Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕೋಲ್ಡ್ ಪ್ಲೇ ಬ್ಯಾಂಡ್ ಬಗ್ಗೆ ನಿಮಗೆಷ್ಟು ಗೊತ್ತು? ಭಾರತದಲ್ಲಿ ಈ ಹೆಸರು ವೈರಲ್ ಆಗುತ್ತಿರೋದ್ಯಾಕೆ?
ಕೋಲ್ಡ್ ಪ್ಲೇ ಭಾರತದಲ್ಲಿ ಕೆಲವ ದಿನಗಳಿಂದ ಕೇಳಿಬರುತ್ತಿರುವ ಹೆಸರು. ಇಷ್ಟು ಈ ಪದ ಕೇಳದೆ ಇದ್ದ ಜನರೆಲ್ಲಾ ಈ ಕೋಲ್ಡ್ ಪ್ಲೇ ಅಂದ್ರೇನು ಎಂದು ತಲೆ ಕಡಿಸಿಕೊಳ್ಳುವಂತೆ ಮಾಡಿದೆ. ಕೋಲ್ಡ್ ಪ್ಲೇ ಇಂಗ್ಲೆಂಡ್ ಮೂಲದ ರಾಕ್ ಬ್ಯಾಂಡ್, ವಿಶ್ವದೆಲ್ಲೆಡೆ ಅಭಿಮಾನಿ ಬಳಗ ಹೊಂದಿರುವ ಒಂದು ರಾಕ್ ಬಾಂಡ್ ಆಗಿದೆ. ಈ ಬಾಂಡ್ ಭಾರತದಲ್ಲಿ ಎರಡು ಕಾರ್ಯಕ್ರಮ ನಡೆಸಿಕೊಡಲು ಬರುತ್ತಿದೆ ಎಂದಕೂಡಲೇ ಆನ್‌ಲೈನ್ ತುಂಬಾ ವೈರಸ್ ಆಗಿರುವ ಹೆಸರು ಇದು.
ಅಚ್ಚರಿ ಎಂದರೆ ಈ ಬಾಂಡ್ ಮುಂದಿನ ವರ್ಷ ಭಾರತದಲ್ಲಿ ಕಾರ್ಯಕ್ರಮ ನೀಡುತ್ತಿದೆ. ಆದ್ರೆ ಟಿಕೆಟ್ ಬುಕ್ಕಿಂಗ್ ಆರಂಭಗೊಂಡ ಕೆಲವೇ ನಿಮಿಷದಲ್ಲಿ ಇಡೀ ಸ್ಟೇಡಿಯಂ ಟಿಕೆಟ್ ಸೋಲ್ಟ್ ಔಟ್ ಆಗಿದ್ದು, ಬುಕ್ ಮೈ ಶೋ ಆಪ್ ಕ್ರ್ಯಾಶ್ ಸಹ ಆಗಿದೆ. ಹಾಗಾದ್ರೆ ಈ ಬ್ಯಾಂಡ್‌ಗೆ ಅಷ್ಟು ಅಭಿಮಾನಿಗಳಿರುವುದು ಏಕೆ? ಏನಿದರ ವಿಶೇಷ ಈ ಎಲ್ಲಾ ಮಾಹಿತಿ ನಾವಿಂದು ಇಳಿಯೋಣ.

ಕೋಲ್ಡ್ ಪ್ಲೇ ತಂಡ ಒಂಬತ್ತು ವರ್ಷದ ನಂತರ ಭಾರತಕ್ಕೆ ಮರಳಿ ಬರುತ್ತಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಜನವರಿ 18 ಮತ್ತು 19ರಂದು ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆದ್ರೆ ಮೂರು ತಿಂಗಳ ಮುನ್ನವೇ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಈ ಟಿಕೆಟ್ ದರ 50 ಅಥವಾ 100 ರೂಪಾಯಿಯಲ್ಲ. ಬದಲಿಗೆ ಟಿಕೆಟ್‌ಗಳು ₹2,500 ರಿಂದ ಪ್ರಾರಂಭವಾಗುತ್ತಿದ್ದು, ₹3,000, ₹3,500, ₹4,000, ₹4,500, ₹9000, ₹9500 ಮತ್ತು ₹12,500 ವರೆಗೆ ದರ ನಿಗದಿ ಮಾಡಲಾಗಿದೆ. ಇಷ್ಟೇ ಅಲ್ಲ ಆರಾಮಾಗಿ ಕುಳಿತು ನೋಡಲು ಬಯಸುವವರು ₹35000 ರೂಪಾಯಿಯನ್ನು ನೀಡಬಹುದು.
