Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂಬುದನ್ನು ಉತ್ತರಿಸಬಲ್ಲಿರಾ? ಸರಿ ಉತ್ತರ ಎಷ್ಟು ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಹತ್ತಾರು ಆಪ್ಟಿಕಲ್ ಇಲ್ಯೂಷನ್ ಹಾಗೂ ಮೆದುಳಿಗೆ ಕೆಲಸ ಕೊಡುವಂತಹ ಫೋಟೋಗಳು ಹರಿದಾಡುತ್ತಲೇ ಇರುತ್ತವೆ, ನಾವು ಸಹ ಈ ಮೊದಲು ಹಲವು ಫೋಟೋಗಳನ್ನು ವಿವರಿಸಿದ್ದಾರೆ. ಸವಾಲುಗಳನ್ನು ಬಿಡಿಸಿದ್ದೇವೆ. ಆದ್ರೆ ಕೆಲವೊಂದು ಫೋಟೋಗಳು ನೋಡಲು ಎಷ್ಟು ಸುಲಭವಾಗಿ ಕಾಣುತ್ತವೆಯೋ ಅವುಗಳಲ್ಲಿ ಅಡಗಿರುವ ಉತ್ತರ ಹುಡುಕುವಾಗ ನಮಗೆ ಕಷ್ಟ ಅರಿವಾಗುತ್ತಿರುತ್ತದೆ.
ಹಾಗೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹಾಗೂ ಬ್ರೈನ್ ಟೀಸರ್‌ಗಳು ನಮ್ಮ ಮಾಸನಿಕ ಆರೋಗ್ಯ, ಬುದ್ಧಿಶಕ್ತಿ ಹೆಚ್ಚಳ, ಮೆದುಳಿನ ವ್ಯಾಯಾಮಕ್ಕೆ ಸಂಬಂಧಿಸಿದ್ದು, ನಾವು ಈ ಚಿತ್ರಗಳ ಸವಾಲುಗಳನ್ನು ಬಿಡಿಸುವುದು, ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯ ಅಭ್ಯಾಸ ಆಗಿರಲಿದೆ.

ಆದರೆ ಕೆಲವೊಂದು ಚಿತ್ರಗಳು ಒಂದೊಂದು ಉತ್ತರ ನಿಮ್ಮ ಮುಂದಿಡಹುದು. ಒಂದು ಆಯಾಮದಲ್ಲಿದ್ದ ನಿಮ್ಮ ಉತ್ತರ ಮತ್ತೊಂದು ಆಯಾಮದಿಂದ ನೋಡಿದಾಗ ಬದಲಾಗಬಹುದು. ಇದೇ ರೀತಿ ಇಲ್ಲೊಂದು ಫೋಟೋ ಸಹ ಈಗ ವೈರಲ್ ಆಗುತ್ತಿದ್ದು, ಈ ಫೋಟೋ ನೋಡಿದವರು ಒಂದೊಂದು ರೀತಿಯ ಉತ್ತರ ನೀಡುತ್ತಿದ್ದಾರೆ.
ಈ ಮೇಲೆ ನೀಡಿಲಾಗಿರುವ ಫೋಟೋದಲ್ಲಿ ಒಟ್ಟು ಎಷ್ಟು ತೂತುಗಳಿವೆ ಎಂಬುದನ್ನು ಪತ್ತೆ ಮಾಡುವ ಸರಳ ಸವಾಲು ನಿಮ್ಮ ಮುಂದಿದೆ. ಆದರೆ ಮೇಲ್ನೋಟಕ್ಕೆ ಇದೊಂದು ಸುಲಭದ ಸವಾಲಾಗಿ ಕಂಡರೂ ಇದೊಂದು ಬಿಡಿಸಲಾಗದ ದೊಡ್ಡ ಬಲೆಯಾಗಿದೆ. ಈ ಚಿತ್ರ ನೋಡಿದ ಒಬ್ಬೊಬ್ಬರಿಗೆ ಒಂದೊಂದು ಉತ್ತರ ಹೊಳೆಯುತ್ತಿದೆ.
