Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಗುವನ್ನು ಪ್ರತ್ಯೇಕವಾಗಿ ಮಲಗಲು ಅಭ್ಯಾಸ ಮಾಡಿಸುವುದು ಹೇಗೆ? ಯಾವ ವಯಸ್ಸಿನಲ್ಲಿ ಬೇರೆ ಮಲಗಿಸಬಹುದು?
ಸಾಮಾನ್ಯವಾಗಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯಂದಿರ ಜೊತೆಗೆ ಮಲಗುವುದು ಸಾಮಾನ್ಯ. ಬಹುತೇಕ ಎಲ್ಲಾ ಪಾಲಕರು ತಮ್ಮ ನಡುವೆ ತಮ್ಮ ಮಕ್ಕಳನ್ನು ಮಲಗಿಸಿಕೊಳ್ಳುವುದು ಸಹಜವಾಗಿದೆ. ಆದರೆ ಹೀಗೆ ನಿಮ್ಮ ಜೊತೆ ನಿಮ್ಮ ಮಕ್ಕಳು ಎಷ್ಟು ವಯಸ್ಸಿನವರಿಗೆ ಮಲಗಿಕೊಳ್ಳಬಹುದು ಗೊತ್ತಾ? ಯಾವ ವಯಸ್ಸಿನಿಂದ ಅವರು ಸ್ವತಂತ್ರವಾಗಿ ಅವರದ್ದೇ ಆಗಿರುವ ರೂಮ್ ನಲ್ಲಿ ಮಲಗಿಕೊಳ್ಳಲು ಕಲಿಸಬೇಕು ಗೊತ್ತಾ?

ಹೌದು, ಮಗು ಹುಟ್ಟಿದಾಗಿನಿಂದ ಸ್ವಲ್ಪ ದೊಡ್ಡವರಾಗುವವರೆಗೂ ತಾಯಿಯ ಮಡಲಿನಲ್ಲಿಯೇ ಮಲಗುತ್ತಾರೆ .ಇದು ಒಳ್ಳೆಯದು ಹೌದು. ತಾಯಿಯ ಪ್ರೀತಿಯ ಬಿಸಿ ಅಪ್ಪುಗೆಯಲ್ಲಿ ಮಗು ಮಲಗಿದಾಗ ಅದು ಮಾನಸಿಕವಾಗಿ ಬೆಳವಣಿಗೆಯಾಗುತ್ತದೆ. ಸುಮಾರು ಎರಡು ವರ್ಷದವರೆಗೂ ಕೂಡ ಮಕ್ಕಳು ತಾಯಿಯ ಜೊತೆಗೆ ಮಲಗಿದರೆ ಒಳ್ಳೆಯದು ಎಂದು ಹೇಳಲಾಗುತ್ತೆ. ಆದರೆ ಯಾವ ವಯಸ್ಸಿನಲ್ಲಿ ಮಕ್ಕಳು ಸ್ವತಂತ್ರವಾಗಿ ನಿದ್ರೆ ಮಾಡಲು ಅಥವಾ ಬೇರೆ ಕೋಣೆಯಲ್ಲಿ ಮಲಗಲು ಕಲಿಯಬೇಕು?
ಮಕ್ಕಳು ಯಾವ ವಯಸ್ಸಿನಲ್ಲಿ ಸ್ವತಂತ್ರವಾಗಿ ಮಲಗುವ ಅಭ್ಯಾಸ ಮಾಡಿಕೊಳ್ಳಬೇಕು?
