Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ ಪ್ರಕಟ..! ಶಾರುಖ್ ಖಾನ್ ಎಂಟ್ರಿ..! ಅದಾನಿ ಅತ್ಯಂತ ಶ್ರೀಮಂತ
ಭಾರತ ಈಗ ಶ್ರೀಮಂತ ಉದ್ಯಮಿಗಳ ನಾಡಾಗಿದೆ. ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಭಾರತದ ಒಂದಿಷ್ಟು ಮಂದಿ ಸ್ಥಾನ ಪಡೆಯೋದನ್ನು ನಾವು ನೋಡಿದ್ದೇವೆ. ಕೋಟ್ಯಧಿಪತಿಗಳ ತವರೂರಾಗಿ ಭಾರತ ಈಗ ಬದಲಾಗಿದೆ. ಗೌತಮ್ ಅದಾನಿ, ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ರತನ್ ಟಾಟಾ ಹೀಗೆ ಹತ್ತಾರು ಮಂದಿ ಈ ಸ್ಥಾನದಲ್ಲಿದ್ದಾರೆ.
ಅದಾನಿ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ಅವರು 2024 ರಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ತಿಳಿದುಬಂದಿದೆ. ಅವರ ಕುಟುಂಬದ ನಿವ್ವಳ ಮೌಲ್ಯ ರೂ 11.6 ಲಕ್ಷ ಕೋಟಿ ರೂಪಾಯಿ ಆಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 95 ರಷ್ಟು ಹೆಚ್ಚಳವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ನೇತೃತ್ವದ ಅಂಬಾನಿ ಗ್ರೂಪ್ 10,14,700 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಎರಡನೇ ಶ್ರೀಮಂತರಾಗಿದ್ದಾರೆ.
ಈಗ 2024ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ ಪ್ರಕಟವಾಗಿದ್ದು, ಭಾರತದ ಶ್ರೇಷ್ಠ ಶ್ರೀಮಂತರು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಅಚ್ಚರಿಯಾಗಿ ಈ ಪಟ್ಟಿಯಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸಹ ಸ್ಥಾನ ಪಡೆದಿದ್ದಾರೆ. ಹೌದು ಭಾರತದ 134 ನಗರಗಳ 1,539 ವ್ಯಕ್ತಿಗಳ ಆಸ್ತಿಯನ್ನು ಪರಿಶೀಲಿಸಿ ಈ ವರದಿ ತಯಾರಿಸಲಾಗಿದೆ, ಪ್ರತಿಯೊಬ್ಬರೂ 1,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ.

2024 ಪಟ್ಟಿಯಲ್ಲಿರುವ 1,539 ಅತಿ ಶ್ರೀಮಂತ ವ್ಯಕ್ತಿಗಳ ಪೈಕಿ, ಈ ಬಾರಿ ದಾಖಲೆ ಮಟ್ಟದಲ್ಲಿ 272 ಹೊಸ ಹೆಸರುಗಳು ಈ ಪಟ್ಟಿ ಸೇರಿಕೊಂಡಿವೆ. ಇದರಲ್ಲಿ 7,300 ಕೋಟಿ ಸಂಪತ್ತು ಹೊಂದಿರುವ ಶಾರುಖ್ ಖಾನ್ ಈ ಬಾರಿಯ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದಲ್ಲಿ 334 ಕೋಟ್ಯಧಿಪತಿಗಳು
2024 ರ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯ ಪ್ರಕಾರ, ಭಾರತವು ಈಗ 334 ಕೋಟ್ಯಧಿಪತಿಗಳಿಗೆ ವಾಸ ಸ್ಥಾನವಾಗಿದೆ. ಇದು ಈವರೆಗೆ ವರದಿಯಲ್ಲಿ ಅತೀ ಹೆಚ್ಚು ಸಂಖ್ಯೆಯಾಗಿದೆ. ಮೊದಲ ಬಾರಿ 300ರ ಗಡಿ ದಾಟಿದೆ. ಹಾಗಾದ್ರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಗ್ರ ಶ್ರೀಮಂತ ಉದ್ಯಮಿಗಳು ಯಾರು ಎಂಬುದನ್ನು ಅವರ ಸ್ಥಾನಕ್ಕೆ ಕ್ರಮವಾಗಿ ನೋಡೋಣ.
