Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಇನ್ಸ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದರೆ ಎಷ್ಟು ಹಣ ಬರಲಿದೆ ಗೊತ್ತಾ?
ಇನ್ಸ್‌ಸ್ಟಾಗ್ರಾಮ್, ಅಮೆರಿಕದಲ್ಲಿ ಆರಂಭಗೊಂಡ ಶಾರ್ಟ್ ವಿಡಿಯೋ, ಫೋಟೋ ಶೇರಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಕೆವಿನ್ ಸಿಸ್ಟ್ರೋಮ್, ಮೈಕ್ ಕ್ರಿಯ್ಗರ್ ಇದನ್ನು 2010ರಲ್ಲಿ ಆರಂಭಿಸಿದರು. ಆದರೆ ಮೊದಲು ಇದನ್ನು ಬರ್ಬನ್ (Burbn) ಎಂದು ಕರೆಯಲಾಗಿತ್ತು. ಬಳಿಕ ಇನ್ಸ್‌ಸ್ಟಾಗ್ರಾಮ್ ಎಂದು ಮರುನಾಮಕರಣ ಮಾಡಿದ್ದರು. ಇದಾದ ಬಳಿಕ ಮೆಟಾ ಈ ಸಂಸ್ಥೆಯನ್ನು ಖರೀದಿಸಿದ್ದು ನಿಮಗೆಲ್ಲಾ ತಿಳಿದೇ ಇದೆ.
ಈಗ ವಿಶ್ವದಲ್ಲಿ ಅತೀ ಹೆಚ್ಚು ಸಕ್ರೀಯ ಬಳಕದಾರರ ಹೊಂದಿರುವ ಆಪ್‌ಗಳಲ್ಲಿ ಈ ಇನ್ಸ್‌ಸ್ಟಾಗ್ರಾಮ್ ಕೂಡ ಒಂದಾಗಿದೆ. ನಿತ್ಯ ಲಕ್ಷ ಲಕ್ಷ ಜನರು ಇದನ್ನು ಬಳಸುತ್ತಾರೆ. ಅದ್ರಲ್ಲೂ ಗೂಗಲ್‌ನ ಹಲವು ಲಾಭದಾಯಕ ಸಂಸ್ಥೆಗಳಗಳ ಪೈಕಿ ಇನ್ಸ್‌ಸ್ಟಾಗ್ರಾಮ್ ಕೂಡ ಒಂದು. ಸದ್ಯ ಪ್ರತಿ ತಿಂಗಳು 2 ಮಿಲಿಯನ್ ಸಕ್ರೀಯ ಬಳಕೆದಾರರನ್ನು ಅದು ಹೊಂದಿದೆ.

ಹಾಗೆ ಇನ್ಸ್‌ಸ್ಟಾಗ್ರಾಮ್ ಬಳಕೆದಾರರಂತೆ ಅಲ್ಲಿ ಕ್ರಿಯೇಟರ್ಸ್ ಕೂಡ ಹುಟ್ಟಿಕೊಂಡಿದ್ದಾರೆ. ಹತ್ತಾರು ಮಿಲಿಯನ್ ಫಾಲೋವರ್ಸ್ ಹೊಂದಿರುವ ಮಂದಿ ನಿತ್ಯವೂ ಒಂದಲ್ಲಾ ಒಂದು ರೀತಿಯ ವಿಡಿಯೋಗಳ ಹಂಚಿಕೊಳ್ಳುವುದು ನೋಡಬಹುದು. ಕೆಲವರು ವೈಯಕ್ತಿಕ ವಿಚಾರಗಳ ಹಂಚಿಕೊಳ್ಳುವುದು, ಡ್ಯಾನ್ಸ್, ಸ್ಕ್ರಿಪ್ಟ್, ಡ್ರಾಮಾ, ಟ್ರಾವೆಲಿಂಗ್, ಫೋಟೋಗ್ರಫಿ ಹೀಗೆ ಹತ್ತು ಹಲವು ರೀತಿಯ ವಿಡಿಯೋಗಳ ಕ್ರಿಯೇಟರ್ಸ್ ಈಗ ನೋಡಬಹುದು.
ಆದ್ರೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ ವೀಕ್ಷಣೆ ಪಡೆಯುವ ವಿಡಿಯೋಗಳಿಗೆ ಎಷ್ಟು ಹಣ ಬರುತ್ತೆ ಅನ್ನೋದು ನಿಮಗೆ ಗೊತ್ತಾ? ಈಗ ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆ ಬರುವ ಸಾವಿರಾರು ವಿಡಿಯೋಗಳನ್ನು ನಾವು ನೋಡಬಹುದು. ಆದ್ರೆ ಮಿಲಿಯನ್ ವೀಕ್ಷಣೆ ಪಡೆದ ವಿಡಿಯೋಗಳಿಗೆ ಇನ್ಸ್‌ಸ್ಟಾಗ್ರಾಮ್ ಎಷ್ಟು ಹಣ ನೀಡಲಿದೆ?
