Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಟನ್ ಒತ್ತಿದ್ರೆ ಸ್ನಾನ ಮಾಡಿಸಿ ಮೈ ಒಣಗಿಸಿ ಕಳುಹಿಸುತ್ತೆ ಯಂತ್ರ..! ಸಖತ್ ಆಗಿದೆ ಜಪಾನ್ ಐಡಿಯಾ!
ಆಧುನಿಕ ಜಗತ್ತಿನಲ್ಲಿ ನಮಗೆ ಕೈಗೊಂದು ಕಾಲಿಗೊಂದು ಯಂತ್ರಗಳು ಬಂದಿವೆ. ಅಡುಗೆ ಮಾಡುವಂತಹ ಕ್ಲಿಷ್ಟಕರ ಕೆಲಸದಿಂದ ಹಿಡಿದು ಆಸ್ಪತ್ರೆಯಲ್ಲಿ ಆಪರೇಷನ್ ಕೂಡ ಯಂತ್ರಗಳು ರೋಬೋಟ್‌ಗಳು ಇಂದು ನೆರವೇರಿಸುತ್ತಿವೆ. ಈ ಎಲ್ಲಾ ಯಂತ್ರಗಳು ಕೂಡ ನಮ್ಮ ಕೆಲಸವನ್ನು ಕಡಿಮೆ ಮಾಡಲೆಂದು ಬಂದಿವೆ. ಹಾಗೆ ಮಾಡುತ್ತಲಿವೆ ಕೂಡ.
ಇದರಿಂದ ನಮಗೆ ಹೆಚ್ಚು ಸಮಯ, ಶ್ರಮ ಎಲ್ಲವೂ ಉಳಿತಾಯವಾಗುತ್ತೆ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಯಾವ ಮನೆಯಲ್ಲಿ ಹೆಚ್ಚು ಹೆಚ್ಚು ಇಂತಹ ಯಂತ್ರಗಳಿವೆಯೋ ಅಲ್ಲಿ ಕೆಲಸ ಕಡಿಮೆಯಾಗುವುದು ನಾವು ನೋಡಬಹುದು. ಮನೆ ಮನೆಯಲ್ಲಿ ಈಗ ಹೊಸ ಹೊಸ ಯಂತ್ರಗಳು, ತಂತ್ರಜ್ಞಾನಗಳನ್ನು ಜಿದ್ದಿಗೆ ಬಿದ್ದವರಂತೆ ತಂದು ಹಾಕಿರುತ್ತಾರೆ.

ಈಗ ಹೊಸ ಯುಗದ ತಂತ್ರಜ್ಞಾನಗಳು ಬಂದ ಮೇಲಂತು ಎಲ್ಲಾ ವಿಚಾರಗಳಿಗೂ, ಕೆಲಸಗಳಿಗೂ ಯಂತ್ರಗಳ ಆವಿಷ್ಕಾರ ಆಗಿದೆ. ಬಟ್ಟೆ ಒಗೆಯಲು ಹೇಗೆ ವಾಷಿಂಗ್ ಮೆಷಿನ್ ಬಂದಿದ್ಯೋ ಅದೇ ರೀತಿಯಲ್ಲಿ ಮನುಷ್ಯರನ್ನೇ ಕ್ಲೀನ್ ಮಾಡಲು ಕೂಡ ಒಂದು ಯಂತ್ರ ಕಂಡುಹಿಡಿಯಲಾಗಿದೆ. ನೀವು ವಾಷಿಂಗ್ ಮೆಷಿನ್ ಒಳಗೆ ಬಟ್ಟೆ ಹಾಕಿ ನೀರು, ಪುಡಿ ಹಾಕಿದರೆ ಬಟ್ಟೆ ಎಲ್ಲಾ ಒಗೆದು ಒಣಗಿಸಿ ಕೊಡುತ್ತದೆ. ಅದೇ ರೀತಿ ಈ ಯಂತ್ರ ಕೂಡ ನಿಮ್ಮನ್ನೂ ಕ್ಲೀನ್ ಮಾಡುತ್ತದೆ.
ಹೌದು ಜಪಾನ್ ಇಂತಹದೊಂದು ಅಚ್ಚರಿ ಹುಟ್ಟಿಸುವಂತಹ ಆವಿಷ್ಕಾರ ಹೊರತಂದಿದೆ. ಇದು ಎಐ ಚಾಲಿತ ಯಂತ್ರವಾಗಿದ್ದು, ನಿಮ್ಮನ್ನು 15 ನಿಮಿಷದಲ್ಲಿ ಸ್ನಾನ ಮಾಡಿಸಿ ಕ್ಲೀನ್ ಮಾಡಿ ಬಿಡುತ್ತದೆ. ಜಪಾನಿನ ಕಂಪನಿ ಸೈನ್ಸ್ ಕಂ ಎಂಬ ಕಂಪನಿ ಈ ಯಂತ್ರವನ್ನು ಪರಿಚಯಿಸಿದೆ.