- ಗೌತಮ್ ಅದಾನಿ ಮತ್ತು ಕುಟುಂಬ
- ಮುಖೇಶ್ ಅಂಬಾನಿ ಮತ್ತು ಕುಟುಂಬ
- ಶಿವ ನಾಡರ್ ಮತ್ತು ಕುಟುಂಬ
- ಸೈರಸ್ ಎಸ್.ಪೂನಾವಲ್ಲ & ಕುಟುಂಬ
- ದಿಲೀಪ್ ಶಾಂಘ್ವಿ
- ಕುಮಾರ್ ಮಂಗಲಂ ಬಿರ್ಲಾ ಮತ್ತು ಕುಟುಂಬ
- ಗೋಪಿಚಂದ್ ಹಿಂದುಜಾ & ಕುಟುಂಬ
- ರಾಧಾಕಿಶನ್ ದಮಾನಿ ಮತ್ತು ಕುಟುಂಬ
- ಅಜೀಂ ಪ್ರೇಮ್‌ಜಿ ಮತ್ತು ಕುಟುಂಬ
- ನೀರಜ್ ಬಜಾಜ್ ಮತ್ತು ಕುಟುಂಬ
ಈ ಪಟ್ಟಿಯಲ್ಲಿ 21 ವರ್ಷದ ಕಿರಿಯ ಉದ್ಯಮಿ
ಈ ಬಾರಿಯ ಈ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆದಿರುವುದು 21 ವರ್ಷದ ಉದ್ಯಮಿ. Zepto ನ ಕೈವಲ್ಯ ವೋಹ್ರಾ ಅವರು 21 ವರ್ಷ ವಯಸ್ಸಿನ ಪಟ್ಟಿಯಲ್ಲಿ ಅತ್ಯಂತ ಕಿರಿಯರಾಗಿದ್ದಾರೆ, ಸಹ-ಸಂಸ್ಥಾಪಕ 22 ವರ್ಷದ ಆದಿತ್ ಪಲಿಚಾ ನಂತರದ ಸ್ಥಾನದಲ್ಲಿದ್ದಾರೆ. ಫಿಸಿಕ್ಸ್ ವಲ್ಲಾಹ್‌ನ ಅಲಖ್ ಪಾಂಡೆ, ಮತ್ತು ರೇಜರ್‌ಪೇಯ ಹರ್ಷಿಲ್ ಮಾಥುರ್ ಮತ್ತು ಶಶಾಂಕ್ ಕುಮಾರ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಯುವ ಉದ್ಯಮಿಗಳಲ್ಲಿ ಸೇರಿದ್ದಾರೆ.
2021ರಲ್ಲಿ ಆರಂಭಗೊಂಡಿದ್ದ Zepto ಎಂಬ ಕ್ವಿಕ್ ಕಾಮರ್ಸ್ ಆಪ್ ನೋಡ ನೋಡುತ್ತಲೇ ಫೇಮಸ್ ಆಗಿತ್ತು. 21 ವರ್ಷದ ಯುವ ಉದ್ಯಮಿ ಇದನ್ನು ಹುಟ್ಟುಹಾಕಿ ಈಗ ಕೋಟಿ ಕೋಟಿ ಉದ್ಯಮವಾಗಿ ಬದಲಾಗಿದೆ. ಇದರ ಜೊತೆಗೆ ಈ ಪಟ್ಟಿಯಲ್ಲಿ ಹೊಸ 250ಕ್ಕೂ ಹೆಚ್ಚು ಹೆಸರುಗಳು ಸೇರಿದ್ದು ಬಹುತೇಕ ಉದ್ಯಮಗಳು ಸ್ಟಾರ್ಟ್‌ಅಪ್‌ನಿಂದ ಆರಂಭಗೊಂಡಿದ್ದವು. ಈಗ ಯುನಿಕಾರ್ನ್‌ಗಳಾಗಿ ಬದಲಾಗಿವೆ.



Click it and Unblock the Notifications

