Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ನಿಮ್ಮ ಕಣ್ಣು ಎಷ್ಟು ಮೆಗಾ ಪಿಕ್ಸೆಲ್ ಗೊತ್ತಾ? ನೀವೆಲ್ಲೂ ಈ ಕುರಿತು ಓದಿರಲ್ಲ..!!
ಮಾನವನ ದೇಹ ಎಷ್ಟೊಂದು ಕುತೂಹಲಗಳಿಂದ ಕೂಡಿರುತ್ತೆ ಅನ್ನೋದು ನಮಗೆ ತಿಳಿದುರೋದೇ ಇಲ್ಲ. ದೇಹದ ಪ್ರತಿಯೊಂದು ಅಂಗವು ತನ್ನದೇ ಕೆಲಸ, ಸುದೀರ್ಘ ಬೆಳವಣಿಗೆ ಹೊಂದಿರುತ್ತದೆ. ಕೆಲವು ಅಂಗಗಳು ಹುಟ್ಟಿನಿಂದಲೇ ಇದ್ದರೆ ಮತ್ತೆ ಕೆಲವು ವರ್ಷಗಳ ಉರುಳಿದಂತೆ ಬೆಳವಣಿಗೆ ಆಗುವುದು ನೋಡಬಹುದು.
ಹಾಗೆ ನಮ್ಮ ಕಣ್ಣುಗಳು ಹುಟ್ಟಿದಾಗಲೇ ಸಂಪೂರ್ಣವಾಗಿ ಬೆಳವಣಿಗೆಯಾಗುವ ಏಕೈಕ ಅಂಗವಾಗಿದೆ. ಕಣ್ಣುಗಳು ಭವಿಷ್ಯದಲ್ಲಿ ಬೆಳವಣಿಗೆ ಹೊಂದುವುದಿಲ್ಲ ಬದಲಿಗೆ ದೃಷ್ಟಿ ನಿಧಾನವಾಗಿ ಮಸುಕಾಗುತ್ತಾ ಸಾಗುತ್ತದೆ. ಹೀಗಾಗಿ ಮಕ್ಕಳಲ್ಲಿ ಕಣ್ಣುಗಳು ಸಂಪೂರ್ಣ ಬೆಳವಣಿಗೆ ಹೊಂದಿದ ಅಂಗ ಎಂದು ಗುರುತಿಸಿಕೊಳ್ಳುತ್ತದೆ.

ನಿಮ್ಮ ಕಣ್ಣುಗಳು ಮುಂದಿರುವ ಬಣ್ಣಗಳನ್ನು, ದೂರವನ್ನು ನಿಖರವಾಗಿ ಗುರುತಿಸುವಂತೆ ಬೇರೆ ಯಾವುದೇ ಕ್ಯಾಮರಾಗಳು ಕೂಡ ನೀಡುವುದಿಲ್ಲ. ನೈಜತೆಯ ಚಿತ್ರಣವನ್ನು ಕಣ್ಣುಗಳಿಗಿಂತ ಉತ್ತಮವಾಗಿ ಕ್ಯಾಮರಾಗಳು ತೋರಿಸಲು ಆಗುವುದಿಲ್ಲ. ಆದ್ರೆ ದೂರ ವಸ್ತುಗಳನ್ನು ನಮ್ಮ ಕಣ್ಣುಗಳಿಗಿಂತ ಹೆಚ್ಚು ನಿಖರವಾಗಿ ಕ್ಯಾಮರಾಗಳು ಸೆರೆಹಿಡಿಯಲಿದೆ. ಆದ್ರೆ ಕಣ್ಣುಗಳಂತೆ ನಿಖರ ಬಣ್ಣ, ದೂರ ಗ್ರಹಿಸುವುದು ಕಷ್ಟ.
ನಾವು ಬಳಸುವ ಮೊಬೈಲ್ ಕ್ಯಾಮರಾಗಳು ಕೆಲವೊಮ್ಮೆ ನಮ್ಮ ಕಣ್ಣಿಗಿಂತ ಸುಂದರ ದೃಶ್ಯಗಳ ಸೆರೆಹಿಡಿಯಬಹುದು. ಹಾಗೆ ಅವುಗಳ ಹಿಂದೆ ಮೆಗಾಪಿಕ್ಸೆಲ್‌ಗಳ ಲೆಕ್ಕಾಚಾರ ನಿಂತಿರುತ್ತದೆ. ಹೆಚ್ಚು ಮೆಗಾಪಿಕ್ಸೆಲ್‌ನ ಕ್ಯಾಮರಾಗಳು ಹೆಚ್ಚು ಸುಂದರವಾದ ಫೋಟೋಗಳು ಸೆರೆಹಿಡಿಯಲಿದೆ ಎಂದು ಹೇಳಲಾಗುತ್ತದೆ.
ಹಾಗೆ ಹೆಚ್ಚು ಮೆಗಾ ಪಿಕ್ಸೆಲ್‌ಗಳ ಮೊಬೈಲ್ ಫೋನ್ ಕ್ಯಾಮರಾಗಳು ಈಗ ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಾಗಾದ್ರೆ ನಮ್ಮ ಕಣ್ಣಿನ ಮೆಗಾ ಪಿಕ್ಸೆಲ್ ಎಷ್ಟು.? ಇದನ್ನು ಅಳತೆ ಮಾಡುವುದು ಹೇಗೆ?
