Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
265 ಜನ ಸಾವು.. ಉಳಿದಿದ್ದು ಒಬ್ಬ! ಅಪಘಾತ ಸಂದರ್ಭದಲ್ಲಿ ನಿಮ್ಮನ್ನು ಸೇವ್ ಮಾಡಿಕೊಳ್ಳುವುದು ಹೇಗೆ?
ಅಹಮದಾಬಾದ್‌ನಲ್ಲಿ ನಡೆದಿರುವ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ವಾಯು ದುರಂತ ಇದಾಗಿದೆ. ಹೌದು, ಅಹಮದಾಬಾದ್‌ನಿಂದ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು (Air India Flight Crash) ಅಪಘಾತಕ್ಕೀಡಾಯಿತು. ನೋಡ ನೋಡುತ್ತಿದ್ದಂತೆ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅವಘಡ ಸಂಭವಿಸಿದ್ದು, ಒಟ್ಟು 265 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನಾವು, ಈ ಲೇಖನದಲ್ಲಿ ವಿಮಾನ ಅಪಘಾತದ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸಬಹುದಾದ ಕೆಲವು ಸಲಹೆಗಳು ಮತ್ತು ಪರಿಹಾರಗಳನ್ನು (How to Survive Plane Crash) ತಿಳಿಸಿದ್ದೇವೆ.
ಅಹಮದಾಬಾದ್‌ನಿಂದ ಲಂಡನ್‌ಗೆ ಹೊಟಿದ್ದ ವಿಮಾನದಲ್ಲಿ ಒಟ್ಟು 232 ಪ್ರಯಾಣಿಕರಿದ್ದರು. ಈ ಅಪಘಾತದ ನಂತರ, ಜನರು ವಿಮಾನ ಅಪಘಾತದಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂದು ಯೋಚಿಸಲು ಪ್ರಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಯಾಣಿಕರು ಭಯಭೀತರಾಗಿ ಕಿರುಚಲು ಪ್ರಾರಂಭಿಸುತ್ತಾರೆ. ಬಹುತೇಕ ಜನರು ತಮ್ಮ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ. ಈ ಸಮಯದಲ್ಲಿ, ಅವರು ವಿಮಾನದಲ್ಲಿರುವ ವಿಮಾನದ ಸೂಚನೆಗಳನ್ನು ಅನುಸರಿಸಲು ಸಹ ಮರೆತುಬಿಡುತ್ತಾರೆ. ಆದರೆ, ಇಂತಹ ಪ್ರತಿಕೂಲ ಸಂದರ್ಭಗಳಲ್ಲಿ, ಪ್ರಯಾಣಿಕರು ಮೊದಲೇ ಜಾಗರೂಕರಾಗಿದ್ದರೆ ಮತ್ತು ಕೆಲವು ಪ್ರಮುಖ ವಿಷಯಗಳನ್ನು ಅನುಸರಿಸಿದರೆ, ಅವರ ಜೀವವನ್ನು ಉಳಿಸಬಹುದು. ನಿಮ್ಮ ಜೀವ ಉಳಿಸಬಹುದಾದ ಪ್ರಮುಖ ಸಲಹೆಗಳು (Air Disasters Tips) ಇಲ್ಲಿವೆ.

