Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
ಮನೆಯಲ್ಲಿ ಹೂವಿನ ಗಿಡ ನೆಡಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತೆ. ಅದರಂತೆ ಹೂ ಬಿಡುವ ಗಿಡಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸಹ ಇದೆ. ಹೀಗಾಗಿ ಮನೆಯಲ್ಲಿ ಗುಲಾಬಿ, ಮಲ್ಲಿಗೆ ಸೇರಿ ಕೆಲ ಸಣ್ಣ ಸಣ್ಣ ಗಿಡದಲ್ಲಿ ಬೆಳೆಯುವ ಹೂವಿನ ಗಿಡಗಳ ನಡುತ್ತಾರೆ. ಮನೆಯಲ್ಲಿ ಸಣ್ಣದಾದ ಹೂವಿನ ತೋಟ ಮಾಡುವುದು ಹಲವರ ಕನಸಾಗಿರುತ್ತೆ.
ಈ ರೀತಿಯ ಹೂವಿನ ತೋಟದಲ್ಲಿ ಹೂವುಗಳ ಒಮ್ಮೆ ಅರಳಿದಾಗ ನೋಡಲು ಸುಂದರವಾಗಿ ಕಾಣುತ್ತದೆ. ಈಗ ದೊಡ್ಡ ದೊಡ್ಡ ನಗರಗಳಲ್ಲೂ ಮನೆ ಒಳಗೆ ಟೆರೆಸ್ ಮೇಲೆಯೂ ಹೂವಿನ ಗಿಡಗಳ ನೆಟ್ಟು ಪೋಷಿಸುತ್ತಾರೆ. ಸಣ್ಣ ಗಿಡಗಳಿಗೂ ಅಲ್ಲಿ ಸಾವಿರಾರು ರೂಪಾಯಿ ನೀಡಿ ಖರೀದಿಸಿ ತಂದು ನೀರು ಹಾಕಿ ಬೆಳೆಸುತ್ತಾರೆ.

ಆದರೆ ಮಲ್ಲಿಗೆ ಹೂವು ಮನೆಯಲ್ಲಿ ಬೆಳೆಯುವುದು ಸ್ವಲ್ಪ ಕಷ್ಟದ ಕೆಲಸ. ಏಕೆಂದರೆ ಇದಕ್ಕೆ ಸರಿಯಾದ ಆರೈಕೆಯ ಹೊರತು ಅವು ಚೆನ್ನಾಗಿ ಬೆಳೆಯುವುದಿಲ್ಲ. ಬೇರೆಲ್ಲಾ ಹೂವಿನ ಗಿಡಗಳಿಗಿಂತ ಮಲ್ಲಿಗೆ ಹೂವು ತುಂಬಾನೆ ಪರಿಮಳಯುಕ್ತವಾಗಿರುತ್ತೆ. ಹೀಗಾಗಿ ಹೆಚ್ಚಿನವರು ಈ ಹೂವಿನ ಗಿಡ ಬೆಳೆಯಲು ಇಷ್ಟಪಡುತ್ತಾರೆ.
ಹಾಗಾದರೆ ನಾವಿಂದು ಮನೆಯಲ್ಲಿ ಮಲ್ಲಿಗೆ ಹೂವಿನ ಗಿಡ ಬೆಳೆಸುವುದು ಹೇಗೆ ಎಂಬುದನ್ನು ತಿಳಿಯೋಣ. ಏಕೆಂದರೆ ಮಲ್ಲಿಗೆ ಹೂವು ಬೆಳೆದರೆ ಅದು ಅರಳಿದಾಗ ಸುವಾಸನೆ ನಿಮ್ಮ ದಣಿವು ನಿವಾರಿಸುವಷ್ಟು ಪ್ರಬಲವಾಗಿರುತ್ತೆ. ಸಂಜೆ ವೇಳೆ ಮಲ್ಲಿಗೆಯ ಸುವಾಸನೆ ಮನೆ ತುಂಬುತ್ತದೆ. ಇದು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ.
ಮಲ್ಲಿಗೆ ಗಿಡ ನೆಡಲು ಒಂದು ಮಣ್ಣಿನ ಪಾಟ್ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ಪ್ಲಾಸ್ಟಿಕ್ ಪಾಟ್‌ನಲ್ಲಿ ನೆಟ್ಟರೆ ಅದು ಸೂರ್ಯನ ಬಿಸಿಲಿಗೆ ಬಿಸಿಯಾದಾಗ ಮಲ್ಲಿಗೆ ಗಿಡ ಸಾಯುವ ಸಂಭವವಿರುತ್ತದೆ. ಮಣ್ಣಿನ ಮಡಕೆಯಲ್ಲಿ ಗಿಡ ಬೇರುಗಳು ಚೆನ್ನಾಗಿ ಹರಡಿಕೊಳ್ಳುತ್ತವೆ. ಮೊದಲು ಗಿಡ ನೆಡಲು ಮಣ್ಣನ್ನು ಹದ ಮಾಡಿಕೊಳ್ಳಬೇಕು. ಫಲವತ್ತಾದ ಮಣ್ಣನ್ನು ಆರಿಸಿಕೊಳ್ಳಬೇಕು. ಆದರೆ ಕೆಲವು ಬಾರಿ ನರ್ಸರಿಯಲ್ಲಿ ಅವರು ಮೊದಲೇ ಮಣ್ಣು ಹಾಕಿ ನೆಟ್ಟಿರುವ ಗಿಡ ನೀಡುತ್ತಾರೆ.