ಈ ಫೋಟೋದಲ್ಲಿ ಒಟ್ಟು ಎಷ್ಟು ತೂತುಗಳಿವೆ ಎಂಬುದಕ್ಕೆ ಉತ್ತರ ಹುಡುಕಲು ನೆಟ್ಟಿಗರು ಪರದಾಡಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಉತ್ತರ. ಆದರೆ ನಾವು ಈ ಚಿತ್ರವನ್ನು ಸರಿಯಾಗಿ ಬಿಡಿಸಿ, ಈ ಸವಾಲಿಗೆ ಸರಿಯಾದ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ. ಅಚ್ಚರಿ ಎಂದರೆ ಈ ಫೋಟೋದಲ್ಲಿರುವ ಟೀ ಶರ್ಟ್‌ಗೆ ಬರೋಬ್ಬರಿ 8 ತೂತುಗಳಿವೆ.
ಹೌದು ಕೆಲವರಿಗೆ ಇದರಲ್ಲಿ ಕೇವಲ 6 ತೂತುಗಳು ಕಾಣಿಸುತ್ತವೆ, ಮೇಲ್ನೋಟಕ್ಕೆ ನಾವು ನಮ್ಮದೇ ದೃಷ್ಟಿಕೋನದಲ್ಲಿ ಎಣಿಸಿದಾಗ ನಮಗೂ 6 ತೂತುಗಳು ಮಾತ್ರ ಕಾಣಿಸುತ್ತವೆ. ಆದರೆ ಮತ್ತೊಂದು ಆಯಾಮದಲ್ಲಿ ಎಣಿಸಿದಾಗ ಒಟ್ಟು 8 ತೂತುಗಳು ಸಿಗುತ್ತದೆ. ನೀವು ಈ ಟೀ ಶರ್ಸ್ ಅನ್ನು ಧರಿಸಿದ್ದೀರಿ ಎಂದುಕೊಳ್ಳಿ. ಹಾಗೆ ಈಗ ಇದರಲ್ಲಿರುವ ತೂತುಗಳ ಎಣಿಸಿ. ಈಗ ನಿಮಗೆ 8 ತೂತುಗಳು ಸಿಗುತ್ತವೆ.
ಈ ಚಿತ್ರದಲ್ಲಿರುವ ಲಾಜಿಕ್ ಇದೇ ಆಗಿದೆ. ಒಂದು ಆಯಾಮದಲ್ಲಿ ಎಣಿಸಿದಾಗ 6 ತೂತು ಕಂಡುಬರುತ್ತದೆ. ಆದರೆ ಅದೇ ಶರ್ಟ್ ಅನ್ನು 8 ತೂತು ಹೊಂದಿರುವಂತೆಯೂ ನಾವು ಎಣಿಸಬಹುದು. ಆದರೆ ಬಹುತೇಕರು ಇದರ ನಿಜವಾದ ಉತ್ತರ ಕಂಡುಕೊಳ್ಳಲು ಪರದಾಡಿದ್ದಾರೆ. ಕೆಲವೇ ಕೆಲವು ಮಂದಿ 8 ಎಂದು ಸರಿಯಾದ ಉತ್ತರ ನೀಡಿದ್ದಾರೆ. ಈ ಫೋಟೊ ಈಗ ಎಕ್ಸ್‌ನಲ್ಲಿ ವೈರಲ್ ಆಗಿದೆ. ಹಲವರು ಈ ಚಿತ್ರ ಹಂಚಿಕೊಂಡು ಉತ್ತರಕ್ಕಾಗಿ ಎದುರು ನೋಡಿದ್ದಾರೆ. ಅದರೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಹಾಗೂ ವಿವರಣೆ ನೀಡಿದ್ದಾರೆ.



Click it and Unblock the Notifications

