Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹೆಬ್ಬಾವು ಸುತ್ತಿದರೂ ಕುಡಿದ ಮತ್ತಿನಲ್ಲಿದ್ದವನಿಗೆ ಗೊತ್ತೇ ಆಗ್ತಾ ಇಲ್ಲ, ಕುಡುಕ ಜಸ್ಟ್ ಮಿಸ್
ಕುಡುಕರು ಮಾಡುವ ಅವಾಂತರ ಒಂದೆರಡಲ್ಲ, ಕಿಕ್ಕೇರಿದ ಮೇಲೆ ಏನಾಗುತ್ತದೆ ಎಂಬುವುದೇ ಗೊತ್ತಿರಲಿಲ್ಲ, ಇಲ್ಲೊಬ್ಬನಿಗೆ ಅಷ್ಟೊಂದು ದೊಡ್ಡ ಹೆಬ್ಬಾವು ತನ್ನನ್ನು ಸುತ್ತಿಕೊಂಡಿದ್ದರೂ ಅದರ ಜೊತೆಗೆ ಆಟವಾಡುತ್ತಿದ್ದಾನೆ, ಕುಟುಕನ ಆಟ ನೋಡಿದ ಗ್ರಾಮಸ್ಥರಿಗೆ ಫುಲ್ ಗಾಬರಿ, ಕುಡುಕನ ಹುಚ್ಚಾಟದ ವೀಡಿಯೋ ವೈರಲ್ ಆಗಿದೆ.

ಗ್ರಾಮಸ್ಥರು ಕೂಡಲೇ ಕಾರ್ಯಪ್ರವೃತರಾಗಿದ್ದಕ್ಕೆ ಅನಾಹುತ ತಪ್ಪಿತ್ತು
ಆತ ಅಷ್ಟೊಂದು ದೊಡ್ಡ ಹೆಬ್ಬಾವು ಸುತ್ತಿಕೊಂಡಿದ್ದರೂ ನಗುತ್ತಿದ್ದಾನೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಈ ಹಾವು ನನ್ನನ್ನು ನುಂಗಲು ಸಂಚು ಹಾಕುತ್ತಿದೆ ಎಂದು ಹೊಳೆಯಲಿಲ್ಲ, ಹಾವು ಸುತ್ತುಕೊಂಡಿದೆ, ತಾನೇನೋ ಮಹಾನ್ ಧೈರ್ಯಶಾಲಿ ಎಂಬಂತೆ ಹಾವಿನ ಮೈ ಸವರುತ್ತಿದ್ದಾನೆ. ಈತನ ಹುಚ್ಚಾಟ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಕ್ಕೆ ಆಯ್ತು, ಹಾವು ಅವನನ್ನು ಸುತ್ತಿ ಕೆಳಕ್ಕೆ ಬೀಳಿಸಿ ಅಲುಗಾಡದಂತೆ ಹಿಡಿದಿತ್ತು. ಗ್ರಾಮಸ್ಥರು ಆತನನ್ನು ಬಂಧಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅವರು ಈತನನ್ನು ಒಂದು ಅರ್ಧ ಗಂಟೆ ಗಮನಿಸಲಿಲ್ಲ ಎಂದಾದರೂ ಹಾವು ಹೊಟ್ಟೆಯೊಳಗೆ ಇರ್ತಾ ಇದ್ದ.
ಹಾವಿಗೆ ಹಾಗೂ ಮನುಷ್ಯನಿಗೆ ತೊಂದರೆಯಾಗದಂತೆ ರಕ್ಷಣೆ ಮಾಡಿದ್ದಾರೆ
ಈ ಘಟನೆಯನ್ನು ನೋಡಿದವರು ಹಾವಿಗೆ ಹಾಗೂ ಮನುಷ್ಯನಿಗೆ ತೊಂದರೆಯಾಗದಂತೆ ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಹೆಬ್ಬಾವು ಮನುಷ್ಯನ್ನು ನುಂಗುವ ಮೊದಲು ಲೆಕ್ಕಾಚಾರ ಹಾಕಿ ನಂತರ ನುಂಗುತ್ತದೆ. ಈತನನ್ನು ಕೂಡ ನುಂಗುವ ಆಲೋಚನೆಯಿಂದ ಸುತ್ತಿಕೊಂಡಿದೆ, ಆದರೆ ಈತನಿಗೆ ಅದು ಗೊತ್ತಾಗಿಲ್ಲ, ಆತ ಮಾತ್ರ ಆರಾಮವಾಗಿ ಇರ್ತಾನೆ.