ಆದರೆ ಈ ಮಣ್ಣು ಗಿಡ ಬೆಳೆಯಲು ಉತ್ತಮವಾಗಿರುತ್ತೆ. ಅವರು ಸೂಕ್ತ ಪ್ರಮಾನದಲ್ಲಿ ಕೀಟನಾಶಕ, ಗೊಬ್ಬರ ಹಾಕಿ ಗಿಡ ಬೆಳೆಸಿರುತ್ತಾರೆ. ಒಂದು ವೇಳೆ ನೀವು ಮನೆಯಲ್ಲಿ ಅದನ್ನು ಬೇರೆ ಕಡೆ ನೆಡುವುದಾದರೆ ಇಲ್ಲವೆ ಬೇರೊಂದು ಪಾಟ್‌ನಲ್ಲಿ ಬೆಳೆಸುವುದಾದರೆ ನೀವೇ ಸರಿಯಾದ ರೀತಿ ಮಣ್ಣು ಮಾಡಿಕೊಳ್ಳಿ.
ಮಲ್ಲಿಗೆ ಗಿಡವನ್ನು ಪೋಷಿಸಲು ಗೊಬ್ಬರವನ್ನು ಸಹ ವ್ಯಾಪಕವಾಗಿ ಬಳಸಬೇಕು. ಇದಕ್ಕಾಗಿ ನೀವು ಎರೆಹುಳು ಗೊಬ್ಬರ ಬಳಸಬಹುದು. ಇದರಲ್ಲಿ ಫಲವತ್ತತೆ ಅಧಿಕವಾಗಿದ್ದು, ಗಿಡ ಬೇಗ ಬೆಳೆಯುತ್ತದೆ. ಇನ್ನು ಮಲ್ಲಿಗೆ ಗಿಡಕ್ಕೆ ಸೂರ್ಯನ ಬೆಳಕು ಅತ್ಯಗತ್ಯ ಹೀಗಾಗಿ ಸೂರ್ಯನ ಬೆಳಕು ಬೀಳೂಕ ಕಡೆಯಲ್ಲಿ ಗಿಡ ಇಡುವುದು ಉತ್ತಮ. ಇನ್ನು ಬೆಳಗ್ಗೆ ಒಂದು ಬಾರಿ ಮತ್ತು ಸಂಜೆ ಒಂದು ಬಾರಿ ಗಿಡಕ್ಕೆ ನೀರು ಹಾಕಬೇಕು. ಸುಮಾರು 6 ಗಂಟೆ ಸೂರ್ಯನ ಬೆಳಕಿನಲ್ಲಿಡಬೇಕು. ಹೀಗಾದಾಗ ಮಲ್ಲಿಗೆ ಗಿಡ ಬೇಗ ಬೆಳೆಯುತ್ತದೆ.
ಮಲ್ಲಿಗೆ ಗಿಡವನ್ನು ಕಾಲಕಾಲಕ್ಕೆ ಕತ್ತರಿಸುತ್ತಿರಬೇಕು. ಏಕೆಂದರೆ ಮಲ್ಲಿಗೆ ಗಿಡ ಬೇಗನೆ ಬಳ್ಳಿಯಾಗಿ ಹಬ್ಬಲು ಆರಂಭವಾಗುತ್ತದೆ. ಅದು ಬಳ್ಳಿ ಆಕಾರಕ್ಕೆ ಬರಲು ಬಿಡಬಾರದು ಹೀಗಾಗಿ ಅದರ ತಲೆ ಕತ್ತರಿಸುತ್ತಾ ಇರಬೇಕು. ಹೀಗೆ ಕತ್ತರಿಸಿದಾಗ ಅದು ಕವಲು ಒಡೆದು ಸಿಕ್ಕ ಪೊದೆಯಂತೆ ಬೆಳೆಯುತ್ತದೆ. ಜೊತೆಗೆ ಬೇಗನೇ ಹೂವು ಬಿಡಲು ಆರಂಭಿಸುತ್ತದೆ. ಇದು ಹೂ ಬಿಡುವ ಸಸ್ಯ ಆಗಿರುವುದರಿಂದ ಕೀಟಗಳ ಬಾದೆ ಕಾಡುತ್ತದೆ. ಹೀಗಾಗಿ ತಿಂಗಳಿಗೆ ಒಮ್ಮೆಯಾದರು, ಕೀಟನಾಶಕ ಸಿಂಪಡಿಸಬೇಕು. ಬೇವಿನ ಎಣ್ಣೆಯ ನೀರು ಹಾಕುತ್ತಾ ಇರಬೇಕು.



Click it and Unblock the Notifications
