Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಅನಾರೋಗ್ಯ ಪೀಡಿತ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ತಂದ ಪತಿ: ಪ್ರೇಮಿಗಳು ಅಂದ್ರೆ ಇವರೇತಾನೆ!
ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಫೆ.14 ರಂದು ವಿಶ್ವದ ಬಹುತೇಕ ಕಡೆಗಳಲ್ಲಿ ಈ ಪ್ರೇಮಿಗಳ ದಿನ ಆಚರಿಸುವುದು ಸಾಮಾನ್ಯ. ಅದ್ರಲ್ಲೂ ಇತ್ತೀಚಿಗೆ ಪ್ರೇಮಿಗಳ ದಿನ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರೇಮಿಗಳು ಈ ದಿನ ಪರಸ್ಪರ ಗಿಫ್ಟ್ ನೀಡುವುದು, ಪ್ರವಾಸಕ್ಕೆ ತೆರಳುವುದು ಸೇರಿ ಈ ದಿನವನ್ನ ವಿಶೇಷ ರೀತಿಯಲ್ಲಿ ಆಚರಿಸುವುದು ನೋಡಬಹುದು. ಹಾಗೆ ಪ್ರೇಮಿಗಳ ದಿನಕ್ಕೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಸಹ ನೋಡಬಹುದು.
ಹಾಗೆ ಪ್ರೇಮಿಗಳ ಹೆಸರು ಕೇಳಿದ್ರೆ ಇತಿಹಾಸದ ಪುಟ ಸೇರಿದ ಒಂದಿಷ್ಟು ಹೆಸರುಗಳನ್ನು ನಾವು ಕೇಳುತ್ತೇವೆ. ಆದ್ರೆ ಇಲ್ಲೊಂದು ಹಿರಿಯ ಜೋಡಿ ಈ ಪ್ರೇಮಿಗಳ ದಿನಕ್ಕೆ ಬಹುದೊಡ್ಡ ಉದಾಹರಣೆಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೌದು ಪುರಿಯ ಜಗನ್ನಾಥ ದೇವಾಲಯದಲ್ಲಿ ಈ ಜೋಡಿಯೊಂದು ಅಚ್ಚರಿ ಹುಟ್ಟಿಸಿದೆ.

ಪುರಿ ಜಗನ್ನಾಥ ದೇವರನ್ನು ಒಮ್ಮೆಯಾದರು ದರ್ಶನ ಪಡೆಯಬೇಕು ಎಂಬುದು ಹಲವರ ಆಸೆಯಾಗಿರುತ್ತೆ. ಅದೇ ರೀತಿ ಇಲ್ಲೊಂದು ಜೋಡಿ ಕೂಡ ದೇವಾಲಯಕ್ಕೆ ಬೇಟಿ ನೀಡಿದೆ. ಆದ್ರೆ ವಿಶೇಷ ಅಂದ್ರೆ ಅನಾರೋಗ್ಯ ಪೀಡಿತ ತನ್ನ ಪತ್ನಿಯನ್ನು ಆತ ಬೆನ್ನಿನ ಮೇಲೆ ಹೊತ್ತು ದೇವಾಲಯಕ್ಕೆ ಆಗಮಿಸಿದ್ದಾನೆ. ಈ ಜೋಡಿ ದೇವಾಲಯದ ಆವರಣದಲ್ಲಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆತನ ದಾಂಪತ್ಯ ಕಾಳಜಿ ಕಂಡು ಅಲ್ಲಿದ್ದವರು ಬೆರಗಾದರು. ಪ್ರೀತಿ, ದಾಂಪತ್ಯ, ಪ್ರೇಮಕ್ಕೆ ನಿದರ್ಶನವೆಂಬಂತೆ ಆತನನ್ನು ಹೊಗಳಲಾಗಿದೆ. ಈ ವಿಡಿಯೋದಲ್ಲಿ ಆ ವ್ಯಕ್ತಿ ತನ್ನ ಅನಾರೋಗ್ಯ ಪೀಡಿತ ಹೆಂಡತಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ದೇವಾಲಯದ ಗರ್ಭಗುಡಿಗೆ ಹೋಗುವುದನ್ನು ನೋಡಬಹುದು.
