Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ವಿಶ್ವಕಪ್ ಟೂರ್ನಿ ಗೆದ್ದ ಭಾರತೀಯ ವನಿತೆಯರ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು?
ಭಾರತ ವನಿತೆಯರು ಕ್ರಿಕೆಟ್ ಲೋಕದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವ ಕಪ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಜಯಗಳಿಸಿ ಚೊಚ್ಚಲ ಮಹಿಳಾ ವಿಶ್ವಕಪ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ವಿಜಯಿಗಳಾಗಿ ವಿಶ್ವ ಚಾಂಪಿಯನ್ನರ ಪಟ್ಟ ತಮ್ಮದಾಗಿಸಿಕೊಂಡರು.
ಟೀಮ್ ಇಂಡಿಯಾ ಮಹಿಳೆಯರ ವಿಶ್ವ ಕಪ್ ಗೆಲ್ಲುತ್ತಿದ್ದಂತೆ ಅಭಿನಂದನೆಗಳು ಹರಿದುಬರುತ್ತಿವೆ. ಹಾಗೆ ಭಾರತದಾದ್ಯಂತ ನಿನ್ನೆ ಸಂಭ್ರಮ ಮನೆ ಮಾಡಿತ್ತು. ಇನ್ನು ಟೀಮ್ ಇಂಡಿಯಾ ಪಾಲಿಗೆ ಇಂದು ಮೊದಲ ಮಹಿಳಾ ವಿಶ್ವಕಪ್ ಆಗಿದೆ. ಹೀಗಾಗಿ ಇದೊಂದು ಮರೆಯಲಾಗದ ಕ್ಷಣವಾಗಿ ಬದಲಾಗಿತ್ತು.

ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಲೀಗ್ ಹಂತದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಕೆಲ ಪಂದ್ಯಗಳು ಮಳೆಯಿಂದಾಗಿ ಅಡ್ಡಿಯಾದರೂ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಚಾಂಪಿಯನ್ ತಂಡವಾಗಿದ್ದ ಆಸ್ಟ್ರೇಲಿಯಾ ವಿರುದ್ಧವೇ ಸೆಮಿಫೈನಲ್ ಪಂದ್ಯದಲ್ಲಿ ಜಯಗಳಿಸಿ ಹೊಸ ಇತಿಹಾಸ ಬರೆದಿತ್ತು. ಈ ಸಮಯದಲ್ಲಿಯೇ ಚಾಂಪಿಯನ್ ಪಟ್ಟ ಭಾರತಕ್ಕೆ ಬರಲಿದೆ ಎಂಬುದು ಬಹುತೇಕ ಖಚಿತವಾಗಿತ್ತು.
ಸದೆfಯ ಈ ವನಿತೆಯರ ತಂಡಕ್ಕೆ ಐಸಿಸಿ ಟ್ರೋಫಿ ಹಾಗೂ ಬಹುಮಾನದ ಮೊತ್ತ ನೀಡುವ ಜೊತೆಗೆ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಕೂಡ ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಘೋಷಿಸಿದೆ.
ಐಸಿಸಿಯಿಂದ ಪಡೆದಿದ್ದೆಷ್ಟು?
