ಹಾಗೆ ದುಬಾರಿ ಶುಲ್ಕಗಳು ಎಂಟ್ರಿ ಕೊಟ್ಟಿರುವುದು ಹಳೆಯ ವಿಚಾರ.
ಕೆಲವು ಖಾಸಗಿ ಸಂಸ್ಥೆಗಳು ಎಲ್‌ಕೆಜಿಗೆ ಲಕ್ಷ ಲಕ್ಷ ರೂಪಾಯಿ ಶುಲ್ಕ ವಿಧಿಸುತ್ತವೆ. ಆದ್ರೆ ಅವರಿಗೆ ನಿತ್ಯ 2 ಗಂಟೆಗಳ ಕಾಲ ಆಟ ಬಿಟ್ಟರೆ ಅಲ್ಲೇನು ಕಲಿಯಲು ಇರುವುದಿಲ್ಲ. ಆದರೂ ದುಬಾರಿ ಶುಲ್ಕ ನೀಡಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗೆ ಸೇರಿಸುವುದು ನೋಡಬಹುದು. ಆದ್ರೆ ಕಳೆದ ಕೆಲ ವರ್ಷದಿಂದ ಈ ಶುಲ್ಕದ ಪ್ರಮಾಣ ಗಗನಕ್ಕೇರಿದೆ.

ಹಾಗೆ ಎಲ್‌ಕೆಜಿ ಮಕ್ಕಳಿಗೂ ಈಗ ಪ್ರವೇಶ ಪರೀಕ್ಷೆ ಹಾಗೆ ಮುಂಗಡ ಬುಕಿಂಗ್ ಮಾಡುವುದು ಕೂಡ ಇದೆ. ಪ್ರತಿಷ್ಠಿತ ಸಂಸ್ಥೆಗೆ ಮಕ್ಕಳನ್ನು ನೀವು ಸೇರಿಸಬೇಕು ಎನ್ನುವ ಆಸೆ ಇದ್ದರೆ ಅವರು ಹೇಳಿದಷ್ಟು ಹಣ ನೀಡಬೇಕಾಗುತ್ತದೆ. ಹಾಗೆ ಆ ಸೀಟ್‌ಗಳಿಗೂ ಪೈಪೋಟಿ ಇದೆ. ಇನ್ನು ಭಾರತದಲ್ಲಿ ಮಧ್ಯಮ ವರ್ಗದ ಜನರಿಗೆ ಇದೊಂದು ಹೊರೆಯಾಗಿರುವುದಂತು ಸತ್ಯ.
ಈಗ ಹೈದರಾಬಾದ್‌ವ ವ್ಯಕ್ತಿಯೊಬ್ಬರು ತನ್ನ ಮಗುವಿನ ಎಲ್‌ಕೆಜಿ ಶುಲ್ಕದ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಎಲ್ಲರಲ್ಲೂ ಆಘಾತ ಮೂಡಿಸಿದೆ. ಈ ನರ್ಸರಿ ಮಗುವಿನ ಶುಲ್ಕ ಬರೋಬ್ಬರಿ 2.5 ಲಕ್ಷ ರೂಪಾಯಿ ಆಗಿದೆ. ಹೈದರಾಬಾದ್‌ನ ಪ್ರಸಿದ್ಧ ಖಾಸಗಿ ಶಾಲೆಯ ಶುಲ್ಕ ರಚನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ಖಾಸಗಿ ಶಾಲೆಯು 2025-26 ಶೈಕ್ಷಣಿಕ ವರ್ಷಕ್ಕೆ ನರ್ಸರಿ ಪ್ರವೇಶಕ್ಕಾಗಿ ಹೊರಡಿಸಿರುವ ಶುಲ್ಕ ಪಟ್ಟಿ ಪೋಷಕರೊಬ್ಬರಲ್ಲಿ ಆಘಾತ ಮೂಡಿಸಿದೆ. ಶಾಲೆಯು ನರ್ಸರಿಗೆ 2.51 ಲಕ್ಷ ರೂ. ವಿಧಿಸಿರುವುದು ನೋಡಬಹುದು. ಈಗ ABCD ಕಲಿಯುವುದಕ್ಕೆ ತಿಂಗಳಿಗೆ 21 ಸಾವಿರ ರೂಪಾಯಿ ವೆಚ್ಚವಾಗುತ್ತಿದೆ ಎಂದು ಹೇಳಿದ್ದಾರೆ.
ಅವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿರುವಂತೆ
ಬೋಧನಾ ಶುಲ್ಕ: 47,750 ರೂ.
ಪ್ರವೇಶ ಶುಲ್ಕ: 5,000 ರೂ.
ಪ್ರಾರಂಭ ಶುಲ್ಕ: 12,500 ರೂ.
ಹಿಂತಿರುಗಿಸಬಹುದಾದ ಠೇವಣಿ: 10,000 ರೂಪಾಯಿ
ಈ ಮೊತ್ತವನ್ನು ಪೋಷಕರು 4 ಕಂತುಗಳಲ್ಲಿ ನೀಡಬಹುದು ಜೂನ್, ಸೆಪ್ಟೆಂಬರ್, ಡಿಸೆಂಬರ್ ಮತ್ತು ಅಂತಿಮ ಕಂತಿನಲ್ಲಿ ಪಾವತಿಸಬೇಕಾಗುತ್ತದೆ, ಇದರಿಂದಾಗಿ ಒಟ್ಟು ಮೊತ್ತ 2,51,000 ರೂಪಾಯಿ ಆಗಿರಲಿದೆ.
ಸದ್ಯ ಮಧ್ಯಮ ವರ್ಗದ ಜನರು ಬೆಲೆ ಏರಿಕೆಯಿಂದ ತಮ್ಮ ಹಣಕಾಸುಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಾಗಲೇ ಈ ರೀತಿಯ ಶುಲ್ಕಗಳು ಮತ್ತಷ್ಟು ಒತ್ತಡ ಹಾಗೆ ಸಮಸ್ಯೆಗಳ ತರಲು ಕಾರಣವಾಗುತ್ತಿದೆ. ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರ ಅನುರಾಧಾ ತಿವಾರಿ ಹಂಚಿಕೊಂಡಿದ್ದಾರೆ. ಈಗ ನೀವು ABC ಗಳ ಕಲಿಯಲು ತಿಂಗಳಿಗೆ 21,000 ಸಾವಿರ ಖರ್ಚು ಮಾಡಬೇಕು. ಇಂತಹ ಹಾಸ್ಯಾಸ್ಪದವಾಗಿ ಹೆಚ್ಚಿನ ಶುಲ್ಕವನ್ನು ಸಮರ್ಥಿಸಲು ಈ ಶಾಲೆಗಳು ಏನು ಕಲಿಸುತ್ತಿವೆ? ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಬ್ಬರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಮುಂಬೈ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಈ ಶುಲ್ಕ ಏನು ಇಲ್ಲ. ಇಲ್ಲಿ ಆರಂಭದಲ್ಲೇ 5 ಲಕ್ಷ ರೂಪಾಯಿ ಹಾಗೆ ಅದು 30 ಲಕ್ಷ ರೂಪಾಯಿಗೂ ತಲುಪಬಹುದು ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಮಕ್ಕಳ ಶುಲ್ಕ ಕುರಿತಾದ ಚರ್ಚೆ ಈಗ ಅಚ್ಚರಿಯ ಜೊತೆಗೆ ದುಬಾರಿ ಶಿಕ್ಷಣ ಕುರಿತು ಆಘಾತ ಮೂಡಿಸಿದೆ.



Click it and Unblock the Notifications