ಈ ಮಾಹಿತಿ ತಿಳಿದರೆ ನೀವು ಕೂಡ ಅಚ್ಚರಿಗೊಳಗಾಗಬಹುದು. 1 ಮಿಲಿಯನ್ ವೀಕ್ಷಣೆ ಪಡೆಯುವ ವಿಡಿಯೋಗಳಿಗೂ ಇನ್ಸ್‌ಸ್ಟಾಗ್ರಾಮ್ ಯೂಟ್ಯೂಬ್‌ನಂತೆ ಹಣ ಪಾವತಿ ಮಾಡುವುದಿಲ್ಲ. ಹೌದು ಯೂಟ್ಯೂಬ್‌ನಲ್ಲಿ ಮಾನಿಟೈಜೇಷನ್ ಸುಲಭವಾಗಿದೆ. ನಿಮ್ಮ ವೀಕ್ಷಣೆಗಳೆಷ್ಟು, ವೀಕ್ಷಕರು ಎಷ್ಟು ಸಮಯ ನಿಮ್ಮ ವಿಡಿಯೋ ವೀಕ್ಷಿಸಿದ್ದಾರೆ. ಅದು ಯಾವ ಕ್ಯಾಟಗರಿಯ ವಿಡಿಯೋ ಹೀಗೆ ಒಂದಿಷ್ಟು ಮಾನದಂಡಳ ಮೂಲಕ ಹಣ ಪಾವತಿ ಮಾಡಲಿದೆ.
ಆದ್ರೆ ಇನ್‌ಸ್ಟಾಗ್ರಾಮ್ ನೇರವಾಗಿ ನಿಮಗೆ ಹಣ ಪಾವತಿ ಮಾಡುವುದಿಲ್ಲ. ಬದಲಿಗೆ ಬ್ರಾಂಡ್‌ಗಳ ಅಫಿಲಿಯೇಟ್ ಆದಾಯವಾಗಿ ನಿಮ್ಮ ಪಾವತಿ ಇರಲಿದೆ. ಭಾರತದಲ್ಲಿ ಕ್ರಿಯೇಟರ್ಸ್‌ಗಳು ಬ್ರ್ಯಾಂಡ್ ಪ್ರಾಯೋಜಕತ್ವಗಳು, ಅಂಗಸಂಸ್ಥೆ ಮಾರ್ಕೆಟಿಂಗ್ ಮತ್ತು ತಮ್ಮದೇ ಆದ ಉತ್ಪನ್ನಗಳು ಅಥವಾ ಸೇವೆಗಳನ್ನು ಮಾರಾಟ ಮಾಡುವುದು ಸೇರಿದಂತೆ ವಿವಿಧ ರೀತಿ ಹಣ ಗಳಿಕೆ ಮಾಡಬಹುದು. ಹಾಗೆ ರೀಲ್ಸ್ ಪ್ಲೇ ಬೋನಸ್ ನಂತಹ ನೇರ ಪಾವತಿಯು ಅಂದಾಜು 10 ಸಾವಿರದಿಂದ 80 ಸಾವಿರದ ವರೆಗೂ ಇರಲಿದೆ. ಆದ್ರೆ ಇದು ಕೆಲವೇ ಕೆಲವು ಆಯ್ದ ಕ್ರಿಯೇಟರ್ಸ್‌ಗಳಿಗೆ ಮಾತ್ರವೇ ಇನ್ಸ್‌ಸ್ಟಾಗ್ರಾಮ್ ನೀಡುತ್ತದೆ.
ಇಲ್ಲಿ ಕ್ರಿಯೇಟರ್ಸ್‌ಗಳು ನೇರವಾಗಿ ಬ್ರಾಂಡ್‌ಗಳ ಸಂಪರ್ಕಿಸಬೇಕು, ಇಲ್ಲವೆ ಬ್ರಾಂಡ್‌ಗಳು ನಿಮ್ಮ ವಿಡಿಯೋಗಳಿಗೆ ಬರುವಂತಹ ವೀವ್ಸ್ ನೋಡಿ ತಾವಾಗಿಯೇ ಉತ್ಪನ್ನಗಳ ಪ್ರಮೋಷನ್‌ಗೆ ಮುಂದಾಗಬೇಕು. ಅದ್ರಲ್ಲೂ ನೀವು ಯಾವ ರೀತಿಯ ವಿಡಿಯೋಗಳ ಮಾಡುತ್ತೀರಿ. ನಿಮ್ಮ ವೀಕ್ಷಕರು ಯಾರು? ಎಷ್ಟು ಜನ ಫಾಲೋವರ್ಸ್ ಹೊಂದಿದ್ದೀರಿ ಎಂಬುದರ ಮೇಲೆ ನಿರ್ಧರಿತವಾಗಲಿದೆ.
ಆದ್ರೆ ಯೂಟ್ಯೂಬ್‌ನಲ್ಲಿ ನೇರವಾಗಿ ಕಂಪನಿ ಕಡೆಯಿಂದ ಹಾಗೆ ಬ್ರಾಂಡ್‌ಗಳಿಂದ ನೀವು ಹಣ ಪಡೆಯಬಹುದು. ಜಾಹೀರಾತುಗಳಿಂದ ಬಂದ ಲಾಭದಲ್ಲಿ ಸಂಸ್ಥೆಯೇ ಅದರ ಪಾಲನ್ನು ನಿಮ್ಮ ಬಳಿ ಹಂಚಿಕೊಳ್ಳಲಿದೆ. ನಿಮ್ಮ ಚಾನಲ್‌ನಲ್ಲಿನ ಒಟ್ಟಾರೆ ವೀಕ್ಷಣೆಯನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ನೀವು ಫಾಲೋವರ್ಸ್ ಹೊಂದಿದ್ದರೂ ಕೂಡ ಹಣಗಳಿಕೆ ಕಷ್ಟವಾಗಿರಲಿದೆ. ಮಿಲಿಯನ್ ಮಿಲಿಯನ್ ವೀಕ್ಷಣೆ ಪಡೆದರು ಹೆಚ್ಚು ಹಣ ಗಳಿಸಲು ಸಾಧ್ಯವಿಲ್ಲ.



Click it and Unblock the Notifications

