Latest Updates
-
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್!
ಮಹಾಭಾಗ್ಯ ಯೋಗ ನಿಮ್ಮ ಜನ್ಮ ಕುಂಡಲಿಯಲ್ಲಿದ್ಯಾ ಅಂತ ಗೊತ್ತಾಗೋದು ಹೇಗೆ?
ವೈದಿಕ ಜ್ಯೋತಿಷ್ಯದಲ್ಲಿ ಮಹಾಭಾಗ್ಯ ಯೋಗವನ್ನು ಅತ್ಯಂತ ಶಕ್ತಿಶಾಲಿ ಮತ್ತು ಪ್ರಯೋಜನಕಾರಿ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸಂಸ್ಕೃತದಲ್ಲಿ "ಮಹಾ" ಎಂದರೆ ಶ್ರೇಷ್ಠ, ಮತ್ತು "ಭಾಗ್ಯ" ಎಂದರೆ ಅದೃಷ್ಟ ಎಂದು ಹೇಳಲಾಗುತ್ತದೆ.
ಮಹಾಭಾಗ್ಯ ಯೋಗ ಹೆಸರೇ ಸೂಚಿಸುವಂತೆ ಈ ಯೋಗವು ಗ್ರಹಗಳ ಸ್ಥಾನಗಳ ಸಂಯೋಜನೆಯನ್ನು ಸೂಚಿಸುತ್ತದೆ. ಈ ಯೋಗ ಯಾರ ಜನ್ಮ ಕುಂಡಲಿಯಲ್ಲಿ ಇರುತ್ತದೆಯೋ ಅವರ ಅದೃಷ್ಟ ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ. ಅಷ್ಟಕ್ಕೂ ನಮ್ಮ ಜನ್ಮ ಕುಂಡಲಿಯಲ್ಲಿ ಮಹಾಭಾಗ್ಯ ಯೋಗವಿದ್ದರೆ ಗೊತ್ತಾಗೋದು ಹೇಗೆ ಅನ್ನೋದನ್ನು ತಿಳಿಯೋಣ.

ಮಹಾಭಾಗ್ಯ ಯೋಗ ರೂಪುಗೊಳ್ಳೋದು ಹೇಗೆ?
ನಮ್ಮ ಜನ್ಮ ಕುಂಡಲಿಯಲ್ಲಿ ಮಹಾಭಾಗ್ಯ ಯೋಗ ರೂಪುಗೊಳ್ಳಲು ಕೆಲವು ನಿರ್ದಿಷ್ಟ ಗ್ರಹಗಳ ಜೋಡಣೆಯು ಸರಿಯಾದ ಕ್ರಮದಲ್ಲಿ ಇರಬೇಕು. ಬುದ್ಧಿವಂತಿಕೆ, ಉಪಕಾರ ಮತ್ತು ಅದೃಷ್ಟದ ಗ್ರಹವಾದ ಗುರುವಿನ ಸ್ಥಾನವು ಈ ಯೋಗವನ್ನು ರಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಗುರುವು ನಿಮ್ಮ ಜನ್ಮ ಕುಂಡಲಿಯಲ್ಲಿ 1 ನೇ, 4 ನೇ, 7 ನೇ ಅಥವಾ 10 ನೇ ಮನೆಯಲ್ಲಿ ಇದ್ದಾಗ, ಅದ್ರಲ್ಲೂ ಗುರುವಿನ ಸ್ವಂತ ರಾಶಿಯಲ್ಲಿದ್ದಾಗ ಅದು ಮಹಾಭಾಗ್ಯ ಯೋಗಕ್ಕೆ ಅಡಿಪಾಯ ಹಾಕಿಕೊಡುತ್ತದೆ.
