Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಜೀವನ ಶೈಲಿ ನಿಮ್ಮ ಬದುಕನ್ನು ಹೇಗೆ ಬದಲಾಯಿಸಬಹುದು?
ಸುಂದರವಾದ ಹುಡುಗನೊಬ್ಬ ಸಡಿಲವಾದ ಅಂಗಿ- ದೊಗಳೆ ಪ್ಯಾಂಟಿನಲ್ಲಿದ್ದರೆ ಗುರುತಿಸುವುದು ಕಷ್ಟ. ಆದರೆ ಮೌನವಾಗಿದ್ದು ಫ್ಲರ್ಟ್ ಮಾಡುವ ಹುಡುಗನೊಬ್ಬ ಸರಿಹೊಂದುವ ಜೀನ್ಸ್ ಮತ್ತು ಸುಂದರವಾದ ಟೀ ಶರ್ಟ್ ತೊಟ್ಟಿದ್ದರೆ ಎಲ್ಲರ ಗಮನ ಸೆಳೆಯುತ್ತಾನೆ.
ಇದು ಯಾವುದೋ ಹೈಸ್ಕೂಲ್ ಅಥವಾ ಕಾಲೇಜು ಆವರಣದ ನೋಟವಲ್ಲ. ಇದು ದಿನನಿತ್ಯ ನಮ್ಮ ಸುತ್ತಮುತ್ತಲಿನಲ್ಲಿಯೇ ಕಾಣುವ ದ್ರಶ್ಯ. ನಿಮ್ಮನ್ನು ನೀವು ಒಪ್ಪವಾಗಿ ತೋರಿಸಿಕೊಂಡರೆ, ಸೊಂಪಾಗಿರುತ್ತೀರಿ. ಇಲ್ಲದಿದ್ದರೆ ವಿರುದ್ದವಾದದ್ದೇ ನಡೆಯುವುದು.

1. ದೇಹಕ್ಕೆ ಸರಿ ಹೊಂದುವ ಬಟ್ಟೆಗಳು
ನಿಮ್ಮ ಶರೀರದ ಅಳತೆಗೆ ಸರಿ ಹೊಂದುವ ಬಟ್ಟೆಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ. ಕೆಲವರು ದುಬಾರಿಯಾದ ಬಟ್ಟೆಗಳು ಮಾತ್ರ ಸುಂದರವಾಗಿ ಕಾಣುತ್ತವೆ ಅಂದುಕೊಳ್ಳುತ್ತಾರೆ. ಆದರೆ ನೇರವಾಗಿ ಹೇಳುವುದಾದರೆ, ಇದು ಹಣದ ವಿಚಾರವೇ ಅಲ್ಲ, ಅಳತೆಗೆ ತಕ್ಕದಾದ ಬಟ್ಟೆ ಮಾತ್ರ ನಿಮ್ಮ ವ್ಯಕ್ತಿತ್ವಕ್ಕೆ ಸುಂದರತೆಯನ್ನು ತರುತ್ತದೆ. ನಿಮ್ಮ ಶರೀರಕ್ಕೆ ಹೊಂದುವ ಬಟ್ಟೆಗಳನ್ನು ಕೊಳ್ಳಿರಿ. ಸುಂದರವಾಗಿ ಕಾಣುವಂತೆ ಬಟ್ಟೆ ಧರಿಸಿದರೆ ಜನ ನಿಮ್ಮನ್ನು ಆದರಿಸುವುದರ ಮೇಲೆ ಅದು ಒಳ್ಳೆಯ ಪರಿಣಾಮ ಬೀರುತ್ತದೆ.
2. ಮದುವೆ ವರನಂತೆ ಸಿದ್ದಗೊಳ್ಳಿ
ನಿಮ್ಮ ಶರೀರದ ಅಳತೆಗೆ ಸರಿ ಹೊಂದುವ ಬಟ್ಟೆಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ. ಕೆಲವರು ದುಬಾರಿಯಾದ ಬಟ್ಟೆಗಳು ಮಾತ್ರ ಸುಂದರವಾಗಿ ಕಾಣುತ್ತವೆ ಅಂದುಕೊಳ್ಳುತ್ತಾರೆ. ಆದರೆ ನೇರವಾಗಿ ಹೇಳುವುದಾದರೆ, ಇದು ಹಣದ ವಿಚಾರವೇ ಅಲ್ಲ, ಅಳತೆಗೆ ತಕ್ಕದಾದ ಬಟ್ಟೆ ಮಾತ್ರ ನಿಮ್ಮ ವ್ಯಕ್ತಿತ್ವಕ್ಕೆ ಸುಂದರತೆಯನ್ನು ತರುತ್ತದೆ. ನಿಮ್ಮ ಶರೀರಕ್ಕೆ ಹೊಂದುವ ಬಟ್ಟೆಗಳನ್ನು ಕೊಳ್ಳಿರಿ. ಸುಂದರವಾಗಿ ಕಾಣುವಂತೆ ಬಟ್ಟೆ ಧರಿಸಿದರೆ ಜನ ನಿಮ್ಮನ್ನು ಆದರಿಸುವುದರ ಮೇಲೆ ಅದು ಒಳ್ಳೆಯ ಪರಿಣಾಮ ಬೀರುತ್ತದೆ.