ಮಗು ಕನಿಷ್ಠ 2ರಿಂದ 3 ವರ್ಷಗಳವರೆಗೆ ತಾಯಿಯ ಜೊತೆಗೆ ಮಲಗಿದರೆ ಹೆಚ್ಚು ಸುರಕ್ಷಿತ. ಆದರೆ ಮೂರರಿಂದ ನಾಲ್ಕನೇ ವಯಸ್ಸಿಗೆ ಬರುತ್ತಿದ್ದಂತೆ ಮಗುವಿಗೆ ಸ್ವತಂತ್ರವಾಗಿ ಮಲಗಲು ಅಭ್ಯಾಸ ಮಾಡಿಸಬೇಕು ಆದರೆ ಮಕ್ಕಳು ತಕ್ಷಣಕ್ಕೆ ಇದನ್ನು ಒಪ್ಪಿಕೊಳ್ಳುವುದಿಲ್ಲ. ತಾನು ಮಾತ್ರ ಸಪರೇಟ್ ಆಗಿ ಮಲಗಬೇಕು ಎನ್ನುವುದನ್ನು ಮಕ್ಕಳು ಇಷ್ಟಪಡುವುದಿಲ್ಲ. ಎಷ್ಟೋ ಬಾರಿ, ಎಷ್ಟೇ ಸಲ ಹೇಳಿದರೂ ಕೂಡ ತಾಯಿಯ ಜೊತೆಗೆ ಮಲಗುತ್ತೇನೆ ಎಂದು ಹಠ ಹಿಡಿಯುತ್ತಾರೆ ಆದರೆ ಇದಕ್ಕಾಗಿ ಮಕ್ಕಳಿಗೆ ಹೊಡೆದು ಬಡೆದು ಹೆದರಿಸಿ ಅವರು ಪ್ರತ್ಯೇಕವಾಗಿ ಮಲಗುವಂತೆ ಮಾಡಬಾರದು. ಅದರ ಬದಲು ಮಕ್ಕಳಿಗೆ ತಿಳಿಹೇಳಿ ಅವರು ಯಾಕೆ ಸ್ವತಂತ್ರವಾಗಿ ಮಲಗಬೇಕು ಎನ್ನುವುದನ್ನು ತಿಳಿಸಬೇಕು ಆಗ ಮಾತ್ರ ಮಕ್ಕಳ ಮನಸ್ಸು ಒಲಿಸಲು ಸಾಧ್ಯ.
ಮಕ್ಕಳು ಯಾಕೆ ತಾವು ಮಾತ್ರ ಸಪರೇಟ್ ಆಗಿ ಮಲಗಲು ಇಷ್ಟಪಡುವುದಿಲ್ಲ ಎಂಬುದನ್ನು ಮೊದಲು ತಿಳಿಯಬೇಕು. ಮುಖ್ಯವಾಗಿ ಮಕ್ಕಳಲ್ಲಿ ಭಯ ಇರುತ್ತದೆ. ಕತ್ತಲೆ ಕೊಣೆಯಲ್ಲಿ ತಾನು ಒಬ್ಬನೇ ಮಲಗಿದರೆ ನನಗೆ ಏನಾದರೂ ಆಗಬಹುದು ಎನ್ನುವ ಭಯ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ಕೇಳುವ ಭೂತದ ಕಥೆಗಳು ಮಕ್ಕಳಿಗೆ ಕನಸಿನಲ್ಲಿ ಕಾಡುತ್ತವೆ. ಇದೇ ಕಾರಣಕ್ಕೆ ಮಕ್ಕಳು ಪ್ರತ್ಯೇಕವಾಗಿ ಮಲಗಲು ಇಷ್ಟಪಡುವುದಿಲ್ಲ.
ಇನ್ನೊಂದು ಕಾರಣ ಅಂದರೆ ನನ್ನ ತಂದೆ ತಾಯಿ ನನ್ನನ್ನು ಬೇರೆ ಮಾಡುತ್ತಿದ್ದಾರೆ ಎನ್ನುವ ಭಾವನೆ ಕೂಡ ಮಕ್ಕಳಲ್ಲಿ ಮೂಡಬಹುದು. ಅದರಲ್ಲೂ ಮನೆಯಲ್ಲಿ ಎರಡು ಮಕ್ಕಳು ಇದ್ದರೆ ಒಂದು ಮಗು ಇನ್ನೂ ಚಿಕ್ಕದಾಗಿದ್ದರೆ ಆ ಮಗು ತಂದೆ ತಾಯಿಯ ಜೊತೆ ಮಲಗಬಹುದು ಹಾಗೂ ದೊಡ್ಡ ಮಗು ಪ್ರತ್ಯೇಕವಾಗಿ ಮಲಗಲು ಹೇಳಿದಾಗ ನನ್ನನ್ನು ತಂದೆ ತಾಯಿ ಇಷ್ಟಪಡುತ್ತಿಲ್ಲ ಎಂದು ಕೂಡ ಮಕ್ಕಳಿಗೆ ಅನಿಸಬಹುದು. ಹಾಗಾಗಿ ತಾವು ಬೇರೆ ಮಲಗಬೇಕು ಎನ್ನುವುದನ್ನು ಮಕ್ಕಳು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ.
ಮಕ್ಕಳು ದೊಡ್ಡವರಾಗುತ್ತಿದ್ದ ಹಾಗೆ ಪ್ರತ್ಯೇಕವಾಗಿ ಮಲಗಬೇಕು ಯಾಕೆ?
