Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬಟ್ಟೆ ಮೇಲೆ ಎಂತಹ ಕಲೆ ಇದ್ರು 1 ನಿಮಿಷದಲ್ಲಿ ಮಾಯ..! ಇಲ್ಲಿದೆ ಡೆಟಾಲ್ ಟಿಪ್ಸ್..!
ನಿಮ್ಮ ಮಕ್ಕಳು ಅಥವಾ ಮನೆಯಲ್ಲಿ ಯಾವುದಾದರು ಬಟ್ಟೆಯ ಮೇಲೆ ಇಂಕ್ ಹಿಡಿದಿರುತ್ತೆ. ಆದ್ರೆ ನೀವು ಅದನ್ನು ಎಷ್ಟೇ ತೊಳೆದರು ಈ ಕಲೆ ಹೋಗುವುದಿಲ್ಲ. ಕಾಲಾಂತರದಲ್ಲಿ ಈ ಕಲೆ ಸ್ವಲ್ಪ ಮಂದವಾಗುತ್ತದೆಯೇ ಹೊರತು ಸಂಪೂರ್ಣವಾಗಿ ಹೋಗುವುದಿಲ್ಲ. ಇನ್ನು ಬಿಳಿ ಬಟ್ಟೆಗೆ ಇಂಕ್ ತಾಕಿದರೆ ಆ ಬಟ್ಟೆ ಇನ್ನು ಮುಂದೆ ಬಳಸಲು ಸಾಧ್ಯವೇ ಇಲ್ಲ.
ಇನ್ನು ಮಕ್ಕಳು ಶಾಲೆಗೆ ಹಾಕುವ ಬಟ್ಟೆಯಲ್ಲಂತು ಈ ಇಂಕಿನ ಕಲೆಗಳು ಇದ್ದೇ ಇರುತ್ತವೆ. ಆಟವಾಡುವ ಮಕ್ಕಳು ಎಲ್ಲೆಂದರಲ್ಲಿ ಪೆನ್ನಿನಿಂದ ಗೆರೆಗಳನ್ನು ಮೂಡಿಸುತ್ತಾರೆ. ಹಾಗೆ ಬಟ್ಟೆ ಮೇಲೂ ಸಹ ಪೆನ್ನಿನಿಂದ ಬರೆದಿರುವುದು, ಇಂಕ್ ಲೀಕ್ ಆಗಿರುವುದನ್ನು ನಾವು ನೋಡುತ್ತೇವೆ.

ಆದ್ರೆ ಈ ಕಲೆಯನ್ನು ಹೋಗಲಾಡಿಸುವುದು ಬಹಳ ಕಷ್ಟ. ಒಂದಿಷ್ಟು ಕೆಮಿಕಲ್‌ಗಳ ಬಳಸಿ ನಾವು ಆ ಬಟ್ಟೆಯನ್ನು ತೊಳೆದ ಬಳಿಕವೂ ಅದರ ಕಲೆ ಹಾಗೆ ಉಳಿದುಬಿಡುತ್ತವೆ. ಬೇರೆ ಬಣ್ಣದ ಬಟ್ಟೆಯಾದರೆ ಅಷ್ಟೊಂದು ಗೊತ್ತಾಗುವುದಿಲ್ಲ, ಆದರೆ ಬಿಳಿ ಬಟ್ಟೆಯಾದರೆ ಇಂಕ್ ಕಲೆಯಿಂದ ಮತ್ತೆ ಅದನ್ನು ಬಳಸಲು ಬರುವುದಿಲ್ಲ.
ಆದ್ರೆ ಇಲ್ಲೊಬ್ಬರು ಈ ಇಂಕ್ ಕಲೆಯನ್ನು ಹೇಗೆ 1 ನಿಮಿಷದಲ್ಲಿ ತೊಲಗಿಸಬಹುದು ಎಂದು ವಿಡಿಯೋ ಮಾಡಿದ್ದು, ಇದನ್ನು ಕಂಡ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಹಲವು ವರ್ಷದಿಂದ ಬಗೆಹರಿಯದ ಈ ಸಮಸ್ಯೆಯನ್ನು ಒಂದು ನಿಮಿಷದಲ್ಲಿ ಆಕೆ ಬಗೆಹರಿಸಿರುವುದನ್ನು ಕಂಡು ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.
ಹೌದು ಹೌದು ವಿಡಿಯೋದಲ್ಲಿ ಆಕೆ ಕೇವಲ ಟೆಟಾಲ್ ಬಳಸಿ ಈ ಕಲೆಯನ್ನು ತೆಗೆಯುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಿಯ ವಿಜಯ್ ಕಿಚನ್ ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗಿದೆ.
