Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಬಿಳಿ ಗಡ್ಡದ ಸಾಂಟಾ ಕ್ಲಾಸ್ ಯಾರು..? ಈ ಕಥೆ ಗೊತ್ತಾ ನಿಮಗೆ?
ಕ್ರಿಸ್‌ಮಸ್ ಆಚರೆಣೆಗಾಗಿ ಇಡೀ ವಿಶ್ವವೇ ಕಾದು ಕುಳಿತಿದೆ. ನಾಳೆ ಜಗತ್ತಿನಾದ್ಯಂತ ಕ್ರಿಸ್ ಮಸ್ ಆಚರಣೆ ನಡೆಯಲಿದೆ. ಕ್ರಿಸ್‌ಮಸ್ ಎಂದಾಕ್ಷಣ ನೆನಪಾಗೋದು ಕೇಕ್ ಹಾಗೂ ಸಾಂಟಾ ಕ್ಲಾಸ್. ಒಬ್ಬ ಬಿಳಿ ಗಡ್ಡ ಬಿಟ್ಟಿರುವ ಕೆಂಪು ಬಟ್ಟೆ ಧರಿಸಿರುವ ಅಜ್ಜ ಎಂಬ ನೆನಪು ಚಿಕ್ಕಂದಿನಿಂದಲೂ ಉಳಿದುಬಿಟ್ಟಿದೆ. ಹಾಗಾದ್ರೆ ಯಾರು ಈ ಸಾಂಟಾ ಗೊತ್ತಾ?
ಸಾಂಟಾ ಕ್ರಿಸ್‌ಮಸ್ ದಿನದಂದು ಮನೆ ಮನೆಗೆ ಬಂದು ಉಡುಗೊರೆಗಳ ಇಟ್ಟು ಹೋಗುತ್ತಾನೆ ಎಂಬ ನಂಬಿಕೆ ಇದೆ. ಹಾಗಾದ್ರೆ ಆತ ಯಾರು? ಆತ ಯಾವಾಗಲೂ ಕೆಂಪು ಬಟ್ಟೆ ಧರಿಸಿರುವುದೇಕೆ ಎಂಬ ಕುತೂಹಲ ವಿಚಾರಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಪ್ರೀತಿಯಿಂದ ಸೇಂಟ್ ನಿಕೋಲಸ್ ಅಥವಾ ಕ್ರಿಸ್ ಕ್ರಿಂಗಲ್ ಎಂದು ಕರೆಯಲ್ಪಡುವ ಸಾಂಟಾ ಕ್ಲಾಸ್, ಕ್ರಿಸ್ಮಸ್ ಸಂಪ್ರದಾಯಗಳೊಂದಿಗೆ ಆಳವಾಗಿ ಹೆಣೆದುಕೊಂಡಿರುವ ಕಥೆಯನ್ನು ಹೊಂದಿದೆ. ಕ್ರಿಸ್‌ಮಸ್ ಮುನ್ನಾದಿನದಂದು ಮಕ್ಕಳಿಗೆ ಆಟಿಕೆಗಳನ್ನು ವಿತರಿಸುವ ವ್ಯಕ್ಯಿ ಎಂದು ಹಿಂದಿನಿಂದಲೂ ನಂಬಲಾಗಿದೆ. ಈ ಸಾಂಟಾನ ಮೂಲವು 3ನೇ ಶತಮಾನಕ್ಕೆ ಹಿಂದಿನದು. ಈ ಯುಗವು ಸಂತ ನಿಕೋಲಸ್ ಅವರ ಜೀವಿತಾವಧಿಯನ್ನು ಗುರುತಿಸುತ್ತದೆ, ನಂತರ ಅವರು ಮಕ್ಕಳ ಪೋಷಕ ಸಂತ ಎಂದು ಕರೆಯಲ್ಪಟ್ಟರು ಎಂದು ಇತಿಹಾಸ ತಿಳಿಸುತ್ತದೆ.
ಸಾಂಟಾ ಕ್ಲಾಸ್‌ನ ಮೂಲ ಕಥೆಯು ಇಂದಿನ ಟರ್ಕಿಯಲ್ಲಿ ಸುಮಾರು A.D. 280 ರಲ್ಲಿ ಜನಿಸಿದ ಸಂತ ನಿಕೋಲಸ್‌ನ ಜೀವನ ಕಥೆ ಎಂದು ತಿಳಿದುಬರುತ್ತದೆ. ಆತ ತನ್ನ ಮೂವರು ಸಹೋದರಿಯರ ವರದಕ್ಷಿಣೆ ಹೊಂದಿಸಲು ಕೆಲಸ ಮಾಡುತ್ತಿದ್ದನಂತೆ ಜೊತೆಗೆ ಮುಂದೆ ಮಕ್ಕಳ ರಕ್ಷಕನಾಗಿ ಬದಲಾದನಂತೆ. ಆತ ಡಿಸೆಂಬರ್ 6ರಂದು ಮರಣ ಹೊಂದಿದ. ಈ ದಿನವು ವಿವಾಹ ದಿನಕ್ಕೆ ಪ್ರಾಶಸ್ತ್ಯ ದಿನ ಎಂದು ನಂಬಲಾಗಿದೆ. ಹೀಗೆ ಆತ ಕ್ರಿಸ್‌ಮಸ್ ದಿನಗಳಲ್ಲಿ ಮಕ್ಕಳನ್ನು ಖಷಿಪಡಿಸಲು ಬರುತ್ತಾನೆ ಎಂದು ನಂಬಲಾಗಿದೆ.
