Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಿಂದಲೇ ಮತದಾನ ಮಾಡೋದು ಹೇಗೆ..? ಯಾರೆಲ್ಲಾ ಅರ್ಹರು? ಇಲ್ಲಿದೆ ಮಾಹಿತಿ
ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ಪಡೆಯದುಕೊಳ್ಳುತ್ತಿದೆ. ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಮತದಾನಕ್ಕೆ ದಿನಾಂಕವೂ ಘೋಷಣೆಯಾಗಿದ್ದು, ದೇಶದ ನಾನಾ ಭಾಗದಲ್ಲಿ ವಿವಿಧ ಹಂತದಲ್ಲಿ ಚುನಾವಣೆ ನಡೆಯಲಿದೆ. ಭಾರತದ ಈ ಚುನಾವಣೆ ವಿಶ್ವದಲ್ಲೇ ಅತೀದೊಡ್ಡ ಪ್ರಜಾಪ್ರಭುತ್ವಕ್ಕೆ ನಡೆಯಲಿರುವ ಚುನಾವಣೆಯಾಗಿದೆ.
ಈ ಚುನಾವಣೆಯಲ್ಲಿ ಲಕ್ಷ ಲಕ್ಷ ಸಿಬ್ಬಂದಿ ಶ್ರಮಿಸುತ್ತಾರೆ. ಜೊತೆಗೆ ಕೋಟಿ ಕೋಟಿ ಜನರು ತಮ್ಮ ಹಕ್ಕು ಚಲಾಯಿಸುತ್ತಾರೆ. ಇಷ್ಟಾದರು ದೇಶದಲ್ಲಿ ಮತದಾನ ಮಾಡುವ ಜನಸಂಖ್ಯಾ ಪ್ರಮಾಣ ತೀರ ಕಡಿಮೆ ಇದೆ. ಹಲವಾರು ಕಾರಣಗಳಿಂದಾಗಿ ಮತದಾನ ಮಾಡಲಾಗದೆ ಅವರು ಹೊರಗುಳಿಯುತ್ತಿದ್ದಾರೆ. ಈ ಪ್ರಮಾನ ಹೆಚ್ಚು ಮಾಡಲು ಇಲಾಖೆ ಶ್ರಮಿಸುತ್ತಲೇ ಇದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಹಿರಿಯರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಸಮಯದಲ್ಲಿ ನಡೆದಿದ್ದ ಚುನಾವಣೆ ವೇಳೆ ಮೊದಲ ಬಾರಿಗೆ ಮನೆಯಿಂದಲೇ ಹಿರಿಯರು ಮತದಾನ ಮಾಡುವ ಅವಕಾಶ ನೀಡಲಾಗಿತ್ತು. ಇದರಲ್ಲಿ ಅಭೂತ ಪೂರ್ವ ಯಶಸ್ಸು ಮತ್ತು ಮತದಾನದ ಪ್ರಮಾಣದಲ್ಲಿ ಏರಿಕೆ ಕಂಡಿದ್ದನ್ನು ಗುರುತಿಸಿದ ಇಲಾಖೆ ಈ ವಿಧದ ಮತದಾನ ಪ್ರಕ್ರಿಯೆ ಮುಂದುವರೆಸುವುದಾಗಿ ತಿಳಿಸಿದೆ.
ಹೀಗಾಗಿ ಈ ಲೋಕಸಭೆ ಚುನಾವಣೆಯಲ್ಲೂ ಹಿರಿಯ ವಯಸ್ಸಿನವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದೆ. ಇದರಿಂದ ಒಂದಿಷ್ಟು ಪ್ರಮಾಣದ ಮತದಾನ ಹೆಚ್ಚಾಗಲಿದೆ ಎಂಬುದು ಚುನಾವಣಾ ಆಯೋಗದ ನಿರೀಕ್ಷೆಯಾಗಿದೆ. ಹಾಗಾದರೆ ಯಾರೆಲ್ಲಾ ಮನೆಯಿಂದ ಮತದಾನ ಮಾಡಬುಹುದು? ಈ ಮತದಾನ ಮಾಡುವುದು ಹೇಗೆ? ಎಷ್ಟು ವರ್ಷ ವಯಸ್ಸಿನವರು ಈ ಮತದಾನದಲ್ಲಿ ಭಾಗಿಯಾಗಬಹುದು ಎಂಬ ಮಾಹಿತಿ ತಿಳಿದುಕೊಳ್ಳೋಣ.
'ಮನೆಯಿಂದ ಮತದಾನ' ಮಾಡೋದು ಹೇಗೆ?
