Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಿಷದಲ್ಲಿ ಹಣ ನೀಡುವ ಎಟಿಎಂ ಹುಟ್ಟಿದ್ದು ಹೇಗೆ? ಇದರ ಹಿಂದಿದೆ ರೋಚಕ ಕಥೆ.!
ಪ್ರಪಂಚವಿಂದು ಎಷ್ಟೇ ಡಿಜಿಟಲ್ ಆಗಿದ್ದರೂ ಡಿಜಿಟಲ್ ವ್ಯವಹಾರಗಳು ನಡೆಯುತ್ತಿದ್ದರೂ ಎಟಿಎಂಗಳು ಇಂದಿಗೂ ಚಾಲ್ತಿಯಲ್ಲಿವೆ. ಈಗ ಬರಿ ಹಣ ನೀಡುವ ಎಟಿಎಂಗಳು ಅಷ್ಟೇ ಅಲ್ಲ ಬದಲಿಗೆ ಫುಡ್, ನೀರು ಸೇರಿದಂತೆ ಹಲವು ವಸ್ತುಗಳಿಗೂ ಈಗ ಎಟಿಎಂ ಬಂದುಬಿಟ್ಟಿದೆ.
ಆದರೆ ಪ್ರಮುಖವಾಗಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಎಟಿಎಂಗಳು ಇಂದಿಗೂ ನಿರ್ಣಾಯಕ ಭಾಗವಾಗಿವೆ. ದೇಶದಲ್ಲಿ ಅಲ್ಲದೆ ವಿಶ್ವದಾದ್ಯಂತ ಕೋಟಿ ಕೋಟಿ ಎಟಿಎಂಗಳು ಇಂದು ಕಾರ್ಯನಿರ್ವಹಿಸುತ್ತಿವೆ. ಹಣದ ಅಗತ್ಯವಿದ್ದಾಗ ಎಟಿಎಂ ಮೂಲಕ ಹಣ ಹಿಂಪಡೆಯುತ್ತೇವೆ. ಇದು ಸುಲಭದ ಮಾರ್ಗವೂ ಹೌದು.

ಹಿಂದೆಲ್ಲಾ ಎಟಿಎ ಇಲ್ಲದ ಕಾಲದಲ್ಲಿ ನೇರವಾಗಿ ಬ್ಯಾಂಕ್‌ಗೆ ತೆರಳಿಯೇ ಹಣ ಹಿಂಪಡೆಯಬೇಕಿತ್ತು, ಆದ್ರೆ ಕಾಲ ಬದಲಾಗುತ್ತಾ ಎಟಿಎಂಗಳು ಗ್ರಾಹಕರಿಗೆ ಈ ಸೇವೆಯನ್ನು ಸುಲಭವಾಗಿಸಿತ್ತು, ಸಮಯ ಉಳಿತಾಯಕ್ಕೆ ಕಾರಣವಾಗಿತ್ತು. ಹಾಗಾದ್ರೆ ಈ ಎಟಿಎಂ ಮೊಟ್ಟ ಮೊದಲ ಬಾರಿಗೆ ಕಂಡು ಹಿಡಿದಿದ್ದು ಯಾರು? ಅದನ್ನು ಜಾರಿ ಮಾಡಿದ್ದರ ಹಿಂದಿದೆ ಒಂದು ರೋಚಕ ಕಥೆ.
ಸುಮಾರು 60 ವರ್ಷಗಳ ಹಿಂದೆ ಜನರು ATM ಎಂಬ ಕಲ್ಪನೆಗೆ ಮೊದಲು ತೆರೆದುಕೊಂಡರು. ಆದರೆ ಈ ಪರಿಕಲ್ಪನೆ ಹುಟ್ಟುಹಾಕಿದ್ದು ಭಾರತ ಮೂಲದ ಯುವ ವಿಜ್ಞಾನಿ. ಹೌದು ನಿಮಗೆ ಅಚ್ಚರಿಯಾಗಬಹುದು, ಎಟಿಎಂ ಕಲ್ಪನೆ ಹುಟ್ಟಿದ್ದು ಭಾರತದ ಮೂಲದ ವ್ಯಕ್ತಿಯ ತಲೆಯಲ್ಲಿ ಆತನ ಹೆಸರು ಜಾನ್ ಶೆಫರ್ಡ್.
ಜಾನ್ ಶೆಫರ್ಡ್ ಭಾರತದ ಶಿಲ್ಲಾಂಗ್‌ನವರು, ಜೂನ್ 23 1925ರಲ್ಲಿ ಜನಿಸಿದರು. ಅದರೆ ಅವರು ವಿದ್ಯಾಭ್ಯಾಸ ವಾಸ ಎಲ್ಲವೂ ಅಮೆರಿಕದಲ್ಲೇ ಆಗಿತ್ತು. 1965 ರಲ್ಲಿ, ಜಾನ್ ಎಟಿಎಂ ಕಲ್ಪನೆಗೆ ಕಾರಣವಾದ ಕ್ಷಣವನ್ನು ಹೊಂದಿದ್ದರು.