ಇನ್ನೂ ಗುರುವಿನ ಜೊತೆಯಲ್ಲಿ ಶುಕ್ರ ಮತ್ತು ಬುಧದಂತಹ ಲಾಭದಾಯಕ ಗ್ರಹಗಳು ಇದ್ದಾಗ ಈ ಮಂಗಳಕರ ಯೋಗದ ಬಲವು ಇನ್ನಷ್ಟು ವರ್ಧಿಸುತ್ತದೆ. ಒಬ್ಬರ ಜನ್ಮ ಕುಂಡಲಿಯಲ್ಲಿ ಮಹಾಭಾಗ್ಯ ಯೋಗದ ಉಪಸ್ಥಿತಿಯು ಸಕಾರಾತ್ಮಕತೆ, ಯಶಸ್ಸು ಮತ್ತು ಅನುಕೂಲಕರ ಅವಕಾಶಗಳನ್ನು ಉಂಟುಮಾಡುತ್ತದೆ.
ಮಹಾಭಾಗ್ಯ ಯೋಗದ ಶುಭಕರ ಪರಿಣಾಮಗಳೇನು?
1. ಶೈಕ್ಷಣಿಕ ಶ್ರೇಷ್ಠತೆ ಮತ್ತು ಜ್ಞಾನ
ಯಾರ ಜನ್ಮ ಕುಂಡಲಿಯಲ್ಲಿ ಮಹಾಭಾಗ್ಯ ಯೋಗ ಹೊಂದಿರುತ್ತದೆಯೋ ಅವರು ಸಾಮಾನ್ಯವಾಗಿ ಅಸಾಧಾರಣ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಹೊಂದಿರುತ್ತಾರೆ. ಅವರು ಶಿಕ್ಷಣದ ಕಡೆಗೆ ಸ್ವಾಭಾವಿಕ ಒಲವನ್ನು ಹೊಂದಿದ್ದಾರೆ. ಮತ್ತು ಅವರು ಆಯ್ಕೆ ಮಾಡಿದ ಅಧ್ಯಯನ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಸಾಮರ್ಥ್ಯ ಇರುತ್ತದೆ.
2. ವೃತ್ತಿ ಜೀವನದಲ್ಲಿ ಯಶಸ್ಸು
ಮಹಾಭಾಗ್ಯ ಯೋಗ ಯಾರ ಜನ್ಮ ಕುಂಡಲಿಯಲ್ಲಿ ಇರುತ್ತದೆಯೋ ಅವರು ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಬೆಳವಣಿಗೆಯನ್ನು ಕಾಣುತ್ತಾರೆ. ಅಂತಹ ವ್ಯಕ್ತಿಗಳು ತಮ್ಮ ವೃತ್ತಿ ಕ್ಷೇತ್ರದಲ್ಲಿ ಮನ್ನಣೆ ಮತ್ತು ಗೌರವವನ್ನ ಪಡೆಯುತ್ತಾರೆ.
3. ಆರ್ಥಿಕ ಸಮೃದ್ಧಿ
ಮಹಾಭಾಗ್ಯ ಯೋಗವು ಆರ್ಥಿಕ ಸಮೃದ್ಧಿಯೊಂದಿಗೆ ಬಲವಾಗಿ ಸಂಬಂಧವನ್ನು ಹೊಂದಿದೆ. ಜನ್ಮ ಕುಂಡಲಿಯಲ್ಲಿ ಮಹಾಭಾಗ್ಯ ಯೋಗ ಇದ್ದವರು ಆರ್ಥಿಕ ಸ್ಥಿರತೆ ಮತ್ತು ಸಂಪತ್ತಿನ ಕ್ರೋಢೀಕರಣವನ್ನು ಆನಂದಿಸುತ್ತಾರೆ. ಆರಾಮದಾಯಕ ಮತ್ತು ಐಷಾರಾಮಿ ಜೀವನಶೈಲಿಯನ್ನು ಅನುಭವಿಸುತ್ತಾರೆ.
4. ಸಂಬಂಧಗಳು ಚೆನ್ನಾಗಿರುತ್ತದೆ
ಮಹಾಭಾಗ್ಯ ಯೋಗ ನಿಮ್ಮ ಜನ್ಮ ಕುಂಡಲಿಯಲ್ಲಿದ್ದರೆ ಅದರ ಪರಿಣಾಮವಾಗಿ ನಿಮ್ಮ ಹಾಗೂ ನಿಮ್ಮವರ ನಡುವಿನ ಸಂಬಂಧ ಮತ್ತಷ್ಟು ಚೆನ್ನಗಾಗುತ್ತದೆ. ಕುಟುಂಬಗಳಲ್ಲಿ ಮತ್ತು ಸ್ನೇಹಿತರ ನಡುವೆ ಪ್ರೀತಿ, ತಿಳುವಳಿಕೆ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.