ಈ ರೀತಿಯ ಪ್ರಶ್ನೆ ನಿಮಗೂ ಕಾಡಿರಬಹುದು. ನಮ್ಮ ಕಣ್ಣು ಎಷ್ಟು ಮೆಗಾಪಿಕ್ಸೆಲ್‌ಗೆ ಸಮನಾದ ಚಿತ್ರವನ್ನು ಸೆರೆಹಿಡಿಯುತ್ತೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿರುತ್ತೆ. ಹಾಗಾದ್ರೆ ನಮ್ಮ ಕಣ್ಣು ಎಷ್ಟು ಮೆಗಾಪಿಕ್ಸೆಲ್ ಹೊಂದಿದೆ ಎಂಬುದನ್ನು ನಾವಿಂದು ತಿಳಿಯೋಣ.
ವಿಜ್ಞಾನಿ ಮತ್ತು ಛಾಯಾಗ್ರಾಹಕ ಡಾ. ರೋಜರ್ ಕ್ಲಾರ್ಕ್ ಪ್ರಕಾರ, ನಮ್ಮ ಕಣ್ಣುಗಳು ಬರೋಬ್ಬರಿ 576 ಮೆಗಾ ಪಿಕ್ಸೆಲ್‌ಗೆ ಸಮವಾದ ಚಿತ್ರಣ ನಮಗೆ ನೀಡುತ್ತವೆಯಂತೆ. ಇದು ಐಪೋನ್ 7ನ ಕ್ಯಾಮರಾದ 12 ಮೆಗಾಪಿಕ್ಸೆಲ್‌ಗೆ ಹೋಲಿಸಿ ಲೆಕ್ಕ ಹಾಕಲಾಗಿದೆಯಂತೆ. ಆದ್ರೆ ಕ್ಯಾಮರಾದಂತೆ ಇಷ್ಟೊಂದು ಪಿಕ್ಸೆಲ್ ಹೊಂದಿದ್ದರೂ ಕೂಡ ಕಣ್ಣಿನ ಚಿತ್ರಣಕ್ಕೂ ಮೊಬೈಲ್ ಫೋನ್ ಕ್ಯಾಮರಾಗೂ ಅಜಗಜಾಂತರ ವ್ಯತ್ಯಾಸವಿದೆಯಂತೆ.
ಹೌದು ಕ್ಯಾಮರಾದಲ್ಲಿ ಸೆರೆಯಾದ ಚಿತ್ರಣವೂ ಎಲ್ಲಾ ಭಾಗದಲ್ಲು ಒಂದೇ ರೀತಿ ಅಥವಾ ಒಂದೇ ಪ್ರಮಾಣದ ಪಿಕ್ಸೆಲ್‌ನಿಂದ ಕೂಡಿರುತ್ತದೆ. ಆದ್ರೆ ಕಣ್ಣುಗಳು ಮಧ್ಯ ಭಾಗದಲ್ಲಿ ಮಾತ್ರ ಫೋಕಸ್ ಮಾಡುತ್ತವೆ, ಉಳಿದಂತೆ ನಮಗೆ ಅಗತ್ಯವಿಲ್ಲದ ಚಿತ್ರಗಳು ನಮ್ಮ ದೃಷ್ಟಿಯಿಂದ ಆದಷ್ಟು ಮರೆಯಾಗಿರುತ್ತದೆ.
ಇನ್ನು ಕೆಲವರ ಪ್ರಕಾರ ಕಣ್ಣುಗಳು ಸಂಗ್ರಹಿಸುವ ಚಿತ್ರಣವನ್ನು ಮೆಗಾ ಪಿಕ್ಸೆಲ್‌ನಲ್ಲಿ ಅಳೆಯುವುದೇ ತಪ್ಪಾಗಲಿದೆಯಂತೆ. ಕಣ್ಣುಗಳು ಕ್ಯಾಮರಾ ಲೆನ್ಸ್‌ನಂತೆ ಕೆಲಸ ಮಾಡುವುದಿಲ್ಲವಂತೆ. ಕಣ್ಣಿನ ಮುಂದಿರುವ ದೃಶ್ಯವನ್ನು ಕಣ್ಣುಗಳು ಕೋಡೆಡ್ ಮಾರ್ಗದಲ್ಲಿ ಮೆದುಳಿಗೆ ರವಾನಿಸುತ್ತವೆ, ಅದೂ ಕೂಡ ಒಂದೊಂದೇ ಬಿಡಿ ಬಿಡಿ ಚಿತ್ರಗಳನ್ನು ಒಟ್ಟುಗೂಡಿಸಿ ಒಂದು ಸಂಪೂರ್ಣ ಚಿತ್ರಣವನ್ನಾಗಿ ಮಾಡಲಿದೆ. ಹೀಗಾಗಿ ಕ್ಯಾಮರಾಗೂ ಕಣ್ಣಿಗೂ ಬಹಳ ವ್ಯತ್ಯಾಸ ಇರಲಿದೆ. ಇನ್ನು ಮುಂದೆ ಯಾವುದಾದರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ರೀತಿಯ ಪ್ರಶ್ನೆ ಕೇಳಿದರೆ ಕಣ್ಣಿನ ಮೆಕಾ ಪಿಕ್ಸೆಲ್ 576 ಎಂದು ಉತ್ತರಿಸಬಹುದು.



Click it and Unblock the Notifications