ನಾವು ಗಾಯಗಳಿಗೆ ಹಚ್ಚುವ ಮತ್ತು ಹ್ಯಾಂಡ್ ವಾಶ್ ಆಗಿ ಬಳಸುವ ಡೆಟಾಲ್ ಅನ್ನು ಹಾಗೂ ಒಂದು ಟೂಥ್ ಬ್ರಶ್ ಬಳಸಿ ಆಕೆ ಕಲೆಯನ್ನು ಹೋಗಲಾಡಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಮಕ್ಕಳ ಬಿಳಿ ಬಟ್ಟಗೆ ಪೆನ್ನಿನಲ್ಲಿ ಮೊದಲು ಆಕೆಯೇ ಗೀಚುತ್ತಾರೆ. ಇದಾದ ಬಳಿಕ ಟೆಡಾಲ್ ಹನಿಯನ್ನು ಆ ಕಲೆಗಳ ಮೇಲೆ ಹಾಕಿ ಹಲ್ಲು ಉಜ್ಜಲು ಬಳಸುವ ಬ್ರಶ್‌ನಿಂದ ಆ ಕಲೆಯ ಮೇಲೆ ಚೆನ್ನಾಗಿ ಉಜ್ಜುತ್ತಾರೆ. ಒಂದೇ ನಿಮಿಷದಲ್ಲಿ ಬಿಳಿ ಬಟ್ಟೆ ಮೇಲಿದ್ದ ಕಲೆಗಳು ಮಾಯವಾಗುತ್ತವೆ. ಇದನ್ನು ಕಂಡು ನೆಟ್ಟಿಗರು ಅಚ್ಚರಿ ಹೊರಹಾಕಿದ್ದು, ಇದೊಂದು ಉಪಯೋಗಕರ ಐಡಿಯಾ ಎಂದು ಮೆಚ್ಚುಗೆ ಹೊರಹಾಕಿದ್ದಾರೆ.
ಇದೊಂದೆ ಅಲ್ಲ ಬಟ್ಟೆ ಮೇಲೆ ಕಲೆಯಾದರೆ ಅದನ್ನು ಹೋಗಲಾಡಿಸಲು ಹಲವು ವಿಧಾನಗಳಿವೆ.
1. ಕಲೆಯಾದ ತಕ್ಷಣವೇ ಅದನ್ನು ತೊಳೆದುಬಿಡಬೇಕು. ಅದು ಒಣಗಿದ ನಂತರ ತೊಳೆಯಲು ಹೆಚ್ಚು ಶ್ರಮಪಡಬೇಕಾಗುತ್ತದೆ. ಇನ್ನೊಂದು ಬಟ್ಟೆಯನ್ನು ತೇವಗೊಳಿಸಿ ಅದರ ನೆರವಿನಿಂದ ಕಲೆ ತೆಗೆದುಬಿಡಬೇಕು.
2. ಲಿಕ್ವಿಡ್ ಡಿಟರ್ಜೆಂಟ್ ಹಾಕಿ 3-5 ನಿಮಿಷ ಬಿಟ್ಟು ಉಜ್ಜಿ ತೊಳೆಯಬಹುದು.
3. ಬಿಸಿ ನೀರಿಗೆ ಅಡುಗೆ ಸೋಡಾ ಬೆರೆಸಿ ಅದಕ್ಕೆ ಸ್ವಲ್ಪ ಡಿಟರ್ಜೆಂಟ್ ಹಾಕಿ ಅದರಲ್ಲಿ ಬಟ್ಟೆಯನ್ನು 15-20 ನಿಮಿಷ ನೆನೆಸಿ ನಂತರ ಒಗೆದರೆ ಕಲೆ ಬೇಗ ಬಿಟ್ಟುಕೊಳ್ಳುತ್ತೆ.
4. ಬಟ್ಟೆ ಒಗೆಯುವ ಮುನ್ನ ಅದರ ಮೇಲಿನ ಲೇಬಲ್ ಓದಿಕೊಳ್ಳಿ. ಕೆಲವೊಂದು ಬಟ್ಟೆಗಳು ಬಿಸಿ ನೀರಿನಲ್ಲಿ ತನ್ನ ಸಹಜ ಹೊಳಪು ಕಳೆದುಕೊಳ್ಳಬಹುದು. ಆದ್ದರಿಂದ ಪರೀಕ್ಷಿಸಿ ಬಟ್ಟೆ ಒಗೆಯಬೇಕು.
5. ಬಿಸಿ ನೀರಿನಲ್ಲಿ ನೆನೆಸಿದ ನಂತರವೂ ಕೊಳೆ ಪೂರ್ಣ ಬಿಟ್ಟಿಲ್ಲವೆಂದರೆ ಸ್ವಲ್ಪ ಕ್ಲಬ್ ಸೋಡಾ ಬೆರೆಸಿ ನಯವಾಗಿ ಉಜ್ಜಿದರೆ ಕಲೆ ಹೋಗುತ್ತದೆ.
6. ಬಟ್ಟೆಯಿಂದ ಎಣ್ಣೆ ಅಥವಾ ಆಹಾರದ ಕಲೆ ಹೋಗಿಸಲು ನಿಂಬೆಹೋಳುಗಳನ್ನೂ ಬಳಸಬಹುದು. ನಿಂಬೆಯೊಂದಿಗೆ ಸ್ವಲ್ಪವೇ ಸ್ವಲ್ಪ ಉಪ್ಪು ಬೆರೆಸಿ ಅದರ ಮೇಲೆ ಉಜ್ಜಿದರೆ ಕಲೆ ಬೇಗ ಹೋಗುತ್ತೆ. ಆದರೆ ಉಪ್ಪನ್ನು ಹೆಚ್ಚು ಬಳಸಿದರೆ ಬಟ್ಟೆ ಬಣ್ಣ ಮಾಸುವ ಸಾಧ್ಯತೆಯೂ ಇದೆ.



Click it and Unblock the Notifications