ಈ ವರ್ಷದಲ್ಲಿ ಇಬ್ಬರು ಮಹಿಳೆಯರನ್ನು ಹೆಬ್ಬಾವು ನುಂಗಿತ್ತು, ಈ ಎರಡೂ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಮಗುವಿಗೆ ಹುಷಾರಿಲ್ಲ, ತುಂಬಾ ಜ್ವರ ಎಂದು ಔಷಧಿ ತರಲು ಹೋದ ತಾಯಿ ಮನೆಗೆ ಬರಲಿಲ್ಲ, ಆದರೆ ಆಕೆಯ ಪತಿ ಹಾಗೂ ಮನೆಯವರಿಗೆ ಆ ತಾಯಿ ಎಲ್ಲಿ ಹೋದಳು ಎಂಬ ಯಾವ ಸುಳಿವೂ ಇರಲಿಲ್ಲ, ಊರಿನವರಿಗೆ ವಿಷಯ ಗೊತ್ತಾಗಿ ಅವರು ಕೂಡ ಆ ತಾಯಿಯ ಹುಡುಕಾಟಕ್ಕೆ ನಿಂತರು. ಆವಾಗ ಕಾಡಿನಲ್ಲಿ ಆಕೆಯ ಬ್ಯಾಗ್ , ಚಪ್ಪಲಿ ಬಿದ್ದಿರುತ್ತದೆ, ಆಕೆಗೆ ಏನೋ ಅನಾಹುತವಾಗಿದೆ ಎಂಬುವುದು ಖಾತರಿಯಾಗುತ್ತೆ, ಸ್ವಲ್ಪ ಮುಂದೆ ಹೋಗಿ ನೋಡಿದರೆ ಅಲ್ಲಿತ್ತು ಹೆಬ್ಬಾವು, ಅದರ ಹೊಟ್ಟೆ ದಪ್ಪವಾಗಿತ್ತು, ಅದನ್ನು ನೋಡಿದ ಜನರಿಗೆ ಡೌಟು ಬರುತ್ತೆ, ಅಲ್ಲಿಗೆ ಪೊಲೀಸ್, ಉರಗ ತಜ್ಞರು ಬರ್ತಾರೆ, ಆ ಹಾವಿನ ಹೊಟ್ಟೆ ಸೀಳಿದಾಗ ಅದರೊಳಗೆ ಈ ಮಹಿಳೆಯ ದೇಹವಿತ್ತು. ಹಾವನ್ನು ಆಪರೇಷನ್ ರೀತಿ ಮಾಡಿದ್ದರಿಂದ ಅದರ ಪ್ರಾಣಕ್ಕೇನೂ ತೊಂದರೆಯಾಗಿಲ್ಲ.
ಅದಾಗಿ ಸ್ವಲ್ಪ ದಿನದಲ್ಲಿಯೇ ಮತ್ತೊಂದು ಘಟನೆ ಸಂಭವಿಸಿತ್ತು. ಆಕೆ ರಾತ್ರಿ ಹೊತ್ತಿನಲ್ಲಿ ಕಾಣೆಯಾಗಿದ್ದಳು, ಆಕೆಯ ಹೆಸರಿ ಫರಿದಾ, ಆಕೆಯ ಗಂಡ ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಅಲ್ಲೊಂದು ಹೆಬ್ಬಾವು ಹೊಟ್ಟೆ ತುಂಬಿ ಶಾಂತವಾಗಿ ಮಲಗಿತ್ತು. ಆವಾಗ ಗ್ರಾಮಸ್ಥರಿಗೆ ಸ್ವಲ್ಪ ದಿನದ ಹಿಂದೆ ನಡೆದ ಘಟನೆ ನೆನಪಿಗೆ ಬರುತ್ತದೆ, ಉರಗ ತಜ್ಞರು ಬಂದು ಆಪರೇಷನ್ ಮಾಡಿದಾಗ ಆಕೆಯ ದೇಹವೂ ಆತನ ಹೊಟ್ಟೆಯೊಳಗೆ ಇತ್ತು.
ಹೀಗಿರುವಾಗ ಈ ಕುಡುಕ ಹೆಬ್ಬಾವು ತನ್ನ ಸುತ್ತಿದರೂ ಆರಾಮವಾಗಿ ನಗುತ್ತಿದ್ದ. ಹಾಗೆ ನಗುತ್ತಲೇ ಹೆಬ್ಬಾವು ಹೊಟ್ಟೆ ಸೇರಿ ಬಿಡುತ್ತಿದ್ದ, ಜಸ್ಟ್ ಮಿಸ್



Click it and Unblock the Notifications
