Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸುದರ್ಶನ ಹೋಮದ ಪ್ರಯೋಜನಗಳೇನು? ಬೇಕಾಗುವ ಸಾಮಗ್ರಗಳೇನು?
ಹಿಂದೂ ಧರ್ಮದಲ್ಲಿ ಸುದರ್ಶನ ಹೋಮಕ್ಕೆ ತುಂಬಾನೇ ಮಹತ್ವವಿದೆ, ಮನೆಗೆ ಒಳಿತಾಗಲಿ ಎಂದು ಸುದರ್ಶನ ಹೋಮ ಮಾಡಲಾಗುವುದು. ಈ ಸುದರ್ಶನ ಹೋಮವನ್ನು ಭಾರತದಲ್ಲಿ ಮಾತ್ರವಲ್ಲ ಶ್ರೀಲಂಕಾ, ನೇಪಾಳ, ಸಿಂಗಾಪುರ, ಮಲೇಷ್ಯಾ, ಬೂತಾನ್‌ನಲ್ಲೂ ನಡೆಸುತ್ತಾರೆ. ಭಾರತದ ಪ್ರಸಿದ್ಧ ಶ್ರೀ ಸುದರ್ಶನ ಭಗವಂತನ ದೇವಾಲಯ ನಮ್ಮ ಕರ್ನಾಟಕದ ಶ್ರೀರಂಗಪಟ್ಟಣದಲ್ಲಿದೆ.

ಈ ಸುದರ್ಶನ ಹೋಮದ ಮಹತ್ವವೇನು? ಯಾವಾಗ ಸುದರ್ಶನ ಹೋಮ ಮಾಡಲಾಗುವುದು, ಇದನ್ನು ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಸುದರ್ಶನ ಹೋಮ ಎಂದರೇನು?
ಸುದರ್ಶನ ಹೋಮ ಸಂಸ್ಕೃತದಿಂದ ಬಂದ ಪದವಾಗಿದೆ. ಸು ಎಂದರೆ ಒಳ್ಳೆಯದು, ಶುಭ ಎಂದರ್ಥ, ದರ್ಶನ ಎಂದರೆ ಒಳ್ಳೆಯ ದೃಷ್ಟಿ ಎಂದರ್ಥ. ಯಾರು ಸುದರ್ಶನ ಹೋಮವನ್ನು ಮಾಡುತ್ತಾರೋ ಅವರು ಸುದರ್ಶನ ಭಗವಂತನ ಆಶೀರ್ವಾದವನ್ನು ಪಡೆಯುತ್ತಾರೆ. ಶ್ರೀ ವಿಷ್ಣು ಕೂಡ ಸುದರ್ಶನ ಚಕ್ರ ಹಿಡಿದಿದ್ದಾರೆ. ಸುದರ್ಶನ ಹೋಮ ಮಾಡುವುದರಿಂದ ಒಳಿತಾಗುವುದು ಎಂಬ ನಂಬಿಕೆಯಿದೆ.
ಯಾವಾಗ ಸುದರ್ಶನ ಹೋಮ ಮಾಡಲಾಗುವುದು?
ಸುದರ್ಶನ ಹೋಮವನ್ನು ಏಕಾದಶಿ, ದ್ವಾದಶಿ, ಹುಣ್ಣಿಮೆಯಂದು ಮಾಡಲಾಗುವುದು.
ಸುದರ್ಶನ ಹೋಮವನ್ನು ಏಕೆ ಮಾಡಲಾಗುವುದು?
ಕೆಟ್ಟ ದೃಷ್ಟಿ ಹೋಗಲಿ, ಶತ್ರುಗಳ ಕಾಟ ತಪ್ಪಲಿ, ಎಲ್ಲವೂ ಒಳಿತಾಗಲಿ ಆರೋಗ್ಯ ಉತ್ತಮವಾಗಲಿ ಎಂದು ಸುದರ್ಶನ ಹೋಮವನ್ನು ಮಾಡಲಾಗುವುದು. ಈ ಹೋಮವನ್ನು ಮಾಡುವುದರಿಂದ ಅನಗ್ಯತ ಚಿಂತೆಗಳು ದೂರಾಗಲಿದೆ, ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ಈ ಹೋಮ ಮಾಡುವುದರಿಂದ ಅನಾಹುತ ಸಂಭವಿಸಲಿದ್ದರೆ ಅವೆಲ್ಲವೂ ದೂರಾಗುವುದು ಎಂಬ ನಂಬಿಕೆಯಿದೆ.
ಸುದರ್ಶನ ಹೋಮಕ್ಕೆ ಬೇಕಾಗುವ ಸಾಮಗ್ರಿ
ತುಳಸಿ ಎಲೆ
ಗಂಧದ ಕಡ್ಡಿ
ಹಣ್ಣುಗಳು
ಹೂವುಗಳು
ಸುದರ್ಶನ ಯಂತ್ರ
ಪ್ರಸಾದ
ಸುದರ್ಶನ ಹೋಮ ಮಾಡುವುದು ಹೇಗೆ?
* ಸುದರ್ಶನ ಮೂರ್ತಿಯನ್ನು ಇಟ್ಟು ಮಂತ್ರಗಳನ್ನು ಹೇಳಲಾಗುವುದು
* ದೇವರಿಗೆ ಪಂಚಾಮೃತ ಅಭಿಷೇಕ ಮಾಡಲಾಗುವುದು
* ದೇವರಿಗೆ ತುಪ್ಪ, ಜೇನು ತುಪ್ಪ, ಡ್ರೈಫ್ರೂಟ್ಸ್ ಅರ್ಪಿಸಲಾಗುವುದು
* ಹೋಮದ ಬಳಿಕ ಅಗ್ನಿಕುಂಡದ ಸುತ್ತ ಸುತ್ತು ಬರಬೇಕು.
*ಹೋಮದ ಬಸ್ಮವನ್ನು ಹಣೆಗೆ ಹಚ್ಚಿ.



Click it and Unblock the Notifications