ವಿಶ್ವಕಪ್ ಜಯಗಳಿಸಿದ ಭಾರತ ತಂಡಕ್ಕೆ ಐಸಿಸಿ ಬರೋಬ್ಬರಿ 4.48 ಮಿಲಿಯನ್ ಡಾಲರ್ ಅಂದರೆ ಸರಿ ಸುಮಾರು 40 ಕೋಟಿ ರೂಪಾಯಿ ಪಡೆದುಕೊಂಡಿದೆ. ಈ ಮೊತ್ತ ಬಿಸಿಸಿಐಗೆ ಸೇರಲಿದೆ. ಹಾಗೆ ಬಿಸಿಸಿಐಗೆ ಗೆದ್ದ ತಂಡಕ್ಕೆ ಒಟ್ಟು 51 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಇನ್ನು ವಿಶ್ವಕಪ್ ರನ್ನರ್ ಅಪ್ ತಂಡವಾಗಿರುವ ಸೌತ್ ಆಫ್ರಿಕಾ ತಂಡ 20 ಕೋಟಿ ರೂಪಾಯಿ, ಸೆಮಿಫೈನಲ್‌ನಲ್ಲಿ ಸೋತ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಕ್ಕೆ ತಲಾ 10 ಕೋಟಿ ರೂಪಾಯಿ ಬಹುಮಾನವಾಗಿ ಸಿಗಲಿದೆ. ಈ ವಿಶ್ವಕಪ್ ಟೂರ್ನಿಯ ಒಟ್ಟಾರೆ ಬಹುಮಾನದ ಮೊತ್ತ ಸುಮಾರು 123 ಕೋಟಿ ರೂಪಾಯಿ ಆಗಿದೆ. ಇದು ಪುರುಷರ ವಿಶ್ವಕಪ್ ಟೂರ್ನಿಯ ಬಹುಮಾನದ ಮೊತ್ತವನ್ನು ಮೀರಿದೆ ಎಂದು ವರದಿಯಾಗಿದೆ.
ಹಿಂದಿನ ಆವೃತ್ತಿಗೆ ಹೋಲಿಸಿದರೆ ಇದು ಸುಮಾರು ನಾಲ್ಕು ಪಟ್ಟು ಹೆಚ್ಚಳವಾಗಿದೆ, ಹಾಗೆ ಐಸಿಸಿ ಮತ್ತು ಬಿಸಿಸಿಐ ಆಟಗಾರರ ವೇತನ ಕುರಿತಾಗಿ ಏಕರೂಪ ನಿಯಮ ತರಲು ಮುಂದಾಗಿದ್ದಾರೆ. ಪುರುಷ ಕ್ರೀಡಾಪಟುಗಳಿಗೆ ನೀಡಲಾಗುವ ಬಹುಮಾನದ ಮೊತ್ತದಷ್ಟೇ ಮಹಿಳಾ ಕ್ರೀಡಾಪಟುಗಳಿಗೂ ನೀಡಬೇಕು ಎಂಬ ಕೂಗಿಗೆ ಧ್ವನಿಯಾಗುವ ಕಾರ್ಯ ಮಾಡುತ್ತಿದ್ದಾರೆ. ಈ ಹಿನ್ನೆಲೆ ಬಿಸಿಸಿಐ ತನ್ನ ವೇತನ ಪರಿಷ್ಕರಣೆ ಮಾಡಿರುವುದು ನೋಡಬಹುದು.
ಈ ಮಹಿಳಾ ವಿಶ್ವಕಪ್ ಟೂರ್ನಿ ಆರಂಭವಾದ ದಿನದಿಂದಲೂ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿತ್ತು. ಅಂತೆಯೇ ಗೆಲ್ಲುತ್ತ ಫೈನಲ್ ವರೆಗೂ ಪ್ರವೇಶ ಮಾಡಿತ್ತು. ಆದ್ರೆ ಲೀಗ್‌ನಲ್ಲಿ ಕೆಲವು ಪಂದ್ಯದಲ್ಲಿ ಮುಗ್ಗರಿಸಿದ್ದರೂ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಹಾಲಿ ಚಾಂಪಿಯನ್ನರ ವಿರುದ್ಧದ ಜಯ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿತ್ತು. ಸದ್ಯ ಭಾರತ ಕ್ರಿಕೆಟ್ ತಂಡವೀಗ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹಾಗೆ ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಜಯ ಗಳಿಸುತ್ತಿದ್ದಂತೆ ರಾಜಕೀಯ ನಾಯಕರು, ಸಿನಿಮಾ ತಾರೆಯರು, ಕ್ರಿಕೆಟ್ ಲೋಕದ ದಿಗ್ಗಜರು ಶುಭ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಮಹಿಳಾ ಕ್ರಿಕೆಟ್ ತಂಡ ಜಯಗಳಿಸಿದ್ದಕ್ಕೆ ಅಭಿನಂದನೆ ಅರ್ಪಿಸಿದ್ದಾರೆ.



Click it and Unblock the Notifications