Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಕೈ ಬೆರಳುಗಳೇ ಹೇಳುತ್ತವೆ ನಿಮ್ಮ ಪರ್ಸನಾಲಿಟಿ: ಪುರುಷರಿಗೆ ಮಾತ್ರ
ಕೆಲವರು ನಿಮ್ಮನ್ನು ನೋಡಿದ ತಕ್ಷಣ ನಿಮ್ಮ ಪರ್ಸನಾಲಿಟಿ ಅಳೆಯುತ್ತಾರೆ. ನಿಮ್ಮ ಡ್ರೆಸ್ಸಿಂಗ್ ಸ್ಟೈಲ್, ನೀವು ಮಾತನಾಡುವ ರೀತಿ, ನಿಮ್ಮ ಹಾವಭಾವ ಇವುಗಳನ್ನು ನೋಡಿ ನಿಮ್ಮ ಗುಣ ಇಂಥದ್ದೇ, ನೀವು ಇಂಥವರೇ ಎಂದು ಅಳೆದು ಬಿಡುತ್ತಾರೆ.
ಈ ರೀತಿಯ ಲೆಕ್ಕಾಚಾರಗಳು ಕೆಲವೊಮ್ಮೆ ತಪ್ಪುವುದೂ ಉಂಟು. ಎಷ್ಟೋ ಜನ ನಮ್ಮನ್ನು ಮೊದಲು ನೋಡಿ ತಪ್ಪಾಗಿ ಅರ್ಥಮಾಡಿಕೊಂಡು, ನಂತರ ನಮ್ಮ ಜೊತೆ ಪಳಗಿದ ಮೇಲೆ ಅವರ ಅಭಿಪ್ರಾಯದಲ್ಲಿ ವ್ಯತ್ಯಾಸ ಉಂಟಾಗುವುದೂ ಉಂಟು ಅಲ್ವಾ?

ಇನ್ನು ಕೆಲವರು ಕೈ ನೋಡಿ ಶಾಸ್ತ್ರ ಹೇಳುತ್ತಾರೆ. ಆ ಶಾಸ್ತ್ರಗಳು ಎಷ್ಟರ ಮಟ್ಟಿಗೆ ಸರಿಯೆಂದು ಹೇಳಲು ಸಾಧ್ಯವಿಲ್ಲ. ಇವುಗಳನ್ನು ಕೆಲವರು ನಂಬಿದರೆ, ಮತ್ತೆ ಕೆಲವರು ನಂಬುವುದಿಲ್ಲ, ಇನ್ನು ಕೆಲವರಿಗೆ ಇಂಥ ಶಾಸ್ತ್ರ ಕೇಳುವುದು ತಮಾಷೆಯ ವಿಷಯ. ಏನೇ ಆಗಲಿ ಇಂಥ ಶಾಸ್ತ್ರಗಳು ತುಂಬಾ ಇಂಟೆರೆಸ್ಟಿಂಗ್ ಆಗಿರುತ್ತದೆ. ಅಲ್ಲದೆ ಅವುಗಳನ್ನು ಕೇಳಿದಾಗ ಹೌದಲ್ವಾ? ಎಂದು ಅನಿಸುವುದು ಉಂಟು.
ಇಲ್ಲಿ ನಾವು ನಿಮ್ಮ ಕೈ ಬೆರಳುಗಳು ನಿಮ್ಮ ಪರ್ಸನಾಲಿಟಿ ಬಗ್ಗೆ ಏನು ಹೇಳುತ್ತದೆ ಎಂದು ಹೇಳಿದ್ದೇವೆ, ಈ ಇಂಟೆರೆಸ್ಟಿಂಗ್ ಸಂಗತಿ ತಿಳಿಯಲು ನೀವು ರೆಡಿ ತಾನೆ? ಹಾಗಾದರೆ ಬನ್ನಿ ನೋಡೋಣ:

ಕೈ ಬೆರಳುಗಳಲ್ಲಿದೆ ನಿಮ್ಮ ಪರ್ಸನಾಲಿಟಿ ಗುಟ್ಟು
ನಿಮ್ಮ ಪರ್ಸನಾಲಿಟಿ ಸೀಕ್ರೆಟ್ ಅಡಗಿರುವುದು ನಿಮ್ಮ ಉಂಗುರು ಬೆರಳು ಹಾಗೂ ತೋರು ಬೆರಳುಗಳಲ್ಲಿ. ಈ ಪರೀಕ್ಷೆ ಪುರುಷರಿಗೆ ಮಾತ್ರ ಅನ್ವಯಿಸುತ್ತದೆ. ಕೈ ಬೆರಳುಗಳ ಉದ್ದಗಳು ಟೆಸ್ಟೋಸ್ಟಿರೋನ್ ಪ್ರಮಾಣವನ್ನು ಸೂಚಿಸುತ್ತದೆ. ಬೆರಳುಗಳ ಉದ್ದದ ಆಧಾರದ ಮೇಲೆ ಎ, ಬಿ, ಸಿ ಎಂದು 3 ವರ್ಗ ಮಾಡಬಹುದು:

ಎ. ತೋರು ಬೆರಳುಗಿಂತ ಉಂಗುರ ಬೆರಳು ಉದ್ದವಾಗಿರುವುದು
ಇವರು ನೋಡಲು ತುಂಬಾ ಸುಂದರವಾಗಿರುತ್ತದೆ. ಇವರು ಇತರರ ನಡುವೆ ಗುರುತಿಸುವಂಥ ಪರ್ಸನಾಲಿಟಿ ಹೊಂದಿರುತ್ತಾರೆ. ಅಲ್ಲದೆ ಇವರು ಸ್ವಲ್ಪ ಕೋಪಿಷ್ಠರು ಹಾಗೂ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಅಲ್ಲದೆ ಈ ವ್ಯಕ್ತಿಗಳು ತಮ್ಮ ಉಂಗುರ ಬೆರಲು ಗಿಡ್ಡವಾಗಿರುವ ಸಹೋದ್ಯೋಗಿಗಳಿಗಿಂತ ಹೆಚ್ಚಿನ ಹಣ ಗಳಿಸುತ್ತಾರೆ.

ಬಿ. ತೋರು ಬೆರಳುಗಳಿಗಿಂತ ಉಂಗುರ ಬೆರಳು ಗಿಡ್ಡವಾಗಿದ್ದರೆ
ಈ ರೀತಿಯ ಬೆರಳನ್ನು ಹೊಂದಿರುವ ಪುರುಷ ಹೆಚ್ಚಿನ ಆತ್ಮ ವಿಶ್ವಾಸ ಹೊಂದಿರುತ್ತಾನೆ. ಅವರು ಒಂಟಿಯಾಗಿರಲು ಬೇಸರ ಪಡುವುದಿಲ್ಲ. ಹಾಗೆಯೇ ಇತರರು ಕಿರಿಕಿರಿ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಪ್ರೀತಿ ವಿಷಯದಲ್ಲಿ ಹೇಳುವುದಾದರೆ ಇವರು ಇತರ ಪುರುಷರಿಗಿಂತ ಸ್ವಲ್ಪ ಆತ್ಮ ವಿಶ್ವಾಸ ಕಡಿಮೆ ಹೊಂದಿರುತ್ತಾರೆ. ಅವರು ತಮ್ಮ ಪ್ರೀತಿ ತಾವಾಗಿಯೇ ಹೋಗಿ ಪ್ರಪೋಸ್ ಮಾಡಲು ತುಂಬಾ ಹಿಂಜರಿಯುತ್ತಾರೆ. ಅಲ್ಲದೆ ಇವರು ಇತರರಿಗೆ ಸ್ವಲ್ಪ ಭಿನ್ನಸ್ವಭಾದವರು ಎಂದು ತೋರುವುದು.

ಸಿ. ತೋರು ಬೆರಳು ಹಾಗೂ ಉಂಗುರ ಬೆರಳಿನ ಉದ್ದ ಒಂದೇ ರೀತಿಯಿರುವುದು
ಈ ಲಕ್ಷಣಗಳೇ ಇವರ ಬಗ್ಗೆ ಸಾಕಷ್ಟು ನಿಮಗೆ ತಿಳಿಸಿಕೊಡುತ್ತದೆ. ಈ ರೀತಿಯ ಕೈ ಬೆರಳುಗಳನ್ನು ಹೊಂದಿರುವವರು ದೇವರಲ್ಲಿ ಹೆಚ್ಚಿನ ನಂಬಿಕೆ ಹೊಂದಿರುತ್ತಾರೆ. ಅವರಿಗೆ ಧ್ಯಾನದಲ್ಲಿ ಆಸಕ್ತಿ ಇರುತ್ತದೆ, ತುಂಬಾ ನಿಯತ್ತಿನ ವ್ಯಕ್ತಿ ಹಾಗೂ ಎಲ್ಲರಿಗೂ ಪ್ರೀತಿಯ ವ್ಯಕ್ತಿಯಾಗಿರುತ್ತಾರೆ. ಇವರ ಗುಣಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಅವರು ಜೀವನದಲ್ಲಿ ಏನೇ ಬಂದರೂ ಸರಿದೂಗಿಸಿಕೊಂಡು ಹೋಗುವ ಚಾಕಚಕ್ಯತೆ ಹೊಂದಿರುತ್ತಾರೆ. ತುಂಬಾ ಶಾಂತ ಸ್ವಭಾವದವರು, ಎಲ್ಲವೂ ಸರಿಯಾಗಿರಬೇಕು ಎಂದು ಬಯಸುತ್ತಾರೆ. ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.
ಇವುಗಳಲ್ಲಿ ನೀವು ಯಾವ ವರ್ಗಕ್ಕೆ ಸೇರಿದವರು?



Click it and Unblock the Notifications