ಜಾನ್ ಹಣ ಪಡೆಯಲು ಬ್ಯಾಂಕ್‌ಗೆ ಹೋದಾಗ ಬ್ಯಾಂಕ್ ಅವರು ನೀವು ಒಂದು ನಿಮಿಷ ತಡವಾಗಿ ಬಂದಿದ್ದೀರಿ, ಶಾಖೆ ಮುಚ್ಚುವ ಸಮಯ ಇದು ಹಣ ನೀಡಲು ಆಗುವುದಿಲ್ಲ ಎಂದು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಜಾನ್ ಬ್ಯಾಂಕ್ ಸಿಬ್ಬಂದಿ ವಿರುದ್ಧ ಗಲಾಟೆ ಮಾಡಿದ್ದರು.
ಆದರೆ ಹಣ ಸಿಗದೆ ಮನೆಗೆ ಬಂದಿದ್ದರು. ಅವರಿಗೆ ಹಣದ ಅವಶ್ಯಕತೆ ತುಂಬಾನೆ ಇತ್ತಂತೆ. ಆದರೆ ಹೇಗೆ ತೆಗೆದುಕೊಳ್ಳಬೇಕು ಎಂಬುದು ತಿಳಿದಿರುವುದಿಲ್ಲ. ಈ ವೇಳರ ಅಮೆರಿಕದಲ್ಲಿ ಕಾಯಿನ್‌ಗಳ ಹಾಕಿದರೆ ಚಾಕೊಲೆಟ್‌ಗಳು ಬರುತ್ತಿದ್ದ ಯಂತ್ರಗಳು ಚಾಲ್ತಿಯಲ್ಲಿದ್ದವು. ಹಾಗಾದರೆ ಚಾಕೊಲೆಟ್‌ಗಳು ಬರುವ ಜಾಗದಲ್ಲಿ ಹಣ ಏಕೆ ಬರಬಾರದು ಎಂದು ಅವರ ಆಲೋಚನೆಯಾಗಿತ್ತು.
ಇದಾದ ಬಳಿಕ ನಿಧಾನವಾಗಿ ಒಂದು ಯಂತ್ರವನ್ನು ಕಾರ್ಯರೂಪಕ್ಕೆ ತರಲು ಮುಂದಾಗಿ ಬ್ಯಾಂಕ್ ಮ್ಯಾನೇಜರ್ ಬಳಿಯೂ ಚರ್ಚಿಸಿದರು. ಸುಮಾರು ಎರಡು ವರ್ಷಗಳ ಬಳಿಕ 1967ರಲ್ಲಿ ವಿಶ್ವದ ಮೊದಲ ಎಟಿಎಂ ಅನ್ನು ಅವರು ಕಂಡು ಹಿಡಿದರು. ಲಂಡನ್‌ನ ಎನ್‌ಫೀಲ್ಡ್‌ನಲ್ಲಿರುವ ಎಟಿಎಂ ವಿಶ್ವದ ಮೊಟ್ಟ ಮೊದಲ ಎಟಿಎಂ ಎಂಬ ಖ್ಯಾತಿ ಗಳಿಸಿತು.
ಜನರು ಮೊದಲು ಈ ಎಟಿಎಂ ಕಂಡು ದಂಗಾದರು. ಹಣ ಪಡೆಯುವುದು ಇಷ್ಟೊಂದು ಸುಲಭವಾಗಿದ್ದ ಕಂಡು ಅವರು ಚಕಿತರಾಗಿದ್ದರು.
ಯಾರು ಈ ಶೆಫರ್ಡ್-ಬ್ಯಾರನ್
ಮೇಘಾಲಯದಲ್ಲಿ ಸ್ಕಾಟಿಷ್ ಪೋಷಕರಿಗೆ ಜನಿಸಿದ ಶೆಫರ್ಡ್-ಬ್ಯಾರನ್ 1965 ರಲ್ಲಿ ಸ್ವಯಂ ಸೇವಾ ನಗದು ಯಂತ್ರದ ಕಲ್ಪನೆಯೊಂದಿಗೆ ಹೆಸರಾದರು. ಚಾಕೊಲೆಟ್ ವಿತರಿಸುತ್ತಿದ್ದ ಯಂತ್ರವನ್ನು ಕಂಡು ಅದರಿಂದ ಪ್ರೇರೇಪಿತರಾದರು. ಈ ಯಂತ್ರದಿಂದ ಮೊಟ್ಟ ಮೊದಲ ಬಾರಿಗೆ ನಟ ರೆಗ್ ವಾರ್ನಿ ಹಣ ಪಡೆದಿದ್ದರು. ಅಂದಿನಿಂದ ಇಂದಿನವರೆಗೂ ಎಟಿಎಂ ತನ್ನ ಕಾರ್ಯಕ್ಷಮತೆ ಬದಲಾಯಿಸಿದೆ. ಈ ಎಟಿಎಂನಿಂದ ಹಣ ಪಡೆಯಲು ಕೆಲ ಕಾಲ ಕಾಯಬೇಕಿತ್ತು. ಕಾಲ ಬದಲಾಗುತ್ತಾ ಬಂದು ಈಗ ನಿಮಿಷದಲ್ಲಿ ಹಣ ಡ್ರಾ ಮಾಡಬಹುದು.



Click it and Unblock the Notifications