Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜುಲೈನಲ್ಲಿ ಎಷ್ಟು ದಿನ ಬ್ಯಾಂಕ್ ರಜೆ ಇರಲಿದೆ? ಏನೆಲ್ಲಾ ಬದಲಾಗುತ್ತಿದೆ ಗೊತ್ತಾ?
2025ನೇ ವರ್ಷದ ಮೊದಲಾರ್ಧ ಮುಕ್ತಾಯದ ಹಂತ ತಲುಪಿದ್ದೇವೆ. ಅಂದರೆ ಜೂನ್ ತಿಂಗಳು ಮುಗಿಯುತ್ತಾ ಬಂದಿದೆ. ಕೆಲ ದಿನದಲ್ಲಿ ನಾವು ಜುಲೈ ಸ್ವಾಗತಿಸಲಿದ್ದೇವೆ. ಇನ್ನು ಜುಲೈನಲ್ಲಿ ಹಲವು ಹಬ್ಬಗಳು, ರಜೆಗಳು ಸಹ ಕಾದಿವೆ. ಜುಲೈ ಕೂಡ ಮಳೆಗಾಲದ ತಿಂಗಳು ಎಂದು ವರ್ಗೀಕರಿಸಲಾಗಿದೆ. ಇನ್ನು ಜುಲೈನಲ್ಲಿ ಒಂದಿಷ್ಟು ದಿನಗಳ ರಜೆಗಳು ಬರಲಿವೆ.
ಇನ್ನು ಜುಲೈನಲ್ಲಿ ಏನೆಲ್ಲಾ ಬದಲಾಗಲಿದೆ? ಜುಲೈ ಯಾವ ದಿನ ಬ್ಯಾಂಕ್ ರಜೆ ಇರಲಿದೆ ಎಂಬುದನನ್ನು ನಾವಿಂದು ತಿಳಿದುಕೊಳ್ಳೋಣ. ಇವುಗಳಲ್ಲಿ ರಾಷ್ಟ್ರೀಯ ರಜಾದಿನಗಳು, ಪ್ರಾದೇಶಿಕ ಆಚರಣೆಗಳು ಮತ್ತು ಸಾಮಾನ್ಯ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ಇನ್ನು ಜುಲೈನಲ್ಲಿ ಹಲವು ದಿನಗಳ ಕಾಲ ಹಲವು ಪ್ರದೇಶದಲ್ಲಿ ಬ್ಯಾಂಕ್ ರಜೆ ಇರಲಿದೆ.

ಜುಲೈ ಆರಂಭದಲ್ಲಿ ಇಸ್ಲಾಮಿಕ್ ಹೊಸ ವರ್ಷ ಎಂದು ಗುರುತಿಸಲಾದ ಮೊಹರಂ ದಿನ ಆಚರಿಸಲಾಗುತ್ತದೆ. ಹೀಗಾಗಿ ಜುಲೈ 6ರಂದು ಬ್ಯಾಂಕ್ ರಜಾದಿನವಾಗಿರಲಿದೆ. ಆದ್ರೆ ಈ ದಿನವು ಚಂದ್ರದರ್ಶನವನ್ನು ಅವಲಂಬಿಸಿ ಬದಲಾಗಬಹುದು. ಈ ದಿನ ಬ್ಯಾಂಕ್, ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು ಮುಚ್ಚಿರಲಿದೆ. ಜುಲೈನಲ್ಲಿ ಇದೊಂದೇ ದಿನ ಬಹುತೇಕ ಕಡೆಗಳಲ್ಲಿ ರಜೆ ಇರಲಿದೆ.
ಪ್ರಾದೇಶಿಕ ರಜಾ ದಿನಗಳು
ವಿವಿಧ ರಾಜ್ಯಗಳು ಹಲವು ದಿನಗಳಲ್ಲಿ ಪ್ರಾದೇಶಿಕ ಪ್ರಾಮುಖ್ಯತೆಯ ಆಧಾರದಲ್ಲೂ ಬ್ಯಾಂಕ್‌ಗಳಿಗೆ ರಜೆ ನೀಡುವುದು ನೋಡಬಹುದು. ಇನ್ನು ಜುಲೈ 3ರಂದು ಮೇಘಾಲಯದಲ್ಲಿ ಬೆಹ್ಗಿಂಗ್‌ಖ್ಲಾಮ್ ಅನ್ನು ಆಚರಿಸುವ ಕಾರಣ ಅಲ್ಲಿ ರಜೆ ಇರಲಿದೆ. ಹಾಗೆ ತ್ರಿಪುರದಲ್ಲಿ ಖಾರ್ಚಿ ಆಚರಿಸುವ ಸಲುವಾಗಿ ಜುಲೈ 6ರಂದು ರಜೆ ನೀಡಲಾಗುತ್ತದೆ.