5. ಆಧ್ಯಾತ್ಮಿಕ ಒಲವು
ಮಹಾಭಾಗ್ಯ ಯೋಗವನ್ನು ಹೊಂದಿರುವ ವ್ಯಕ್ತಿಗಳು ಆಗಾಗ್ಗೆ ಆಧ್ಯಾತ್ಮಿಕತೆಯ ಆಳವಾದ ಪ್ರಜ್ಞೆಯನ್ನು ಹೊಂದಿರುತ್ತಾರೆ. ಇವರಿಗೆ ತಾತ್ವಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಕಡೆಗೆ ಸೆಳೆತ ಇರುತ್ತದೆ. ಅವರು ಇತರರ ಕಡೆಗೆ ನೈತಿಕ ಮೌಲ್ಯಗಳು ಮತ್ತು ಸಹಾನುಭೂತಿಯ ಉನ್ನತ ಪ್ರಜ್ಞೆಯನ್ನು ಹೊಂದಿರುತ್ತಾರೆ.
ನಿಮ್ಮ ಜನ್ಮ ಕುಂಡಲಿಯಲ್ಲಿ ಮಹಾಭಾಗ್ಯ ಯೋಗವನ್ನು ಗುರುತಿಸೋದು ಹೇಗೆ?
1. ಗುರುವಿನ ಸ್ಥಾನ
ನಿಮ್ಮ ಜನ್ಮ ಕುಂಡಲಿಯಲ್ಲಿ ಗುರುವಿನ ಸ್ಥಾನವು 1, 4, 7 ಅಥವಾ 10 ನೇ ಮನೆಯಲ್ಲಿ ಇದ್ದರೆ ಮಹಾಭಾಗ್ಯ ಯೋಗ ಬರುವ ಸಾಧ್ಯತೆ ಇದೆ.
2. ಉದಾತ್ತತೆ ಮತ್ತು ಸ್ವಂತ ಚಿಹ್ನೆ
ನಿಮ್ಮ ಜನ್ಮ ಕುಂಡಲಿಯಲ್ಲಿ ಗುರುವು ಉಚ್ಛ ರಾಶಿಯಲ್ಲಿ ಕರ್ಕಾಟಕ ಅಥವಾ ತನ್ನದೇ ಆದ ರಾಶಿಯಾದ ಧನು ರಾಶಿ ಮತ್ತು ಮೀನದಲ್ಲಿದ್ದರೆ. ಅದು ಮಹಾಭಾಗ್ಯ ಯೋಗದ ಸಾಧ್ಯತೆಯನ್ನು ಬಲಪಡಿಸುತ್ತದೆ.
3. ಶುಕ್ರ, ಬುಧ ಮತ್ತು ಗುರುವಿನ ಸಂಯೋಗ
ಶುಕ್ರ ಮತ್ತು ಬುಧದಂತಹ ಲಾಭದಾಯಕ ಗ್ರಹಗಳೊಂದಿಗೆ ಗುರುವಿನ ಸಂಯೋಗವಾಗಿದ್ದರೆ, ಅವರ ಉಪಸ್ಥಿತಿಯು ಮಹಾಭಾಗ್ಯ ಯೋಗದ ಶಕ್ತಿ ಮತ್ತು ಧನಾತ್ಮಕ ಪರಿಣಾಮಗಳನ್ನು ಹೆಚ್ಚಿಸುತ್ತದೆ.
ಈ ಎಲ್ಲಾ ಲಕ್ಷಣಗಳು ನಿಮ್ಮ ಜನ್ಮ ಕುಂಡಲಿಯಲ್ಲಿ ಕಾಣಿಸಿಕೊಂಡರೆ ನೀವು ಕೂಡ ಮಹಾಭಾಗ್ಯ ಯೋಗದ ಪ್ರಯೋಜನವನ್ನು ಪಡೆದುಕೊಳ್ಳಬಹುದು.



Click it and Unblock the Notifications