ಸ್ವತಃ ವಯಸ್ಸಾದರೂ ಅವನು ತನ್ನ ಹೆಂಡತಿಯನ್ನು ಈ ರೀತಿಯ ಕಾಳಜಿ ನೋಡಿ ಜನರು ಕೂಡ ಒಂದು ಕ್ಷಣ ಅಚ್ಚರಿ ಮೂಡಿಸಿದರು. ಆತನ ತನ್ನ ಬೆನ್ನ ಮೇಲಿನ ಪತ್ನಿಯನ್ನು ಕೆಳಗೆ ಇಳಿಸಲು ನಿರಾಕರಿಸಿದನು. ಹಾಗೆ ದೇವಾಲಯದಲ್ಲಿ ದರ್ಶನಕ್ಕೆ ತೆರಳಿದನು. ಪತಿ ಮತ್ತು ಪತ್ನಿಯ ನಡುವಿನ ಬಾಂಧವ್ಯವು ಕಾಳಜಿ, ವಾತ್ಸಲ್ಯ ಮತ್ತು ತ್ಯಾಗದಿಂದ ಬಂಧಿಸಲ್ಪಟ್ಟ ಜೀವನವನ್ನು ಒಟ್ಟಿಗೆ ನೋಡುವ ಸಾಕ್ಷಿಯ ಚಿತ್ರದಂತೆ ಈ ಇಬ್ಬರು ಕಂಡರು. ಇದು ನಿಜವಾದ ಪ್ರೀತಿಗೆ ನಿದರ್ಶನ.
ನೆಟ್ಟಿಗರ ಪ್ರತಿಕ್ರಿಯೆ ಏನು?
ವಿಡಿಯೋ ಪ್ರೇಮಿಗಳ ದಿನದ ಸಮಯದಲ್ಲಿ ವೈರಲ್ ಆಗಿರುವ ಕಾರಣ ಎಲ್ಲರೂ ಈ ದಂಪತಿಯ ನಡುವಿನ ಪ್ರತಿ ಬಾಂಧವ್ಯವು ಪ್ರೇಮಿಗಳಿಗೆ ಉತ್ತಮ ಪಾಠವಾಗಬಹುದು ಎಂದು ನೆಟ್ಟಿಗರು ಹೇಳಿದ್ದಾರೆ. ಪ್ರೀತಿ ಅಂದರೆ ಏನು ಎಂದು ಕೇಳುವ ಜನರಿಗೆ ಈ ಇಬ್ಬರನ್ನು ತೋರಿಸಿದರೆ ಸಾಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಜೀವನ ಸಂಗಾತಿಯಾಗುವುದು ಹೀಗೆ, ಜೈ ಜಗನ್ನಾಥ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಪೀಳಿಗೆಯ ಪ್ರೇಮಿಗಳಿಗೆ ಇದು ನಿಜವಾದ ಪ್ರೀತಿ ಎಂದು ತೋರಿಸಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ.
ಈ ಜೋಡಿಯ ವಿಡಿಯೋ ಸದ್ಯಕ್ಕೆ ಪ್ರೇಮಿಗಳ ದಿನಕ್ಕೆ ಬೆಸ್ಟ್ ವಿಡಿಯೋ ಎಂದು ಹೇಳಲಾಗುತ್ತಿದೆ. ಭೂಮಿಯ ಮೇಲೆ ಇಂತಹ ಉದಾಹರಣೆಗಳು ಕಂಡಾಗಲೇ ಪ್ರೀತಿಗೆ ನಿಜವಾದ ಅರ್ಥ ಸಿಗಲಿದೆ. ದಾಂಪತ್ಯ ಎಂಬುದು ಜೊತೆಗೆ ನಡೆಯುವ ದಾರಿಯಾಗಬೇಕು ಅನ್ನೋದನ್ನು ಈ ಜೋಡಿ ಜಗತ್ತಿಗೆ ಸಾರಲು ಹೊರಟಂತಿದೆ.



Click it and Unblock the Notifications