ಮುಂಬೈನ ಡಿವೈ ಪಾಟೀಲ್ ಮೈದಾನವು ಸುಮಾರು 45 ಸಾವಿರ ಮಂದಿ ಆರಾಮವಾಗಿ ಕುಳಿತು ಕಾರ್ಯನೋಡಬಹುದಾದ ಆಸನ ವ್ಯವಸ್ಥೆ ಇದೆ. ಆದ್ರೆ ಈ ಕಾರ್ಯಕ್ರಮದಲ್ಲಿ ನಿಂತು ಸಹ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಮಂದಿ ಕಾಯುತ್ತಿದ್ದಾರೆ.
ಕೋಲ್ಡ್ ಪ್ಲೇ ಇತಿಹಾಸವೇನು?
ಕೋಲ್ಡ್‌ಪ್ಲೇ ತಮ್ಮ ಡೈನಾಮಿಕ್ ಲೈವ್ ಶೋಗಳ ಮೂಲಕವೇ ಎಲ್ಲಾ ಕಡೆ ಫೇಮ್ ಆಗಿದೆ. ಈ ಬಾಂಡ್‌ನಲ್ಲಿ ಕ್ರಿಸ್ ಮಾರ್ಟಿನ್ (ಪಿಯಾನೋ), ಜಾನಿ ಬಕ್‌ಲ್ಯಾಂಡ್ (ಗಿಟಾರ್), ಗೈ ಬೆರ್ರಿಮನ್ (ಬಾಸ್), ವಿಲ್ ಚಾಂಪಿಯನ್ (ಡ್ರಮ್ಸ್, ತಾಳವಾದ್ಯ) ಇದ್ದಾರೆ. ಕ್ರಿಸ್ ಮಾರ್ಟಿನ್ ಈ ಬಾಂಡ್‌ನ ಸಿಂಗರ್ ಆಗಿದ್ದಾರೆ.
ಈ ಎಲ್ಲಾ ಸದಸ್ಯರು ಕಾಲೇಜಿನಲ್ಲಿ ಒಬ್ಬರಿಗೊಬ್ಬರು ಭೇಟಿಯಾಗಿದ್ದರು. ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಎಲ್ಲರು ಭೇಟಿಯಾಗಿದ್ದರು ಆದ್ರೆ ಈ ವೇಳೆಗೆಲ್ಲಾ ದೊಡ್ಡ ಮ್ಯೂಸಿಕ್ ಬಾಂಡ್ ಕಟ್ಟುವ ಆಲೋಚನೆಯು ಅವರಿಗೆ ಬಂದಿರಲಿಲ್ಲವಂತೆ. ಬಳಿಕ ಎಲ್ಲರೂ ಸೇರಿ ತಮ್ಮನ್ನು ಬಿಗ್ ಫ್ಯಾಟ್ ನಾಯ್ಸ್ ಎಂದು ಕರೆದುಕೊಂಡರು. ಇದಾದ ಬಳಿಕ ಸ್ಮಾರ್ ಫಿಶ್ ಎಂದು ಹೆಸರಿಟ್ಟುಕೊಂಡರು.
ಮೊಟ್ಟ ಮೊದಲ ಬಾರಿಗೆ 1998ರಲ್ಲಿ ಸೇಫ್ಟಿ ಎಂಬ ಆಲ್ಬಂ ಹೊರತಂದರು. 1999ರಲ್ಲಿ ಕೋಲ್ಡ್ ಪ್ಲೇ ಆರಂಭಗೊಂಡಿತ್ತು. ಮೊದಲ ಪ್ಯಾರಾಚೂಟ್ಸ್ ಎಂಬ ಆಲ್ಬಂ ತಂದರು. ಇದಾದ ಬಳಿಕ ಬಾಂಡ್ ಮತ್ತೆಂದು ಹಿಂದಿರುಗಿ ನೋಡಿಯೇ ಇಲ್ಲ. ಇದಾದ ಬಳಿಕ ಹೊರಬಂದ ಯೆಲ್ಲೋ ಆಲ್ವಂಗೆ ಅತ್ಯುನ್ನತ ಪ್ರಶಸ್ತಿ ಗ್ರ್ಯಾಮಿ ಅವಾರ್ಡ್ ಸಹ ಲಭಿಸಿತ್ತು.



Click it and Unblock the Notifications