3. ಸರಿಯಾದ ಶರೀರ
ನಿಮ್ಮ ಸ್ಟೈಲ್ ಫ್ಯಾಷನ್ ಅನ್ನೂ ಮೀರಿಸಬಲ್ಲದು. ಫಿಟ್ ನೆಸ್ ವಲಯದೊಳಗೆ ನಿರಾಳವಾಗಿ ಸೇರಿಕೊಳ್ಳಿ. ಸರಿಯಾದ ಅಳತೆಯುಳ್ಳ ಶರೀರವನ್ನು ವರನಂತೆ ಸಿಂಗರಿಸಿಕೊಳ್ಳುವುದರ ಜೊತೆಗೆ ವೈಭವವಾಗಿ ಕಾಣುವ ವಾರ್ಡ್ ರೋಬ್ ನಿಮ್ಮ ಬದುಕಿಗೊಂದು ಒಳ್ಳೆಯ ಬದಲಾವಣೆ ತರಬಹುದು. ಪ್ರತಿ ದಿನ 30 ನಿಮಿಷದ ವ್ಯಾಯಾಮ ನಿಮ್ಮ ಶರೀರವನ್ನು ಸರಿಯಾದ ಅಳತೆಗೆ ಬೆಳೆಸುತ್ತದೆ ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತದೆ. ಪ್ರಾಥಮಿಕ ವ್ಯಾಯಾಮಗಳಿಗೆ ಅಂಟಿಕೊಳ್ಳಿ ಮತ್ತು ಏಕತಾನತೆಯ ದೈಹಿಕ ಕಸರತ್ತುಗಳನ್ನು ಬದಲಾಯಿಸುತ್ತಿರಿ. ನಿಮಗಿದು ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡುವಂತೆ ಮಾಡುತ್ತದೆ ಮತ್ತು ಅಂತರಂಗದ ಈ ಸಂತೋಷ ಉಳಿದವರೊಂದಿಗೆ ಕಲೆಯುವಾಗ ಹೊರಹೊಮ್ಮುತ್ತದೆ.
4. ಪರಿಕರಗಳು
ಉತ್ತಮವಾದ ಕೈಗಡಿಯಾರ, ಸುಂದರವಾದ ಸನ್ ಗ್ಲಾಸಗಳು ಮತ್ತು ಚಂದನೆಯ ಅಂಗಿಯ ಮಣಿಕಟ್ಟುಗಳು- ಇವು ಸರಳವಾದ ವಸ್ತುಗಳೇ ಆದರೂ ಕೂಡ ನಿಮ್ಮ ಸೌಂದರ್ಯಕ್ಕೆ ಪುಷ್ಟಿ ಕೊಡುತ್ತವೆ. ದೇಹಕ್ಕೊಪ್ಪುವ ಸೂಟ್ ತೊಟ್ಟು ಬಲಗೈ ಮಣಿಕಟ್ಟಿನ ತುದಿಗೆ ಸುಂದರ ಕಫ್ ಲಿಂಕ್ಸ್ ಹಾಕಿಕೊಂಡು ಕಣ್ಣು ಕುಕ್ಕುವಂತೆ ಧಿರಿಸಿನೊಂದಿಗೆ ಹೊರ ನಡೆದರೆ ಎಲ್ಲರೂ ನಿಮ್ಮತ್ತ ತಿರುಗಿ ನೋಡುತ್ತಾರೆ. ಈ ರೀತಿಯ ಉಡುಗೆ ತೊಡುಗೆ ನಿಮ್ಮನ್ನು ಉತ್ತಮ ರುಚಿಯುಳ್ಳವ ಮತ್ತು ಎಲ್ಲರೂ ಗಮನಿಸುವ ನಾಗರೀಕನಾಗಿ ಹೊರಹೊಮ್ಮಿಸುತ್ತವೆ.
ನಾವು ಮೇಲೆ ಹೇಳಿರುವ ಬದಲಾವಣೆಗಳು ತೀರಾ ಸಣ್ಣ ಮತ್ತು ಸಾಮಾನ್ಯವಾದವು. ಆದರೆ ಇವುಗಳ ಪರಿಣಾಮ ಮಾತ್ರ ದೊಡ್ಡ ಮಟ್ಟದ್ದು. ಇಂಥ ಬದಲಾವಣೆಗಳನ್ನು ಜನ ಗಮನಿಸುತ್ತಾರೆ ಮತ್ತು ಜನರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಉತ್ತಮವಾದ ಚಿತ್ರವೇ ಮೂಡುವುದಕ್ಕೆ ದೊಡ್ಡ ಕಾರಣವಾಗುತ್ತದೆ. ಹೀಗಾಗಿ, ನಿಮ್ಮ ರೀತಿ ನೀತಿ ಹಾಗೂ ಶೈಲಿಯನ್ನು ಬಲಾಯಿಸಿಕೊಳ್ಳಿ ಮತ್ತು ಜೀವನವು ಉತ್ತಮ ರೀತಿಯಲ್ಲಿ ಬದಲಾಗುವುನ್ನು ಕಂಡುಕೊಳ್ಳಿ.



Click it and Unblock the Notifications