ಜುಲೈ 8ರಂದು ಒಡಿಶಾ ಹಾಗೂ ಮಣಿಪುರದಲ್ಲಿ ಬ್ಯಾಂಕ್ ರಜೆ ಇರಲಿದೆ. ಅಲ್ಚಲಿ ರಥಯಾತ್ರೆ ನಡೆಯುವ ಕಾರಣ ರಜೆ ಇರಲಿದೆ. ಹಾಗೆ ಪಂಜಾಬ್‌ನಲ್ಲಿ ಜೂಲನ್ ಪೂರ್ಣಿಮಾವನ್ನು ಆಚರಿಸುವ ಕಾರಣ ರಜೆ ಇರಲಿದೆ.
ಜುಲೈ 13 ರಂದು ಸಿಕ್ಕಿಂನಲ್ಲಿ ಭಾನು ಜಯಂತಿಯನ್ನು ಆಚರಿಸಲಾಗುತ್ತದೆ. ಹಾಗೆ ಜುಲೈ 17ರಂದು ಮೇಘಾಲಯದಲ್ಲಿ ಯು ತಿರೋತ್ ಸಿಂಗ್ ದಿನ ಆಚರಿಸಲಾಗುವ ಕಾರಣ ಅಂದು ಬ್ಯಾಂಕ್ ರಜೆ ಇರಲಿದೆ. ಅದೇ ದಿನದಂದು ದೆಹಲಿ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನದಲ್ಲಿ ಮೊಹರಂ ಆಚರಿಸಲಾಗುತ್ತದೆ.
ರಾಜ್ಯಕ್ಕೆ ಮಾತ್ರ ಸೀಮಿತ ರಜೆಗಳು
ಜುಲೈ 21- ತೆಲಂಗಾಣ
ಜುಲೈ 25- ಕೇರಳ
ಜುಲೈ 27- ಹರಿಯಾಣ
ಜುಲೈ 31- ಪಂಜಾಬ್ ಮತ್ತು ಹರಿಯಾಣ
ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಭಾರತದ ಎಲ್ಲಾ ರಾಜ್ಯಗಳಲ್ಲಿ ನಿಯಮಿತ ಬ್ಯಾಂಕ್ ರಜಾದಿನಗಳಾಗಿವೆ. ಜುಲೈ 13 ಹಾಗೂ 27ರಂದು ರಜೆ ಇರಲಿದೆ.
ಜುಲೈ 1ರಿಂದ ಏನೆಲ್ಲಾ ಬದಲಾಗಲಿದೆ?
ಪ್ರತಿ ತಿಂಗಳು ಜುಲೈ 1ರಿಂದ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಲಿವೆ. ಅದರಲ್ಲೂ ಪೆಟ್ರೋಲ್, ಡೀಸೆಲ್ ಸೇರಿ ಎಲ್‌ಪಿಜಿ ದರ ಕೂಡ ಪರಿಷ್ಕರಣೆಗೊಳಗಾಗಲಿದೆ. ಈ ಬಾರಿ ಈ ದರದಲ್ಲಿ ಏರಿಕೆಯಾಗಬಹುದು ಎನ್ನಲಾಗುತ್ತಿದೆ.
ಇನ್ನು ಭಾರತೀಯ ರೈಲ್ವೆ ಹೊಸ ನಿಯಮಗಳ ಜಾರಿ ಮಾಡಿದೆ. ನೀವು ಲಾಗಿನ್ ಆಗಲು ಆಧಾರ್ ಒಟಿಪಿ ಬಳಸಬೇಕಾಗುತ್ತದೆ. ಜುಲೈ 15, 2025 ರಿಂದ, ತತ್ಕಾಲ್ ಬುಕಿಂಗ್‌ಗೆ ಆಧಾರ್ ಆಧಾರಿತ ಒಟಿಪಿ ದೃಢೀಕರಣವನ್ನು ಸಹ ಕಡ್ಡಾಯಗೊಳಿಸಲಾಗುತ್ತದೆ. ಹಾಗೆ ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) 2024-25 ಹಣಕಾಸು ವರ್ಷ ಮತ್ತು 2025-26 ಮೌಲ್ಯಮಾಪನ ವರ್ಷಕ್ಕೆ ITR ಫೈಲಿಂಗ್‌ಗೆ ಸೆಪ್ಟೆಂಬರ್ 15, 2025 ರವರೆಗೆ ತನ್ನ ಗಡುವು ವಿಸ್ತರಿಸಿದೆ.



Click it and Unblock the Notifications