ಸೀಟಿನ ಮುಂದೆ ಇಡಲಾದ ಸುರಕ್ಷತಾ ಕಾರ್ಡ್ ಓದಿ
ವಿಮಾನ ಪ್ರಯಾಣದ ಆರಂಭದಿಂದಲೇ ಜಾಗರೂಕತೆ ಅಗತ್ಯ. ನೀವು ವಿಮಾನ ಹತ್ತಿದ ತಕ್ಷಣ ಮೊದಲನೆಯದಾಗಿ, ನಿಮ್ಮ ಸುತ್ತಲಿನ ತುರ್ತು ನಿರ್ಗಮನಗಳು ಮತ್ತು ಸಲಕರಣೆಗಳ ಬಗ್ಗೆ ತಿಳಿದುಕೊಳ್ಳಬೇಕು. ಏರ್ ಹೋಸ್ಟೆಸ್ ನೀಡುವ ಸುರಕ್ಷತಾ ಮಾಹಿತಿಯನ್ನು ಎಚ್ಚರಿಕೆಯಿಂದ ಆಲಿಸಿಸಬೇಕು. ನಿಮ್ಮ ಸೀಟಿನ ಮುಂದೆ ಇರಿಸಲಾದ ಸುರಕ್ಷತಾ ಕಾರ್ಡ್ ಅನ್ನು ಓದಬೇಕು. ಸಾಮಾನ್ಯವಾಗಿ ಜನರು ಸೀಟಿನ ಬಳಿ ಇಡಲಾದ ಸುರಕ್ಷತಾ ಕಾರ್ಡ್ ಓದುವುದೇ ಇಲ್ಲ.
ಸೀಟ್ ಬೆಲ್ಟ್‌ಗಳು ನಿಮ್ಮ ಮೊದಲ ಸುರಕ್ಷತಾ ಅಸ್ತ್ರ
ಯಾವಾಗಲೂ ನಿಮ್ಮ ಸೀಟ್ ಬೆಲ್ಟ್ ಅನ್ನು ಬಿಗಿಯಾಗಿ ಧರಿಸಬೇಕು. ವಿಮಾನ ಹಾರಾಟದ ಸಮಯದಲ್ಲಿ ಅಥವಾ ಪ್ರಕ್ಷುಬ್ಧತೆಯ ಸಮಯದಲ್ಲಿ ಸೀಟ್ ಬೆಲ್ಟ್‌ಗಳು ಸಡಿಲವಾಗಿರಬಾರದು. ಹಲವು ಬಾರಿ ಪ್ರಯಾಣಿಕರು ವಿಮಾನ ಅಪಘಾತಗಳಲ್ಲಿ ತಮ್ಮ ಆಸನಗಳಿಂದ ಹೊರಗೆ ಬಿದ್ದಿರುತ್ತಾರೆ. ಹೀಗಾಗಿ, ಸೀಟ್ ಬೆಲ್ಟ್‌ಗಳು ನಿಮ್ಮ ಮೊದಲ ಸುರಕ್ಷತಾ ಆಯುಧಗಳಾಗಿರುತ್ತವೆ.
ಹಿಂದಿನ ಸೀಟಿನಲ್ಲಿ ಕುಳಿತರೆ ಶೇ.40 ಕ್ಕಿಂತ ಹೆಚ್ಚು ಸೇಫ್
ವಿಮಾನ ಟಿಕೆಟ್ ಬುಕ್ ಮಾಡುವಾಗ, ಹಿಂದಿನ ಸೀಟನ್ನು ಪಡೆಯಲು ಪ್ರಯತ್ನಿಸಿ. ಏಕೆಂದರೆ, ಅಪಘಾತದ ಸಂದರ್ಭದಲ್ಲಿ ಮೊದಲ ಕೆಲವು ಸಾಲುಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಹೋಲಿಸಿದರೆ, ಬದುಕುಳಿಯುವ ಪ್ರಮಾಣವು ಶೇ.40 ಕ್ಕಿಂತ ಹೆಚ್ಚು. ಸಾಧ್ಯವಾದರೆ, ನಿರ್ಗಮನ ದ್ವಾರದ ಹತ್ತಿರ ನಿಮ್ಮ ಸೀಟ್ ತೆಗೆದುಕೊಳ್ಳಿ.