'ಮನೆಯಿಂದ ಮತ' ಒಂದು ವಿಶೇಷ ಕಾರ್ಯಕ್ರಮವಾಗಿದೆ. ಮತದಾರರು ತಮ್ಮ ಆಯ್ಕೆಯ ಗೌಪ್ಯತೆಯನ್ನು ಖಾತ್ರಿಪಡಿಸಿಕೊಂಡು ತಮ್ಮ ನಿವಾಸದ ಸೌಕರ್ಯದಿಂದ ಅಂಚೆ ಮತಪತ್ರದ ಮೂಲಕ ತಮ್ಮ ಆದ್ಯತೆಯ ಅಭ್ಯರ್ಥಿಗೆ ತಮ್ಮ ಮತವನ್ನು ಚಲಾಯಿಸುವ ಅವಕಾಶ ಹೊಂದಿರುತ್ತಾರೆ. ಮನೆಯಿಂದಲೇ ಮತದಾನ ಮಾಡುವ ಆಯ್ಕೆಯನ್ನು ಪಡೆಯಲು, ವ್ಯಕ್ತಿಗಳು ತಮ್ಮ ಕ್ಷೇತ್ರದ ಚುನಾವಣಾಧಿಕಾರಿಗೆ ಫಾರ್ಮ್ 12-ಡಿ ಬಳಸಿ ಅರ್ಜಿ ಸಲ್ಲಿಸಬೇಕು. ಚುನಾವಣಾ ಅಧಿಸೂಚನೆಯ ಐದು ದಿನಗಳಲ್ಲಿ ಈ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ನಂತರ ಬೂತ್ ಮಟ್ಟದ ಅಧಿಕಾರಿಗಳು "ಗೈರುಹಾಜರಾದ ಮತದಾರರ" ಮನೆಗಳಿಗೆ ಭೇಟಿ ನೀಡಿ ನಮೂನೆ 12-ಡಿ ತಲುಪಿಸುತ್ತಾರೆ. ಈ ಮತದಾರರು ಅಂಚೆ ಮತಪತ್ರವನ್ನು ಆರಿಸಿಕೊಂಡರೆ, ಬೂತ್ ಮಟ್ಟದ ಅಧಿಕಾರಿಯು ಭರ್ತಿ ಮಾಡಿದ ನಮೂನೆ 12-ಡಿಯನ್ನು ಸಂಗ್ರಹಿಸಿ ಚುನಾವಣಾಧಿಕಾರಿಗೆ ಸಲ್ಲಿಸುತ್ತಾರೆ.
80 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು 1.8 ಕೋಟಿ ಹಿರಿಯ ನಾಗರಿಕರು ಈ ಅವಕಾಶದ ಲಾಭ ಪಡೆಯಲು ಅರ್ಹರಾಗಿದ್ದಾರೆ, 98 ಲಕ್ಷ ಮಂದಿ 80 ರಿಂದ 85 ವರ್ಷ ವಯಸ್ಸಿನವರು ಮತ್ತು 82 ಲಕ್ಷ ಮಂದಿ 85 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.
ಅಂಚೆ ಮತದಾನಕ್ಕೂ ಇದಕ್ಕೂ ಸಂಬಂಧವಿಲ್ಲ
ಕೆಲವರು ಅಂಚೆ ಮತದಾನ ಹಾಗೂ ಹಿರಿಯರ ಮತದಾನ ಎರಡೂ ಒಂದೇ ಎಂದುಕೊಂಡಿದ್ದಾರೆ ಆದರೆ ಇದು ಎರಡೂ ಬೇರೆ ಬೇರೆ ವಿಧಾನವಾಗಿದೆ. ಅಂಚೆ ಮತದಾನದಲ್ಲಿ ವಿಧಾನಸಭಾ ಚುನಾವಣೆ ಮತದಾನ ದಿನದಂದು ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದನ್ವಯ, ಅಗತ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂದರೆ ವಿದ್ಯುತ್ ಇಲಾಖೆ, ರೈಲ್ವೆ, ಆರೋಗ್ಯ ಇಲಾಖೆ, ವಿಮಾನಯಾನ, ಸಾರಿಗೆ ಸೇವೆ, ಅಗ್ನಿಶಾಮಕದಳ, ಚುನಾವಣಾ ದಿನದ ಕವರೇಜ್ ಮಾಡುವ ಅಧಿಕೃತ ಮಾಧ್ಯಮ ಪ್ರತಿನಿಧಿಗಳು, ಟ್ರಾಫಿಕ್ ಪೊಲೀಸ್ ಹಾಗೂ ಅಂಬ್ಯುಲೆನ್ಸ್ ಸೇವೆಯಲ್ಲಿರುವವರಿಗೆ ಅಂಚೆ ಮತಪತ್ರಗಳ ಮೂಲಕ ಮತಚಲಾಯಿಸಲು ಅವಕಾಶವಿರುತ್ತದೆ.



Click it and Unblock the Notifications