ಮೊದಲು ಕಪ್ಪು ಬಣ್ಣದಲ್ಲಿದ್ದ ಸಾಂಟಾ
ನಾವು, ನೀವು ನೋಡಿದಂತೆ ಸಾಂಟಾ ಯಾವಾಗಲೂ ಬಿಳಿಯ ಗಡ್ಡ, ಕೆಂಪು ಬಟ್ಟೆ ಧರಿಸಿರುತ್ತಾನೆ. ಆದ್ರೆ ಆತ ಮೊದಲು ಕಪ್ಪು ಗಡ್ಡ ಹೊಂದಿದ್ದನಂತೆ, ವರ್ಷಗಳು ಉರುಳಿದಂತೆ ಆತನಿಗೆ ವಯಸ್ಸಾಗಿದೆ ಎಂದು ಬಿಳಿ ಗಡ್ಡದಿಂದ ಆತನ ಕಾಣಲು ಜನ ಬಯಸ್ಸಿದ್ದರಂತೆ. ಹೀಗಾಗಿ ನಾವು ನೋಡುತ್ತಿರುವ ಸಾಂಟಾನ ಗಡ್ಡ ಕೂದಲು ಬಿಳಿಯಾಗಿರುತ್ತದೆ. ಇದಕ್ಕೂ ಮುನ್ನ 1864ರಲ್ಲಿ ಮೂರ್ ಅವರು ಬರೆದಿದ್ದ ಚಿತ್ರವೊಂದರಲ್ಲಿ ಸಾಂಟಾ ಹಳದಿ ಬಟ್ಟೆಯಲ್ಲಿ ಕಂಡುಬಂದಿದ್ದರು.
ಅಂತಿಮವಾಗಿ, 1881ರಲ್ಲಿ, ಸಾಂಟಾ ತನ್ನ ಪ್ರಸಿದ್ಧ ಕೆಂಪು ಸೂಟ್‌ನಲ್ಲಿ ಕಂಡುಬಂದಿದ್ದ ಇದನ್ನು ನಾಸ್ಟ್ ಎಂಬ ಚಿತ್ರಕಾರನೊಬ್ಬ ಬಿಡಿಸಿದ್ದ, ಇದು ಹೆಚ್ಚು ಜನಪ್ರೀಯತೆ ಪಡೆದುಕೊಂಡಿತು. ಆದರೂ ಹಲವು ಕಡೆ ಒಂದೇ ರೀತಿಯ ಸಾಂಟಾನ ರೂಪ ಕಂಡುಬರುತ್ತಿರಲಿಲ್ಲ. 1902 ರಲ್ಲಿ, ಸಾಂಟಾ ಹಸಿರು ವಸ್ತ್ರವನ್ನು ಧರಿಸಿ "ಸಾಂಟಾ ಕ್ಲಾಸ್‌ನ ಜೀವನ ಮತ್ತು ಸಾಹಸಗಳು ಎಂಬ ಪುಸ್ತಕದ ಕವರ್ ಅನ್ನು ಚಿತ್ರಿಸಲಾಗಿತ್ತು. ಆದರೆ ಅಂತಿಮವಾಗಿ ಕೆಂಪು ಬಟ್ಟೆ, ಬಿಳಿ ಗಡ್ಡ, ಕೆಂಪು ಟೋಪಿಯ ಸಾಂಟಾ ಎಲ್ಲರ ಮೆಚ್ಚುಗೆ ಗಳಿಸಿತ್ತು.
ಹ್ಯಾಡನ್ ಸುಂಡ್‌ಬ್ಲೋಮ್ ಕೋಕಾ ಕೋಲಾ ಮತ್ತು ಸಾಂಟಾ
ಹ್ಯಾಡನ್ ಸನ್‌ಬ್ಲೋಮ್ ಎಂಬ ಅಮೆರಿಕನ್ ಕಲಾವಿದ ಮೊದಲ ಬಾರಿಗೆ ಕೋಕಾ ಕೋಲಾಗಾಗಿ ಬಳಸಿದ್ದ ಸಾಂಟಾ ಕ್ಲಾಸ್ ಚಿತ್ರ ಇಂದು ನಾವು ನೀವು ನೋಡುತ್ತಿರುವ ಸಾಂಟಾ ಕ್ಲಾಸ್ ಆಗಿದೆ. 1964 ರಲ್ಲಿ ಕೋಕಾ ಕೋಲಾ ಬಾಟಲ್ ಜೊತೆ ಕೆಂಪು ಬಟ್ಟೆಯಲ್ಲಿ ಕಾಣಿಸಿಕೊಂಡ ಸಾಂಟಾ ಕ್ಲಾಸ್ ಅಧಿಕೃತ ಸಾಂಟಾ ಆಗಿ ಗುರುತಿಸಲ್ಪಟ್ಟಿತು.
ಈ ಚಿತ್ರಗಳು ಅಂಗಡಿ, ಪೋಸ್ಟ್, ಗೋಡೆ, ಬಿಲ್‌ಬೋರ್ಡ್‌ಗಳ ಮೇಲೆ ರಾರಾಜಿಸಿತು. ಕೋಕಾ ಕೋಲಾ ಜಾಹೀರಾತು ಎಲ್ಲೆಡೆ ಫೇಮಸ್ ಆಗಿತ್ತು. ಈ ಚಿತ್ರವೇ ಮುಂದೆ ಸಾಂಟಾ ಕ್ಲಾಸ್‌ನ ಅಧಿಕೃತ ಚತ್ರ ಎಂದು ಬಳಕೆ ಹೆಚ್ಚಾಯಿತು.



Click it and Unblock the Notifications