ಮಕ್ಕಳು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದ ಹಾಗೆ ಪ್ರತ್ಯೇಕವಾಗಿ ಮಲಗುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಸ್ವತಂತ್ರವಾಗಿ ಬದುಕಲು ಸ್ವತಂತ್ರವಾಗಿ ಇರಲು ಮಕ್ಕಳಿಗೆ ಅಭ್ಯಾಸವಾಗುತ್ತದೆ. ಮಕ್ಕಳು ತಮ್ಮ ಓದುವ ಕೋಣೆಯಲ್ಲಿಯೇ ಮಲಗುವುದರಿಂದ ಶಾಲಾ ಪಠ್ಯ ಪುಸ್ತಕಗಳ ಜೊತೆಗಿನ ಭಾಂದವ್ಯವು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಇನ್ನು ಎರಡನೆಯದಾಗಿ ತಂದೆ ತಾಯಿ ಮಗು ಹುಟ್ಟಿದ ನಂತರ ಸಾಮಾನ್ಯವಾಗಿ ಪ್ರತ್ಯೇಕವಾಗಿಯೇ ಜೀವನ ನಡೆಸುತ್ತಾರೆ. ಆದರೆ ಇದು ಸರಿಯಲ್ಲ ದಂಪತಿಗಳ ನಡುವೆ ದೈಹಿಕ ಸಾಂಗತ್ಯ ಕೂಡ ಬಹಳ ಮುಖ್ಯವಾಗಿರುತ್ತದೆ. ಮಕ್ಕಳು ಮಧ್ಯದಲ್ಲಿ ಮಲಗುವ ಅಭ್ಯಾಸ ಇರುವುದರಿಂದ ಸಾಕಷ್ಟು ದಂಪತಿಗಳು ಕೆಲವು ವರ್ಷಗಳ ವರೆಗೆ ದೈಹಿಕ ಸಂಭೋಗ ಮಾಡುವುದನ್ನ ಮರೆತು ಬಿಡುತ್ತಾರೆ. ಆದರೆ ದಾಂಪತ್ಯ ಜೀವನದಲ್ಲಿ ಇದು ಕೂಡ ಬಹಳ ಮುಖ್ಯವಾಗಿರುವ ಅಂಶ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಹಾಗಾಗಿ ಮಕ್ಕಳು ದೊಡ್ಡವರಾಗುತ್ತಿದ್ದ ಹಾಗೆ ಅವರನ್ನು ಪ್ರತ್ಯೇಕವಾಗಿ ಮಲಗಿಸಿದರೆ ದಂಪತಿಗಳಿಗೆ ತಮ್ಮದೇ ಆಗಿರುವ ಖಾಸಗಿ ಸಮಯವು ಸಿಗುತ್ತದೆ.
ಸ್ವತಂತ್ರವಾಗಿ ಮಗು ಮಲಗಲು ಅಭ್ಯಾಸ ಮಾಡಲು, ನೀವು ನೇರವಾಗಿ ಅವರನ್ನು ಇನ್ನೊಂದು ಕೊಣೆಯಲ್ಲಿ ಹೋಗು ಮಲಗು ಎನ್ನುವುದು ಸರಿಯಲ್ಲ. ಮೊದ ಮೊದಲು ನೀವೇ ಸ್ವತಃ ಹೋಗಿ ಮಕ್ಕಳನ್ನು ಇನ್ನೊಂದು ಕೋಣೆಯಲ್ಲಿ ನಿದ್ರೆ ಮಾಡಿಸಿ ಬರಬೇಕು. ಕೆಲವು ಮಕ್ಕಳಿಗೆ ಕತ್ತಲೆ ಎಂದರೆ ಭಯ. ಹಾಗಾಗಿ ಸಣ್ಣದಾಗಿರುವ ಲೈಟ್ ಹಾಕಿಡಿ. ಆರಂಭದಲ್ಲಿ ಕೋಣೆಯ ಬಾಗಿಲು ಹಾಕದೇ ಹಾಗೆಯೇ ತೆರೆದಿಡಿ. ಮಧ್ಯರಾತ್ರಿ ಎದ್ದು, ಮಗು ಹೇಗೆ ಮಲಗಿದೆ ಎಂಬುದನ್ನೂ ಗಮನಿಸಿ. ಸ್ವಲ್ಪ ದಿನದ ನಂತರ ಮಕ್ಕಳಿಗೆ ಇದು ಅಭ್ಯಾಸವಾಗುತ್ತದೆ. ಇದು ಒಂದು ದಿನದಲ್ಲಿ ನಡೆಯುವ ಪ್ರಕ್ರಿಯೆ ಅಲ್ಲ. ಹಂತ ಹಂತವಾಗಿ ಮಕ್ಕಳು ಪ್ರತ್ಯೇಕವಾಗಿ ಮಲಗಲು ಅಭ್ಯಾಸ ಮಾಡಿಸಿ.



Click it and Unblock the Notifications