Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಆಧಾರ್ ಕಾರ್ಡ್‌ನ ಫೋಟೋ ಬದಲಾಯಿಸುವುದು ಹೇಗೆ.? ಏನು ಮಾಡಬೇಕು?
ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಸರ್ಕಾರ ಈ ತಿಂಗಳ 14ರ ವರೆಗೆ ಸಮಯಾವಕಾಶ ನೀಡಿದೆ. ಇನ್ನು ಈ ವಿಶಿಷ್ಟ ಗುರುತಿನ ಸಂಖ್ಯೆಯ ಕಾರ್ಡ್ ಎಲ್ಲಾ ಕೆಲಸಗಳಿಗೂ ಬರುತ್ತಿದೆ. ನೀವು ಯಾವುದೇ ದಾಖಲೆ ಪಡೆಯಬೇಕು ಎಂದರೆ ಆಧಾರ್ ಕಾರ್ಡ್ ಬಹುಮುಖ್ಯ ಅದರಲ್ಲೂ ಈ ಕಾರ್ಡ್ ಇಲ್ಲದೆ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಆಗುವುದಿಲ್ಲ.
ಹೀಗಿರುವಾಗ ಈ ಕಾರ್ಡ್ ತಿದ್ದು ಪಡಿ ಮಾಡಲು ಸಮಯ ನೀಡಲಾಗಿದೆ. ಜೊತೆಗೆ ಹೊಸ ಆಧಾರ್ ಸಹ ಮಾಡಿಸುವುದು ಕಡ್ಡಾಯವಾಗಿದೆ. ಈಗ ಚಿಕ್ಕ ಮಕ್ಕಳಿಗೂ ಸಹ ಆಧಾರ್ ಮಾಡಲಾಗುತ್ತದೆ. ಆದ್ರೆ ಆಧಾರ್ ಕಾರ್ಡ್ ಇರುವವರದ್ದು ಒಂದೇ ಸಮಸ್ಯೆ ಏನಂದ್ರೆ ಅದರಲ್ಲಿ ಫೋಟೋ ಚನ್ನಾಗಿ ಬರುವುದಿಲ್ಲ ಎನ್ನುವುದು. ಅಲ್ಲದೆ ಫೋಟೋ ಬದಲಿಸಲು ಹರಸಾಹಸ ಪಡುವುದು.

ಆದ್ರೆ ನಾವಿಂದು ನೀವು ಸುಲಭವಾಗಿ ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಿಸುವ ಕುರಿತು ಹೇಳಲಿದ್ದೇವೆ. ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಬದಲಿಸಲು ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ವೆಬ್‌ಸೈಟ್‌ನ ಪ್ರಕಾರ, 12-ಅಂಕಿಯ ಗುರುತಿನ ಸಂಖ್ಯೆ ಆಧಾರ್ ಕಾರ್ಡ್ ಅನ್ನು ಜೂನ್ 14 ರವರೆಗೆ ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಬಹುದು. ಆಧಾರ್ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಗುರುತಿನ ಪುರಾವೆ (PoI) ಮತ್ತು ವಿಳಾಸದ ಪುರಾವೆ (PoA) ಪೇಪರ್‌ಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿದೆ, ₹ 50 ವೆಚ್ಚವಾಗುತ್ತದೆ. ಇದರಲ್ಲಿ ಕೇವಲ ತಿದ್ದುಪಡಿ ಮಾಡಲಾಗುತ್ತದೆ.
ಆದರೆ 10 ವರ್ಷದಿಂದ ಅಪ್‌ಡೇಟ್ ಮಾಡದೆ ಇದ್ದರೆ ಈಗ ಬೆರಳಚ್ಚು ಹಾಗೂ ಐರಿಸ್ ಗುರುತು ನೀಡಬೇಕಾಗುತ್ತದೆ. ಇದಕ್ಕೆ 100 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಹಾಗಾದ್ರೆ ನಾವು ನಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಬದಲಾಯಿಸುವುದು ಹೇಗೆ ಹಂತ ಹಂತವಾಗಿ ಅದರ ಮಾಹಿತಿ ತಿಳಿದುಕೊಳ್ಳಿ.
