Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಪಘಾತಕ್ಕೊಳಗಾದ ಬೋಯಿಂಗ್ ಡ್ರೀಮ್‌ಲೈನರ್ ಬಗ್ಗೆ ನಿಮಗೆಷ್ಟು ಗೊತ್ತು..? ಇದೆಷ್ಟು ಸುರಕ್ಷಿತ ವಿಮಾನ?
242 ಪ್ರಯಾಣಿಕರು ತುಂಬಿದ್ದ ಏರ್ ಇಂಡಿತಾ ವಿಮಾನವು ಅಹಮದಾಬಾದ್‌ನಲ್ಲಿ ಪತಗೊಂಡಿದೆ. ಇಡೀ ದೇಶವೇ ಈ ಅಪಘಾತದಿಂದ ಆಘಾತಕ್ಕೊಳಗಾಗಿದೆ. ಅದರಲ್ಲೂ ಟೇಕ್‌ಆಫ್ ಆದ ಕೆಲವೇ ನಿಮಿಷದಲ್ಲಿ ನಿಯಂತ್ರಣ ತಪ್ಪಿ ಪತನಗೊಂಡಿದ್ದು, ಸಾವು ನೋವಿನ ವರದಿಯಾಗಿದೆ. ಈ ವಿಮಾನದಲ್ಲಿ ಭಾರತೀಯ ಪ್ರಯಾಣಿಕರು ಹಾಗೆ ವಿದೇಶಿ ಪ್ರಜೆಗಳು ಕೂಡ ಇದ್ದರೂ ಎಂದು ತಿಳಿದುಬಂದಿದೆ. ಲಂಡನ್‌ಗೆ ತೆರಳುತ್ತಿದ್ದ ವಿಮಾನ ಆಗಿದ್ದರಿಂದ ಯುಕೆಯ ನಿವಾಸಿಗಳು ಎಂದು ಅಂದಾಜಿಸಲಾಗಿದೆ.
ಇನ್ನು ಇದು ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನ ಎಂದು ತಿಳಿದುಬಂದಿದೆ. ಈ ವಿಮಾನ ಇತ್ತಿಚಿಗೆ ಸೇರ್ಪಡೆಗೊಂಡಿತ್ತಲ್ಲದೆ ಡಬಲ್ ಎಂಜಿನ್ ಹಾಗೆ ಸುಖಕರ ಪ್ರಯಾಣಕ್ಕೆ ಹೆಸರುವಾಸಿಯಾಗಿತ್ತು, ಹಾಗಾದ್ರೆ ಈ ಬೋಯಿಂಗ್ ಡ್ರೀಮ್ ಲೈನರ್ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಬೋಯಿಂಗ್ ವಿಮಾನಗಳೇ ಈಗ ಹೆಚ್ಚಾಗಿ ಅಪಘಾತಕ್ಕೆ ಗುರಿಯಾಗುತ್ತಿರುವುದೇಕೆ? ಈ ಕಂಪನಿ ಆರಂಭಗೊಂಡಿದ್ದು ಯಾವಾಗ ಎಂಬೆಲ್ಲಾ ಮಾಹಿತಿ ತಿಳಿದುಕೊಳ್ಳೋಣ.

ಬೋಯಿಂಗ್ ಆರಂಭಗೊಂಡಿದ್ದು, 1916ರಲ್ಲಿ ವಿಲಿಯಂ ಇ ಬೋಯಿಂಗ್ ಇದರ ಸಂಸ್ಥಾಪಕ. 1934ರಲ್ಲಿ ಬೋಯಿಂಗ್ ಎಂದು ಮರುನಾಮಕರಣಗೊಂಡಿತ್ತು. ಇದು ವಿಮಾನ, ಜೆಟ್, ಹೆಲಿಕಾಪ್ಟರ್, ಕ್ಷಿಪಣಿ. ಉಪಗ್ರಹ, ವಿಂಡ್ ಟರ್ಬೈನ್, ಮಿಲಿಟರಿ ಉತ್ಪನ್ನಗಳ ತಯಾರಿಸುವ ಅತೀದೊಡ್ಡ ಜಾಗತಿಕ ಕಂಪನಿಯಾಗಿದೆ.
ಸದ್ಯ ಆಕಾಶದಲ್ಲಿ ಹಾರಾಡುವ ಬಹುತೇಕ ಸಂಸ್ಥೆಗಳ ವಿಮಾಗಳನ್ನು ಈ ಬೋಯಿಂಗ್ ನಿರ್ಮಿಸುತ್ತದೆ. ಏರ್ ಇಂಡಿಯಾದಲ್ಲೂ ಕೂಡ ಈ ಬೋಯಿಂಗ್ ವಿಮಾನಗಳೇ ಇವೆ. ಈಗ ಈ ಪತನಗೊಂಡ ಬೋಯಿಂಗ್ 787-8 ಡ್ರೀಮ್‌ಲೈನರ್ ಮಧ್ಯಮ ಗಾತ್ರದ, ಅವಳಿ-ಎಂಜಿನ್, ಅಗಲವಾದ ಬಾಡಿ ಹೊಂದಿರುವ ಜೆಟ್ ವಿಮಾನವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ತುಂಬಿರುವ ವಿಮಾನ ಇದಾಗಿದ್ದು, ಡಿಸೆಂಬರ್ 15 2009ರಲ್ಲಿ ಮೊದಲ ಹಾರಾಟ ನಡೆಸಿತ್ತು.
ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದಲ್ಲಿ ಶೇ.50ರಷ್ಟು ಕಾರ್ಬನ್ ಫೈಬರ್-ಪಾಲಿಮರ್‌ನಿಂದ ಮಾಡಲಾಗಿತ್ತು. ಇದು ಹಗುರ ಹಾಗು ಇಂಧನ ದಕ್ಷತೆಗೆ ಸಹಕಾರಿಯಾಗಲಿದೆ. ಹಾಗೆ ಗಾಳಿಯ ಹೊಡೆಯವನ್ನು ತಡೆಯಬಲ್ಲ, ಹಾಗೆ ಎತ್ತರಕ್ಕೆ ಹಾರಲು ಸಹಾಯ ಮಾಡುತ್ತದೆ. ಹೀಗಾಗಿ ಡ್ರೀಮ್ ಲೈನರ್ ಬಹಳ ವಿಮಾನವು ಬಹಳ ಅತ್ಯಾಧುನಿಕ ಹಾಗೂ ನಿರ್ವಹಣೆ ಸುಲಭ ಎನಿಸಿಕೊಂಡಿದೆ.
ಈ ಡ್ರೀಮ್ ಲೈನರ್ ಅನ್ನು ಏರ್ ಇಂಡಿಯಾ ಮಾತ್ರವಲ್ಲ ಅಮೇರಿಕನ್ ಏರ್‌ಲೈನ್ಸ್, ಬ್ರಿಟಿಷ್ ಏರ್‌ವೇಸ್, ಜಪಾನ್ ಏರ್‌ಲೈನ್ಸ್, ಕತಾರ್ ಏರ್‌ವೇಸ್, ಯುನೈಟೆಡ್ ಏರ್‌ಲೈನ್ಸ್ ಸೇರಿ ಹಲವು ಸಂಸ್ಥೆಗಳು ಬಳಸುತ್ತವೆ. ಈ ಡ್ರೀಮ್ ಲೈನರ್ 787-8 ಮಧ್ಯಮ ಗಾತ್ರದ ಹಾಗೆ 6000 ಅಡಿಗೆ ಸಮಾನವಾದ ಕ್ಯಾಬಿನ್ ಎತ್ತರ ಗಾಳಿಯ ವೇಗ ಹಾಗೂ ಸಾಂದ್ರತೆ ಒಡೆಯುವಂತಹ ಬಲ ಹೊಂದಿರಲಿದೆ. ಆದ್ರೆ ಇದಕ್ಕಿಂತ ದೊಡ್ಡ ಇನ್ನೆರಡು ದಿಮಾನ ಕೂಡ ಈ ಡ್ರೀಮ್ ಲೈನರ್‌ನಲ್ಲಿವೆ.
ಈ ಡ್ರೀಮ್ ಲೈನರ್ ವಾಣಿಜ್ಯ ವಿಮಾನದಲ್ಲೇ ಅತೀ ದೊಡ್ಡ ಕಿಟಕಿ ವಿನ್ಯಾಸ ಹೊಂದಿರುವ ವಿಮಾನವಾಗಿವೆ. ಆದರೆ ಇತ್ತೀಚಿಗೆ ಬೋಯಿಂಗ್ ವಿಮಾನಗಳ ಸುರಕ್ಷತೆ ಕುರಿತಾದ ದೊಡ್ಡ ಪ್ರಶ್ನೆಗಳು ಎದ್ದಿವೆ. ಈಗಾಗಲೆ ಹಲವು ಬೋಯಿಂಗ್ ಸಂಸ್ಥೆಯ ವಿಮಾನ ಅಪಘಾತ ಪ್ರಕರಣಗಳು ವಿಶ್ವದ ಎದುರು ಈ ಕಂಪನಿಯ ವಿಮಾನಗಳ ಹಾರಾಟ ಸಂಬಂಧ ಪ್ರಶ್ನೆ ಮಾಡುವಂತೆ ಮಾಡಿವೆ. ಆದೆ ಕಂಪನಿ ಈವರೆಗೂ ತನ್ನ ನಿರ್ಮಾಣದಲ್ಲಿ ಯಾವುದೇ ನ್ಯೂನ್ಯತೆಗಳಲ್ಲಿ ಎಂದು ವಾದಿಸುತ್ತಾ ಬಂದಿದೆ. ಹಾಗೆ ಎಲ್ಲಾ ವಿಮಾನಗಳು ಸುರಕ್ಷತೆಯ ಉತ್ತುಂಗದಲ್ಲಿವೆ ಎಂದು ಪ್ರತಿಪಾಧಿಸುತ್ತದೆ. ಆದ್ರೆ ಇತ್ತೀfಚಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೋಯಿಂಗ್ ತಲೆಗ್ಗಿಸುವ ಘಟನೆಗಳು ನಡೆದಿವೆ. ಭಾರತದಲ್ಲಿ ನಡೆದ ಅಪಘಾತದ ಬಳಿಕ ಬೋಯಿಂಗ್ ಷೇರುಗಳ ಬೆಲೆ ಇಳಿಕೆಯಾಗಿರುವುದು ಕೂಡ ನೋಡಬಹುದು.



Click it and Unblock the Notifications