ನಿರ್ಗಮನ ದ್ವಾರ ಎಷ್ಟು ದೂರದಲ್ಲಿದೆ ತಿಳಿಯಿರಿ
ನೀವು ವಿಮಾನವನ್ನು ಪ್ರವೇಶಿಸುವಾಗ ನಿರ್ಗಮನ ದ್ವಾರದ ಬಗ್ಗೆ ಎಚ್ಚರವಿರಲಿ. ಅಂದರೆ, ನಿರ್ಗಮನ ದ್ವಾರವು ನಿಮ್ಮ ಆಸನದಿಂದ ಎಷ್ಟು ದೂರದಲ್ಲಿದೆ ಎಂದು ನಿಮಗೆ ತಿಳಿದಿರಬೇಕು. ವಿಮಾನದಲ್ಲಿ ಹೊಗೆ ಅಥವಾ ಕತ್ತಲೆ ಇದ್ದಾಗ, ತುರ್ತು ಪರಿಸ್ಥಿತಿಯಲ್ಲಿ ಈ ಮಾಹಿತಿಯು ತುಂಬಾ ಉಪಯುಕ್ತ.
'ಬ್ರೇಸ್ ಪೊಸಿಷನ್' ಅಳವಡಿಸಿಕೊಳ್ಳಿ
ವಿಮಾನವು ಅಪಘಾತಕ್ಕೀಡಾದರೆ ಅಥವಾ ತುರ್ತು ಲ್ಯಾಂಡಿಂಗ್ ಮಾಡಿದರೆ, ಬ್ರೇಸ್ ಪೊಸಿಷನ್' ಅಳವಡಿಸಿಕೊಳ್ಳಿ. ಅಂದರೆ ದೇಹವನ್ನು ಬಗ್ಗಿಸಿ ಮತ್ತು ತಲೆಯನ್ನು ಮೊಣಕಾಲುಗಳ ನಡುವೆ ಇಡಿ. ತಲೆಯನ್ನು ಕೈಗಳಿಂದ ಮುಚ್ಚಿಕೊಳ್ಳಿ. ಇದು ನಿಮ್ಮ ಬೆನ್ನುಮೂಳೆ, ತಲೆ ಮತ್ತು ಕುತ್ತಿಗೆಯನ್ನು ಆಘಾತದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಅಪಘಾತದ ಬಳಿಕ ಜಾಗರೂಕರಾಗಿರಿ
ಅಪಘಾತವಾದ ಬಳಿಕ ನೀವು ಹೇಗಾದರೂ ವಿಮಾನದಿಂದ ಹೊರಬರಲು ಯಶಸ್ವಿಯಾಗಬಹುದು. ಆದರೆ, ಯಾರಾದರೂ ಸಹಾಯಕ್ಕಾಗಿ ಬರುವವರೆಗೆ ಯಾವುದೇ ಸುಡುವ ವಸ್ತು ಅಥವಾ ಅವಶೇಷಗಳ ಬಳಿಗೆ ಹೋಗಬೇಡಿ. ಎಲ್ಲರ ಜೊತೆ (ಗುಂಪಿನಲ್ಲಿ) ಇರಬೇಕು. ಗಾಯಗೊಂಡವರಿಗೆ ಸಹಾಯ ಮಾಡಬೇಕು.
ಮೊದಲು ನಿಮ್ಮ ಆಮ್ಲಜನಕ ಮಾಸ್ಕ್ ಧರಿಸಿ
ನೀವು ಇತರರಿಗೆ ಸಹಾಯ ಮಾಡುವ ಮೊದಲು, ನಿಮ್ಮ ಆಮ್ಲಜನಕ ಮಾಸ್ಕ್ ಧರಿಸಿ. ವಿಮಾನ ಟೇಕ್ ಆಫ್ ಆಗುವ ಮೊದಲು ನೀವು ಕ್ಯಾಬಿನ್ ಸಿಬ್ಬಂದಿ ಈ ಬಗ್ಗೆ ಸೂಚನೆ ನೀಡುತ್ತಾರೆ. ಅಪಘಾತದ ಬಳಿಕ ಇದು ನಿಮಗೆ ಉಸಿರಾಡಲು ಸಹಾಯ ಮಾಡುತ್ತದೆ. ಹೀಗಾಗಿ, ಆಮ್ಲಜನಕ ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಿ.