- ಮೊದಲು UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ
- ಈ ಫಾರ್ಮ್ ಅನ್ನು ಸರಿಯಾಗಿ ಓದಿಕೊಂಡು ಮುದ್ರಣವನ್ನು ತೆಗೆದುಕೊಂಡು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
- ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಮತ್ತು ಆಧಾರ್ ಕಾರ್ಯನಿರ್ವಾಹಕರಿಗೆ ಆಧಾರ್ ನೋಂದಣಿ ಫಾರ್ಮ್ ಅನ್ನು ಸಲ್ಲಿಸಿ.
- ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಿ. ನಂತರ ಕಾರ್ಯನಿರ್ವಾಹಕರು ನಿಮ್ಮ ಚಿತ್ರವನ್ನು ಕೇಂದ್ರದಲ್ಲಿಯೇ ಕ್ಲಿಕ್ ಮಾಡುತ್ತಾರೆ.
- ನಿಮ್ಮ ವಿವರಗಳನ್ನು ಅಪ್‌ಡೆಟ್ ಮಾಡಲು ನೀವು 100 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ
- ಕಾರ್ಡ್‌ನ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಬಳಸಬಹುದಾದ URN ಅನ್ನು ಒಳಗೊಂಡಿರುವ ಸ್ವೀಕೃತಿ ಸ್ಲಿಪ್ ಅನ್ನು ಅವರ ಬಳಿ ಕೇಳಿ ಪಡೆದುಕೊಳ್ಳಿ.
- ಕೆಲವು ದಿನಗಳ ನಂತರ, ನಿಮ್ಮ ನವೀಕರಿಸಿದ ಆಧಾರ್ ಕಾರ್ಡ್ ಸಿದ್ಧವಾದಾಗ, ನೀವು ಅದನ್ನು ಯುಐಡಿಎಐ ವೆಬ್‌ಸೈಟ್‌ನಿಂದ 'ನನ್ನ ಆಧಾರ್' ಅಡಿಯಲ್ಲಿ ಡೌನ್‌ಲೋಡ್ ಮಾಡಬಹುದು
- 'ಡೌನ್‌ಲೋಡ್ ಆಧಾರ್' ಮೇಲೆ ಕ್ಲಿಕ್ ಮಾಡಿ, ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ನವೀಕರಿಸಿದ ಇ-ಆಧಾರ್ ಕಾರ್ಡ್ ಅನ್ನು PDF ನಲ್ಲಿ ಡೌನ್‌ಲೋಡ್ ಮಾಡಿ.
ಈ ರೀತಿ ಫೋಟೋ ಬದಲಾವಣೆಯೆ ಯಾವುದೇ ದಾಖಲೆಯ ಅಗತ್ಯವಿಲ್ಲ ಜೊತೆಗೆ ಫೋಟೋವನ್ನು ನೀವು ಕೊಂಡೊಯ್ಯುವ ಅಗತ್ಯವಿರುವುದಿಲ್ಲ. ಇನ್ನು ಸುಲಭವಾಗಿ ಮಾಡಬೇಕು ಅಂದರೆ ಹತ್ತಿರದ ಪೋಸ್ಟ್ ಆಫೀಸ್‌ಗೆ ತೆರಳಿ ಅಲ್ಲಿ ಉಚಿತವಾಗಿ ಅರ್ಜಿ ನೀಡಲಾಗುತ್ತದೆ. ಆದರೆ ಅಲ್ಲಿಯೂ ಈ ಶುಲ್ಕಗಳು ಪಾವತಿಸಬೇಕಾಗುತ್ತದೆ.



Click it and Unblock the Notifications