'ಮಿರೈ ನಿಂಗೆನ್ ಸೆಂಟಾಕುಕ್' ಎಂಬ ಈ ಆವಿಷ್ಕಾರವು ಸ್ಪಾ ತರಹದ ಅನುಭವವನ್ನು ನೀಡುತ್ತದೆ, ಸುಧಾರಿತ ವಾಟರ್ ಜೆಟ್‌ಗಳು ಮತ್ತು ಸ್ವಚ್ಛಗೊಳಿಸಲು ಸೂಕ್ಷ್ಮ ಗಾಳಿಯ ಗುಳ್ಳೆಗಳನ್ನು ಒಳಗೊಂಡಿದೆ. ಈ ಯಂತ್ರವು ನಿಮ್ಮ ತ್ವಚೆಗೆ ಅನುಸಾರವಾಗಿ ನೀರಿನ ವೇಗ, ಸೇರಿ ಎಲ್ಲವನ್ನು ಸೆಟ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಾಗೆ ಒಳಗೆ ನಿಮಗೆ ವಿಶ್ರಾಂತಿ ನೀಡುವಂತಹ ಪರಿಸರ ರಚಿಸುತ್ತದೆ. ನಿಮ್ಮ ಆಲೋಚನಾ ಲಹರಿಗೆ ಸರಿಯಾದ ಸಂಗೀತ ನುಡಿಸುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ?
ಯಂತ್ರದ ಒಳಗೆ ಕುಳಿತಾಗ ಇದರಲ್ಲಿ ಸೋಪಿನ ಪುಡಿಯಂತಹ ಮಿಶ್ರಣದ ನೊರೆ ಮೈ ಮೇಲೆ ಸಿಡಿಯುತ್ತದೆ. ಇದು ನಿಮ್ಮ ಚರ್ಮದ ಮೇಲಿನ ಕಲ್ಮಶ ತೆಗೆಯುತ್ತದೆ. ನಂತರ ನಿಧಾನವಾಗಿ ನೀರು ಚಿಮುಕಿಸಲು ಆರಂಭಿಸುತ್ತದೆ. ನೀರಿನಿಂದ ನೀವು ಶುದ್ಧವಾದ ಬಳಿಕ ನಿಮ್ಮನ್ನು ಒಣಗಿಸಲು ಮುಂದಾಗುತ್ತದೆ. ಇದರಲ್ಲಿ ನೀವು ಎಷ್ಟು ಬಿಸಿ ಗಾಳಿ ಬರಬೇಕು ಎಂಬುದನ್ನು ಕೂಡ ಆಯ್ಕೆ ಮಾಡಬಹುದು. ಇಲ್ಲವೆ ಎಐ ಮೂಲಕ ಹೊರಗಿನ ತಾಪಮಾನಕ್ಕೆ ಸರಿಯಾಗಿ ಅದಾಗಿಯೇ ಹೊಂದಿಸಿಕೊಳ್ಳುತ್ತದೆ.
1970 ರ ದಶಕದಲ್ಲಿ ಸ್ಯಾನ್ಯೊ ಎಲೆಕ್ಟ್ರಿಕ್‌ನಿಂದ ಪ್ರಸ್ತುತಪಡಿಸಲಾದ ಇದೇ ರೀತಿಯ ಪರಿಕಲ್ಪನೆಯಿಂದ ಪ್ರೇರಿತವಾದ ಈ ಆಧುನೀಕರಿಸಿದ ಆವೃತ್ತಿಯು ಒಸಾಕಾ ಎಕ್ಸ್‌ಪೋ 2025 ನಲ್ಲಿ ಪ್ರಾರಂಭಗೊಳ್ಳಲಿದೆ, ಅಲ್ಲಿ ಭಾಗಿಯಾಗುವ ಮಂದಿ ಈ ಯಂತ್ರವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಬಹುದು. ನಂತರ ಇದನ್ನು ಮಾರುಕಟ್ಟೆಗೆ ತರಲು ಕಂಪನಿ ಯೋಚನೆ ಹಾಕಿಕೊಂಡಿದೆ. ಸದ್ಯಕ್ಕಿದು ಗೃಹಬಳಕೆ ಆವೃತ್ತಿ ಆಗಿಲ್ಲ ಬದಲಿಗೆ ಇದನ್ನು ಒಂದು ಉದ್ಯಮವಾಗಿ ಮಾಡಿಕೊಳ್ಳಬಹುದಾಗಿದೆ, ಮುಂದೆ ಇದನ್ನು ಗೃಹಪಯೋಗಿ ಯಂತ್ರಗಳನ್ನು ಕೂಡ ಕಂಪನಿ ಹೊರತರಲಿದೆಯಂತೆ. ಹಾಗೆ ಈಗಾಗಲೇ ಸಂಸ್ಥೆ ಈ ಟಬ್‌ಗಳ ಅಡ್ವಾನ್ಸ್ ಬುಕ್ಕಿಂಗ್ ಕೂಡ ಆರಂಭಿಸಿದೆ.



Click it and Unblock the Notifications