ಸದಾ ಲೈಫ್ ಜಾಕೆಟ್ ಧರಿಸಬೇಕು
ನೀವು ಯಾವಾಗಲೂ ಲೈಫ್ ಜಾಕೆಟ್ ಧರಿಸಬೇಕು. ನೀರಿನಲ್ಲಿ ಅಪಘಾತ ಸಂಭವಿಸಿದಲ್ಲಿ ಇದು ಸಹಕಾರಿ. ಆದರೆ, ನಿಮ್ಮ ಲೈಫ್ ಜಾಕೆಟ್ ಅನ್ನು ಗಾಳಿಯಿಂದ ತುಂಬಿಸಬೇಡಿ. ವಿಮಾನದಲ್ಲಿ ಗಾಳಿ ತುಂಬಿಸಿದರೆ, ಅದು ನೀರಿನಿಂದ ತುಂಬಲು ಪ್ರಾರಂಭಿಸುತ್ತದೆ. ಇದರಿಂದ ನಿಮಗೆ ಹಾರಲು ಅಥವಾ ತೇಲಲು ತುಂಬಾ ಕಷ್ಟವಾಗಿಸುತ್ತದೆ.
ಹೈ ಹೀಲ್ಸ್, ಸ್ಯಾಂಡಲ್ ಅಥವಾ ಭಾರವಾದ ಶೂಗಳು ಬೇಡ
ವಿಮಾನ ಹತ್ತುವ ಮೊದಲು ಸಂಪೂರ್ಣವಾಗಿ ಮುಚ್ಚಿದ ಬಟ್ಟೆ ಮತ್ತು ಶೂಗಳನ್ನು (ಬೂಟು) ಧರಿಸಿ. ಅಪಘಾತದ ಬಳಿಕ ಬೆಂಕಿ ಕಾಣಿಸಿಕೊಂಡರೆ ಅಥವಾ ನೀವು ಬೇಗನೆ ಹೊರಬರಬೇಕಾದರೆ ಹೈ ಹೀಲ್ಸ್, ಸ್ಯಾಂಡಲ್ ಅಥವಾ ಭಾರವಾದ ಬೂಟುಗಳು ನಿಮ್ಮ ವೇಗವನ್ನು ನಿಧಾನಗೊಳಿಸಬಹುದು. ವಿಮಾನದಲ್ಲಿ ಪ್ರಯಾಣಿಸುವ ಮೊದಲು, ಸಂಪೂರ್ಣವಾಗಿ ಮುಚ್ಚಿದ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ. ಹತ್ತಿ ಅಥವಾ ಉಣ್ಣೆಯ ಬಟ್ಟೆಗಳನ್ನು ಧರಿಸುವುದು ಉತ್ತಮ. ಏಕೆಂದರೆ ಅವು ಕಡಿಮೆ ಸುಡುತ್ತವೆ. ಇದರ ಹೊರತಾಗಿ, ನೀವು ಸುಲಭವಾಗಿ ಓಡಬಹುದಾದ ಶೂಗಳನ್ನು ಯಾವಾಗಲೂ ಧರಿಸಬೇಕು.
ಬ್ಯಾಗ್‌ಗಳು ಅಥವಾ ಬೆಲೆಬಾಳುವ ವಸ್ತುಗಳನ್ನು ಬಿಟ್ಟುಬಿಡಿ
ವಿಮಾನ ಅಪಘಾತದ ನಂತರ, ಪ್ರಯಾಣಿಕರು ತಮ್ಮ ಬ್ಯಾಗ್‌ಗಳು ಅಥವಾ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಳ್ಳುವುದರಲ್ಲಿ ಸಮಯ ವ್ಯರ್ಥ ಮಾಡುತ್ತಾರೆ. ಇದು ನಿಮ್ಮ ಜೀವಕ್ಕೆ ಮಾರಕವಾಗಬಹುದು. ನಿಮ್ಮ ಜೀವನವು ನಿಮ್ಮ ಬೆಲೆಬಾಳುವ ವಸ್ತುಗಳಿಗಿಂತ ಹೆಚ್ಚು ಮುಖ್ಯ ಎಂದು ತಜ್ಞರು ಹೇಳಿದ್ದಾರೆ.
ಮೂಗು ಮತ್ತು ಬಾಯಿಯನ್ನು ಬಟ್ಟೆಯಿಂದ ಮುಚ್ಚಿ
ವಿಮಾನ ಅಪಘಾತದ ಬಳಿಕ ವಿಮಾನವು ಹೊಗೆಯಿಂದ ತುಂಬಿರುತ್ತದೆ. ಈ ಹೊಗೆ ಮೇಲಕ್ಕೆ ಏರುವುದರಿಂದ ಬಾಗಿ ನಡೆಯಿರಿ. ನಿಮ್ಮ ಮೂಗು ಮತ್ತು ಬಾಯಿಯನ್ನು ಬಟ್ಟೆಯಿಂದ (ಮುಖವಾಡ) ಮುಚ್ಚಿಕೊಳ್ಳಿ. ಹೆಚ್ಚುವರಿ ರಕ್ಷಣೆಗಾಗಿ ಬಟ್ಟೆಯನ್ನು ಒದ್ದೆಯಾಗಿ ಇಟ್ಟುಕೊಳ್ಳಿ.
ಸಾಧ್ಯವಾದಷ್ಟು ಬೇಗ ವಿಮಾನದಿಂದ ಹೊರಬನ್ನಿ
ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಪ್ರಕಾರ, ವಿಮಾನ ಅಪಘಾತಗಳಲ್ಲಿ ಶೇ.68 ರಷ್ಟು ಸಾವುಗಳು ಅಪಘಾತದ ಬಳಿಕ ಬೆಂಕಿಯಿಂದ ಸಂಭವಿಸುತ್ತವೆ. ಹೀಗಾಗಿ, ಸಾಧ್ಯವಾದಷ್ಟು ಬೇಗ ವಿಮಾನದಿಂದ ಹೊರಬನ್ನಿ. ಆದರೆ, ಹೊರಬರುವ ಮೊದಲು, ನಿರ್ಗಮನ ಬಾಗಿಲಿನ ಹೊರಗೆ ಯಾವುದೇ ಬೆಂಕಿ ಅಥವಾ ಯಾವುದೇ ಇತರೆ ಅಪಾಯವಿಲ್ಲವೇ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು.
ವಿಮಾನದಲ್ಲಿತ್ತು 1,25,000 ಲೀಟರ್ ಇಂಧನ
ಅಪಘಾತವಾದ (Ahmedabad Plane Crash) ಏರ್ ಇಂಡಿಯಾ ವಿಮಾನದಲ್ಲಿ ಸುಮಾರು 1,25,000 ಲೀಟರ್ ಇಂಧನ ಇತ್ತು ಎಂದು ತಿಳಿದುಬಂದಿದೆ. ವಿಮಾನ ಪತನದ ಸಂದರ್ಭದಲ್ಲಿ ಇಂಧನ ಹೊತ್ತಿ ಉರಿಯುತ್ತಿದ್ದುದರಿಂದ ಸ್ಥಳದಲ್ಲಿ ಭಾರೀ ಪ್ರಮಾಣದ ತಾಪಮಾನವಿತ್ತು. ಹಾಗಾಗಿ, ಅಲ್ಲಿ ಯಾರನ್ನೂ ಉಳಿಸಲು ಅವಕಾಶವಿರಲಿಲ್ಲ. ದುರಂತದಲ್ಲಿ ಎಷ್ಟು ಮಂದಿ ಮೃತಪಟ್ಟರು ಎಂಬುದನ್ನು ಡಿಎನ್ಎ ಪರೀಕ್ಷೆ ನಡೆಸಿದ ನಂತರ ಘೋಷಿಸಲಾಗುವುದು. ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಈ ಪೈಕಿ ಒಬ್ಬರು ಮಾತ್ರ ಬದುಕಿದ್ದಾರೆ.



Click it and Unblock the Notifications












